ಸೊರಬ: ಹೊಲದಲ್ಲಿ ಯುವಕ ಅನುಮಾನಾಸ್ಪದ ಸಾವು – ಹೊಸನಗರ: ಸಾಲಬಾಧೆಯಿಂದ ತೋಟದಲ್ಲಿ ನೇಣಿಗೆ ಶರಣಾದ ರೈತ – ಶಿವಮೊಗ್ಗ : ಪೊಲೀಸ್ ಠಾಣೆಗೆ ಬಂದ ಹಾವು, ಬೆಚ್ಚಿಬಿದ್ದ ಪೊಲೀಸರು NAMMUR EXPRESS NEWS ಸೊರಬ : ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಕೃಷಿ ಕಾರ್ಮಿಕ ಮಂಜುನಾಥ್ (36) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಗದ್ದೆಯಲ್ಲಿ ತಂದೆ ಯುವರಾಜ್ ಜೊತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಣಬೆಯನ್ನು ಹುಡುಕಿ ತರಲು ತೆರಳಿದ್ದನು. ಮಧ್ಯಾಹ್ನದ ಕಾರಣ ತಂದೆ ಊಟಕ್ಕೆಂದು ಮನೆಗೆ ತೆರಳಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆದು ನಂತರ ಮಗ ಊಟಕ್ಕೆ ಬರಲಿಲ್ಲವೆಂದು ಹುಡುಕಿಕೊಂಡು ಹೋದಾಗ ತಮ್ಮ ಹೊಲದಲ್ಲೇ ಶವವಾಗಿ ಬಿದ್ದಿದ್ದು ಕಂಡು ಶಾ- ಕ್ ಗೆ ಒಳಗಾಗಿದ್ದರು. ನಂತರ ಮಗನನ್ನು ಅಂಗಾತ ಮಲಗಿಸಿ ನೋಡಿದಾಗ ಹಿಂಬದಿ ಸುಟ್ಟಗಾಯಗಳು ಪತ್ತೆಯಾಗಿದೆ. ಈ ಸುಟ್ಟಗಾಯಗಳು ಅನುಮಾನಕ್ಕೆ ಕಾರಣವಾಗಿದೆ. ಯುವರಾಜ್ ಅವರಿಗೆ ಮಂಜುನಾಥ ಸೇರಿ ಇಬ್ರ ಗಂಡು ಮಕ್ಕಳಿದ್ದರು. 2022 ರಲ್ಲಿ ಮತ್ತೋರ್ವ ಮಗ ಮಹೇಶ್ ಟ್ರ್ಯಾಕ್ಟರ್ ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ…
Author: Nammur Express Admin
ಆ.27ರವರೆಗೆ ಕರಾವಳಿಯಲ್ಲಿ ಭಾರೀ ಮಳೆ! – ಆ.23ರಂದುಭಾರೀ ಮಳೆ ಅಲರ್ಟ್ ನೀಡಿದ ಹವಾಮಾನ ಇಲಾಖೆ – ಕರಾವಳಿ ಜಿಲ್ಲೆಗಳ ಜನರೇ ಎಚ್ಚರ ಎಚ್ಚರ NAMMUR EXPRESS NEWS ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಉಳಿದ ಜಿಲ್ಲೆಗಳು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಆ. 23ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಆ.24ರಂದು ಕೂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಹವಾಮಾನ ಆ.27ರವರೆಗೆ ಇರಲಿದೆ ಎಂದು ಮಾಹಿತಿ ನೀಡಿದೆ.
ಕಳಪೆ ಅಡಿಕೆ ಎಫೆಕ್ಟ್: ಧಾರಣೆ ದಿಢೀರ್ ಕುಸಿತ! – ಮಲೆನಾಡ ರೈತರಲ್ಲಿ ಆತಂಕ: ಕಳಪೆ ಅಡಿಕೆ ಮಿಕ್ಸ್ ಕಾರಣ ಆಯ್ತಾ? – ವಿದೇಶದಿಂದ ಬರುತ್ತಿದೆ ಕಳ್ಳ ಅಡಿಕೆ!: ದರ ಕುಸಿಯುತ್ತಾ? – 47 ಸಾವಿರಕ್ಕೆ ಕುಸಿದ ಅಡಿಕೆ ದರ NAMMUR EXPRESS NEWS ಶಿವಮೊಗ್ಗ: ಏರುಗತಿಯಲ್ಲಿದ್ದ ಅಡಿಕೆ ಧಾರಣೆ ಇದೀಗ ಮತ್ತೆ ಕುಸಿತ ಕಂಡಿದ್ದು, ಕಳ್ಳ ಅಡಿಕೆ ಕಾರಣ ಆಯ್ತಾ ಎಂಬ ಅನುಮಾನ ಮೂಡಿದೆ. ಕಳಪೆ ಅಡಕೆ ಪೂರೈಕೆಯ ಕಾರಣವನ್ನು ಮುಂದಿಟ್ಟುಕೊಂಡು ಉತ್ತರ ಭಾರತದ ಪಾನ್ ಮಸಾಲಾ ಕಂಪನಿಗಳು ಅಡಕೆ ಮೂಟೆ ಹೊತ್ತು ಲಾರಿಗಳನ್ನು ಮುಲಾಜಿಲ್ಲದೆ ಹಿಂದಕ್ಕೆ ಕಳುಹಿಸುತ್ತಿದ್ದು, ಅಡಕೆ ಧಾರಣೆ ಕುಸಿಯಲಾರಂಭಿಸಿದೆ. ಮಧ್ಯದಲ್ಲಿ ಯಾರೋ ಮಾಡಿದ ಮೋಸದಿಂದಾಗಿ ಇಡೀ ಅಡಕೆ ರೈತ ಸಮುದಾಯ ಕಂಗಾಲು ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಖಾಸಗಿ ವರ್ತಕರು ಮತ್ತು ಸಹಕಾರಿ ವಲಯದ ಮಧ್ಯೆ ಅಡಕೆ ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಬಂಧ ಸದ್ದಿಲ್ಲದೆ ಮುಸುಕಿನ ಗುದ್ದಾಟವೂ ಆರಂಭಗೊಂಡಿದೆ. ಅಡಕೆ ಮಾರುಕಟ್ಟೆಯನ್ನು ಸದಾ ಸದೃಢವಾಗಿಡಲು, ರಣೆ ಕುಸಿಯದಂತೆ ಶ್ರಮಿಸುತ್ತಿರುವ ಅಡಕೆ…
ಉಂಬ್ಳೇಬೈಲು ಭಾಗದ ರೈತರಿಗೆ ನೋಟೀಸ್: ನಾಯಕರ ಎಂಟ್ರಿ! – ಡಿಸಿ ಜತೆಗೆ ಸಭೆ ನಡೆಸಿದ ಡಾ.ಆರ್.ಎಂ.ಮಂಜುನಾಥ್ ಗೌಡ – ರೈತರಿಗೆ ಅನ್ಯಾಯ ಆಗಬಾರದು ಎಂದ ಸಹಕಾರ ನಾಯಕ NAMMUR EXPRESS NEWS ಶಿವಮೊಗ್ಗ: ನೂರಾರು ಉಂಬ್ಳೇಬೈಲು ಭಾಗದ ರೈತರಿಗೆ ಅರಣ್ಯ ಇಲಾಖೆ ಭೂಮಿ ಬಿಡುವಂತೆ ನೋಟಿಸ್ ನೀಡಿದ ಹಿನ್ನೆಲೆ ರೈತರ ಜೊತೆಗೆ ಶಿವಮೊಗ್ಗ ಡಿಸಿ ಅವರನ್ನು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ ಭೇಟಿ ಮಾಡಿ ಜಾಗ ಬಿಡಿಸದಂತೆ ಮನವಿ ಮಾಡಿದರು. 1990 ಇಸವಿಯಿಂದ ಭದ್ರಾ ಮುಳಗಡೆ ರೈತರು ಇಲ್ಲಿ ಸಾಗುವಳಿ ಮಾಡಿಕೊಂಡಿದ್ದು, ನೋಟಿಸು ನೀಡಿ ಒತ್ತವರಿ ತೆರವು ಮಾಡಿ ಎಂದಿರುವ ಕ್ರಮದ ಬಗ್ಗೆ ಿಸಿ ಅವರಿಗೆ ಸಹಕಾರ ನಾಯಕ ಮನವರಿಕೆ ಮಾಡಿಕೊಟ್ಟರು. ಜತೆಗೆ ಯಾವುದೇ ಕಾರಣ ರೈತರಿಗೆ ಅನ್ಯಾಯ ಆಗಬಾರದು ಎಂದರು, ಮಾಜಿ ಸಂಸದ ಆಯನೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ಉಂಬ್ಳೇಬೈಲು ಮುಖಂಡರಾದ ದುಗ್ಗಪ್ಪ ಗೌಡ, ರಮೇಶ್ ಹೆಗ್ಡೆ, ಶಿವಕುಮಾರ್, ಪ್ರಮೋದ್,ಮಧುಸೂದನ್,…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು ಆರ್ಥಿಕ ಲಾಭದ ಸಾಧ್ಯತೆಗಳಿವೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ವ್ಯಾಪಾರ ಸುಧಾರಣೆಯಾಗಲಿದೆ. ಆದಾಯವೂ ಹೆಚ್ಚಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಸ್ನೇಹಿತರನ್ನು ಭೇಟಿ ಮಾಡುವಿರಿ. ** ವೃಷಭ ರಾಶಿ : ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ, ಆದರೆ ಮನಸ್ಸು ಚಂಚಲವಾಗಬಹುದು. ತಾಳ್ಮೆಯಿಂದಿರಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಬಗ್ಗೆ ಶಾಂತಿ ಮತ್ತು ಸಂತೋಷದ ಭಾವನೆ ಇರುತ್ತದೆ. ಇಂದು ಕಟುಂಬಿಕ ಜೀವನ ಸುಖಮಯವಾಗಿರುತ್ತದೆ. ** ಮಿಥುನ…
ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ – ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ – ಈಡಿಗ ಸಂಘ, ಬಿಲ್ಲವ ಸಂಘ, ಸಂಘ ಸಂಸ್ಥೆಗಳ ಸಹಯೋಗ NAMMUR EXPRESS NEWS ತೀರ್ಥಹಳ್ಳಿ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ( ಎಸ್. ಎನ್.ಜಿ.ವಿ ) ತೀರ್ಥಹಳ್ಳಿ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಮಾಜಿ ಮುಖ್ಯ ಮಂತ್ರಿ ದೇವರಾಜ್ ಅರಸುರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಶಾಶಕರಾದ ಆರಗ ಜ್ಞಾನೇಂದ್ರ ಅನುಪಸ್ಥಿತಿಯಲ್ಲಿ ತಾಲ್ಲೂಕು ದಂಡಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈಡಿಗ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ, ಬಿಲ್ಲವ ಸಂಘದ ಅಧ್ಯಕ್ಷರಾದ ಮಂಜುನಾಥ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷರಾದ ವಿಶಾಲ್ ಕುಮಾರ,, ಶ್ರೀ ನಾರಾಯಣ ಗುರುಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊದಲ ಶಿವು,ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರು ಆದ…
ಚಿತ್ರದುರ್ಗದಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ! – ಹೊಳಲ್ಕೆರೆ: ವಿದ್ಯಾರ್ಥಿಗಳು ನಾಪತ್ತೆ: ಬೆಂಗಳೂರಲ್ಲಿ ಪತ್ತೆ – ಹೊಸದುರ್ಗ: ಬೈಕ್ ಕಳ್ಳನ ಬಂಧನ: ಮೂರು ಬೈಕ್ ವಶ NAMMUR EXPRESS NEWS ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತ ಮಾಡಿದೆ. ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ತಾಲೂಕು ಸೇರಿ ಎಲ್ಲೆಡೆ ಭಾರೀ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿವೆ. ಚಳ್ಳಕೆರೆ ನಗರಕ್ಕೆ ವರುಣಾಘಾತವಾಗಿದ್ದು, ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ. ರಾಜಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇಡೀ ರಾತ್ರಿ ನಿದ್ದೆಯಿಲ್ಲದೆ ಕಾಲ ದೂಡಿದ್ದಾರೆ. ರಹೀಂ ನಗರ, ಸೂಜಿಮಲ್ಲೇಶ್ವರ ನಗರ, ಹಳೆ ನಗರ, ಕಾಟಪನಹಟ್ಟಿ, ಅಂಬೇಡ್ಕರ್ ನಗರ, ಪಾವಗಡ ರಸ್ತೆ ಹೀಗೆ ಅನೇಕ ಕಡೆ ನಿವಾಸಿಗಳ ಪಾಡು ಹೇಳತೀರದಾಗಿದೆ. ಕಾಟಪನಹಟ್ಟಿಗೆ ಹೋಗುವ ಪಾದಗಟ್ಟೆ ಸಮೀಪದ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆಯನ್ನು ಾತ್ಕಾಲಿಕ ಬಂದ್ ಮಾಡಲಾಗಿದೆ. ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆ: ಬೆಂಗಳೂರಲ್ಲಿ ಪತ್ತೆ…
ಇದು ನಿಮ್ ಸುದ್ದಿ.. ಎಲ್ಲೆಲ್ಲಿ ಏನೇನು? ಆ.22ರಿಂದ ಶಿವಮೊಗ್ಗದಲ್ಲಿ ಸೈನಿಕ ನೇಮಕಾತಿ ರ‍್ಯಾಲಿ – ಆಗಸ್ಟ್ 22ರಿಂದ 31ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ರ‍್ಯಾಲಿ – ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ – ಲೋಕಾಯುಕ್ತ: ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ ಶಿವಮೊಗ್ಗ : ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಕ್ಷಮತಾ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಆಗಸ್ಟ್ 22ರಿಂದ 31ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ಅವರು ಹೇಳಿದ್ದಾರೆ. ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ‍್ಯಾಲಿಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ರ‍್ಯಾಲಿಯಲ್ಲಿ ಮಂಗಳೂರು ಸೈನಿಕ ನೇಮಕಾತಿ ಘಟಕವು ಈಗಾಗಲೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯುರ, ಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು…
ರಾಘವೇಂದ್ರ ರಾಯರ ಆರಾಧನೆ ಸಂಭ್ರಮ! – ತೀರ್ಥಹಳ್ಳಿಯಲ್ಲಿ ರಾಯರ ಆರಾಧನೆ: ವಿಶೇಷ ಅಲಂಕಾರ – ಸಾವಿರಾರು ಭಕ್ತರಿಂದ ರಾಯರಿಗೆ ಪೂಜೆ: ಅನ್ನಸಂತರ್ಪಣೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಾಘವೇಂದ್ರ ರಾಯರ ಆರಾಧನೆ ಸಂಭ್ರಮ ಎರಡು ದಿನಗಳಿಂದ ಕಂಡು ಬಂತು. ತೀರ್ಥಹಳ್ಳಿ ರಥ ಬೀದಿಯ ರಾಘವೇಂದ್ರ ದೇಗುಲದಲ್ಲಿ ವಿಶೇಷ ಅಲಂಕಾರ, ದೇವರಿಗೆ ಪೂಜೆ ನಡೆಯಿತು. ರಾಘವೇಂದ್ರ ದೇವಾಲಯದಲ್ಲಿ ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗಿಯಾಗಿ ರಾಯರಿಗೆ ನಮನ ಸಲ್ಲಿಸಿದರು. ಪ್ರತಿ ದಿನ ಅನ್ನಸಂತರ್ಪಣೆ ನಡೆಯಿತು.
ಟಾಪ್ ನ್ಯೂಸ್ ಕರಾವಳಿ ಮೊಬೈಲ್ ಬಳಕೆ ಬೇಡ ಎಂದಿದಕ್ಕೆ ಇಬ್ಬರು ಸಾವು! – ಬಾವಿಗೆ ಹಾರಿದ ಪಿಯುಸಿ ವಿದ್ಯಾರ್ಥಿ: ನೇಣು ಬಿಗಿದುಕೊಂಡ 14ರ ಬಾಲಕಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಸಾವು – ಛೇ… ಎಂಥಾ ಕಾಲ ಬಂತು ಸಾರ್ NAMMUR EXPRESS NEWS ಮಂಗಳೂರು: ಮೊಬೈಲ್ ಬಳಕೆಯ ಬಗ್ಗೆ ಹೆತ್ತವರು ಗದರಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಮಕ್ಕಳು ಸಾವಿಗೆ ಶರಣಾದ ಪ್ರತ್ಯೇಕ ಘಟನೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ ಬ್ಯಾಗ್ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕರಾಯದಲ್ಲಿ ನೀಲಮ್ ಎಂಬ ಜಾರ್ಖಂಡ್ ಮೂಲದ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ. ಬಾವಿಗೆ ಹಾರಿದ ಪಿಯುಸಿ ವಿದ್ಯಾರ್ಥಿ! ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗು ಅಂಜಾರು ಪೊಲೀಸ್ ಕ್ವಾಟ್ರಸ್ ಬಳಿಯ ನಿವಾಸಿ ಪ್ರಥಮೇಶ್ (17) ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಚಾಳಿ ಕಡಿಮೆ ಮಾಡಲು…