ಕಾಂಗ್ರೇಸ್ ಸರ್ಕಾರದ ವಿರುದ್ಧ ಶೃಂಗೇರಿಯಲ್ಲಿ ಗುಡುಗಿದ ಬಿಜೆಪಿ! – ರೈತರ ಒತ್ತುವರಿ ತೆರುವು ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದ ನೂರಾರು ರೈತರು – ಕೊಪ್ಪ, ಎನ್. ಆರ್. ಪುರದಲ್ಲಿ ಶೀಘ್ರದಲ್ಲಿ ಪ್ರತಿಭಟನೆ? NAMMUR EXPRESS NEWS ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ವಿರುದ್ಧ ಶೃಂಗೇರಿ ತಾಲೂಕು ಬಿಜೆಪಿ ಕರೆಕೊಟ್ಟಿದ್ದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ರೈತರು,ಕಾರ್ಯಕರ್ತರು ಭಾಗಯಾಗಿ ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟಿಸಿದರು. ಶೃಂಗೇರಿ ಮುಖ್ಯ ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆಯವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಭಾಜಪಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪುಣ್ಯಪಾಲ್,ತಾಲೂಕು ಭಾಜಪಾ ಅಧ್ಯಕ್ಷರಾದ ಉಮೇಶ್ ತಲಗಾರು,ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಸೇರಿದಂತೆ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು,ರೈತರು ಮಳೆಯನ್ನು ಲೆಕ್ಕಿಸದೇ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ರೈತರ ಪರ ದನಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುಣ್ಯಪಾಲ್, ಸರ್ಕಾರ ಕೇವಲ ಹಗರಣಗಳಲ್ಲಿ ಾಗೂ ಹಗರಣಗಳನ್ನು ಮು್ಚಿಹಾಕುವುದರಲ್ಲಿ ಮುಳುಗಿದ್ದು,ಬಡ ಜನರ ಅನುದಾನದ ಹಣದಲ್ಲಿ ಭ್ರಷ್ಟಾಚಾರ ಮಾಡಿ ಜನರಿಗೆ…
Author: Nammur Express Admin
ಕರಾವಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ! – ಉಡುಪಿಯಲ್ಲಿ ಈ ಭಾರಿ ಕೃಷ್ಣನಿಗೆ ನೂರ ಎಂಟು ಬಗೆಯ ವೆರೈಟಿ ಉಂಡೆ! – 2 ದಿನದ ಹಬ್ಬದ ಸಡಗರ: ಮೊಸರು ಕುಡಿಕೆ ಒಡೆಯುವ ಸಂಭ್ರಮ NAMMUR EXPRESS NEWS ಉಡುಪಿ/ಮಂಗಳೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಭಗವಂತ ಕೃಷ್ಣ ಜನಿಸಿದ ಈ ದಿನವನ್ನು ಇಡೀ ದೇಶವು ಸಂಭ್ರಮಿಸುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರಂತೂ ಆ ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ದುಪ್ಪಟ್ಟು. ಮಕ್ಕಳಿಗೆ ಕೃಷ್ಣ ಅಥವಾ ರಾಧೆಯ ವೇಷಭೂಷಣ ಹಾಕಿ ಕಣ್ತುಂಬಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಮನೆ ಮನೆಗಳಲ್ಲಿ ನಾನಾಬಗೆಯ ತಿಂಡಿತಿನಿಸು. ಪ್ರತಿದಿನ ಬಾಗಿಲು ಮುಚ್ಚಿ ಸರ್ರನೇ ಕೇಲಸೆಕ್ಕೆದ್ದು ಪರಾರಿಯಾಗುವ ಪ್ರತಿಯೊಬ್ಬರು ಈ ದಿನ ಮನೆಯಲ್ಲೇ ಕುಳಿತು ಆರಾಧಿಸುವ ಹಬ್ಬ . ಕರಾವಳಿ ಕಡೆಗಳಲ್ಲಿ ಕೃಷ್ಣಾಷ್ಟಮಿ ಎಂದಾಗ ನೆನಪಾಗುಹುದು ಎಲೆಗಳಲ್ಲಿ ಮಾಡುವ ಗುಂಡ, ಕೊಟ್ಟಿಗೆ, ಮೂಡೆ ಹಾಹಾ!!!….ಮನೆಯಲ್ಲಂತೂ ಸೌಟು, ಮಕ್ಿಗಳದೇ ಸದ್ದು.. ಈ ದಿನ ಕರಾವಳಿಯ ಮಕ್ಕಳಿಗೆ ಎಲ್ಲಿಲ್ಲದ ಸಡಗರ ಕೃಷ್ಣಾ, ರಾಧಾ,…
2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ – ಗಗನಯಾನಕ್ಕೆ ಸಿದ್ಧವಾಗಿವೆ ಧಾರವಾಡ ಕೃಷಿ ವಿವಿಯ ನೊಣಗಳು! – ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಧಾರವಾಡ ಕೃಷಿ ವಿವಿ ಸಿದ್ಧ – ಒಂದು ವೇಳೆ ಸಂಶೋಧನೆ ಯಶಸ್ವಿಯಾದರೆ ಮತ್ತೊಂದು ಮೈಲಿಗಲ್ಲು ಸ್ಥಾಪನೆ NAMMUR EXPRESS NEWS ಧಾರವಾಡ: ಗಗನಯಾನಕ್ಕೆ ಧಾರವಾಡದ ಕೃಷಿ ವಿವಿಯ ನೊಣಗಳು ಸಿದ್ಧವಾಗಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೊಣದ ಕಿಟ್ ಗಗನಯಾನ ನೌಕೆಯಲ್ಲಿ ಅಧ್ಯಯನಕ್ಕೆ ಹೋಗಲಿದ್ದು, ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಧಾರವಾಡ ಕೃಷಿ ವಿವಿ ಸಿದ್ಧವಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೈವಿಕಶಾಸ್ತ್ರ ವಿಭಾಗದಿಂದ ನೊಣದ ಕಿಟ್ ತಯಾರಿಯಾಗಿದೆ. ವಿವಿಯ ವಿಜ್ಞಾನಿ ರವಿಕುಮಾರ್ ಹೊಸಮನಿರಿಂದ ವಿಶೇಷ ಪ್ರಯೋಗ ನಡೆಯಲಿದೆ. ದೇಶದ 75 ಕೃಷಿ ವಿವಿಗಳ ಪೈಕಿ ಧಾರವಾಡ ಕೃವಿ ವಿವಿ ಆಯ್ಕೆಯಾಗಿದೆ. 2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ ಹೋಗಲಿದ್ದು, ನೌಕೆಯಲ್ಲಿ 15 ಹಣ್ಣಿನ ನೊಣಗಳಿರುವ ಕಿಟ್ ತೆರಳಲಿದೆ. ಹಣ್ಣಿನ ನೊಣಕ್ಕೂ ಮನುಷ್ಯನ ದೇಹರಚನೆಗೂ ಹೋಲಿಕೆ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ನೊಣಗಳಲ್ಲಿ…
ಕೆಸರುಡೊಂಜಿ ದಿನದಲ್ಲಿ ಆಟ ಆಡಿ ಮಕ್ಕಳ ಸಂಭ್ರಮ! – ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ – ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ: ಅಶ್ವಥ್ ಎಸ್ ಎಲ್ NAMMUR EXPRESS NEWS ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಹಿರ್ಗಾನದಲ್ಲಿ ಕೆಸರುಡೊಂಜಿ ದಿನದಲ್ಲಿ ಆಟ ಆಡಿ ಮಕ್ಕಳ ಸಂಭ್ರಮಪಟ್ಟರು. ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಶು ವೈದ್ಯರಾದ ಸಾಣರಿನ ್ಞಾನದೇವ ಅವರು ಇಂದು ಜಗತ್ತೇ ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು…
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕ್ಷಣಗಣನೆ – ಯಾರಿಗೆ ಒಲಿಯುತ್ತೆ ಪ.ಪಂ. ಅಧ್ಯಕ್ಷಗಿರಿ?: ಒಂದು ಸ್ಥಾನಕ್ಕೆ ಒಂಭತ್ತು ಆಕಾಂಕ್ಷಿ ಸ್ಪರ್ಧೆ? – ಕೊನೆ ಗಳಿಗೆಯಲ್ಲಿ ನಾಯಕರ ಮಾತಿಗೆ ಒಪ್ತಾರಾ ಸದಸ್ಯರು? NAMMUR EXPREES NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ ಮುಂದಿನ 26 ತಿಂಗಳಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ 27ರ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಪ.ಪಂ.ನಲ್ಲಿ ಬಹುಮತ ಇರುವ ಕಾಂಗ್ರೆಸ್ ಒಂಭತ್ತು ಕೌನ್ಸಿಲರ್‌ಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬ್ನಂ ಅವರಿಗೆ ಅವಧಿ ಹಂಚಿಕೆಯಾಗುವ ಸಾಧ್ಯತೆ ಇದೆ. 20 ವರ್ಷಗಳ ಬಳಿಕ ಬಹುಮತ ಪಡೆದ ಕಾಂಗ್ರೆಸ್ 20 ವರ್ಷಗಳ ನಂತರ ಕಾಂಗ್ರೆಸ್ ಇಲ್ಲಿ ಬಹುಮತ ಪಡೆದಿದೆ. ಆಗಸ್ಟ್ 27ರಂದು ಚುನಾವಣೆಗೂ ಮುನ್ನ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಕಿಮ್ಮನೆ-ಆರ್‌ಎಂಎಂ ನೇತೃತವಲ್ಲಿ ಪಕ್ಷದ ಹಿರಿಯರು ಹಾಗೂ ಕಾಂಗ್ರೆಸ್ ಕೌನ್ಸಿಲರ್‌ಗಳ…
ತೀರ್ಥಹಳ್ಳಿಯಲ್ಲಿ ಬಾಲ ಭಾರತಿಯಿಂದ ರಕ್ಷಾ ಬಂಧನ್ – ಭಾರತೀಯ ಯೋಗ ಶಿಕ್ಷಣ ಸಮಿತಿಯಿಂದ ಮಕ್ಕಳ ಶಿಬಿರ – 150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಉಚಿತ ಶಿಕ್ಷಣ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರೇರಣದಲ್ಲಿ ಬಾಲಭಾರತಿ ಮಕ್ಕಳ ವಿಕಾಸ ಶಿಬಿರದಲ್ಲಿ ಭಾನುವಾರ ರಕ್ಷಾ ಬಂಧನ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ವಿಸ್ತಾರಕ್ ವೆಂಕಟೇಶ್ ಜೀ ಅವರು ಭಾಗವಹಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ತಾಲ್ಲೂಕು ಸಂಪರ್ಕ ಪ್ರಮುಖ್ ವಾಣಿ ನಿರಂಜನ್ ರಾವ್ ಅವರು ಶಿಬಿರದ ಮಕ್ಕಳಿಗೆ ರಕ್ಷಾ ಬಂಧನದ ಮಹತ್ವ ತಿಳಿಸಿ ರಕ್ಷಾ ಬಂಧನದ ಶ್ಲೋಕ ಮತ್ತು ರಕ್ಷಾ ಗೀತೆಯನ್ನು ಹೇಳಿಕೊಟ್ಟರು. ಯೋಗ ಶಿಕ್ಷಕರಾದ ಯಶೋಧ ಕೃಷ್ಣಮೂರ್ತಿ ಅವರು ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸವನ್ನು ಮಾಡಿಸಿದರು. ರಾಜರಾಜೇಶ್ವರಿ ನೃತ್ಯ ಕಲಾ ಶಿಕ್ಷಣದ ಮುಖಸ್ಥರಾದ ಅರುಂಧತಿ ಭಟ್ ಅವರು ನೃತ್ಯವನ್ನು ಹೇಳಿಕೊಟ್ಟರು.ಪ್ರಸ್ತುತ ಇಟಲಿಯ ಮಿಲಾನ್ ನಲ್ಲಿ ಎಂ ಎಸ್ ಅಭ್ಯಾಸ ಮಾಡುತ್ಿರುವ ಸಂಗೀತಗಾರ್ತಿ, ಚಿತ್ರಕಲಾಗಾರ್ತಿ ಹಾಗೂ…
ವಿದ್ಯಾಧರ ಗುರುಶಕ್ತಿ ಅವರು ಶಿಮೂಲ್ ಸಾರಥಿ! – ಎರಡನೇ ಬಾರಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ, ಉಪಾಧ್ಯಕ್ಷರಾಗಿ ಚೇತನ್ ಎಸ್ ನಾಡಿಗರ್ – ಕಾಂಗ್ರೆಸ್ ಅಧಿಕಾರ ಹಿಡಿದ ಶಿಮೂಲ್, ಆರ್.ಎಂ, ಬೇಳೂರು ನೇತೃತ್ವದಲ್ಲಿ ಆಯ್ಕೆ NAMMUR EXPRESS NEWS ಶಿವಮೊಗ್ಗ: ಕಾಂಗ್ರೆಸ್ ಮುಖಂಡರು, ಬ್ರಾಹ್ಮಣ ಸಮಾಜದ ರಾಜ್ಯ ಯುವ ನಾಯಕರಾದ ವಿದ್ಯಾಧರ ಗುರುಶಕ್ತಿ ಅವರು ಪ್ರತಿಷ್ಠಿತ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ಶಿಮೂಲ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಹೊಸನಗರದಿಂದ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವಿದ್ಯಾಧರ ಗುರುಶಕ್ತಿ ಇವರು ( ಶಿಮುಲ್) ಗೆ ಮೂರನೇ ಬಾರಿ ನಿರ್ದೇಶಕರಾಗಿದ್ದರು. ಎರಡನೇ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ವಿಧ್ಯಾಧರ್ ಗುರುಶಕ್ತಿ ಹಾಗೂ ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ಎಸ್ ನಾಡಿಗರ್ ಇವರು ಕೂಡ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಕೂಡ ವಿದ್ಯಾಧರ ಗುರುಶಕ್ತಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಕಾಂಗ್ರೆಸ್ ನಾಯಕರುಗಳ ಮಾರ್ಗದರ್ಶನದಲ್ಲಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರು…
ಬೆಳ್ತಂಗಡಿ ನಿವೃತ್ತ ಶಿಕ್ಷಕನ ಕೊಲೆ ಮಾಡಿದ್ದು ಅಳಿಯ, ಮೊಮ್ಮಗ! – ಆಸ್ತಿ ಪಾಲು ಮಾಡಿ ಕೊಡದ ಕಾರಣಕ್ಕೆ ಕೊಲೆ – ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಲೆ! ! NAMMUR EXPRESS NEWS ಬೆಳ್ತಂಗಡಿ: ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಿದ್ದು, ಮಗಳ ಗಂಡ ಹಾಗೂ ಮಗಳ ಮಗನೆ ಹಂತಕರಾಗಿದ್ದಾರೆ. ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರದು ಕಾಸರಗೋಡು ಮನೆಯಲ್ಲಿ…
ಮಳೆ, ಬಿಸಿಲು: ಎಲ್ಲೆಡೆ ಜ್ವರ, ಶೀತ.. ಹುಷಾರು! – ಟೈಫಾಯಿಡ್, ಜಾಂಡಿಸ್, ಜ್ವರ ಹೆಚ್ಚಳ – ಆರೋಗ್ಯದ ಬಗ್ಗೆ ಇರಲಿ ಎಚ್ಚರ ಎಚ್ಚರ NAMMUR EXPRESS NEWS ಬೆಂಗಳೂರು: ಮಳೆ, ಬಿಸಿಲಿನ ಆಟ ಕಳೆದೊಂದು ತಿಂಗಳಿನಿಂದ ಎಲ್ಲೆಡೆ ಕಾಣುತ್ತಿದೆ. ಮಳೆ ಬಿಸಿಲು ಕಾರಣ ಅನೇಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಈಗಾಗಲೇ ರಾಜ್ಯದ ಎಲ್ಲೆಡೆ ಮಳೆ ಬಿಸಿಲಿನ ಆಟ ನಡೆಯುತ್ತಿದೆ. ಇದು ಜನರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ. ಟೈಫಾಯಿಡ್, ಜಾಂಡಿಸ್, ಜ್ವರ, ಶೀತ ಹೆಚ್ಚಳವಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಜನ ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ದರ್ಶನ್ ಮೋಜು ಮಸ್ತಿ: ಈಗ ಮತ್ತೆ ಸಂಕಷ್ಟದತ್ತ! – ಮೊಬೈಲ್, ಸಿಗರೇಟ್: ಜೈಲು ಅಧಿಕಾರಿಗಳ ತಲೆ ದಂಡ – ಕೊಲೆ ಕೇಸ್ ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು! NAMMUR EXPRESS NEWS ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್‌ಗಳೊಂದಿಗೆ ಬಿಂದಾಸ್ ಆಗಿ ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ. ದುಡ್ಡು ಕೊಟ್ಟರೆ ಜೈಲು ರೆಸಾರ್ಟ್ ವಾತಾವರಣ ಕಲ್ಪಿಸಿಕೊಡುತ್ತೆ ಎಂಬುದಕ್ಕೆ ಈ ಫೋಟೋ ಸದ್ಯ ಸಾಕ್ಷಿಯಾಗಿದೆ. ಜೈಲು ಅಧಿಕಾರಿಗಳ ಸಪೋರ್ಟ್ ಇದ್ದುದರಿಂದಲೇ ದರ್ಶನ್ ಅವರು ಜಾಲೊಯಾಗಿ ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಹಿಡಿದಿರೋ ಫೋಟೋ ಹರಿದಾಡುತ್ತಿದೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಜೊತೆಗೂ ದರ್ಶನ್ ಮಾತಾಡಿರುವ ವಿಯೋ ವೈರಲ್ ಆಗಿದೆ. ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ…