ರಾಜ್ಯಕ್ಕೆ ಬರುತ್ತಾ ಬರಗಾಲ?!
– ಒಂದು ವಾರದಿಂದ ಎಲ್ಲಾ ಕಡೆ ಮಳೆ ಕಡಿಮೆ
– ಇನ್ನೆರಡು ತಿಂಗಳು ಮಳೆ ಕೊರತೆ ಸಾಧ್ಯತೆ!
– ಕೃಷಿ ಮತ್ತು ನೀರಾವರಿ ಮೇಲೆ ಎಫೆಕ್ಟ್?
NAMMUR EXPRESS NEWS
ಬೆಂಗಳೂರು: ಜುಲೈನಲ್ಲಿ ಸುರಿದ ಭಾರಿ ಮಳೆ ಜನರ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಕಳೆದೊಂದು ವಾರದಿಂದ ರಾಜ್ಯದ ಯಾವ ಭಾಗದಲ್ಲೂ ಹೆಚ್ಚು ಮಳೆಯಾಗಿಲ್ಲ. ಹೀಗೆ ಮುಂದುವರಿದರೆ ಮುಂದೆ ಭಾರೀ ಕಷ್ಟ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆಗಲಿದ್ದು, ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ. ಮಳೆ ಕಡಿಮೆಯಾಗಿ ಒಣ ಹವೆ ಬೀಸಿದರೆ ರಾಜ್ಯದ ವಿವಿಧ ಬೆಳೆಗಳ ಇಳುವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆ ಕಡಿಮೆ ಇದ್ದರೂ ಮಳೆ ಹಂಚಿಕೆ ವ್ಯಾಪಕವಾಗಿದ್ದರೆ ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇನ್ನು ಮಳೆ ಇನ್ನು ಹೆಚ್ಚಾಗಿ ಆಗದ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ.
ರಾಜ್ಯದಲ್ಲಿ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕುಸಿತ ಆಗಲಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುವುದರ ಜತೆಗೆ ಉಷ್ಣಾಂಶವೂ ಏರಿಕೆಯಾಗಲಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಉತ್ತಮ ಮಳೆಯಾದರೆ ಮಾತ್ರ ರಾಜ್ಯದಲ್ಲಿ ಇಡೀ ವರ್ಷ ಕೃಷಿಗೆ ಮತ್ತು ಕುಡಿಯುವ ಉದ್ದೇಶಕ್ಕೆ ತೊಂದರೆ ಆಗುವುದಿಲ್ಲ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕಬಹುದು ಹಾಗೂ ನೆರೆಯ ತಮಿಳುನಾಡು ಕೂಡ ಕಾವೇರಿಯಿಂದ ನೀರು ಬಿಡುವಂತೆ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನುತ್ತಾರೆ ತಜ್ಞರು.
ಕಳೆದ ವರ್ಷ ಕುಡಿಯಲು, ಕೃಷಿಗೆ ನೀರು ಇರಲಿಲ್ಲ!
ಕಳೆದ ವರ್ಷ ಕುಡಿಯುವ ಮತ್ತು ಕೃಷಿ ಎರಡಕ್ಕೂ ನೀರಿನ ಕೊರತೆ ಆಗಿತ್ತು. ಈ ವರ್ಷ ಹಾಗೆ ಆದರೆ ಜನರಿಗೆ ಭಾರೀ ತೊಂದರೆ ಆಗಲಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023