ಸುನಿಲ್ ಕುಮಾರ್, ಆರಗ ಸೇರಿ 10 ಶಾಸಕರ ಅಮಾನತು!
– ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲ
– ಅಮಾನತುಗೊಂಡ ಶಾಸಕರು ಯಾರು ಯಾರು?
NAMMUR EXPRESS NEWS
ಬೆಂಗಳೂರು: ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಸುನೀಲ್ ಕುಮಾರ್ ಸೇರಿದಂತೆ 10 ಸದಸ್ಯರ ಅಮಾನತು ಮಾಡಲಾಗಿದೆ. ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆ ಸದನದ ಸ್ಪೀಕರ್ ಯುಟಿ ಖಾದರ್ ಅವರು 318 ನಿಯಮದ ಹಕ್ಕನ್ನು ಚಲಾಯಿಸಿ 10 ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.
ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಅರವಿಂದ ಬೆಲ್ಲದ್, ಸುನಿಲ್ ಕುಮಾರ್, ಉಮಾನಾಥ್ ಕೋಟ್ಯನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಸೇರಿ 10 ಸದಸ್ಯರನ್ನು ಸ್ಪೀಕರ್ ಖಾದರ್ ಅಮಾನತು ಮಾಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಭಾರೀ ಹೈಡ್ರಾಮಾ ನಡೆದಿದ್ದು, ಸ್ಪೀಕರ್ ಪೀಠವನ್ನು ಅಲಂಕರಿಸಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಪ್ರಸಂಗ ನಡೆಯಿತು. ಈ ಹಿನ್ನೆಲೆ ಗದ್ದಲ ಸೃಷ್ಟಿಸಿದ ಶಾಸಕರನ್ನು ಸಸ್ಪೆಂಡ್ ಮಾಡುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು.
ಇದೀಗ ಸದನದಲ್ಲಿ ಭಾರೀ ಗದ್ದಲ ನಡೆದ ಹಿನ್ನೆಲೆ ಬಿಜೆಪಿಯ 10 ಸದಸ್ಯರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಸಸ್ಪೆಂಡ್ ಆದ ಸದಸ್ಯರನ್ನು ಮಾರ್ಷಲ್ಗಳು ವಿಧಾನಸಭೆಯಿಂದ ಹೊರಹಾಕಿದ್ದಾರೆ. ಕಲಾಪ ಮುಗಿಯುವವರೆಗೆ ಅಂದರೆ 2 ದಿನ ಕಲಾಪದವರೆಗೆ ಅವರು ಅಮಾನತು ಆಗಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023