ಟೊಮೆಟೊ ಕಡಿಮೆಯಾಯ್ತು, ಅರಿಶಿಣಕ್ಕೆ ದಾಖಲೆ ಬೆಲೆ!
– 80-90 ರೂ.ಸನಿಹಕ್ಕೆ ಬಂದ ಟೊಮೆಟೊ ದರ
– ಶುಂಠಿ ಬಳಿಕ ಈಗ ಅರಿಶಿಣಕ್ಕೆ ಭಾರೀ ಡಿಮ್ಯಾಂಡ್!
– ಕೃಷಿ ಬೆಲೆ ಏರಿಕೆ: ರೈತರಿಗೆ ಸಿಕ್ತಾ ಇದ್ಯಾ ಹಣ..?
ಗುಂಡ್ಲುಪೇಟೆ/ ಕೋಲಾರ: ಟೊಮೆಟೊ, ಈರುಳ್ಳಿ, ಕೊಬರಿ, ಶುಂಠಿ ಬಳಿಕ ಈಗ ಅರಿಶಿಣದ ಬೆಲೆ ಏರಿಕೆ ಆಗಿದೆ.
300 ರೂ. ಗಡಿಯಲ್ಲಿದ್ದ ಟೊಮೆಟೊ ದರ ನಿಧಾನಕ್ಕೆ ಕುಸಿಯುತ್ತಿದ್ದು 80-90 ಅಸುಪಾಸಿಗೆ ಬಂದಿದೆ. ಇನ್ನು ಶುಂಠಿ ದರ ಕೂಡ ಹೆಚ್ಚಾಗಿರುವ ನಡುವೆ ಈಗ ಅರಿಶಿಣಕ್ಕೆ ಡಿಮ್ಯಾಂಡ್ ಬಂದಿದೆ. ಬೆಲೆ ಕುಸಿತ, ಕನಿಷ್ಠ ಬೆಂಬಲ ಬೆಲೆಯೂ ಇಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲವೆಂದು ನಿರಾಸೆಗೊಂಡಿದ್ದ ಅರಿಶಿಣ ಬೆಳೆಗಾರರಿಗೆ ಈಗ ಅದೃಷ್ಟ ಕೂಡಿ ಬಂದಿದ್ದು, ಬೆಲೆ ದಿಢೀರ್ ಏರಿಕೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್!: ಬೆಳಗಾವಿ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಅತಿದಪ್ಪ, ದಪ್ಪ ಮತ್ತು ಸಾಮಾನ್ಯ ಎಂದು ವಿಂಗಡನೆ ಮಾಡಿದ ಅರಿಶಿಣವನ್ನು ಕ್ವಿಂಟಾಲ್ಗೆ 22 ಸಾವಿರ ರೂ. ಬೆಲೆಗೆ ಮಾರಾಟ ಮಾಡಲಾಗಿದೆ.
ತಮಿಳುನಾಡಿನ ಈರೋಡು ಮಾರುಕಟ್ಟೆಯಲ್ಲಿ ಪ್ರಸ್ತುತ ವಿಂಗಡನೆ ಆಧಾರದಲ್ಲಿ ಪಾಲಿಶ್ ಮಾಡಿದ ಅರಿಶಿಣ ಕ್ವಿಂಟಾಲ್ಗೆ 15 ಸಾವಿರ `ದವರೆಗೂ ಮಾರಾಟವಾಗುತ್ತಿದೆ. ಆದರೆ, ಈಗಾಗಲೇ ಕ್ವಿಂಟಾಲ್ ಗೆ 6,500 ರಿಂದ 7,000 ರೂ.ಗೆ ಮಾರಾಟ ಮಾಡಿರುವ ರೈತರು, ಈಗಿನ ಧಾರಣೆ ನೋಡಿ ಬೇಸರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ತಡವಾಗಿ ಮುಂಗಾರು ಆಗಮನವಾದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅರಿಶಿಣ ನಾಟಿ ಮಾಡಿಲ್ಲ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಳೆ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ.
ರೈತರಿಗೆ ಸಿಗುತ್ತಾ ಹಣ?
ಯಾವುದೇ ಬೆಳೆ ಬೆಲೆ ಏರಿಕೆ ಆದಾಗ ರೈತರಿಗೆ ಬೆಲೆ ಸಂಪೂರ್ಣ ಸಿಗಲ್ಲ. ಕೃತಕ ಮಾರುಕಟ್ಟೆ, ದಲ್ಲಾಳಿ ವ್ಯವಸ್ಥೆ ಬಹುತೇಕ ಲಾಭ ಪಡೆಯುತ್ತಿದೆ. ಈಗಲೂ ಹಾಗೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023