ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?! – ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ? – ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್ NAMMUR EXPRESS NEWS ನವ ದೆಹಲಿ: ದೀಪಾವಳಿಗೆ ಪಟಾಕಿ ಬ್ಯಾನ್ ಆಗುತ್ತಾ?!. ಹೀಗೊಂದು ಪ್ರಶ್ನೆ ಎದ್ದಿದೆ. ಆರೋಗ್ಯ ತಜ್ಞರ ಪ್ರಸ್ತಾಪಕ್ಕೆ ಕೇಂದ್ರ ನಿಯಮ ಮಾಡುತ್ತಾ ಎಂಬ ಕುತೂಹಲ ಮೂಡಿದೆ. ದೆಹಲಿಯಲ್ಲಿ ಈಗಾಗಲೇ ಪಟಾಕಿ ಬ್ಯಾನ್ ಮಾಡಲಾಗಿದೆ. ಪ್ರತಿ ವರ್ಷ ದೀಪಾವಳಿ ಹೊತ್ತಿಗೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧದ ಪ್ರಸ್ತಾಪ ಕೇಳಿ ಬರುತ್ತೆ. ಪರಿಸರ ವಾದಿಗಳು, ಆರೋಗ್ಯ ತಜ್ಞರು ಪಟಾಕಿ ನಿಷೇಧದ ಪರ ಮಾತನಾಡುತ್ತಾರೆ. ಕೆಲವರು ಹಸಿರು ಪಟಾಕಿ ಮಾತ್ರ ಬಳಸಬೇಕು ಅಂತಾನೂ ವಾದಿಸ್ತಾರೆ. ಆದರೀಗ ಇವರೆಲ್ಲರ ಬೇಡಿಕೆಗೆ ಅಸ್ತು ಎಂದಿದೆ ದೆಹಲಿ ಸರ್ಕಾರ. ದೀಪಾವಳಿ ಸಮೀಪಿಸುತ್ತಿರುವ ಹೊತ್ತಲ್ಲೇ ದೆಹಲಿ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ತನ್ನ ಆಡಳಿತ ವ್ಯಾಪ್ತಿಯ ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಮಾರಾಟ ಹಾಗೂ…
Author: Nammur Express Admin
ರಿಕ್ಷಾದಡಿ ಸಿಲುಕಿದ್ದ ತಾಯಿಯ ರಕ್ಷಿಸಿದ ಪುತ್ರಿ!! * ಬಾಲಕಿಯ ಸಮಯಪ್ರಜ್ಞೆಗೆ ಸಿಎಂ ಶ್ಲಾಘನೆ * ಸಮಯಪ್ರಜ್ಞೆ, ಧೈರ್ಯಕ್ಕೆ ಮೆಚ್ಚುಗೆ! NAMMUR EXPRESS NEWS ಕಿನ್ನಿಗೋಳಿ: ರಸ್ತೆ ದಾಟುತ್ತಿದ್ದ ತಾಯಿಗೆ ರಿಕ್ಷಾ ಢಿಕ್ಕಿಯಾಗಿ ಅದರಡಿ ಬಿದ್ದಿದ್ದಾಗ ಹತ್ತಿರದಲ್ಲಿಯೇ ಇದ್ದ ಪುತ್ರಿ, 7ನೇ ತರಗತಿಯ ವೈಭವಿ ತತ್‌ಕ್ಷಣವೇ ಧಾವಿಸಿ ಬಂದು ರಿಕ್ಷಾ ಮೇಲೆತ್ತಿ ತಾಯಿಯನ್ನು ರಕ್ಷಿಸಿದ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಿನ್ನಿಗೋಳಿಯ ರಾಮ ನಗರದಲ್ಲಿ ಟ್ಯೂಶನ್‌ಗೆ ಹೋಗಿದ್ದ ಪುತ್ರಿಯನ್ನು ಕರೆತರಲು ಬರುತ್ತಿದ್ದ ತಾಯಿ ರಸ್ತೆ ದಾಟುತ್ತಿದ್ದಂತೆ ರಿಕ್ಷಾ ಢಿಕ್ಕಿಯಾಯಿತು. ಈ ವೇಳೆ ಆಕೆ ರಿಕ್ಷಾದ ಅಡಿಯಲ್ಲಿ ಸಿಲುಕಿದ್ದು, ಎದುರಿನಲ್ಲಿದ್ದ ಪುತ್ರಿ ನೋಡ ನೋಡುತ್ತಿದ್ದಂತೆ ಘಟನೆ ಸಂಭವಿಸಿದ್ದು, ಆಕೆ ತತ್‌ಕ್ಷಣವೇ ಧಾವಿಸಿ ರಿಕ್ಷಾವನ್ನು ಮೇಲೆತ್ತಿ ತಾಯಿಯನ್ನು ರಕ್ಷಿಸಿದ್ದಳು. ಇದು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪ್ರಸ್ತುತ ತಾಯಿ ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬೆನ್ನುಮೂಳೆಗೆ ಹಾನಿಯಾಗಿದ್ದು, ಿಕಿತ್ಸೆಗೆ ರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. * ಸಮಯಪ್ರಜ್ಞೆ, ಧೈರ್ಯಕ್ಕೆ ಮೆಚ್ಚುಗೆ! ತಾಯಿಗೆ ರಿಕ್ಷಾ…
ಕೋಡಿ ಮಠ ಶ್ರೀ ಸ್ಫೋಟಕ ಭವಿಷ್ಯ – ಮತ್ತೆ ಪ್ರಕೃತಿ ವಿಕೋಪ, ಸರ್ಕಾರಕ್ಕೆ ಕಂಟಕ ! – ಭೂಮಿ, ಅಗ್ನಿ, ವಾಯು, ಆಕಾಶ ನೀರಿನಲ್ಲಿ ಅಪಾಯ NAMMUR EXPRESS NEWS ಹಾಸನ: ಕೋಡಿಮಠದ ಶ್ರೀಗಳು ಮತ್ತೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮಳೆಯಿಂದ ಜಾಸ್ತಿ ತೊಂದರೆ ಇದೆ ಎಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಪ್ರಾಕೃತಿಕ ದೋಷ ಇದ್ದು, ಐದು ಕಡೆಯೂ ತೊಂದರೆ ಇದೆ. ಭೂಮಿ, ಅಗ್ನಿ, ವಾಯು, ಆಕಾಶ ಹೀಗೆ ಎಲ್ಲಾ ಕಡೆ ತೊಂದರೆ ಆಗುತ್ತದೆ. ಇನ್ನೂ ಒಂದು ಆಕಾಶದಲ್ಲಿ ಆಗುವ ದೊಡ್ಡ ಸುದ್ದಿ ಇದೆ. ಈ ಹಿಂದೆ ಜನ ಇದ್ದಂಗೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ ಎಂದಿದ್ದೆ, ಗುಡ್ಡ ಹೋಗುತ್ತೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಮುಳುಗುತ್ತವೆ ಅಂತಲೂ ಹೇಳಿದ್ದೆ. ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳು ಇವೆ. ಒಂದು ಆಕಾಶ ತತ್ವ ಪ್ರಕಾರ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರ ಖರ್ಚುಗಳು ಇಂದು ಹೆಚ್ಚಾಗುತ್ತವೆ, ಆದರೆ ಹಣ ಗಳಿಸುವ ಹೊಸ ಮೂಲಗಳು ಸಹ ಸೃಷ್ಟಿಯಾಗುತ್ತವೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ನೀವು ಇಂದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ** ವೃಷಭ ರಾಶಿ : ಇಂದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಆದಾಯದ ಹೊಸ ಮೂಲಗಳಿಗಾಗಿ ನೋಡಿ. ಆಸ್ತಿ…
ಯೂಟ್ಯೂಬ್ ನೋಡಿ ಆಪರೇಷನ್: ಬಾಲಕ ಬಲಿ! * ನಕಲಿ ವೈದ್ಯನಿಂದ ಆಪರೇಷನ್: ಏನಿದು ಘಟನೆ * ಶವವನ್ನು ಬಿಟ್ಟು ಸ್ಥಳದಿಂದ ನಕಲಿ ವೈದ್ಯ ಪರಾರಿ! NAMMUR EXPRESS NEWS ಬಿಹಾರ: ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ನಕಲಿ ವೈದ್ಯನೊಬ್ಬ ಬಾಲಕನ ಜೀವವನ್ನೇ ತೆಗೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ಬಾಲಕನ ಪ್ರಾಣವನ್ನೇ ತೆಗೆದಿದ್ದಾನೆ. ನಕಲಿ ವೈದ್ಯನೊಬ್ಬ ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ್ದಕ್ಕೆ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್ ನೋಡಿ ಆಪರೇಷನ್ ಮಾಡಲು ಹೋಗಿ ಬಾಲಕನ ಜೀವವನ್ನೇ ತೆಗೆದಿದ್ದಾನೆ. ಅಜಿತ್ ಕುಮಾರ್ ಪುರಿ ನಡೆಸುತ್ತಿದ್ದ ಕ್ಲಿನಿಕ್‌ಗೆ ಅವರ ಕುಟುಂಬದವರು ಸೇರಿಸಿದ್ದಾರೆ, ಬಾಲಕನಿಗೆ ವಾಂತಿ…
ತೀರ್ಥಹಳ್ಳಿ ತಾಲೂಕಿನ ಗಣಪತಿ ವಿಶೇಷ ಫೋಟೋಗಳು
ಟಾಪ್ 4 ನ್ಯೂಸ್ ಕರಾವಳಿ ಮುಖ್ಯಮಂತ್ರಿ ಫೋಟೋಗೆ ಅವಮಾನ- ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಕೇಸ್! – ಕಾರ್ಕಳ: ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ; ಇಬ್ಬರು ಅರೆಸ್ಟ್! – ಕಾರವಾರ: ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲ್ವೆ ದುರಂತ ತಪ್ಪಿಸಿದ! – ಕುಂದಾಪುರ: ಬೃಹತ್ ಗಾತ್ರದ ಹೆಬ್ಬಾವು ಪತ್ತೆ! NAMMUR EXPRESS NEWS ಉಡುಪಿ: ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ಘೋಷಿಸಿದ್ದ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವೇಳೆ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಹೌದು ಕಳೆದ 2 ದಿನಗಳ ಹಿಂದೆ ಉಡುಪಿಯಲ್ಲಿ ಪ್ರಾಂಶುಪಾಲರಿಗೆ ಘೋಷಿಸಿದ್ದ ಪ್ರಶಸ್ತಿ ತಡೆ ಹಿಡಿದಿದ್ದಕ್ಕೆ ಬಿಜೆಪಿ ನಾಯಕರು ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ೇಳೆ ರ್ತ ತೆದು ಮುಖ್ಯಮಂತ್ರಿಗಳ ಪ್ರತಿಕೃತಿ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ್ದರು. ಹಿಂದೂ ವಿರೋಧಿ ಸಿದ್ದರಾಮಯ್ಯರನ್ನು ತೊಲಗಿಸಿ…
ಶಿವಮೊಗ್ಗ ಜಿಲ್ಲೆಯಲ್ಲಿ 3,500ಕ್ಕೂ ಅಧಿಕ ಮೂರ್ತಿ ಪ್ರತಿಷ್ಠಾಪನೆ! – ಮಲೆನಾಡಲ್ಲಿ ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಸಡಗರ – ಭದ್ರಾವತಿ ಗಣೇಶ ವಿಸರ್ಜನೆ ವೇಳೆ ಗಲಾಟೆ: 30ಕ್ಕೂ ಹೆಚ್ಚು ಜನರು ವಶಕ್ಕೆ – ಹಬ್ಬದ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ಸರಣಿ ಮನೆಗಳ್ಳತನ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಗಣೇಶೋತ್ಸವವನ್ನು ಭಕ್ತರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲೆರಡು ದಿನ 480ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಜಿಲ್ಲೆಯಲ್ಲಿ ಈ ಬಾರಿ ಸ್ಥಳೀಯಾಡಳಿತದ ಅನುಮತಿ ಮೇರೆಗೆ ಸಾರ್ವಜನಿಕವಾಗಿ 3,500ಕ್ಕೂ ಅಧಿಕ ವಿಘ್ನ ನಿವಾರಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನ ಸೆ. 07ರಂದು ವಿಜೃಂಭಣೆಯ ರಾಜಬೀದಿ ಉತ್ಸವದೊಂದಿಗೆ 420ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಸೆ. 08ರಂದು 62 ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮೂರನೇ ದಿನ ಸೆ. 9ರಂದು 1,101 ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ವಿವಿಧೆಡೆ ಪ್ರತಿಷ್ಠಾಪಿಸಿರುವ ವೈವಿಧ್ಯ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆದವು. ಅನೇಕ ವೃತ್ತಗಳ್ಲಿ ೇರ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.…
ಕರಾವಳಿಯಲ್ಲಿ ಸಂಭ್ರಮದ ಸಾರ್ವಜನಿಕ ಗಣೇಶೋತ್ಸವ! – ಉಡುಪಿ ಜಿಲ್ಲೆಯಲ್ಲಿ 481 ಕಡೆ ಸಾರ್ವಜನಿಕ ಗಣೇಶೋತ್ಸವ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 386 ಕಡೆ ಸಾರ್ವಜನಿಕ ಆಚರಣೆ – ಗಣೇಶ ಹಬ್ಬದ ರಂಗು: ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮ NAMMUR EXPRESS NEWS ಮಂಗಳೂರು: ಶನಿವಾರ ನಾಡಿನಾದ್ಯಂತ ಶ್ರೀ ಗಣೇಶ ಚತುರ್ಥಿ ಶ್ರದ್ಧಾ ಭಕ್ತಿ ಸಂಭ್ರಮದಿಂದ ಜರುಗಿದ್ದು ಶನಿವಾರ, ಭಾನುವಾರ, ಸೋಮವಾರ ಎಲ್ಲೆಡೆ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಕ್ತರು ಗಣೇಶನಿಗೆ ಜೈ ಎಂದರು. ಉಡುಪಿ ಜಿಲ್ಲೆಯಲ್ಲಿ 481 ಕಡೆಗಳಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು. ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನ, ವಿವಿಧ ಮಠಗಳಲ್ಲೂ ಸಂಪ್ರದಾಯದಂತೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕರಾವಳಿಯಲ್ಲಿ ಗಣೇಶನ ವಿಶೇಷ ಆಚರಣೆ ದ.ಕ. ಜಿಲ್ಲೆಯ ಶರವು, ಸೌತಡಕ, ಕಾಸಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ ದೇವಸ್ಥಾನ, ಹಿರಿಯಡಕ ಪುತ್ತಿಗೆಯ ಸ್ತಂಭೋದ್ಭವ ಗಣಪತಿ, ಉಡುಪಿ ಅನಂತೇಶ್ವರ ದೇವಸ್ಥಾನದ…
ತುಳು ಲಿಪಿ ಈಗ ವಿಶ್ವದ ಎಲ್ಲಾ ಕಡೆ ಲಭ್ಯ! – ಯುನಿಕೋಡ್’ಗೆ ಸೇರ್ಪಡೆ: ಈಡೇರಿದ ಬಹು ವರ್ಷಗಳ ಕನಸು! – ತಜ್ಞರ ಸತತ ಮನವಿ ನಂತರ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ NAMMUR EXPRESS NEWS ಮಂಗಳೂರು/ಉಡುಪಿ: ಕರಾವಳಿಯ ಹೆಮ್ಮೆಯ ಭಾಷೆ ತುಳು ಈಗ ವಿಶ್ವವ್ಯಾಪಿ ಸಿಗಲಿದೆ. ಈ ಮೂಲಕ ತುಳು ನಾಡಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ “ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ. ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪರೆಸಿಂಗ್, ಟೆಕ್ಸ್ಟ್ ಟು ಸ್ಪೀಚ್,…