- 1 ಲಕ್ಷದವರೆಗೆ ಅಲ್ಪಾವಧಿ ಬೆಳೆ ಸಾಲ ಮನ್ನಾ
- ಬ್ಯಾಂಕ್
ಬೆಂಗಳೂರು: ಅಲ್ಪಾವಧಿ ಬೆಳೆ ಸಾಲ ಪಡೆದ ರಾಜ್ಯದ ರೈತರಿಗೆ ಬಿಎಸ್ ಯಡಿಯೂರಪ್ಪ ಸರಕಾರ ಸಿಹಿ ಸುದ್ದಿ ನೀಡಿದೆ.
ಈ ಮೂಲಕ ಕರೋನಾದ ಸಂಕಟದಲ್ಲೂ ಸರಕಾರ ರೈತರ ನೆರವಿಗೆ ಧಾವಿಸಿದೆ.
ರಾಜ್ಯ ರೈತ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜು.7ರೊಳಗೆ ಹೊರ ಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲದ ಮೊತ್ತವನ್ನು ಮನ್ನಾ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಸಾಲ ಮನ್ನಾ ಕುರಿತು ಶುಕ್ರವಾರ ಆದೇಶಿಸಿರುವ ಅವರು, 295.15 ಕೋಟಿ ರೂ. ಮೊತ್ತವನ್ನು ನೆಫ್ಟ್ ಮೂಲಕ ಅರ್ಹ 57,229 ರೈತರ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.
ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಲು ಪ್ರಸಕ್ತ ಆಯವ್ಯಯದಲ್ಲಿ 260.41 ಕೋಟಿ ರೂ. ಸರಕಾರ ಮೀಸಲಿಟ್ಟಿತ್ತು. ಜತೆಗೆ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ 34.73 ಕೋಟಿ ರೂ.ಗಳನ್ನೂ ಉಪಯೋಗಿಸಿಕೊಳ್ಳಲು ಇಲಾಖೆಗೆ ಅನುಮತಿ ನೀಡಿದೆ. ಮಾರ್ಚ್ ಅಂತ್ಯದೊಳಗೆ ಸಾಲ ಮನ್ನಾ ಪ್ರಕ್ರಿಯೆ ಮುಕ್ತಾಯಗೊಳಿಸಲು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಎಲ್ಲಾ ಸುದ್ದಿಗಳಿಗೆ nammur express ವೀಕ್ಷಿಸಿ..!