ಅಡಿಕೆ ದರ ಎಷ್ಟಿದೆ? – ಅಡಿಕೆಯ ಬೆಲೆ ಏರಿಕೆ ಆಗಿದೆಯೋ? ಇಳಿಕೆ ಆಗಿದೆಯೋ? NAMMUR EXPRESS NEWS ಸರಕು 53100 – 75510 ಬೆಟ್ಟೆ 48400-53800-54799 ರಾಶಿ 40019-47700-48709 ಗೊರಬಲು 23000-31900-33000
Author: Nammur Express Admin
ಕೊಚ್ಚಿನ್ ಶಿಪ್ ಯಾರ್ಡಿಗೆ ‘ತುಳುನಾಡ ಪುದರ್’!! * ಭಾರತೀಯ ನೌಕಾಪಡೆಗೆ 2 ಹಡಗುಗಳ ಹಸ್ತಾಂತರ * ಹಡಗುಗಳಿಗೆ ಐ. ಎನ್. ಎಸ್. ಮಲ್ಪೆ, ಐ. ಎನ್. ಎಸ್. ಮುಲ್ಕಿ ಎಂದು ನಾಮಕರಣ NAMMUR EXPRESS NEWS ಮಂಗಳೂರು/ಉಡುಪಿ: ಕರಾವಳಿ ದೇಶ ವಿದೇಶದಲ್ಲೂ ತನ್ನ ಹೆಸರನ್ನು ಬಿತ್ತಿದ ಊರು. ಇದೀಗ ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ ಕೊಚ್ಚಿನ್ ನಲ್ಲಿ ಎರಡು ಯುದ್ಧ ಹಡಗುಗಳನ್ನು ನಿರ್ಮಾಣ ಮಾಡಿದ್ದು, ಭಾರತೀಯ ನೌಕಾಪಡೆಗೆ ಹಸ್ತಾಂತರ ಮಾಡಲಾಯಿತು. ಈ ಹಡಗುಗಳಿಗೆ ಐ. ಎನ್. ಎಸ್. ಮಲ್ಪೆ ಮತ್ತು ಐ. ಎನ್. ಎಸ್. ಮುಲ್ಕಿ ಎಂದು ನಾಮಕರಣ ಮಾಡಿ ತುಳುನಾಡಿನ ಎರಡು ಪ್ರದೇಶದ ಹೆಸರಿಗೆ ಗೌರವ ಮತ್ತು ಹೆಮ್ಮೆ ನೀಡಿದೆ. ಈ ಯುದ್ಧ ನೌಕೆಗಳು ಭಾರತದ ಸಾಗರದ ಕಡಲ ಕೆಳಗೆ ರಕ್ಷಣೆ ಮಾಡಿ ಭಾರತಿಯ ಸೇವೆಯನ್ನು ಮಾಡುವ ಅವಕಾಶ ಪಡೆದುಕೊಂಡಿರುವುದು ಕರಾವಳಿಗರಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ರಾಜ್ಯದ ನಂ.ಸಹಕಾರ ಬ್ಯಾಂಕ್! – 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಭಾಜನ – ಡಾ.ಆರ್.ಎಂ.ಮಂಜುನಾಥ ಗೌಡ ಅವರಿಗೆ ಮತ್ತೊಂದು ಹಿರಿಮೆ – ಡಿಸಿಸಿ ಬ್ಯಾಂಕ್ ಸಿಬ್ಬಂದಿ, ಆರ್.ಎಂ.ಅಭಿಮಾನಿಗಳ ಸಂತಸ NAMMUR EXPRESS NEWS ಶಿವಮೊಗ್ಗ: ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮತ್ತೊಂದು ಸಾಧನೆ ಮಾಡಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ 2022-23ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಭಾಜನವಾಗಿದೆ. ಹಾಲಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ ಅವರು ಅಧ್ಯಕ್ಷರಾದ ಬಳಿಕ ರಾಜ್ಯದ ನಂಬರ್ 1 ಬ್ಯಾಂಕ್ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಇಂದ ಪ್ರಶಸ್ತಿ ಪಡೆದಿದೆ. ತಳಮಟ್ಟದಲ್ಲಿದ್ದ ಬ್ಯಾಂಕ್ ಇಂದು ಅತ್ಯುತ್ತಮ ಬ್ಯಾಂಕ್ ಆಗಿ ಹೊರ ಹೊಮ್ಮಿದೆ. ಮಂಜುನಾಥ ಗೌಡ ಅವರ ಆಡಳಿತ ದಕ್ಷತೆ ಮತ್ತು ಸಹಕಾರ ಕ್ಷೇತ್ರದಲ್ಲಿನ ಸೇವೆ ಈ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯ ಅಪೆಕ್ಸ್ ಆವರಣದಲ್ಲಿ ಡೆುವ ಅವಾರ್ಡ ಕಾರ್ಯಕ್ರಮದಲ್ಲಿ ಶುಕ್ರವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್…
ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್! – ಬಂದ್‌ಗೆ ಸರ್ವ ಪಕ್ಷಗಳು,ಸಂಘಟನೆಗಳ ಬೆಂಬಲ – ಪ್ರತಿಭಟನೆಯಲ್ಲಿ ಭಾಗಿಯಾದ ನೂರಾರು ರೈತರು NAMMUR EXPRESS NEWS ಕಳಸ: ರಾಜ್ಯ ಸರ್ಕಾರದ ಒತ್ತುವರಿ ತೆರವು ಖಂಡಿಸಿ ಕರೆ ನೀಡಿದ್ದ ಕಳಸ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ರೈತರ ಹೋರಾಟಕ್ಕೆ ಸರ್ವ ಪಕ್ಷಗಳು,ಕನ್ನಡ,ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘ,ಸಂಸ್ಥೆ,ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಬೆಳಿಗ್ಗೆ 9 ರಿಂದ ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಳಸ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಈ ಮೂಲಕ ವರ್ತಕರು ಬೆಂಬಲ ಸೂಚಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಈ ಕೂಡಲೇ ಒತ್ತುವರಿ ನಿರ್ಧಾರವನ್ನು ಕೈಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.
ಶಿವಮೊಗ್ಗ:ಅಡಿಕೆ ತೂಕದಲ್ಲಿ ಮೋಸ!! * ರಾಶಿ ಅಡಿಕೆ ತೂಕದಲ್ಲಿ ವರ್ತಕನ ಮೋಸದಾಟ!! * ವಂಚಕನಿಗೆ ಬರೋಬ್ಬರಿ 20 ಲಕ್ಷ ರೂ ದಂಡ! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ಅಡಿಕೆ ವ್ಯಾಪಾರಿಯೊಬ್ಬ ರೈತರಿಂದ ಅಡಿಕೆ ಖರೀದಿ ಮಾಡಿ ತೂಕ ಮಾಡಿಕೊಂಡು ಹೋಗುವಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಿಡಿದು ವ್ಯಾಪಾರಿಗೆ ಗ್ರಾಮ ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ.ದಂಡ ವಿಧಿಸಿರುವ ಘಟನೆ ನಡೆದಿದೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ವರ್ತಕ ಮೋಸ ಮಾಡಿದ್ದಾನೆ. ಮೋಸ ಮಾಡಿದ ಸ್ಥಳೀಯ ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ. ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಅಡಕೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಒಂದು ಕ್ವಿಂಟಾಲ್‌ಗೆ 200 ರೂ. ಹಣ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಕೆ ಖರೀದಿಸಿದ್ದಾನೆ. ನಂತರ, ಖರೀದಿಸಿದ 45 ಅಡಿಕೆ ಚೀಲಗಳನ್ನು ಎರಡು ವಾಹನದಲ್ಲಿ ತುಂಬಲಾಗಿತ್ತು. ಅನುಮಾನಗೊಂಡ ರೈತರು ದು…
ನಿಸಾರ್ ಕರಾವಳಿ ಅವರಿಗೆ ಮಹತ್ವದ ಹುದ್ದೆ – ದಕ್ಷಿಣ ಕನ್ನಡ ಐ.ಎನ್. ಟಿ. ಯು. ಸಿ ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ ನೇಮಕ NAMMUR EXPRESS NEWS ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ INTUC ವಿಭಾಗದ ಅಧ್ಯಕ್ಷರಾದ ಡಾ.ಜಿ.ಸಂಜೀವ ರೆಡ್ಡಿ ಅವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ .ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ,ದಕ್ಷಿಣ ಕನ್ನಡ INTUC ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,ಯುವ ಸಂಘಟಕ,ಚತುರ,ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಐಟಿ ಸೆಲ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಮೊಹಮ್ಮದ್ ನಿಸಾರ್ ಕರಾವಳಿ ಅವರನ್ನು ಪಕ್ಷ ಗುರುತಿಸಿ,ಪಕ್ಷ ಸಂಘಟನೆಗಾಗಿ ಮತ್ತೊಂದು ಹುದ್ದೆ ನೀಡಿ ನೇಮಕ ಮಾಡಿದೆ. ನಿಸಾರ್ ಕರಾವಳಿ ಅವರಿಗೆ ಸ್ನೇಹಿತರು, ಆಪ್ತರು ಶುಭಾಶಯ ಸಲ್ಲಿಸಿದ್ದಾರೆ.
ಹಿಲಿಕೇರಿ -ದೇವಂಗಿ ಗಣೇಶ ವಿಸರ್ಜನೆ ರಂಗು! – ಪಟಾಕಿ, ವಿವಿಧ ವೇಷಭೂಷಣ, ಡ್ಯಾನ್ಸ್ ಡ್ಯಾನ್ಸ್ – ಶಾಂತಿಯುತ ಮೆರವಣಿಗೆ: ತಾಲೂಕಲ್ಲೇ ಗಮನ ಸೆಳೆದ ವಿಶೇಷ ಗಣಪತಿ – ಸಾವಿರಾರು ಮಂದಿ ಭಾಗಿ: ಖುಷಿಯಲ್ಲಿ ಮಿಂದೆದ್ದ ಭಕ್ತರು NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ಗಣಪತಿ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿರುವ ದೇವಂಗಿ ಗಣಪತಿ ಹಾಗೂ ಹಿಲಿಕೇರಿ ಗಣಪತಿಯ ವಿಸರ್ಜನೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. ಹಿಲಿಕೆರೆ ಮತ್ತು ದೇವಂಗಿ ಗಣಪತಿ ತಾಲೂಕಿನ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾಗಿದ್ದು ದೇವಂಗಿ ಸರ್ಕಲ್ ಅಲ್ಲಿ ಪಟಾಕಿ ಹೊಡೆದು ಡಿಜೆಗೆ ಡಾನ್ಸ್ ಮಾಡಿ ಸಾವಿರಾರು ಜನ ಖುಷಿ ಪಟ್ಟರು. ಮಕ್ಕಳು, ಯುವಕರು, ಯುವತಿಯರು ಡಾನ್ಸ್ ಮಾಡಿ ಮಧ್ಯ ರಾತ್ರಿವರೆಗೆ ಕುಣಿದು ಕುಪ್ಪಳಿಸಿ ಗಣೇಶ ವಿಸರ್ಜನೆ ಮಾಡಿದರು. ಲಕ್ಷಾಂತರ ಮೌಲ್ಯದ ಪಟಾಕಿಗಳು ಬಾನಿನ ಅಂಗಳದಲ್ಲಿ ಚಿಮ್ಮಿದವು. 2 ಯುವಕ ಸಂಘಗಳು ಮಾದರಿ ಗಣೇಶೋತ್ಸವ ಆಚರಣೆ ಮಾಡಿದರು.
25 ಪೈಸೆ ಕಾಯಿನ್ ಅಲ್ಲಿ 7 ಅಡಿ ಶಿವಲಿಂಗ! – ಕುಲಶೇಖರ ಕೈಕಂಬ ಗಣಪತಿ ರಜತ ಮಹೋತ್ಸವ – 25ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ NAMMUR EXPRESS NEWS ಮಂಗಳೂರು: ಮಾಸ್ಟರ್ ಗೈಸ್ ಕೈಕಂಬ ಗಣಪತಿ ಈ ವರ್ಷ ವಿಶೇಷ ಗಣಪತಿಯಾಗಿ ಗಮನ ಸೆಳೆದಿದೆ. ಏಕೆಂದ್ರೆ ಗಣಪತಿ ಜತೆ ಶಿವಲಿಂಗ ಕೂಡ ಮಾಡಲಾಗಿದೆ. ಮಂಗಳೂರಿನಲ್ಲಿ 25ನೇ ವಾರ್ಷಿಕೋತ್ಸವವನ್ನು ಹಬ್ಬದ ರೀತಿ ಆಚರಿಸಲಾಯಿತು. ಶ್ರದ್ಧಾ ಮತ್ತು ಸಮರ್ಪಣೆ ಸಾಧನೆಯ ವಿಶೇಷದಂತೆ 7 ಅಡಿ ಎತ್ತರದ ರೂ.25025ಗಳಿಂದ 25 ಪೈಸೆಗಳನ್ನ ಬಳಸಿ ನಿರ್ಮಿಸಲಾದ ಅಪರೂಪದ ಶಿವಲಿಂಗ ಮಾಡಲಾಗಿದೆ. ಈ ವಿಭಿನ್ನ ಕಲಾಕೃತಿಯು 25ನೇ ವರ್ಷದಲ್ಲಿಯೂ ಅಪರೂಪದ ಶಿವಲಿಂಗವನ್ನು ಕುಲಶೇಖರದ ಹಿಂದು ಸೇವಾಸಮಿತಿಯ ಶಕ್ತಿಗಣಪತಿಯ ಶೋಭಯತ್ರೆಗೆ ಸಮರ್ಪಸಲಾಯಿತು. ಪರಿಕಲ್ಪೆಯು ವೈಶಿಷ್ಟ್ತೆ ಮತ್ತು ಕಲೆಯ ಸಂಘಟನೆಯು ಏಕೈಕವಾಗಿ ಸೃಷ್ಟಿಯಾಗಿದೆ, ಮತ್ತು ಇದು ಎಲ್ಲಾ ತಂಡದ ಸದಸ್ಯರ ಶ್ರಮ ಮತ್ತು ಕಲಾಪರಿಣಾಮದ ಫಲಿತಾಂಶವಾಗಿದೆ. ಸಮಾರಂಭದಲ್ಲಿ ಜನಪ್ರಿಯ ಕಲಾವಿದ, ಸಾಹಿತಿಗಳು ಮತ್ತು ಸ್ಥಳೀಯ ಗಣ್ಯರು ಭಾಗವಹಿಸಿದರು.
ಮಂಡ್ಯದ ನಾಗಮಂಗಲದಲ್ಲಿ ಗಲಭೆ! – ಗಣೇಶ ಮೆರವಣಿಗೆ ವೇಳೆ ಗಲಾಟೆ:ನಿಷೇಧಾಜ್ಞೆ – ಶಾಲೆ, ಕಾಲೇಜುಗಳಿಗೆ ರಜೆ: ಏನಿದು ಘಟನೆ? – ಅನ್ಯ ಕೋಮಿನ ಯುವಕರಿಂದ ಅಂಗಡಿಗಳಿಗೆ ಬೆಂಕಿ – ಇಂದು ನಾಗಮಂಗಲ ಬಂದ್: ಭಾರೀ ಪೊಲೀಸ್ ಬಂದೋಬಸ್ತ್ NAMMUR EXPRESS NEWS ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಬುಧವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸಂಜೆ 6.30ರ ವೇಳೆಗೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿದೆ. ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ 5 ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು.ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು. ಮಸೀದಿ ರಸ್ತೆಗೆ ತೆರಳುತ್ತಿದ್ದ ಮೆರವಣಿಗೆಗೆ ತಡೆ ಬದರಿಕೊಪ್ಪಲಿನಿಂದ ಹೊರಟ ಗಣೇಶನ ಿಸರ್ಜನ ಮೆರವಣಿಗೆ ಮಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಉದ್ಯೋಗಸ್ಥರು ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸೋಮಾರಿತನದಿಂದ ದೂರವಿರಿ. ಯಶಸ್ಸನ್ನು ಸಾಧಿಸಲು ಶ್ರಮಿಸಿ. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದತ್ತ ಹೆಚ್ಚು ಗಮನಹರಿಸಬೇಕು. ಇಂದು ನೀವು ನಿಮ್ಮ ಸಂಗಾತಿಯಿಂದ ಆಶ್ಚರ್ಯವನ್ನು ಪಡೆಯಬಹುದು. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಶುಭಕರವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯಾಗಬಹುದು. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಲಿ. ಕೇರಿ ಜವಾಬ್ದಾರಿಗಳನ್ನು ಪೂರೈಸಲು ಪ್ರಯತ್ನಿಸಿ. ಗಡುವಿನ ಮೊದಲು ಎಲ್ಲಾ ಕಾರ್ಯಗಳನ್ನು…