- ಮಾ.20ಕ್ಕೆ ಶಿವಮೊಗ್ಗದಲ್ಲಿ ಸಮಾವೇಶ
- ಸಾವಿರಾರು ರೈತರು ಹಾಜರ್
- ರಾಜ್ಯದಲ್ಲಿ ಹೊಸ ಹೋರಾಟಕ್ಕೆ ನಾಂದಿ
ಶಿವಮೊಗ್ಗ: ರಾಜ್ಯದಲ್ಲಿ ರೈತರ ಹೋರಾಟಕ್ಕೆ ರೈತರ ನಾಡು, ಹೋರಾಟಗಳ ಬೀಡು ಶಿವಮೊಗ್ಗ ಸಜ್ಜಾಗಿದೆ.
ಮಾ.20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ರೈತ ಪಂಚಾಯತ್ ಆಯೋಜನೆ ಮಾಡಲಾಗಿದೆ.
ಸಾವಿರಾರು ಜನ ರೈತರು, ಹೋರಾಟಗಾರರು ಈಗಾಗಲೇ ಆಗಮಿಸಲು ಸಿದ್ಧತೆ ನಡೆಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ, ಕಾರ್ಮಿಕ ಕಾಯ್ದೆ ವಿರೋಧಿಸಿ, ರೈತರ ಹೋರಾಟ ಬೆಂಬಲಿಸಿ ಈ ರೈತ ಪಂಚಾಯತ್ ಹಮ್ಮಿಕೊಳ್ಳಲಾಗಿದೆ.
ಬಹುತೇಕ ಎಲ್ಲಾ ಸಮುದಾಯ, ಸಂಘಟನೆ, ಸಂಘ ಸಂಸ್ಥೆಗಳು ಸಹಕಾರ ನೀಡಿವೆ.
ರಾಷ್ಟ್ರದ ಪ್ರಮುಖ ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯಧುವೀರ್ ಸಿಂಗ್ ಸೇರಿದಂತೆ ದೇಶ ಹಾಗೂ ರಾಜ್ಯದ ಪ್ರಮುಖ ರೈತ ಹೋರಾಟಗಾರರು ಭಾಗಿಯಾಗಲಿದ್ದಾರೆ.
ಶನಿವಾರ ಸಂಜೆ 3ಕ್ಕೆ ಸಮಾವೇಶ ಶುರುವಾಗಲಿದ್ದು, ಈಗಾಗಲೇ ತಾಲೂಕುವಾರು ಸಾವಿರಾರು ರೈತರು ಸಿದ್ಧತೆ ನಡೆಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ, ಐಕ್ಯ ಹೋರಾಟ ಸಮಿತಿ, ಕರ್ನಾಟಕ ರೈತ ಸಂಘ, ಹಸಿರು ಮನೆ ಈ ಸಮಾವೇಶ ಅಯೋಜನೆ ಮಾಡಿದೆ.
ಮೆರವಣಿಗೆ ಇಲ್ಲ: ಕರೋನಾ ಮಾರ್ಗಸೂಚಿ ಹಿನ್ನೆಲೆ ಮೆರವಣಿಗೆ ಇರಲ್ಲ. ಸಮಾವೇಶಕ್ಕೆ 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
ಪ್ರತಿ ಹಳ್ಳಿ ಹಳ್ಳಿಯಲ್ಲೂ ರೈತರು ಬೆಂಬಲಿಸಿದ್ದಾರೆ. ಸರಕಾರದ ಜನ ವಿರೋಧಿ ನಡೆ ವಿರುದ್ಧದ ಹೋರಾಟ ಇದಾಗಿದೆ ಎಂದು ಆಯೋಜಕರಲ್ಲಿ ಪ್ರಮುಖರಾದ ವಕೀಲ ಶ್ರೀಪಾಲ್ ಹೇಳಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿಗಳಿಗೆ nammurexpress.in ವೀಕ್ಷಿಸಿ..!.