ಶಿವಮೊಗ್ಗ ಜಿಲ್ಲೆಯಲ್ಲಿ 3,500ಕ್ಕೂ ಅಧಿಕ ಮೂರ್ತಿ ಪ್ರತಿಷ್ಠಾಪನೆ! – ಮಲೆನಾಡಲ್ಲಿ ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಸಡಗರ – ಭದ್ರಾವತಿ ಗಣೇಶ ವಿಸರ್ಜನೆ ವೇಳೆ ಗಲಾಟೆ: 30ಕ್ಕೂ ಹೆಚ್ಚು ಜನರು ವಶಕ್ಕೆ – ಹಬ್ಬದ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ಸರಣಿ ಮನೆಗಳ್ಳತನ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಗಣೇಶೋತ್ಸವವನ್ನು ಭಕ್ತರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲೆರಡು ದಿನ 480ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಜಿಲ್ಲೆಯಲ್ಲಿ ಈ ಬಾರಿ ಸ್ಥಳೀಯಾಡಳಿತದ ಅನುಮತಿ ಮೇರೆಗೆ ಸಾರ್ವಜನಿಕವಾಗಿ 3,500ಕ್ಕೂ ಅಧಿಕ ವಿಘ್ನ ನಿವಾರಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನ ಸೆ. 07ರಂದು ವಿಜೃಂಭಣೆಯ ರಾಜಬೀದಿ ಉತ್ಸವದೊಂದಿಗೆ 420ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಸೆ. 08ರಂದು 62 ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮೂರನೇ ದಿನ ಸೆ. 9ರಂದು 1,101 ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ವಿವಿಧೆಡೆ ಪ್ರತಿಷ್ಠಾಪಿಸಿರುವ ವೈವಿಧ್ಯ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆದವು. ಅನೇಕ ವೃತ್ತಗಳ್ಲಿ ೇರ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.…
Author: Nammur Express Admin
ಕರಾವಳಿಯಲ್ಲಿ ಸಂಭ್ರಮದ ಸಾರ್ವಜನಿಕ ಗಣೇಶೋತ್ಸವ! – ಉಡುಪಿ ಜಿಲ್ಲೆಯಲ್ಲಿ 481 ಕಡೆ ಸಾರ್ವಜನಿಕ ಗಣೇಶೋತ್ಸವ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 386 ಕಡೆ ಸಾರ್ವಜನಿಕ ಆಚರಣೆ – ಗಣೇಶ ಹಬ್ಬದ ರಂಗು: ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮ NAMMUR EXPRESS NEWS ಮಂಗಳೂರು: ಶನಿವಾರ ನಾಡಿನಾದ್ಯಂತ ಶ್ರೀ ಗಣೇಶ ಚತುರ್ಥಿ ಶ್ರದ್ಧಾ ಭಕ್ತಿ ಸಂಭ್ರಮದಿಂದ ಜರುಗಿದ್ದು ಶನಿವಾರ, ಭಾನುವಾರ, ಸೋಮವಾರ ಎಲ್ಲೆಡೆ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಕ್ತರು ಗಣೇಶನಿಗೆ ಜೈ ಎಂದರು. ಉಡುಪಿ ಜಿಲ್ಲೆಯಲ್ಲಿ 481 ಕಡೆಗಳಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು. ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನ, ವಿವಿಧ ಮಠಗಳಲ್ಲೂ ಸಂಪ್ರದಾಯದಂತೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕರಾವಳಿಯಲ್ಲಿ ಗಣೇಶನ ವಿಶೇಷ ಆಚರಣೆ ದ.ಕ. ಜಿಲ್ಲೆಯ ಶರವು, ಸೌತಡಕ, ಕಾಸಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ ದೇವಸ್ಥಾನ, ಹಿರಿಯಡಕ ಪುತ್ತಿಗೆಯ ಸ್ತಂಭೋದ್ಭವ ಗಣಪತಿ, ಉಡುಪಿ ಅನಂತೇಶ್ವರ ದೇವಸ್ಥಾನದ…
ತುಳು ಲಿಪಿ ಈಗ ವಿಶ್ವದ ಎಲ್ಲಾ ಕಡೆ ಲಭ್ಯ! – ಯುನಿಕೋಡ್’ಗೆ ಸೇರ್ಪಡೆ: ಈಡೇರಿದ ಬಹು ವರ್ಷಗಳ ಕನಸು! – ತಜ್ಞರ ಸತತ ಮನವಿ ನಂತರ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ NAMMUR EXPRESS NEWS ಮಂಗಳೂರು/ಉಡುಪಿ: ಕರಾವಳಿಯ ಹೆಮ್ಮೆಯ ಭಾಷೆ ತುಳು ಈಗ ವಿಶ್ವವ್ಯಾಪಿ ಸಿಗಲಿದೆ. ಈ ಮೂಲಕ ತುಳು ನಾಡಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ “ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ. ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪರೆಸಿಂಗ್, ಟೆಕ್ಸ್ಟ್ ಟು ಸ್ಪೀಚ್,…
ಚಿಕ್ಕಮಗಳೂರು ಗಣಪತಿ ವಿಶೇಷಗಳು
ಕೊಪ್ಪ ಬ್ರೇಕಿಂಗ್ ನ್ಯೂಸ್ ಕೊಪ್ಪ ಮಹಿಳಾ ಪೇದೆ ಆತ್ಮಹತ್ಯೆಗೆ ಯತ್ನಕ್ಕೆ ಟ್ವಿಸ್ಟ್! – ಪಿಎಸ್ಐಯಿಂದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ – ಉನ್ನತ ಅಧಿಕಾರಿಗಳಿಂದ ತನಿಖೆ: ಏನಿದು ಕೇಸ್? NAMMUR EXPRESS NEWS ಕೊಪ್ಪ: ಕೊಪ್ಪ ಠಾಣೆಯ ಪಿಎಸ್ಐ ಒಬ್ಬರು ತಮ್ಮದೇ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಮತ್ತಷ್ಟು ಮಹಿಳಾ ಪೊಲೀಸರು ಇದೀಗ ತಮಗಾದ ಕಿರುಕುಳದ ಬಗ್ಗೆ ಮೇಲಾಧಿಕಾರಿಗಳ ಭೇಟಿಗೆ ಮುಂದಾಗಿದ್ದು, ಮತ್ತೆ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಕೊಪ್ಪ ಡಿವೈಎಸ್‌ಪಿಯವರ ಬಳಿ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಕೊಪ್ಪ ಡಿವೈಎಸ್‌ಪಿ ಕಚೇರಿಯಲ್ಲಿ ಸದ್ಯ ಮಹಿಳಾ ಪೇದೆಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಗಳಿಂದ ಡಿವೈಎಸ್‌ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಪ್ಪ ಡಿವೈಎಸ್‌ಪಿ ಹಾಗೂ ಮಹಿಳಾ ಕೌನ್ಸೆಲಿಂಗ್ ತಜ್ಞರು ವಿಚಾರಣೆ ನಡೆಸುತ್ತಿದ್ದಾರೆ. ಪಿಎಸ್ಐ ಕಿರುಕುಳದಿಂದ ಬೇಸತ್ತಿರುವ ಮಹಿಳಾ ಸಿಬ್ಬಂದಿಗಳು ಮೇಲಧಿಕಾರಿಗಳ ಮೊರೆ ಹೋಗಿದ್ದಾರೆ. ಕಳೆದ 2…
ಇನ್ನು ಮುಂದೆ ಹೊಸ ರೇಷನ್ ಕಾರ್ಡ್ ಸುಲಭ! – ಅರ್ಜಿ ಸಲ್ಲಿಸಲು ಕಾಯಬೇಕಾಗಿಲ್ಲ – ಆನ್ ಲೈನ್ ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ! – ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನೇನು? NAMMUR EXPRESS NEWS ಹೊಸ ರೇಷನ್ ಕಾರ್ಡ್ ಅರ್ಜಿಗೆ ಇಲ್ಲಿಯವರೆಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕುಟುಂಬಗಳಿಗೆ ಈಗ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಆಹಾರ ಇಲಾಖೆಯ ಅಡಿಯಲ್ಲಿ ಇಷ್ಟು ದಿನ ಹೊಸ ರೇಷನ್ ಕಾರ್ಡ್ ವಿತರಣೆಗೆ ತಡೆ ಇದ್ದ ಹಿನ್ನೆಲೆಯಲ್ಲಿ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ. ಈಗ ಆಹಾರ ಇಲಾಖೆ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವ ಬಗ್ಗೆ ಸರ್ಕಾರ ಮಹತ್ವದ ಸುಳಿವು ನೀಡಿದೆ. ಆಹಾರ ಇಲಾಖೆ ವೆಬ್‌ಸೈಟ್ ರಲ್ಲಿ ಸರ್ಕಾರ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್‌ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ರೇಷನ್ ಕಾರ್ಡ್ ಗೆ ಸಲ್ಲಿಸಿದ್ದ…
ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ
ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಗಣಪತಿ
ದಕ್ಷಿಣ ಕನ್ನಡ ವಿವಿಧ ಕಡೆ ಗಣಪತಿ ಸಂಭ್ರಮ
ಇಲ್ಲಿ ಎಲ್ಲಾ ಧರ್ಮದವರು ಸೇರಿ ಗಣೇಶ ಕೂರಿಸಿದರು! – ಎನ್.ಆರ್ ಪುರ ತಾಲೂಕಿನ ರಾಜೀವ್ ನಗರದಲ್ಲಿ ವಿಶೇಷ – ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಧರ್ಮದವರ ಸಮಾಗಮ NAMMUR EXPRESS NEWS ಎನ್.ಆರ್.ಪುರ: ಎನ್ ಆರ್ ಪುರ ಪಟ್ಟಣದ ರಾಜೀವ್ ನಗರದಲ್ಲಿ ಭಾವೈಕ್ಯತೆಯ ಗಣಪ ಗಮನ ಸೆಳೆದಿದೆ. ಸರ್ವಧರ್ಮದ ರಾಜೀವ್ ನಗರದ ಸಾರ್ವಜನಿಕರೆಲ್ಲರೂ ಸೇರಿ ಪ್ರತಿವರ್ಷ ಒಟ್ಟಾಗಿ ವಿನಾಯಕ ಸೇವಾ ಸಮಿತಿ ರಚಿಸಿಕೊಂಡು 3 ದಿನಗಳ ಗಣೇಶೋತ್ಸವವನ್ನು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವುದು ವಿಶೇಷವಾಗಿದೆ. ಪಟ್ಟಣ ಪಂಚಾಯ್ತಿ ಸದಸ್ಯೆ ಹಾಗೂ ಸಮಾಜ ಸೇವಕಿ ಜುಬೇದ ಸತತ 14 ವರ್ಷದಿಂದಲೂ ಈ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಉತ್ಸವದ ಜವಾಬ್ದಾರಿ ವಹಿಸಿದ್ದಾರೆ. ಪ್ರಧಾನಕಾರ್ಯದರ್ಶಿಯಾಗಿ ಮಗೇಶ,ಬುದ್ದೇಶ ಮತ್ತು ಖಜಾಂಚಿಯಾಗಿ ಸುಜಾತ ಸೇರಿ ಅನೇಕ ಸದಸ್ಯರು ಇದ್ದಾರೆ. ಈ ಸೇವಾ ಸಮಿತಿಯಲ್ಲಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಸಮುದಾಯದ ಸದಸ್ಯರಿದ್ದು ಎಲ್ಲರೂ ಒಟ್ಟಾಗಿ ಹಿಂದೂ ಸಂಪ್ರದಾಯದಂತೆ 3 ದಿನಗಳ ಕಾಲ ಪೂಜೆ,ಸಂ್ಕೃತಿಕ ಕಾರ್ಯಕ್ರಮ,ಗಣಪತಿ ವಿಸರ್ಜನೆ ನಡೆಸಿಕೊಂಡು ಬಂದಿದ್ದು ಇದು ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.