Author: Nammur Express Admin

ಹೊಸನಗರದಲ್ಲಿ ನಾರಾಯಣ ಗುರುಗಳ ಜಯಂತಿ – ಈಡಿಗರ ಸಂಘ, ಎಸ್.ಎನ್.ಜಿ.ವಿ, ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ, ಆರ್ಯ ಈಡಿಗ ಎಂಪ್ಲಾಇಸ್ ಕ್ರಿಯಾ ವೇದಿಕೆ ಸಹಯೋಗ NAMMUR EXPRESS NEWS ಹೊಸನಗರ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಹೊಸನಗರದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಎಂಬ ವಿಶ್ವ ಸಂದೇಶ ಸಾರಿದ, ಮಹಾನ್ ಮಾನವಾತವಾದಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಘೋಷಣೆ ಯೊಂದಿಗೆ ಶೋಷಿತ ವರ್ಗದ ಮಹಾನ್ ಶಕ್ತಿ, ಅಕ್ಷರ ಬ್ರಹ್ಮ ಎಂದೇ ಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯನ್ನು ಹೊಸನಗರದ ಆರ್ಯ ಈಡಿಗ ಭವನದಲ್ಲಿ ನೇರವೇರಿಸಲಾಯಿತು. ತಾಲೂಕು ಆಳಿತ, ಆರ್ಯ ಈಡಿಗರ ಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV), ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ ಹಾಗೂ…

Read More

ಅಮೇರಿಕದಲ್ಲಿ ಉಡುಪಿ ಅರ್ಚಕರ ಸಂಸ್ಕೃತ ಪ್ರಾರ್ಥನೆ! – ಕಮಲಾ ಹ್ಯಾರಿಸ್‌ ಪಕ್ಷದ ಭಾರಿ ಕಾರ್ಯಕ್ರಮದಲ್ಲಿ ಅಮೆರಿಕನ್ನರ ಮನ ಗೆದ್ದ ಉಡುಪಿಯ ಪುರೋಹಿತರು – ವಿದೇಶದಲ್ಲಿ ಮೊಳಗಿದ ಭಾರತದ ಶಾಂತಿ ಮಂತ್ರ NAMMUR EXPRESS NEWS ಉಡುಪಿ: ಅಮೇರಿಕದ ಡೆಮೊಕ್ರಾಟಿಕ್ ಪಕ್ಷದ ಭಾರಿ ಸಭೆಯಲ್ಲಿ ಸಂಸ್ಕೃತ ಪ್ರಾರ್ಥನೆ ಮಾಡಿದ ರಾಕೇಶ್ ಭಟ್ ಇದೀಗ ಗಮನ ಸೆಳೆದಿದ್ದು, ಅವರು ಮೂಲತಃ ಕರ್ನಾಟಕದ ಉಡುಪಿಯವರು ಎನ್ನುವುದು ವಿಶೇಷ. ಇವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರ ಬಳಿ ಋಗ್ವದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತರಬೇತಿ ಪಡೆದಿದ್ದಾರೆ. ಅಮೆರಿಕದ ಚಿಕಾಗೋದಲ್ಲಿ ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಪಕ್ಷದ 3ನೇ ದಿನದಂದು ಕರ್ನಾಟಕದ ಉಡುಪಿ ಮೂಲದ ಅರ್ಚಕರೊಬ್ಬರು ಸಂಸ್ಕೃತ ಪ್ರಾರ್ಥನೆಯ ಮೂಲಕ ಕಲಾಪವನ್ನು ಪ್ರಾರಂಭಿಸಿದರು. ವೈದಿಕ ಪ್ರಾರ್ಥನೆ ಹಾಗೂ ಅದರ ಅರ್ಥವನ್ನು ಅವರು ವಿವರಿಸಿದ ಬಳಿಕ, ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಸಿದವು. ಮೇರಿ್ಯಾಂಡ್‌ನ ಶ್ರೀ ಶಿವ ವಿಷ್ಣು ದೇವಸ್ಥಾನದ ಅರ್ಚಕ ರಾಕೇಶ್‌ ಭಟ್…

Read More

ಶೃಂಗೇರಿ ಪಟ್ಟಣ ಪಂಚಾಯ್ತಿಗೆ ‘ಕಮಲ’ವೇ ಅಧಿಪತಿ! ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಬೀಗಿದ ‘ಬಿಜೆಪಿ’ – ನೂತನ ಅಧ್ಯಕ್ಷರಾಗಿ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಪ್ರಕಾಶ್ ಆಯ್ಕೆ NAMMUR EXPRESS NEWS ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಹಾಗೂ ನೂತನ ಉಪಾಧ್ಯಕ್ಷರಾಗಿ ಪ್ರಕಾಶ್ ಎಂ.ಎಲ್ ರವರು ಆಯ್ಕೆಯಾಗಿದ್ದಾರೆ. 11 ಸದಸ್ಯಬಲ ಹೊಂದಿದ ಪಟ್ಟಣ ಪಂಚಾಯ್ತಿಯಲ್ಲಿ ಸಂಸದರ ಮತ ಸೇರಿದಂತೆ ಬಿಜೆಪಿ 07+01 ಕಾಂಗ್ರೇಸ್ 04 ಸದಸ್ಯರ ಮತ ಪಡೆಯುವುದರ ಮೂಲಕ ಪಟ್ಟಣ ಪಂಚಾಯ್ತಿಯ ಆಡಳಿತದಲ್ಲಿ ಬಿಜೆಪಿ ತನ್ನದೇ ಅಧಿಪತ್ಯ ಮುಂದುವರೆಸಿದೆ. ಆಯ್ಕೆಯಾದ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್,ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ದೇವರಾಜ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್,ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಹರೀಶ್…

Read More

ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ಫಲಿತಾಂಶ – ಆಪ್ಯನ್ ಎಂಟ್ರಿಗೆ ಅವಕಾಶ NAMMUR EXPRESS NEWS ಸೆಪ್ಟೆಂಬರ್ 1ಕ್ಕೆ ಸಿಇಟಿ ಹಾಗೂ ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ವೈದ್ಯಕೀಯ ಪ್ರವೇಶಕ್ಕೆ ಆಪೈನ್ ಎಂಟ್ರಿ ಆರಂಭವಾಗಿದ್ದು, 2 ದಿನ ಅವಕಾಶ ಕಲ್ಪಿಸಲಾಗಿದೆ. ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಕ್ಕೆ (UGCET 2024) ಆಪೈನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ (ಆ.20) ರಾತ್ರಿ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.ಆ.25ಕ್ಕೆ 2ನೇ ಅಣಕು ಸೀಟು ಹಂಚಿಕೆ ರಿಸ್ಟಲ್ ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ವೆಬ್ ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ /…

Read More

ಹೊಸದುರ್ಗ ಪುರಸಭೆಯಲ್ಲಿ ಅರಳಿದ ಕಮಲ! – ಅಧ್ಯಕ್ಷರಾಗಿ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಗಜೇಂದ್ರ ಅವಿರೋಧ ಆಯ್ಕೆ – ನೂತನ ಸಾರಥಿಗಳಿಗೆ ನಾಯಕರು, ಕಾರ್ಯಕರ್ತರ ಅಭಿನಂದನೆ NAMMUR EXPRESS NEWS ಹೊಸದುರ್ಗ: ಪರಿಶಿಷ್ಟ( ST) ಪಂಗಡಕ್ಕೆ ಮೀಸಲಿದ್ದ ಹೊಸದುರ್ಗ ಪುರಸಭೆಯ ಅಧ್ಯಕ್ಷ ಸ್ಥಾನ ಮತ್ತು ಬಿ ಸಿ ಎಂ ಎ ಮಹಿಳೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 19 ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3 ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನುಳಿದು…

Read More

ಟಾಪ್ ನ್ಯೂಸ್ ಮಲ್ನಾಡ್ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಪ್ಲಾನ್! – ಪೊಲೀಸರಿಂದ ತನಿಖೆ ಶುರು: ಏನಿದು ಕೇಸ್? – ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತ – ಎನ್.ಆರ್.ಪುರ: ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ NAMMUR ಭದ್ರಾವತಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವ‌ರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು…

Read More

ದರ್ಶನ್ ವಿರುದ್ಧ ಸಿದ್ಧವಾದ ಚಾರ್ಜ್​ಶೀಟ್​ – ದರ್ಶನ್ & ಗ್ಯಾಂಗ್ ವಿರುದ್ಧ 4 ಸಾವಿರ ಪುಟಗಳ ಚಾರ್ಜ್ ಶೀಟ್! – ರೇಣುಕಾ ಸ್ವಾಮಿ ಅವರನ್ನು ಕರೆತಂದಾಗಿನಿಂದ ನಾಲ್ಕು ಜನ ಸರೆಂಡರ್ ಆಗುವವರೆಗಿನ ಮಾಹಿತಿ NAMMUR EXPRESS NEWS ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ 3 ರಿಂದ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾ ಸ್ವಾಮಿ ಅವರನ್ನು ಕರೆತಂದಾಗಿನಿಂದ ನಾಲ್ವರ ಸರೆಂಡರ್ ಆಗುವವರೆಗಿನ ವೃತ್ತಾಂತವನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ. ಖ್ಯಾತ ಸೆಲೆಬ್ರಿಟಿ. ಹೀಗಾಗಿ, ಇದು ಹೈ ಪ್ರಾಫೈಲ್ ಕೇಸ್ ಎನಿಸಿಕೊಂಡಿದೆ. ಹೀಗಾಗಿ, ಘಟನೆಯ ಕುರಿತು ಹಲವು ಸಾಕ್ಷ್ಯಧಾರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಹಲವು ಆಯಾಮಗಳಲ್ಲಿ ಪ್ರಕರಣದ ಸೂಕ್ಷ್ಮತೆ ಅರಿತು ಪೊಲೀಸರು ಕೆಲಸ ಮಾಡಿದ್ದಾರೆ. ರೇಣುಕಾ…

Read More

ಚಿಕ್ಕಮಗಳೂರಿನ ನಗರಸಭೆಯಲ್ಲಿ ಅರಳಿದ ‘ಕಮಲ’.! – ನೂತನ ಅಧ್ಯಕ್ಷರಾಗಿ ಸುಜಾತ ಶಿವಕುಮಾರ್, ನೂತನ ಉಪಾಧ್ಯಕ್ಷರಾಗಿ ಅನು ಮಧುಕರ್ – 35 ಸದಸ್ಯಬಲ ಹೊಂದಿದ ನಗರಸಭೆಯಲ್ಲಿ ಬಿಜೆಪಿ 25 ಸದಸ್ಯರ ಮತ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ನೂತನ ಅಧ್ಯಕ್ಷರಾಗಿ ಸುಜಾತ ಶಿವಕುಮಾರ್ ಹಾಗೂ ನೂತನ ಉಪಾಧ್ಯಕ್ಷರಾಗಿ ಅನು ಮಧುಕರ್ ಆಯ್ಕೆಯಾಗಿದ್ದಾರೆ. ಆ ಮೂಲಕ 35 ಸದಸ್ಯಬಲ ಹೊಂದಿದ ನಗರಸಭೆಯಲ್ಲಿ ಬಿಜೆಪಿ 25 ಸದಸ್ಯರ ಮತ ಪಡೆಯುವುದರ ಮೂಲಕ ನಗರ ಸಭೆಯ ಆಡಳಿತವನ್ನು ಹಿಡಿದಿದೆ. ಆಯ್ಕೆಯಾದ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಜಿಲ್ಲೆಯ ಬಿಜೆಪಿ ನಾಯಕರು,ಪ್ರಮುಖರು, ಕಾರ್ಯಕರ್ತರು ಶುಭಕೋರಿದ್ದಾರೆ. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸೇರಿದಂತೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರು, ನಾಯಕರು,ಪ್ರಮುಖರು, ಕಾರ್ಯಕರ್ತರು ಶುಭಕೋರಿದ್ದಾರೆ.

Read More

ಶೃಂಗೇರಿಯಲ್ಲಿ ವರಮಹಾಲಕ್ಷ್ಮೀ ಪೂಜೆ! – ಹಿಂದೂ ಸೇವಾ ಪ್ರತಿಷ್ಠಾನದಿಂದ ವರಮಹಾಲಕ್ಷ್ಮಿ ಪೂಜೆ ಆಯೋಜನೆ – ರಕ್ಷಾಬಂಧನ ಆಚರಣೆ: ಬಿಜೆಪಿ ಮಹಿಳಾ ಮೋರ್ಚಾ ತಂಡ ಭಾಗಿ NAMMUR EXPRESS NEWS ಶೃಂಗೇರಿ: ಹಿಂದೂ ಸೇವಾ ಪ್ರತಿಷ್ಠಾನದಿಂದ ತಾಲೂಕಿನ ಗ್ರಾಮಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಆಯೋಜನೆ ಮಾಡಲಾಗುತ್ತಿದ್ದು ಪೂಜೆಯಲ್ಲಿ ಹಲವು ಮಹಿಳೆಯರು ಭಾಗವಹಿಸುತ್ತಿದ್ದಾರೆ. ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಸೇವಾಮಿತ್ರರಾದ ಸುಮಂಗಲ ಆನಂದಸ್ವಾಮಿ ಭಾಗವಹಿಸಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಾಗವಹಿಸಿದ ಪ್ರತಿ ಮಹಿಳೆಯರು ಮಂತ್ರ,ಪೂಜಾ ವಿಧಿವಿಧಾನಗಳೊಂದಿಗೆ ಸ್ವತಃ ತಾವೇ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಹಿಂದೂ ಸೇವಾ ಪ್ರತಿಷ್ಠಾನವು ತಾಲೂಕಿನಾದ್ಯಂತ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸತ್ತಿದ್ದು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಜಾತಿ,ಭೇಧ ಮರೆತು ಸಾಮರಸ್ಯ,ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಜಾತಿ,ಮೇಲು ಕೀಳೆಂಬ ಭಾವನೆ ತೊಡೆದು ಹಾಕಿ ಸಾಮರಸ್ಯದ ಭಾವನೆ ಮೂಡಿಸೋದು ಪ್ರತಿಷ್ಠಾನದ ಉದ್ದೇಶವಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪರಸ್ಪರ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ತಂಡ…

Read More

ಟಾಪ್ ಕರ್ನಾಟಕ ನ್ಯೂಸ್ ನಡು ರಸ್ತೆಯಲ್ಲಿ ಜನ ಬಿದ್ದು ಸಾಯ್ತಾರೆ! – ಕೋಡಿಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ ಮಂಡ್ಯ: 60ರ ಅರ್ಚಕನಿಗೆ 20ರ ಯುವತಿ ಚಾಟಿಂಗ್: ಲಕ್ಷ ವಂಚನೆ ಹುಬ್ಬಳ್ಳಿ: ಶಾಲಾ ವಿದ್ಯಾರ್ಥಿಗಳ ಬಳಸಿಕೊಂಡು ಮೀಟರ್ ಬಡ್ಡಿ ದಂಧೆ NAMMUR EXPRESS NEWS ಬೆಂಗಳೂರು: ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಇತ್ತ ರೈತರಿಗೆ ಈ ಮಳೆಯ ಕಾರಣದಿಂದ ನಷ್ಟಗಳು ಕೊಡ ಸಂಭವಿಸಲಿದೆ. ಮತ್ತೆ ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಎಂದು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ. ಕರ್ನಾಟಕ ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲ ಅಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ…

Read More