ಗಣೇಶೋತ್ಸವ ವಿಶೇಷ ಟಾಪ್ ನ್ಯೂಸ್ – ಅರಳಾಪುರದ ಗಣೇಶೋತ್ಸವ ಸಂಭ್ರಮದಲ್ಲಿ ಸಾಧಕರಿಬ್ಬರಿಗೆ ಸನ್ಮಾನ – ಶೀರೂರಿನ ಗಣೇಶೋತ್ಸವದಲ್ಲಿ ಗಮನ ಸೆಳೆದ ಮಹಿಳೆಯರ ಡ್ಯಾನ್ಸ್ – ಬೆಜ್ಜವಳ್ಳಿಯಲ್ಲಿ ಹಬ್ಬದ ಅಂಗವಾಗಿ ಸಿಹಿ ಹಂಚಿದ ಮುಸ್ಲಿಂ ಬಾಂಧವರು! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಅರಳಾಪುರ ನವೋದಯ ಯುವಕ ಸಂಘ(ರಿ) ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ಇದೇ ಗ್ರಾಮದ ಸಾಧಕರಾದ ನಿವೃತ್ತ ಯೋಧ ಅರಳಾಪುರದ ಸಂತೋಷ್ ಎ.ಕೆ.ಮತ್ತು ಮೂಲತಃ ವಡ್ಡಿನಬಯಲಿನ ಉಪನ್ಯಾಸಕ,ಸಾಹಿತಿ ಹರೀಶ್ ಟಿ.ಜಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅರಳಾಪುರದ ವಜ್ರ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಸಂತೋಷ್ ಎ.ಕೆ. ದೇಶದ ಸೇನೆ ಸೇರುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ,ಇದು ನನ್ನ ಪುಣ್ಯ ಅಂತಹದೊಂದು ಯೋಗ ನನಗ ಸಿಕ್ತು,ಇಂದಿನ 16ವರುಷದಿಂದ 21ವರುಷದೊಳಗಿನ ಯುವಕರು ನಮ್ಮ ದೇಶದ ಸೇನೆ ಸೇರುವ ಬಗ್ಗೆ ಗುರಿ ಹೊಂದಬೇಕು ಎಂದು, ತನ್ನ 24 ವರುಷಗಳ ಸೇನಾ…
Author: Nammur Express Admin
ಪಶ್ಚಿಮಘಟ್ಟ ಪ್ರದೇಶಲ್ಲಿರುವ ರೆಸಾರ್ಟ್ ಮಾಲಿಕರಿಗೆ ನೋಟಿಸ್! * ಸಾಲು ಸಾಲು ದುರ್ಘಟನೆ ಬಳಿಕ ಎಚ್ಚತ್ತ ಅರಣ್ಯ ಇಲಾಖೆ * ಕಂದಾಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಸೂಚನೆ * ಖಂಡ್ರೆ ಸಹೋದರನ ವಿರುದ್ಧವೇ ಅರಣ್ಯ ಭೂಮಿ ಒತ್ತುವರಿ ಆರೋಪ?! NAMMUR EXPRESS NEWS ಚಿಕ್ಕಮಗಳೂರು/ ಶಿವಮೊಗ್ಗ: ಅರಣ್ಯ ಇಲಾಖೆ ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್ ಮಾಲಿಕರಿಗೆ ನೋಟಿಸ್ ನೀಡಿದೆ. ಅಂಕೋಲಾದ ಶಿರೂರು, ಶಿರಾಡಿ ಘಾಟ್ ಭೂಕುಸಿತ ಹಾಗೂ ವಯನಾಡಿನ ದುರ್ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗಿರುವ ರೆಸಾರ್ಟ್ ಅಥವಾ ಹೋಂಸ್ಟೇಗಳಿಗೆ ನೋಟಿಸ್ ನೀಡಿದೆ. ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇ ಅಥವಾ ರೆಸಾರ್ಟ್ಗಳನ್ನು ಪತ್ತೆ ಹಚ್ಚಲು ಮುಂದಾಗಿದೆ. ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್ ಮಾಲಿಕರ ಮ್ಮ ಹೋಂಸ್ಟೇಗೆ…
ಮಲ್ನಾಡ್ ಟಾಪ್ ನ್ಯೂಸ್ * ಶಿವಮೊಗ್ಗ: ತುಂಬಿದ ಲಾರಿ ಪಲ್ಟಿ!! * ಶಿವಮೊಗ್ಗ:ಕಾಣಿಸಿಕೊಂಡ ಅಪರೂಪದ ವನ್ಯಜಿವಿ! * ಶಿಕಾರಿಪುರ: ಗಾಂಜಾ ಮಾರಾಟ ಆರೋಪಿ ಅರೆಸ್ಟ್ * ಶಿವಮೊಗ್ಗ: ವೀಲ್ಹೀಂಗ್ ಸ್ಟಂಟ್ ಮಾಡಿದ ವ್ಯಕ್ತಿಗೆ ದಂಡ! NAMMUR EXPRESS NEWS * ತುಂಬಿದ ಲಾರಿ ಪಲ್ಟಿ!! ಶಿವಮೊಗ್ಗ:ತುಂಬಿದ ಲಾರಿ (ಕ್ಯಾಂಟರ್) ಸಾಗರ ತಾಲ್ಲೂಕು ಹಕ್ರೆಕೊಪ್ಪ ಬಳಿ ಪಲ್ಟಿಯಾಗಿದೆ. ಭತ್ತದ ಹೊಟ್ಟು ಪೂರ್ತಿ ರಸ್ತೆಯ ಒಂದು ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಸಾಗರ ತಾಲ್ಲೂಕು ಸುದ್ದಿ -ಸಾಗರ ತಾಲ್ಲೂಕು ಕ್ಯಾಂಟರ್ನ ಚಸ್ಸಿ ತುಂಡಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ವೇಳೆ ಕ್ಯಾಂಟರ್‌ನಲ್ಲಿ ನಾಲ್ವರು ಮಂದಿ ಇದ್ದಾರೆ. ಅದೃಷ್ಟಕ್ಕೆ ಯಾರಿಗೂ ಅಪಾಯ ಸಂಭವಿಸಲಿಲ್ಲ. ಚಸ್ಸಿ ಕಟ್ ಆಗಿದ್ದು ಅರಿವಿಗೆ ಬರುತ್ತಲೇ ಚಾಲಕ ವಾಹನವನ್ನು ನಿಧಾನವಾಗಿ ಚಲಾಯಿಸಿದರೆ ಹೆಚ್ಚಿನ ಅಪಾಯವೂ ಉಂಟಾಗಿಲ್ಲ. * ಕಾಣಿಸಿಕೊಂಡ ಅಪರೂಪದ ವನ್ಯಜಿವಿ! ಶಿವಮೊಗ್ಗ:ಸಾಮಾನ್ಯವಾಗಿ ಕಾಡಿನಲ್ಲಿ ಕಾಣಿಸಿಕೊಳ್ಳುವ ಅಪರೂಪದ ವನ್ಯಜಿವಿ ಪುನುಗು ಬೆಕ್ಕು ಶಿವಮೊಗ್ಗ ಸಿಟಲ್ಲಿ ಕಾಣಿಸಿಕೊಡಿದ್ದು ಅರ ವಿಡಿಯೋ ವೈರಲ್ ಆಗುತ್ತಿದೆ. ಇನ್ನೊಂದೆಡೆ…
ಕರ್ತವ್ಯ ನಿರತ ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ! – ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಘಟನೆ: ವೈದ್ಯರಿಂದ ದೂರು,ಪ್ರತಿಭಟನೆ – ಹಲ್ಲೆ ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದ ಸಿ.ಟಿ ರವಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮೇಲೆ ಹಲ್ಲೆ ಘಟನೆ ನಡೆದಿದ್ದು ಹಲ್ಲೆ ಖಂಡಿಸಿ ನಗರದ ಪೋಲೀಸ್ ಠಾಣೆ ಎದುರು ನೂರಾರು ಆರೋಗ್ಯ ಸಿಬ್ಬಂದಿಗಳಿಂದ ಪ್ರತಿಭಟನೆ ನಡೆದಿದೆ. ಹಲ್ಲೆಗೊಳಗಾದ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆ ವೈದ್ಯರ ತಂಡ ಚಿಕ್ಕಮಗಳೂರು ನಗರ ಪೋಲೀಸ್ ಠಾಣೆಯಲ್ಲಿ ಹಲ್ಲೆಗೈದ ಮಹಿಳೆಯ ವಿರುದ್ಧ ದೂರು ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಜೊತೆ ಪೋಲೀಸ್ ಠಾಣೆಯ ಎದುರು ನೂರಾರು ಜನ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಮಾವಣೆಗೊಂಡು ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆಯನ್ನು ಕೂಡಲೇ ಬಂಧಿಸಿ,ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದರು. ಸಿಬ್ಬಂದಿಯ ಪ್ರತಿಭಟನೆಗೆ ನಗರದ ಆಟೋ ಚಾಲಕರು,ಕರ್ನಾಟಕ ರಕ್ಷಣಾ ವೇದಿಕೆ,ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳ ಾ್ಯಕರ್ತು ಸಾಥ್ ನೀಡಿದರು.…
ಕರಾವಳಿ ಟಾಪ್ 3 ನ್ಯೂಸ್! * ಉಲ್ಲಾಳ: ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನ! * ಉಡುಪಿ: ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ!! * ಪುತ್ತೂರು: ರಸ್ತೆ ಕಂಡ ಕಂಡಲ್ಲಿ ಹೊಂಡ, ಸಂಚಾರಕ್ಕೆ ಪರದಾಡುವ ಸ್ಥಿತಿ NAMMUR EXPRESS NEWS * ಉಳ್ಳಾಲ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನ! ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಮತ್ತು ತಲಾ 16 ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಉಳ್ಳಾಲ ನಿವಾಸಿಗಳಾದ ಒಂದನೇ ಆರೋಪಿ ಮುಸ್ತಾಕ್ (32) ಮತ್ತು ನಾಲ್ಕನೇ ಆರೋಪಿ ಜಾಕೀರ್ (36) ಶಿಕ್ಷೆಗೊಳಗಾಗಿದ್ದಾರೆ.ಎರಡನೇ ಆರೋಪಿ ಯಾಸೀನ್ ಮತ್ತು ಮೂರನೇ ಆರೋಪಿ ಅಶ್ರಫ್ ಸಮೋಸ (50) ಇವರು ತಲೆಮರೆಸಿಕೊಂಡಿದ್ದಾರೆ. * ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ!! ಉಡುಪಿ: ಬೈಂದೂರಿನ ಯಡ್ತರೆ ಗ್ರಾಮದ ಜೀವನ (33)…
ಚಿಕ್ಕಮಗಳೂರು ಗಣಪತಿ ವಿಶೇಷಗಳು
ವಿನಯ್ ಗುರೂಜಿ ಪೂಜೆ ಸಲ್ಲಿಸೋ ವೇಳೆ ಹೂವಿನ ಪ್ರಸಾದ! – ಎನ್.ಆರ್ ಪುರ ಸುಂಕದಕಟ್ಟೆ ಗಣೇಶೋತ್ಸವದಲ್ಲಿ ಅವಧೂತ ವಿನಯ್ ಗುರೂಜಿ ಭಾಗಿ NAMMUR EXPRESS NEWS ಎನ್ ಆರ್ ಪುರ ತಾಲೂಕಿನ ಸುಂಕದಕಟ್ಟೆ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 19 ನೇ ವರ್ಷದ ಗಣೇಶೋತ್ಸವದಲ್ಲಿ ಅವಧೂತ ಗೌರಿಗದ್ದೆ ವಿನಯ್ ಗುರೂಜಿ ಭೇಟಿ ನೀಡಿದರು. ಈ ಸಂದರ್ಭ ಸಮಿತಿಯ ಎಲ್ಲಾ ಸದಸ್ಯರು ಆಗಮಿಸಿದ್ದ ಭಕ್ತಾಧಿಗಳಿಗೆ ಗಣೇಶೋತ್ಸವದ ಶುಭಾಶಯ ತಿಳಿಸಿ ಪ್ರತಿಷ್ಠಾಪಿತ ಗಣಪತಿಗೆ ಪೂಜೆ ಸಲ್ಲಿಸಿದರು. ಮಂಗಳಾರತಿ ವೇಳೆ ಹೂವಿನ ಪ್ರಸಾದವಿತ್ತ ಗಣಪ..!! ವಿನಯ್ ಗುರೂಜಿಯವರು ಗಣಪನಿಗೆ ಮಂಗಳಾರತಿ ಮಾಡುವ ಸಂದರ್ಭದಲ್ಲಿ ಗಣಪನ ಬಲ ಭಾಗದಿಂದ ಹೂವಿನ ಪ್ರಸಾದವಾಯಿತು. ಇದನ್ನು ಕಂಡು ನೆರದಿದ್ದ ಭಕ್ತರು ಹಾಗೂ ಸಮಿತಿಯ ಸದಸ್ಯರು ಸಂತೋಷಗೊಂಡು ನಮಸ್ಕರಿಸಿದರು. ಸಂದರ್ಭ ಸಮಿತಿಯ ಸದಸ್ಯರಾದ ಪಿ್ ಚಂದ್ರು, ನವೀನ ,ಸುಮಂತ್, ಜಗದೀಶ್, ನಿರಂಜನ್, ಸುನಿಲ್ ಕುಮಾರ್, ಆದರ್ಶ, ರಾಘು ಹಾಗೂ ಭಕ್ತಾದಿಗಳು ಇದ್ದರು
ಕರಾವಳಿ ಸರ್ಕಾರಿ ಶಾಲೆಗಳಿಗೆ ಸೋಲಾರ್ ಬೆಳಕು ಭಾಗ್ಯ! – ಸೆಲ್ಕೋ ಕಂಪನಿ ಸಹಭಾಗಿತ್ವದಲ್ಲಿ ಶಾಲೆಗಳಿಗೆ ಸೋಲಾರ್ – ಸರಕಾರಿ ಆಯುರ್ವೇದ ಕಾಲೇಜುಗಳಿಗೆ ಬೇಡಿಕೆ – ಎಂಬಿಬಿಎಸ್ ವಿದ್ಯಾರ್ಥಿವೇತನ ಪ್ರಕಟಣೆ: ಯಾರಿಗೆ ಸಿಗುತ್ತೆ? NAMMUR EXPRESS NEWS ಕುಂದಾಪುರ: ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಬಳಿಕ, ಈಗ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲೂ ಸೌರಶಕ್ತಿಯ ಸದ್ಬಳಕೆಗೆ ಯೋಜನೆ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ. ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಸೆಲ್ಕೋ ಸೋಲಾರ್ ಫೌಂಡೇಶನ್ ನೇತೃತ್ವದಲ್ಲಿ ಬೆಂಗಳೂರು ಮೂಲದ ಕ್ಯಾನ್‌ಫಿನ್ ಹೋಮ್ಸ್ ಸಂಸ್ಥೆಯ ಸಹಯೋಗದಲ್ಲಿ ಹಕ್ಲಾಡಿ ಸರಕಾರಿ ಪ್ರೌಢಶಾಲೆ, ಕಕ್ಕುಂಜೆ ಸರಕಾರಿ ಶಾಲೆಯನ್ನು ಸಂಪೂರ್ಣ ಸೋಲಾರ್ ಸ್ವಾವಲಂಬಿಯನ್ನಾಗಿ ಮಾಡಲಾಗಿದೆ. ಈ ವರ್ಷ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ 25 ಸರಕಾರಿ ಶಾಲೆಗಳಲ್ಲಿ ಸಂಪೂರ್ಣ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಗುರಿ ಹಂದಲಗದೆ. ಬ್ರಹ್ಮಾವರ ವಲಯದ ಹಾಲಾಡಿ ಸಮೀಪದ 110 ಮಕ್ಕಳಿರುವ ಕಕ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 5.16 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್…
ನಕಲಿ ಹಕ್ಕು ಪತ್ರ ದಂಧೆ ಪತ್ತೆ! – ಹೊಸನಗರದಲ್ಲಿ ಅಡ್ಡೆ ಮೇಲೆ ತಹಶೀಲ್ದಾರ್ ರಶ್ಮಿ ಹಾಲೇಶ್ ದಾಳಿ – ಅಧಿಕಾರಿಗಳ ಸೀಲ್, ನಕಲಿ ಹಕ್ಕುಪತ್ರ ಪತ್ತೆ: ಏನಿದು ಪ್ರಕರಣ? – ಮಲೆನಾಡ ರಿಯಲ್ ಎಸ್ಟೇಟ್ ಮಾಫಿಯಾದ ಇನ್ನೊಂದು ಮುಖ! NAMMUR EXPRESS NEWS ಹೊಸನಗರ: ಮಲೆನಾಡನ್ನು ಬೆಚ್ಚಿ ಬೀಳಿಸುವ ಪ್ರಕರಣವೊಂದು ವರದಿಯಾಗಿದೆ. ಇದೀಗ ನಕಲಿ ಹಕ್ಕುಪತ್ರ ಅಡ್ಡೆ ಮೇಲೆ ಖಚಿತ ಮಾಹಿತಿಯ ಮೇರೆಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತ್ರತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ತಾಲೂಕಿನ ಪ್ರಮುಖ ಅಧಿಕಾರಿಗಳ ನಕಲಿ ಸೀಲ್ ಗಳು, ನೂರಾರು ನಕಲಿ ಹಕ್ಕುಪತ್ರಗಳನ್ನು ಪತ್ತೆ ಹಚ್ಚಿದ್ದಾರೆ. ಜತೆಗೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹೊಸನಗರ ತಾಲೂಕಿನಲ್ಲೆಡೆ ನಕಲಿ ಹಕ್ಕುಪತ್ರಗಳ ಜಾಲ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತಿದ್ದು ಈ ಬಗ್ಗೆ ಮಾದ್ಯಮಗಳು ತಹಶೀಲ್ದಾರ್ ರಶ್ಮಿ ಹಾಲೇಶ್ ಗಮನಕ್ಕೆ ತಂದಿದ್ದವು.ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ತಹಶೀಲ್ದಾರ್ ಖಚಿತ ಮಾಹಿತಿಯನ್ನಾಧರಿಸಿ ತಾಲೂಕಿನ ಎಲ್ ಗುಡ್ಡೆಕೊಪ್ಪ ಗ್ರಾಮದ ಮಳಲಿ ರಾಜೇಂದ್ರ ಎಂಬುವವರ ಮನೆ ಮೇಲೆ ದಾಳಿ…
ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?! – ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ? – ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್ NAMMUR EXPRESS NEWS ನವ ದೆಹಲಿ: ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?!. ಹೀಗೊಂದು ಪ್ರಶ್ನೆ ಎದ್ದಿದೆ. ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ ಎಂಬ ಕುತೂಹಲ ಮೂಡಿದೆ. ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್ ಮಾಡಲಾಗಿದೆ. ಪ್ರತಿ ವರ್ಷ ದೀಪಾವಳಿ ಹೊತ್ತಿಗೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧದ ಪ್ರಸ್ತಾಪ ಕೇಳಿ ಬರುತ್ತೆ. ಪರಿಸರ ವಾದಿಗಳು, ಆರೋಗ್ಯ ತಜ್ಞರು ಪಟಾಕಿ ನಿಷೇಧದ ಪರ ಮಾತನಾಡುತ್ತಾರೆ. ಕೆಲವರು ಹಸಿರು ಪಟಾಕಿ ಮಾತ್ರ ಬಳಸಬೇಕು ಅಂತಾನೂ ವಾದಿಸ್ತಾರೆ. ಆದರೀಗ ಇವರೆಲ್ಲರ ಬೇಡಿಕೆಗೆ ಅಸ್ತು ಎಂದಿದೆ ದೆಹಲಿ ಸರ್ಕಾರ. ದೀಪಾವಳಿ ಸಮೀಪಿಸುತ್ತಿರುವ ಹೊತ್ತಲ್ಲೇ ದೆಹಲಿ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ತನ್ನ ಆಡಳಿತ ವ್ಯಾಪ್ತಿಯ ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಮಾರಾಟ ಹಾಗೂ…