ಮೋದಿ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು!
– ಮಣಿಪುರ ಸೇರಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ
– ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕ ರಿಂದ ಪ್ರತಿಭಟನೆ
NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜೀನಾಮೆ ಮತ್ತು ಮಣಿಪುರ ಬಿಜೆಪಿ ಸರ್ಕಾರ ವಜಾಗಳಿಸಲು ಅಗ್ರಹಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ, ಬುಡಕಟ್ಟು ಜನರ ಮೀಸಲಾತಿ ಮಾತ್ರವಲ್ಲದೆ ಮಹಿಳೆಯರ ಸ್ವಾತಂತ್ರ ಹನನವಾಗುತ್ತಿದೆ. ನೂರಾರು ಮಂದಿ ಈ ಕೃತ್ಯದಿಂದ ಸಾವಪ್ಪಿದ್ದಾರೆ, ಸಾವಿರಾರು ಮಂದಿ ಮಹಿಳೆಯರು ದೌರ್ಜನ್ಯ ಮತ್ತು ಆತ್ಯಾಚಾರಕ್ಕೆ ಒಳಪಟ್ಟಿರುವುದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತಿದೆ, ಮಹಿಳೆಯರನ್ನು ಬೆತ್ತಲೆಗೊಳಿಸಿ ರಾಕ್ಷಸಿ ಪ್ರವೃತ್ತಿ ನಡೆಸುತ್ತಿದ್ದರೂ ದೇಶದ ಜವಾಬ್ದಾರಿ ಹೊತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಾಡಮೌನವಾಗಿದ್ದಾರೆ, ಪ್ರಧಾನಮಂತ್ರಿಗಳು ಈ ಕುರಿತು ಒಂದೇ ಒಂದು ಹೇಳಿಕೆ ನೀಡದಿರುವುದು ಪ್ರಜಾಪ್ರಭುತಕ್ಕೆ ಮಾಡಿದ ಅವಮಾನವಾಗಿದೆ. ಮಹಿಳೆಯರನ್ನು ರಕ್ಷಣೆ ಮಾಡಬೇಕಾದ ಪ್ರಧಾನಮಂತ್ರಿಯವರು ಕರ್ತವ್ಯದಿಂದ ನುಣಚಿಕೊಂಡು ಇಡೀ ದೇಶವೇ ತಲೆತಗ್ಗಿಸುವಂತಾಗಿದೆ, ತಕ್ಷಣವೇ ನರೇಂದ್ರ ಮೋದಿಯವರು ತಮ್ಮ ಸ್ಮಾರಕ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
( Manipur incident ) ಮಣಿಪುರದಲ್ಲಿ, ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಇಂತಹ ಅಮಾನವೀಯ ದೌರ್ಜನ್ಯವನ್ನು ಹತೋಟಿಗೆ ತರಲು ಅಸಮರ್ಥವಾಗಿದ್ದು, ಮಣಿಪುರದಲ್ಲಿ ಶಾಂತಿಭಂಗ ಉಂಟಾಗಿದೆ, ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಮಣಿಪುರದಲ್ಲಿ, ಬಿಜೆಪಿ ಸರ್ಕಾರವನ್ನು ವಜಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಮಾಡಬೇಕೆಂದು ಒತ್ತಾಯಿಸಲಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ( Kimmane Rathnakar ) , ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಪ್ರಮುಖರಾದ ಮುಡುಬಾ ರಾಘವೇಂದ್ರ, ಬಾಳೆಹಳ್ಳಿ ಪ್ರಭಾಕರ್, ಪುಟ್ಟೋಡ್ಲು ರಾಘವೇಂದ್ರ, ನಾಗರಾಜ್ ಕುರುವಳ್ಳಿ, ವಿನಾಯಕ ಕಿತ್ತಿನಗದ್ದೆ, ಗೀತಾ ರಮೇಶ್, ಶಿವು ಹೊದಲ, ಪ್ರಶಾಂತ್ ಇತರರು ಇದ್ದರು.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023