ಮಲೆನಾಡಿನಲ್ಲೂ ಜಡಿ ಮಳೆ ಜೋರು!
– ಕಳೆದ ಮೂರು ದಿನಗಳಿಂದ ಸತತ ಮಳೆ
– ಹಲವೆಡೆ ಹೆಚ್ಚಾಯಿತು ಎಲೆ ಚುಕ್ಕಿ ರೋಗ!
NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡಿನ ಬಹುತೇಕ ಭಾಗಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಹೆಚ್ಚಿದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ನೀರಿನ ಪ್ರಮಾಣ ಹೆಚ್ಚಿದ್ದು ಅಂತರ್ಜಲವು ಕೂಡ ಹೆಚ್ಚಾಗುತ್ತಿದೆ. ಅನೇಕ ಕಡೆ ಮಳೆಯಿಂದಾಗಿ ಗಾಳಿ ಹೆಚ್ಚಳವಾಗಿರುವುದರಿಂದ ವಿದ್ಯುತ್ ಕಂಬಗಳು, ಮರಗಳು ಬಿದ್ದಿವೆ.ಇನ್ನೂ ನದಿ ಹಳ್ಳಗಳ ನೀರಿನ ಪ್ರಮಾಣ ಕೂಡ ಹೆಚ್ಚಾಗಿದೆ.
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಫಿ ಗಿಡಗಳಿಗೆ ರೋಗ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇನ್ನು ಎಲೆಚುಕ್ಕಿ ರೋಗ ಕಳೆದ ಬಾರಿ ಹೆಚ್ಚು ಕಾಣಿಸಿದ್ದು ಅಡಿಕೆ ಫಸಲಿಗೆ ತೊಂದರೆಯಾಗಿದ್ದು ಈ ಬಾರಿ ಕೂಡ ಮತ್ತೆ ಎಲೆ ಚುಕ್ಕಿ ರೋಗದ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ. ಈಗಾಗಲೇ ಔಷಧಿ ಹೊಡೆಯುವ ಕಾರ್ಯ ಭರದಿಂದ ಸಾಗಿದ್ದು ಎಲೆ ಚುಕ್ಕಿ ರೋಗದ ಭೀತಿ ರೈತರಲ್ಲಿ ಉಂಟಾಗಿದೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023