ಡ್ರೋನ್ ಹಾರಿಸೇಬಿಟ್ರಾ ಡ್ರೋನ್ ಪ್ರತಾಪ್?!
– ಅತೀ ದೊಡ್ಡ ಡ್ರೋನ್ ಜತೆ ಹಾಜರಾದ ಪ್ರತಾಪ್
– ತೀರ್ಥಹಳ್ಳಿಯಲ್ಲಿ ಡ್ರೋನ್ ಹಾರಿಸಿ ಪ್ರಯೋಗ
– ಸುಳ್ಳೋ ಸತ್ಯವೋ ವಿಜ್ಞಾನಿಗಳೇ ಹೇಳ್ಬೇಕು!
NAMMUR EXPRESS NEWS
ತೀರ್ಥಹಳ್ಳಿ: ಡ್ರೋನ್ ಪ್ರತಾಪ್ ಈಗ ದೊಡ್ಡ ಡ್ರೋನ್ ಹಾರಿಸಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮಲೆನಾಡಿನ ಎಲೆಚುಕ್ಕಿ ರೋಗದ ಸಮಸ್ಯೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಪರಿಹಾರ ಕಂಡು ಕೊಳ್ಳಬಹುದು ಎಂದಿರುವ ಅವರು ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ಸೇರಿದಂತೆ ಎಲ್ಲೆಡೆ ತಾವು ತಯಾರು ಮಾಡಿರುವ ಡ್ರೋನ್ ತಂದು ಔಷಧಿ ಸಿಂಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದ್ದಾನೆ.
ಕಳೆದ ಒಂದು ತಿಂಗಳಿಂದ ಡ್ರೋನ್ ಹಾರಿಸೋದ್ರಲ್ಲಿ ಬಿಝಿ ಆಗಿರುವ ಪ್ರತಾಪ್ ನ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ತೀರ್ಥಹಳ್ಳಿಯ ಕೈಮರ ಬಳಿಯ ತೋಟವೊಂದರಲ್ಲಿ ಡ್ರೋನ್ ಹಾರಿಸಿದ್ದಾರೆ.
ಮಲೆನಾಡಿನಲ್ಲಿ ವ್ಯಾಪಕವಾಗಿರುವ ಅಡಿಕೆ ಮರದ ಕೊಳೆ ರೋಗಕ್ಕೆ ಔಷಧಿ ಹೊಡೆಯಲು ಡ್ರೋನ್ ಡಿಸೈನ್ ಮಾಡಿರುವ ಡ್ರೋನ್ ಪ್ರತಾಪ್ ಸುಮಾರು 17 ಲೀ ಔಷಧಿ ಕೊಂಡೋಯ್ಯಬಲ್ಲ ಡ್ರೋನ್ ತಂದಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅವರ ಈ ಸಂಶೋಧನೆ ಸುಳ್ಳು ಸತ್ಯವೋ ಎಂಬುದರ ಬಗ್ಗೆ ಸಂಶೋಧಕರೇ ದೃಡೀಕರಣ ಮಾಡಬೇಕು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023