ಎಣ್ಣೆ ಇನ್ಮುಂದೆ ಕೈ ಸುಡುತ್ತೆ!: ಮದ್ಯ ತೆರಿಗೆ ಹೆಚ್ಚಳ!
– ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಳ, ಬಿಯರ್ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ
– ಅರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ
– ಶಾಲಾ ಮಕ್ಕಳಿಗೆ ಮೊಟ್ಟೆ, ತಿನ್ನದವರಿಗೆ ಬಾಳೆಹಣ್ಣು!
NAMMUR EXPRESS NEWS
ಬೆಂಗಳೂರು: ರಾಜ್ಯ ಬಜೆಟ್ ಅಲ್ಲಿ ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಳ ಮಾಡಲಾಗಿದ್ದು ಬಿಯರ್ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ತೆರಿಗೆ ಗುರಿ ಹೊಂದಲಾಗಿದೆ.
- ನಮ್ಮಮೆಟ್ರೊ, ಉಪನಗರ ರೈಲಿಗೆ 30ಸಾವಿರ ಕೋಟಿ ಅನುದಾನ ನೀಡಲಾಗಿದೆ.
- ಆಹಾರ ಇಲಾಖೆಗೆ 10 ಸಾವಿರ ಕೋಟಿ
- ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ,
- ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ,
- ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್ಗೆ 710 ಕೋಟಿ,
- 100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯಧನ ನೀಡಲಾಗುತ್ತದೆ.
- ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ 10 ಕೋಟಿ ಮೈಸೂರು,
ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್ ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ ಅಲ್ಲಿ ಹೇಳಲಾಗಿದೆ.
219 ಡಯಾಲಿಸಿಸ್ ಕೇಂದ್ರಗಳನ್ನು ಉನ್ನತೀಕರಣ ಮಾಡಲಾಗುವುದು. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿವರೆಗೆ ಮೊಟ್ಟೆ ವಿತರಣೆ ಮಾಡಲಾಗುವುದು. ವಾರದಲ್ಲಿ 2 ದಿನ ಮೊಟ್ಟೆ, ತಿನ್ನದವರಿಗೆ ಚಿಕ್ಕಿ ಅಥವಾ ಬಾಳೆಹಣ್ಣು ವಿತರಣೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?
HOW TO APPLY : NEET-UG COUNSELLING 2023