Categories
ತೀರ್ಥಹಳ್ಳಿ

ನಾಯಿಗೆ ಹೆದರಿ ಕಾರು ಏರಿದ ಕಾಳಿಂಗ ಸರ್ಪ!

ಟಾಪ್ 3 ನ್ಯೂಸ್ ಮಲ್ನಾಡ್

ನಾಯಿಗೆ ಹೆದರಿ ಕಾರು ಏರಿದ ಕಾಳಿಂಗ ಸರ್ಪ!
– ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯಲ್ಲಿ ನಡೆದ ಘಟನೆ

– ಶೃಂಗೇರಿ: ಮತ್ತೆ ಮಳೆ ಅಬ್ಬರ: ಮನೆ, ಎರಡು ಬೈಕ್ ಹಾನಿ
– ಸಾಗರ: ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮನೆಯೊಂದರ ಸಮೀಪ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನು ನಾಯಿಗಳು ಕಂಡು ಬೊಗಳಲು ಆರಂಭಿಸಿದ್ದವು. ಇದರಿಂದ ಹೆದರಿದ ಕಾಳಿಂಗ ಮರವೇರಿ ಕುಳಿತು ಬಿಟ್ಟಿತ್ತು. ಕಾಳಿಂಗ ಸರ್ಪವೊಂದು ಮರವೇರಿ ಬುಸುಗುಡುತ್ತಿದ್ದನ್ನು ಕಂಡ ಅಲ್ಲಿಯೇ ಇದ್ದ ಮನೆಯವರು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ ನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಅಜಯ್ ಗಿರಿ ನೇತೃತ್ವದ ತಂಡ ಕಾಳಿಂಗವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ನಾಯಿಗಳಿಂದ ಬೆದರಿಸಲ್ಪಟ್ಟ 8 ಅಡಿ ಉದ್ದದ ಕಾಳಿಂಗ ಸರ್ಪವೊಂದು ಆಂ ಎ್ಲಿಯೂ ಕಾಣಿಸಿರಲಿಲ್ಲ. ಇದು ಸ್ಥಳೀಯ ನಿವಾಸಿಗಳಿಗೆ ಅನುಮಾನಕ್ಕೆ ಕಾರಣವಾಗಿತ್ತು. ಹಾವು ಕಾರಿನೊಳಗೆ ಇರಬಹುದಾ ಎಂಬ ಸಂಶಯದಲ್ಲಿ ಪರಿಶೀಲಿಸಿದಾಗ ಕಾಳಿಂಗ ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರೊಂದರಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಜ್ಞರ ತಂಡ ಕಾಳಿಂಗವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

ಶೃಂಗೇರಿ: ಮತ್ತೆ ಮಳೆ ಅಬ್ಬರ: ಮನೆ, ಎರಡು ಬೈಕ್ ಹಾನಿ

ಶೃಂಗೇರಿ: ಕಳೆದೊಂದು ವಾರದಿಂದ ಸುರಿದ ಮಳೆಗೆ ಮನೆಯೊಂದು ಕುಸಿದು ಎರಡು ಬೈಕ್ ಜಖಂವಾಗಿರುವ ಘಟನೆ ಶೃಂಗೇರಿ ತಾಲೂಕಿನ ಮೇಲು ನೆಮ್ಮಾರು ಗ್ರಾಮದಲ್ಲಿ ನಡೆದಿದೆ. ಮೇಲು ನೆಮ್ಮಾರು ಗ್ರಾಮದ ಎಂ. ಪಿ ಶೃಂಗೇಶ್ವರ್ ಭಟ್ ಎಂಬುವವರ ಮನೆ ಬುಧವಾರ ಬೆಳಿಗ್ಗೆ ಕುಸಿತವಾಗಿದ್ದು, ಮನೆಯೊಳಗೆ ಇದ್ದ ಎರಡು ಬೈಕ್ ಗಳು ಜಖಂವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

– ಸಾಗರ: ಹಸುವನ್ನು ಬೇಟೆಯಾಡಿದ ಕರಿ ಚಿರತೆ

ಸಾಗರ: ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ. ಜೋಗ ಜಲಪಾತಕ್ಕೆ ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು ಹಸುವನ್ನು ಬೇಟೆಯಾಡಿದೆ.
ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಕರಿಚಿರತೆ ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.