Author: Nammur Express Admin

ಮಳೆ ಅಬ್ಬರ: ಗಣಪತಿ ವಿಸರ್ಜನೆಗೆ ಅಡ್ಡಿ! * ಮಳೆ ಆರ್ಭಟ ಭಾರಿ ಪ್ರಮಾಣದಲ್ಲಿ ಏರಿಕೆ * ಶೃಂಗೇರಿಯಲ್ಲಿ ಬಿದ್ದ ಮನೆ: ಹಲವೆಡೆ ಅನಾಹುತ NAMMUR EXPRESS NEWS ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಬಲು ಜೋರಾಗ್ತಿದ್ದು ಗಣೇಶ ಮೂರ್ತಿ ವಿಸರ್ಜನೆಗೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗೆ ಆರಂಭ ಆಗಿರುವ ಮಳೆ ಕೆಲವು ದಿನಗಳಲ್ಲಿ ಜಲಪ್ರಳಯ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ. ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣ ಕಾಣಿಸುತ್ತಿತ್ತು. ಆದರೆ ಆಗಿದ್ದೇ ಬೇರೆ, ಅಂದುಕೊಂಡ ರೀತಿಯೇ ಈ ವರ್ಷ ಮುಂಗಾರು ಮಳೆ ಕರ್ನಾಟಕದಲ್ಲಿ ಆರಂಭ ಆಗಿದ್ದು,ಹೀಗಿದ್ದಾಗ ಮಳೆ ಆರ್ಭಟವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಕೊನೆಗೆ ಏನು ಆಗಬಾರದೋ ಅದೇ ಆಗಿ ಹೋಗಿದೆ. ಉತ್ತರ ಕರ್ನಾಟಕ & ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಸೇರಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದ್ರಲ್ಲೂ ಕಳೆದ ಕೆಲ ದಿನಗಳಿಂದ ನಿರಂತರ…

Read More

ತೀರ್ಥಹಳ್ಳಿ ವೈದ್ಯರ ಮೇಲೆ ಹಲ್ಲೆ: ವೈದ್ಯರ ದೂರು! – ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಪ್ರತಿಭಟನೆ: ವೈದ್ಯರ ಮನವಿ ಕೇಳಿದ ಆರಗ ಜ್ಞಾನೇಂದ್ರ – ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ಆಕ್ರೋಶ – ಆಸ್ಪತ್ರೆಗೆ ಬೇಕು ಸೆಕ್ಯೂರಿಟಿ: ಏನಿದು ಘಟನೆ..? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದ್ದು ನೆರೆಯ ತಾಲೂಕುಗಳಿಂದಲೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವ ತಾಲೂಕಿನ ಸರ್ಕಾರಿ ಜೆಸಿ ಆಸ್ಪತ್ರೆಗೆ ಸೂಕ್ತ ಸೆಕ್ಯೂರಿಟಿ ಒದಗಿಸುವ ಅಗತ್ಯವಿದ್ದು ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದ ಕಾರಣವೇ ಇಂತಹ ಘಟನೆ ಸಂಭವಿಸಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದ್ದಾರೆ. ಜಸಿ ಆಸ್ಪತ್ರೆಯಲ್ಲಿ ಈಚೆಗೆ ಹಿರಿಯ ವೈದ್ಯರ ಮೇಲೆ ವ್ಯಕ್ತಿಯೊಬ್ಬ ನಡೆಸಿರುವ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ನೀಡಲಾದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಸವಲತ್ತುಗಳನ್ನು ಹೊಂದಿರುವ ಜೆಸಿ…

Read More

ಮಹೇಶ ಹೈಕಾಡಿ ಅವರಿಗೆ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ – ಹೆಬ್ರಿ ಅಮೃತ ಭಾರತಿ ಕನ್ನಡ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ – ಶಿಕ್ಷಣ, ಸಂಘಟನೆ, ಕನ್ನಡ ಕಟ್ಟುವ ಕಾಯಕಕ್ಕೆ ಸಂದ ಫಲ NAMMUR EXPRESS NEWS ಹೆಬ್ರಿ: ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಕಾರ , ಸಂಸ್ಕೃತಿಯ ತಳಹದಿಯ ಮೇಲೆ ಭಾರತೀಯ ಚಿಂತನೆವುಳ್ಳ ಶಿಕ್ಷಣವನ್ನು ನೀಡುತ್ತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡುತ್ತ ಹೆಸರುವಾಸಿಯಾಗಿರುವ ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಭಾಗದ ಕನ್ನಡ ಭಾಷಾ ಶಿಕ್ಷಕ ಮಹೇಶ್ ಹೈಕಾಡಿ ಅವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಲಭಿಸಿದೆ . 2012ರಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತ ಶಾಲೆಯ ವಿವಿಧ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಭಾಷಾ ಶಿಕ್ಷಕರಾಗಿ ಅನಂತರ ಅಮೃತಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿಯನ್ನು ಸಲ್ಲಿಸಿದ್ದಾರೆ . ಶಾಲೆಯಿಂದ ಮನೆಗೊಂದು ಪತ್ರಿಕೆ ಅಮೃತಾಣಿ ಹಸ್ತಪತ್ರಿಕೆಯ ಕಾರ್ಯನಿರ್ವಾಹ ಸಂಪಾದಕರಾಗಿ 2013…

Read More

ಟಾಪ್ 3 ನ್ಯೂಸ್ ಮಲ್ನಾಡ್ ನಾಯಿಗೆ ಹೆದರಿ ಕಾರು ಏರಿದ ಕಾಳಿಂಗ ಸರ್ಪ! – ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯಲ್ಲಿ ನಡೆದ ಘಟನೆ – ಶೃಂಗೇರಿ: ಮತ್ತೆ ಮಳೆ ಅಬ್ಬರ: ಮನೆ, ಎರಡು ಬೈಕ್ ಹಾನಿ – ಸಾಗರ: ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ! NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮನೆಯೊಂದರ ಸಮೀಪ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನು ನಾಯಿಗಳು ಕಂಡು ಬೊಗಳಲು ಆರಂಭಿಸಿದ್ದವು. ಇದರಿಂದ ಹೆದರಿದ ಕಾಳಿಂಗ ಮರವೇರಿ ಕುಳಿತು ಬಿಟ್ಟಿತ್ತು. ಕಾಳಿಂಗ ಸರ್ಪವೊಂದು ಮರವೇರಿ ಬುಸುಗುಡುತ್ತಿದ್ದನ್ನು ಕಂಡ ಅಲ್ಲಿಯೇ ಇದ್ದ ಮನೆಯವರು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ ನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಅಜಯ್ ಗಿರಿ ನೇತೃತ್ವದ ತಂಡ ಕಾಳಿಂಗವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ ನಾಯಿಗಳಿಂದ ಬೆದರಿಸಲ್ಪಟ್ಟ 8 ಅಡಿ ಉದ್ದದ ಕಾಳಿಂಗ ಸರ್ಪವೊಂದು ಆಂ ಎ್ಲಿಯೂ ಕಾಣಿಸಿರಲಿಲ್ಲ. ಇದು ಸ್ಥಳೀಯ ನಿವಾಸಿಗಳಿಗೆ ಅನುಮಾನಕ್ಕೆ…

Read More

ವೈದ್ಯರ ಕೊರಳುಪಟ್ಟಿ ಹಿಡಿದು ಹಲ್ಲೆ: ಇಬ್ಬರು ಅರೆಸ್ಟ್! – ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಘಟನೆ – ಸಂಬಂಧಿಕರ ಗುಂಪು ಒಟ್ಟಾಗಿ ವಾರ್ಡ್‌ಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಮಹಿಳೆಯೊಬ್ಬರು ವೈದ್ಯರೊಬ್ಬರನ್ನು ಎಳೆದಾಡಿ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಆರೋಪಿಸಿ ವೈದ್ಯರು ಹಾಗೂ ಸಿಬ್ಬಂದಿ ಹೊರರೋಗಿ ವಿಭಾಗ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಸ್ಲಿಮಾ ಮತ್ತು ಇರ್ಫಾನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆಯೊಂದರಲ್ಲಿ ಗಾಯಗೊಂಡಿದ್ದ ಇರ್ಷಾದ್ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆರ್ಥೋಪೆಡಿಕ್ ತಜ್ಞ ಡಾ.ಬಿ.ಎಸ್.ವೆಂಕಟೇಶ್ ಇರ್ಷಾದ್ ಅವರನ್ನು ತುರ್ತು ಚಿಕಿತ್ಸಾ ವಿಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅವರ ಸಂಬಂಧಿಕರ ಗುಂಪು ಒಟ್ಟಾಗಿ ವಾರ್ಡ್‌ಗೆ ಪ್ರವೇಶಿಸಿತು. ಗಾಯಾಳುಗಳನ್ನು ಪರೀಕ್ಸು ಅನುಕಲವಾಗುವಂತೆ ತುರ್ತು ಚಿಕಿತ್ಸಾ ವಿಭಾಗದಿಂದ ಹೊರಗೆ ಹೋಗುವಂತೆ ವೈದ್ಯರು ಹೇಳಿದ ನಂತರ ವಾಗ್ವಾದ ನಡೆಯಿತು. ಮಾತಿನ ಚಕಮಕಿ ನಡುವೆ ಇರ್ಷಾದ್…

Read More

ಹುಚ್ಚು ಮಳೆ ಆಯ್ತು, ಇನ್ನು ಭೀಕರ ಬಿಸಿಲು, ಚಳಿ! – ಅತಿಯಾದ ಚಳಿ, ಶೀತ ವಾತಾವರಣ ಸಾಧ್ಯತೆ – ಬಿಸಿಲು ಕೂಡ ಅತೀ: ಹೀಗಾದ್ರೆ ಹೇಗೆ ಸ್ವಾಮಿ..? – ಕೃಷಿ ಮೇಲೂ ಎಫೆಕ್ಟ್: ಪರಿಸರ ಹಾನಿ ಮಾಡಿದ್ದಕ್ಕೆ ಫಲ?   NAMMUR EXPRESS NEWS ನವ ದೆಹಲಿ: ಈ ವರ್ಷ ಮಳೆ ಇಡೀ ದೇಶದಲ್ಲಿ ಅಧಿಕವಾಗಿಯೇ ದಾಖಲಾಗಿದೆ. ಅದರ ಜತೆಗೆ ಈ ಬಾರಿ ದೇಶದಲ್ಲಿ ಚಳಿಯೂ ಅಧಿಕವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಿದ್ಯಮಾನವನ್ನು ಆರಂಭದಿಂದ ಗಮನಿಸಿ, ಇದು ರಾಷ್ಟ್ರದಾದ್ಯಂತ ಹೆಚ್ಚಿದ ಮಳೆ ಮತ್ತು ತಾಪಮಾನದಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಪ್ರಮಾಣದ ತಾಪಮಾನ ದಾಖಲಾಗಲಿದ್ದು, ಪರಿಣಾಮವೂ ವಿಭಿನ್ನವಾಗಿರಲಿದೆ. ಅಂದರೆ ಕೆಲವು ಪ್ರದೇಶಗಳಲ್ಲಿ ಅತಿಯಾದ ಚಳಿ ಇರಲಿದ್ದು, ಇನ್ನು ಕೆಲವೆಡೆ ಮಧ್ಯಮ ಪ್ರಮಾಣದಲ್ಲಿ ಶೀತ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ. ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ,…

Read More

ಆತ್ಮಹತ್ಯೆ ತಡೆಯೋದು ಹೇಗೆ? ಇರೋದೊಂದೇ ಜೀವ ಜೀವಿಸಿ! – ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ವಿರೋಧಿ ದಿನಾಚರಣೆ – ಬದುಕಿ ಬದುಕನ್ನು ಗೆದ್ದು ಸಾಧಿಸಿ ತೋರಿಸಿ: ವಿದ್ವಾನ್ ಗಣಪತಿ ಭಟ್ NAMMUR EXPRESS NEWS ಕಾರ್ಕಳ: ಸದಾ ಒಂದಲ್ಲ ಒಂದು ವಿಭಿನ್ನ ಕಾರ್ಯಕ್ರಮ ಆಯೋಜನೆ ಜತೆಗೆ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಸೆ.10ರಂದು ವಿಶ್ವ ಆತ್ಮಹತ್ಯೆ ವಿರೋಧಿ ದಿನಾಚರಣೆ ಅಂಗವಾಗಿ ಮಾಹಿತಿ ಕಾರ್ಯಗಾರ ನಡೆಯಿತು. ಸಪ್ತಸ್ವರ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಕ್ಯಾಥರೀನ್ ಜೆನ್ನಿಫರ್, ಕ್ಲಿನಿಕಲ್ ಸೈಕಾಲಜಿಸ್ಟ್‌, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಉಡುಪಿ ಇವರು ಮಾತನಾಡಿ ‘ ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಾಮರ್ಥ್ಯವೇನು ಎಂಬುದನ್ನು ಅರಿತು ಅದರಂತೆ ಜೀವಿಸಬೇಕು. ಬೇರೆಯವರ ಜೀವನಶೈಲಿ ನಮ್ಮದಾಗದರಲಿ. ಕಾರಾತ್ಮಕ ಮನೋಾವ, ಚಿಂತನೆಗಳನ್ನು ಅನುಸರಿಸಬೇಕು’ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂದೀಪ್ ಕುದ್ವ ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ…

Read More