ನಾಗರ ಪಂಚಮಿಯಂದೇ ನಾಗ ಪವಾಡ!
– ನಾಗರ ಪಂಚಮಿ ಹಬ್ಬದಂದೇ 2 ಹಾವು ಪ್ರತ್ಯಕ್ಷ!
– ನೀರು ಕುಡಿಸಿ ಸೆರೆ ಹಿಡಿದ ಉರಗ ತಜ್ಞ
– ಇಲ್ಲಿ ಜೀವಂತ ಹಾವುಗಳಿಗೆ ನಡೆಯುತ್ತೆ ಜಲಾಭಿಶೇಕ!
– ಗರ್ಭಗುಡಿಯಿಂದ ಹೊರಬಂದ ನಾಗರಾಜ!
NAMMUR EXPRESS NEWS
ಗದಗ: ನಾಗರ ಪಂಚಮಿ ದಿನವೇ ಎರಡು ಕಡೆ ಪ್ರತ್ಯಕ್ಷವಾದ ನಾಗರ ಹಾವಿಗೆ ನೀರು ಕುಡಿಸುವ ಮೂಲಕ ಉರಗ ತಜ್ಞ ಸಾಗರ ಧರಣಿ ಎನ್ನುವವರ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದು ಎಲ್ಲ ಪ್ರೀತಿಗೆ ಪಾತ್ರನಾಗಿದ್ದಾನೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಜಂಟ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಎಂಬುವರ ಮನೆಯಲ್ಲಿ ಸುಮಾರು 5/6 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಪೂಜೆ ಮಾಡಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ.
ಕೂಡಲೇ ಸಾಗರ ಅವರಿಗೆ ಪೋನ್ ಮುಖಾಂತರ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಸೆಪ್ಟಿಕಲ್ ಕೋಬ್ರಾ ಎನ್ನಲಾಗುವ ನಾಗರಹಾವನ್ನು ತಮ್ಮ ಚಾಣಾಕ್ಷತದಿಂದ ತನ್ನ ಹಿಡಿತಕ್ಕೆ ತೆಗೆದುಕೊಂಡು ಕೆಲಹೊತ್ತು ಆಟವಾಡಿಸಿ ಬಾಟಲಿಯಿಂದ ನೀರು ಕುಡಿಸಿ ಬಳಿಕ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಕುಂದ್ರಳ್ಳಿ ತಾಂಡಾದ ಮನೆಯಲ್ಲಿ ನಾಗರ ಹಾವು ಬಂದಿದೆ ಎಂಬ ಸುದ್ದಿ ತಿಳಿದು ಅಲ್ಲಿಗೂ ತೆರಳಿದ ಸಾಗರ ಧರಣಿ ಅದನ್ನು ಸಹ ಕ್ಷಣಾರ್ಧದಲ್ಲಿಯೇ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾನೆ. ಯುವಕನ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಹಾವನ್ನು ಹಿಡಿಯುತ್ತಿರುವದನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀವಂತ ಹಾವುಗಳಿಗೆ ನಡೆಯುತ್ತೆ ಪೂಜೆ ಜಲಾಭಿಶೇಕ!
ಉಡುಪಿಯ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ ಪೂಜೆ ಪುನಸ್ಕಾರಗಳು ನೆರವೇರಿತು. ನಾಗರ ಪಂಚಮಿಯ ಪ್ರಯುಕ್ತ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನಡೆಸಲಾಯಿತು. ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ಹಾವುಗಳಿಗೆ ಗೋವರ್ಧನ್ ಭಟ್ ರವರು ಶುಶೂಷೆ ನೀಡುತ್ತಿದ್ದಾರೆ. ಆ ಹಾವುಗಳಿಗೆ ಜಲಾಭಿಷೇಕ ನೆರವೇರಿಸಿ ಆರತಿ ಎತ್ತಿದ್ದಾರೆ.
ಅಂತೂ ಗರ್ಭಗುಡಿಯಿಂದ ಹೊರಬಂದ ನಾಗರಾಜ!
ಉತ್ತರ ಕನ್ನಡ ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹಲವು ದಿನಗಳಿಂದ ಗರ್ಭಗುಡಿ ಬಾಗಿಲಿನ ಮೇಲೆ ಠಿಕಾಣಿ ಹೂಡಿದ್ದ ನಾಗರಹಾವು ಅಂತೂ ತಾನಾಗಿಯೇ ಹೊರಗೆ ಹೋಗಿದ್ದು ಆತಂಕ ದೂರವಾಗಿದೆ. ಐದು ದಿನಗಳ ಹಿಂದೆ ಸಂಜೆ ದೇವರ ದರ್ಶನಕ್ಕೆ ಭಕ್ತರನ್ನು ಬಿಡುವ ಸಮಯದಲ್ಲಿ ಕಾಣಿಸಿಕೊಂಡಿತ್ತು. ನಂತರ ಹೊರ ತೆಗೆದು ಸುರಕ್ಷಿತವಾಗಿ ಬಿಡಲು ಉರಗ ತಜ್ಞರಾದ ಅಶೋಕ ನಾಯ್ಕ ತದಡಿ, ಸ್ನೇಕ್ ಬಾಬಣ್ಣ ನಿರಂತರ ಪ್ರಯತ್ನಿಸಿದ್ದರು. ಆದರೂ, ಬಾಗಿಲ ಮೇಲ್ಬಾಗದ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಕಾರಣ ಹೊರತರಲಾಗಲಿಲ್ಲ.
ಉರಗ ತಜ್ಞರು ಗದ್ದಲವಿದ್ದಾಗ ಹಾವು ಹೊರ ಬರುವುದಿಲ್ಲ ಮತ್ತು ಯಾರಿಗೂ ತೊಂದರೆ ನೀಡುವುದಿಲ್ಲ” ಎಂಬ ಭರವಸೆ ನೀಡಿದ್ದರು. ಅದರಂತೆ ನಿತ್ಯ ಭಕ್ತರು ದರ್ಶನ ಪಡೆದು ಬರುತ್ತಿದ್ದರೂ ಯಾವುದೇ ತೊಂದರೆ ನೀಡಿರಲಿಲ್ಲ . ಮಂದಿರದವರು ಸಹ ತೀವ್ರ ನಿಗಾ ಇಟ್ಟಿದ್ದರು. ಹಲವು ದಿನ ಒಂದೇ ಸ್ಥಳದಲ್ಲಿ ಉಳಿದುಕೊಂಡಿದ್ದ ಹಾವು ಶನಿವಾರ ಬೆಳಗಿನ ಜಾವ ಹೊರ ಹೋಗಿದ್ದು ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೂಲಕ ದೇವಸ್ಥಾನ ಆಡಳಿತದವರಿಗೆ ಮತ್ತು ಸಿಬ್ಬಂದಿ ಆತಂಕ ದೂರವಾಗಿದೆ.