Author: Nammur Express Admin

ಬೆಳ್ತಂಗಡಿ ನಿವೃತ್ತ ಶಿಕ್ಷಕನ ಕೊಲೆ ಮಾಡಿದ್ದು ಅಳಿಯ, ಮೊಮ್ಮಗ! – ಆಸ್ತಿ ಪಾಲು ಮಾಡಿ ಕೊಡದ ಕಾರಣಕ್ಕೆ ಕೊಲೆ – ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಲೆ! ! NAMMUR EXPRESS NEWS ಬೆಳ್ತಂಗಡಿ: ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಿದ್ದು, ಮಗಳ ಗಂಡ ಹಾಗೂ ಮಗಳ ಮಗನೆ ಹಂತಕರಾಗಿದ್ದಾರೆ. ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್‌ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರದು ಕಾಸರಗೋಡು ಮನೆಯಲ್ಲಿ…

Read More

ಮಳೆ, ಬಿಸಿಲು: ಎಲ್ಲೆಡೆ ಜ್ವರ, ಶೀತ.. ಹುಷಾರು! – ಟೈಫಾಯಿಡ್, ಜಾಂಡಿಸ್, ಜ್ವರ ಹೆಚ್ಚಳ – ಆರೋಗ್ಯದ ಬಗ್ಗೆ ಇರಲಿ ಎಚ್ಚರ ಎಚ್ಚರ NAMMUR EXPRESS NEWS ಬೆಂಗಳೂರು: ಮಳೆ, ಬಿಸಿಲಿನ ಆಟ ಕಳೆದೊಂದು ತಿಂಗಳಿನಿಂದ ಎಲ್ಲೆಡೆ ಕಾಣುತ್ತಿದೆ. ಮಳೆ ಬಿಸಿಲು ಕಾರಣ ಅನೇಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಈಗಾಗಲೇ ರಾಜ್ಯದ ಎಲ್ಲೆಡೆ ಮಳೆ ಬಿಸಿಲಿನ ಆಟ ನಡೆಯುತ್ತಿದೆ. ಇದು ಜನರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ. ಟೈಫಾಯಿಡ್, ಜಾಂಡಿಸ್, ಜ್ವರ, ಶೀತ ಹೆಚ್ಚಳವಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಜನ ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

Read More

ದರ್ಶನ್ ಮೋಜು ಮಸ್ತಿ: ಈಗ ಮತ್ತೆ ಸಂಕಷ್ಟದತ್ತ! – ಮೊಬೈಲ್, ಸಿಗರೇಟ್: ಜೈಲು ಅಧಿಕಾರಿಗಳ ತಲೆ ದಂಡ – ಕೊಲೆ ಕೇಸ್ ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು! NAMMUR EXPRESS NEWS ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್‌ಗಳೊಂದಿಗೆ ಬಿಂದಾಸ್ ಆಗಿ ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ. ದುಡ್ಡು ಕೊಟ್ಟರೆ ಜೈಲು ರೆಸಾರ್ಟ್ ವಾತಾವರಣ ಕಲ್ಪಿಸಿಕೊಡುತ್ತೆ ಎಂಬುದಕ್ಕೆ ಈ ಫೋಟೋ ಸದ್ಯ ಸಾಕ್ಷಿಯಾಗಿದೆ. ಜೈಲು ಅಧಿಕಾರಿಗಳ ಸಪೋರ್ಟ್ ಇದ್ದುದರಿಂದಲೇ ದರ್ಶನ್ ಅವರು ಜಾಲೊಯಾಗಿ ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಹಿಡಿದಿರೋ ಫೋಟೋ ಹರಿದಾಡುತ್ತಿದೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಜೊತೆಗೂ ದರ್ಶನ್ ಮಾತಾಡಿರುವ ವಿಯೋ ವೈರಲ್ ಆಗಿದೆ. ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ…

Read More

ಟಾಪ್ ನ್ಯೂಸ್ ಮಲ್ನಾಡ್ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ: ಕಾರು ಭಸ್ಮ! – ಶೃಂಗೇರಿಯ ಹೊಳೆಕೊಪ್ಪದಲ್ಲಿ ನಡೆದ ಘಟನೆ – ಹೊಸನಗರ-ನಗರದಲ್ಲಿ ಕಾಡುಕೋಣಗಳ ಕಾಟ! – ಸೊರಬ: ಅಡಿಕೆ ಮರಕ್ಕೆ ಔಷಧಿ ಹೊಡೆಯುವಾಗ ಸಾವು NAMMUR EXPRESS NEWS ಶೃಂಗೇರಿ: ಶೃಂಗೇರಿ ತಾಲೂಕಿನ ಹೊಳೆಕೊಪ್ಪದಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಕಾರಿನ ಗ್ಯಾಸ್ ಟ್ಯಾಂಕ್ ಸಿಡಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೊಸನಗರದಲ್ಲಿ ಕಾಡುಕೋಣಗಳ ಕಾಟ! ಹೊಸ ನಗರ: ನಗರ ಭಾಗದ ಹಳ್ಳಿಗಳಲ್ಲಿ ಕಾಡುಕೋಣದ ಕಾಟ ಜಾಸ್ತಿ ಆಗಿದೆ. ರೈತರು ಬೆಳೆದ ಬೆಳೆಯನ್ನು ನಾಶಮಾಡುತ್ತಿವೆ.ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ರೈತರು ಅಗ್ರಹಿಸಿದ್ದಾರೆ. ಕೊಳೆರೋಗದಿಂದ ಅಡಿಕೆ ಉದುರುತ್ತಿದೆ. ಇನ್ನೊಂದೆಡೆ ಕಾಡುಕೋಣ ತೋಟ ನಾಶಮಾಡುತ್ತಿವೆ. ಹಾಗೆ ಕಷ್ಟ ಟ್ಟು ರೈತ ಗದ್ದೆ ನಾಟಿ ಮಾಡಿದರೆ ಅದು ಕಾಡುಕೋಣಗಳ ಪಾಲಾಗುತ್ತಿದೆ. ಸಂಬಂಧ ಪಟ್ಟ…

Read More

ಮತ್ತೆ ಒತ್ತುವರಿ ತೆರವು ವಿರುದ್ಧ ಹೋರಾಟ! – ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ – ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ NAMMUR EXPRESS NEWS ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ಆದೇಶ ವಿರೋಧಿಸಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಬಂದ್ ಹಾಗೂ ಬೃಹತ್ ಪ್ರತಿಭಟನೆಯ ನಂತರವೂ ಸರ್ಕಾರ ರೈತರ ಒತ್ತುವರಿ ತೆರವಿಗೆ ಮುಂದಾಗಿರುವ ಸರ್ಕಾರದ ವಿರುದ್ಧ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರು ಇವರು ಎಲ್ಲಾ ಡಿಎಫ್ಓ ಗಳಿಗೆ ನೀಡಿದ ಆದೇಶ ಖಂಡಿಸಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಆಕ್ರೋಶ ವ್ಯಕ್ತಪಡಿಸಿ ಇಂದು ಆಗಸ್ಟ್ 26 ರ ಬೆಳಿಗ್ಗೆ 10:30 ಸೋಮವಾರದಂದು ಶೃಂಗೇರಿ ತಾಲೂಕು ಬಿಜೆಪಿ ನೇತೃತ್ವದಲ್ಲಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ರೈತ ಬಾಂಧವರು,ರೈತ ಪರ ಸಂಘಟನೆಗಳು,ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು. ಪ್ರತಿಭಟನಾ ಮೆರವಣಿಗೆ ಪ್ಟಣದ ುಖ್ಯ ಬಸ್ ನಿಲ್ದಾಣದಿಂದ…

Read More

ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ – ಇಸ್ಕಾನ್, ಉಡುಪಿ ಸೇರಿ ಕೃಷ್ಣ ದೇವಾಲಯಗಳಲ್ಲಿ ಪೂಜೆ – ಕೃಷ್ಣ ರಾಧೆ ವೇಷ ಸ್ಪರ್ಧೆ: ಸಮಸ್ತ ಜನತೆಗೆ ಶುಭಾಶಯಗಳು NAMMUR EXPRESS NEWS ಬಾಲಕನಾಗಿದ್ದಾಗ ಕೃಷ್ಣನ ತುಂಟತನದ ಆಟ ಯೌವನದ ಕೃಷ್ಣಲೀಲೆ ಕುರುಕ್ಷೇತ್ರದಲ್ಲಿ ಬುದ್ಧಿವಂತಿಕೆ ಕೃಷ್ಣನನ್ನು ಹೀಗೆ ಎಂದು ವರ್ಣಿಸಲಸಾಧ್ಯ ಕೃಷ್ಣ ನೋಡಲು ಸ್ತ್ರೀ ಲೋಲನಂತೆ ಕಂಡರೂ ಸಹೃದಯತೆ ಗೋಪಿಕೆಯರ ಗೋವಿಂದ ಸುಭದ್ರ ದ್ರೌಪದಿಯರ ಪ್ರತಿಕ್ಷಣ ಕಾಯುವ ಪ್ರೀತಿಯ ಸಹೋದರ ಯಶೋಧೆಯ ಮುದ್ದು ಕಂದಮ್ಮಸುಧಾಮ ಅರ್ಜುನರ ಪ್ರಿಯಮಿತ್ರ ಭಕ್ತರನ್ನು ಸಲಹುವ ಭಗವಂತ . ಬಾಲ್ಯದಿಂದಲೂ ಬೆಣ್ಣೆಯೆಂದರೇ ಬಲು ಪ್ರೀತಿ ಯಶೋಧೆ ಬೆಣ್ಣೆ ಕಡೆಯುತ್ತಿದ್ದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದ ಬೆಣ್ಣೆ ನಿಲುಕದಂತೆ ಕದ್ದಿಟ್ಟರು ಹುಡುಕಿ ಕದ್ದು ತಿನ್ನುತ್ತಿದ್ದವ ಗೋಕುಲದಲ್ಲಿ ಬಾಲಕೃಷ್ಣ ಕಳ್ಳಕೃಷ್ಣ , ಬೆಣ್ಣೆಕೃಷ್ಣನಾಗಿದ್ದ. ಆಟ ಆಡುವಾಗ ಮಣ್ಣು ತಿಂದ ಎಂದು ಗದರಿಸಿ ಬಾಯ ತೆರಸಿದ ಯಶೋಧೆ ಕೃಷ್ಣನ ಬಾಯಿಯಲ್ಲಿ ವಿಶ್ವವನ್ನೇ ನೋಡಿ ಕೃಷ್ಣ ಸಾಧಾರಣ ಬಾಲಕನಲ್ಲ ಎಂದು ಅರಿತಿದ್ದಳು. ಭಾರತ ಮೊದಲೇ ಅವತಾರ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶ್ರೀಕೃಷ್ಣನ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕತೆಯ ಪ್ರಭಾವ ಹೆಚ್ಚಾಗಬಹುದು. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ. ಪ್ರಗತಿಯ ಅವಕಾಶಗಳು ಇರಬಹುದು. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ** ವೃಷಭ ರಾಶಿ : ಅಧಿಕ ಖರ್ಚು ಇರುತ್ತದೆ. ಹಣದ ಕೊರತೆಯ ಪರಿಸ್ಥಿತಿ ಇನ್ನೂ ಮುಂದುವರಿಯುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಗಾತಿಯಿಂದ ಬೆಂಬಲವಿರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಂದರೆಗಳನ್ನು ಎದುರಿಸಬಹುದು. ಕಠಿಣ ಪರಿಶ್ರಮ ಇರುತ್ತದೆ. ಖರ್ಚುಗಳು ಹೆಚ್ಚಾಗಬಹುದು. ಹೆಚ್ಚಿನ…

Read More

ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ – ನೂತನ ಪದಾಧಿಕಾರಿಗಳ ಆಯ್ಕೆ: ಉಪಾಧ್ಯಕ್ಷರಾಗಿ ಕೀಗಡಿ ಪುಟ್ಟಸ್ವಾಮಿ – ಕಾರ್ಯದರ್ಶಿಯಾಗಿ ಅಶಿತ್ ಬಳಗಟ್ಟೆ, ಸಹ ಕಾರ್ಯದರ್ಶಿಯಾಗಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿಯಾಗಿ ಸುಂದರೇಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಸುದರ್ಶನ್ ತಾಯಿಮನೆ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಒಕ್ಕಲಿಗ ನಾಯಕ ಬಿ.ಎ ರಮೇಶ್ ಹೆಗ್ಡೆ ಆಯ್ಕೆ ಆಗಿದ್ದಾರೆ. ಇತ್ತೀಚಿಗೆ ಅವರು ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಮೂಲದ ರಮೇಶ್ ಹೆಗ್ಡೆ ಅವರು, ಮೇಗರವಳ್ಳಿ ಮೂಲದವರಾಗಿದ್ದು, ಶಿವಮೊಗ್ಗದ ಹಾಲಿ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಕೀಗಡಿ ಪುಟ್ಟಸ್ವಾಮಿ, ಕಾರ್ಯದರ್ಶಿಯಾಗಿ ಅಶಿತ್ ಬಲಗಟ್ಟೆ, ಸಹ ಕಾರ್ಯದರ್ಶಿಯಾಗಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿಯಾಗಿ ಸುಂದರೇಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಸುದರ್ಶ್ ತಾಯಿಮನೆ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಎಲ್ಲಾ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Read More

ರಾಜಧಾನಿಯಲ್ಲಿ ಮಲೆನಾಡ ತಲ್ಲಣದ ಚರ್ಚೆ! – ಸಹ್ಯಾದ್ರಿ ಸಂಘ ಸೇರಿ ಮಲೆನಾಡು ಮೂಲದ ಸಂಘಟನೆಗಳ ಆಯೋಜನೆ – ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ – ನೀವೂ ಭಾಗವಹಿಸಿ…ನಿಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿರಿ NAMMUR EXPRESS NEWS ಬೆಂಗಳೂರು: ಸಹ್ಯಾದ್ರಿ ಸಂಘ ಬೆಂಗಳೂರು ಸೇರಿ ಮಲೆನಾಡು ಮೂಲದ ಸಂಘಟನೆಗಳು ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಬಗ್ಗೆ ವಿಚಾರಗೋಷ್ಠಿಯನ್ನು ಆ. 25ರಂದು ಬೆಂಗಳೂರಲ್ಲಿ ಆಯೋಜಿಸಿವೆ. ಅಧ್ಯಕ್ಷತೆಯನ್ನು ಮಾಜಿ ಗೃಹ ಸಚಿವರು ಮತ್ತು ಶಾಸಕರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಗ ಜ್ಞಾನೇಂದ್ರ, ಮುಖ್ಯ ಅತಿಥಿಗಳಾಗಿ ಟಿ. ಡಿ ರಾಜೇಗೌಡ ಅಧ್ಯಕ್ಷರು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ಮತ್ತು ಶಾಸಕರು ಶೃಂಗೇರಿ ವಿಧಾನ ಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ಪ್ರೊ. ಕಮ್ಮರಡಿ ಪ್ರಕಾಶ್ (ಕೃಷಿ ತಜ್ಞರು ಹಾಗೂ ಮಾಜಿ ಅಧ್ಯಕ್ಷರು ಕೃಷಿ ಬೆಲೆ ಆಯೋಗ )ಬೆಂಗಳೂರು, ಾ.…

Read More

ಗ್ಯಾಂಗ್‌ರೇಪ್‌ ಪ್ರಕರಣದ ತನಿಖೆ ಎನ್‌ಐಎಗೆ ಒಪ್ಪಿಸಲು ಪಟ್ಟು! – ಕಾರ್ಕಳ ಪ್ರಕರಣ: ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ – ಅಂತಾರಾಷ್ಟ್ರೀಯ ಜಿಹಾದಿ ಡ್ರಗ್ಸ್‌ ಜಾಲ ಶಾಮೀಲಾಗಿರುವ ಶಂಕೆ NAMMUR EXPRESS NEWS ಕಾರ್ಕಳ : ಕಾರ್ಕಳದ ಅತ್ಯಾಚಾರ ಪ್ರಕರಣ ಇದೀಗ ಭಾರೀ ಹೋರಾಟಕ್ಕೆ ಕಾರಣವಾಗಿದೆ. ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕ ವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ. ಈ ಘಟನೆಯಿಂದ ಸಮಾಜದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ಉಂಟಾಗಿದ್ದು, ಈ ಜಿಹಾದಿ ಕೃತ್ಯವನ್ನು ಎಸಗಿದವರು ಕ್ರಿಮಿನಲ್ ಹಿನ್ನೆಲೆಯವರಾಗಿರುವ ಸಂಶಯವಿದೆ. ಇದೊದು ಪೂರ್ವಯೋಜಿತ ಕೃತ್ಯ ಎಂದು ಕಂಡುಬರುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಇದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ…

Read More