Author: Nammur Express Admin

ಕರಾವಳಿ ಟಾಪ್ ನ್ಯೂಸ್ ಬೆಳ್ತಂಗಡಿಯಲ್ಲಿ ನಿವೃತ್ತ ಶಿಕ್ಷಕನ ಮರ್ಡರ್! – ಕೊಲೆಗೆ ಕಾರಣ ನಿಗೂಢ: ಭಾರೀ ಸಂಚಲನ- ಕಡಬ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ – ಬಂಟ್ವಾಳ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ – ಉಡುಪಿ: ಮದುವೆ ಹಿಂದಿನ ದಿನ ಮದುಮಗ ನಾಪತ್ತೆ! – ಪುತ್ತೂರು: ನೇಣು ಬಿಗಿದುಕೊಂಡು ಭಜರಂಗದಳದ ಮುಖಂಡ ಆತ್ಮಹತ್ಯೆ NAMMUR EXPRESS NEWS ಬೆಳ್ತಂಗಡಿ: ಮನೆ ಅಂಗಳದಲ್ಲಿಯೇ ನಿವೃತ್ತ ಶಿಕ್ಷಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್‌ಪಿಬಿ ಕಂಪೌಂಡ್ ನಲ್ಲಿ ನಡೆದಿದೆ. ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಭಟ್(73) ಹತ್ಯೆಯಾದವರು. ಬಾಲಕೃಷ್ಣ ಅವರು ಕೊಲ್ಪಾಡಿ ಮತ್ತು ಕೊಯ್ಯೂರು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಂಗಳವಾರ ಮಧ್ಯಾಹ್ನದ ನಂತರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಯಾರೂ, ಕೊಲೆ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ನ್ನು ಾವುದೇ ಮಾಹಿತಿ ಲಭಿಸಿಲ್ಲ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ…

Read More

ಟಾಪ್ ನ್ಯೂಸ್ ಶಿವಮೊಗ್ಗ ತೀರ್ಥಹಳ್ಳಿ ಶಿಕ್ಷಕ ಪೋಕ್ಸೋ ಕೇಸಲ್ಲಿ ಅರೆಸ್ಟ್! – ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನೆಲೆ ದೂರು – ಆಯನೂರಿನ ಬಳಿ ಬೇಕರಿಯಲ್ಲಿ ಸ್ಫೋಟ! – ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ: ಮಹಿಳೆಯರ ರಕ್ಷಣೆ NAMMUR EXPRESS NEWS ತೀರ್ಥಹಳ್ಳಿ: ವಿದ್ಯಾರ್ಥಿನಿಯರ ಜೊತೆ ಅಸಭ್ಯ ಹಾಗೂ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಫೋಕ್ಸೋ ಕೇಸ್‌ ದಾಖಲಾಗಿದೆ. ಸಂಗೀತ ಶಿಕ್ಷಕ ಇಮ್ಮಿಯಾಜ್ (45) ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ಹಾಗೂ ಅನುಚಿತ ರೀತಿಯಲ್ಲಿ ಶಾಲೆಯಲ್ಲಿ ಹಾಗೂ ಪ್ರವಾಸದ ವೇಳೆ ವರ್ತಿಸಿದ್ದ ಎಂಬುದಾಗಿ ವಿದ್ಯಾರ್ಥಿಗಳಿಂದ ವಸತಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಲಾಗಿದೆ. ವಸತಿಶಾಲಾ ಪ್ರಾಂಶುಪಾಲರಿಂದ ಪೊಲೀಸರಿಗೆ ದೂರು ನೀಡಿದ್ದು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಪ್ರಕರಣದ ಆರೋಪಿ ಇಮ್ಮಿಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆಯನೂರಿನ ಬಳಿ ಬೇಕರಿಯಲ್ಲಿ ಸ್ಫೋಟ ಶಿವಮೊಗ್ಗ ತಾಲೂಕಿನ ಆಯನೂರಿನ ಬಳಿ ಇರುವ ಬೇಕರಿ ಒಂದರಲ್ಲಿ ಬೆಂಕಿ ಹತ್ತಿಕೊಂಡು…

Read More

ಮಲೆನಾಡು, ಕರಾವಳಿಯಲ್ಲಿ ಸಸಿ ನೆಟ್ಟಿ! – ಅನ್ನ ಕೊಡುವ ಭತ್ತದ ಬೆಳೆ ಸಂಭ್ರಮ – ಮಳೆ ಹೋಯ್ತು.. ಬಿಸಿಲು ಬಂತು..ಮುಂದೇನು? NAMMUR EXPRESS NEWS ಮಳೆಗಾಲ ಕೊಂಚ ಕಡಿಮೆ ಆಗಿದೆ. ಎಲ್ಲೆಡೆ ಭತ್ತದ ಗದ್ದೆಗಳು ಹಚ್ಚ ಹಸಿರಿನಿಂದ ಸಂಭ್ರಮಿಸುತ್ತಿದೆ. ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ಮಲೆನಾಡು, ಕರಾವಳಿಯಲ್ಲಿ ಭತ್ತದ ಸಸಿ ನಾಟಿ ಕಾರ್ಯದಲ್ಲಿ ಜನ ನಿರತರಾಗಿದ್ದಾರೆ. ಮಲೆನಾಡಲ್ಲಿ ಅಡಿಕೆ ತೋಟಗಳು ಭತ್ತದ ಕೃಷಿಯನ್ನು ಮರೆ ಮಾಚಿವೆ. ಎಲ್ಲೆಡೆ ಗದ್ದೆಗಳು ತೋಟಗಳಾಗಿವೆ. ಆದರೂ ಅಲ್ಲಿ ಇಲ್ಲಿ ಭತ್ತದ ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ.

Read More

ಕಾಡಾನೆಗಳ ಚಲನ-ವಲನ ವೀಕ್ಷಣೆಗೆ ಹೊಸ ಟೆಕ್ನಾಲಜಿ! – ಹಾಸನದಲ್ಲೇ ಮೊದಲ ಬಾರಿಗೆ ವಿಭಿನ್ನ ವೆಬ್‌ಸೈಟ್ ಆರಂಭ – ಆನೆ ಎಲ್ಲಿದೆ ಡಾಟ್ ಕಾಂ ಎಂಬ ವಿಭಿನ್ನ ವೆಬ್‌ಸೈಟ್! NAMMUR EXPRESS NEWS ಹಾಸನ: ಹಾಸನದಲ್ಲಿ ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಕಾಡಂಚಿನ ಜನರ ನಿದ್ದೆಗೆಡಿಸಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಮಾಡದ ಪ್ರಯತ್ನಗಳಿಲ್ಲ. ಆದರೆ ಏನೇ ಮಾಡಿದ್ರು ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ಹೀಗಾಗಿ ಕಾಡಾನೆ ದಾಳಿ ತಡೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಕಾಡಾನೆಗಳ ಚಲನ-ವಲನ ವೀಕ್ಷಿಸಿ ಮಾಹಿತಿ ನೀಡಲು ಆನೆ ಎಲ್ಲಿದೆ ಡಾಟ್ ಕಾಂ ಹೆಸರಿನಲ್ಲಿ ಹೊಸ ವೆಬ್ ತಯಾರಿಸಲಾಗಿದೆ. ಎಲ್ಲೆಂದರಲ್ಲಿ ದಾಳಿ ಮಾಡುವ ಆನೆಗಳು ಗದ್ದೆಗಳಿಗೆ ನುಗ್ಗಿ ಬೆಳೆ ಹಾಳುಮಾಡುತ್ತಿವೆ. ಇದಕ್ಕೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತಿಲ್ಲ. ಹೀಗಾಗಿ ಕಾಡಾನೆಗಳ ಚಲನ-ವಲನ ವೀಕ್ಷಣೆಗೆ ಹೊಸ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ರೇಡಿಯೋ ಕಾರ್, ಅರಣ್ಯ…

Read More

ಬೈಂದೂರಲ್ಲಿ ಉದ್ಯೋಗ ಮೇಳ – ದೇಶ ವಿದೇಶದ ಕಂಪನಿಗಳು ಭಾಗಿ NAMMUR EXPRESS NEWS ಸಮೃದ್ಧ ಬೈಂದೂರು ಆಯೋಜಿಸುತ್ತಿದೆ ಅಂತಾರಾಷ್ಟ್ರೀಯ ಉದ್ಯೋಗ ಮೇಳ.NSDCI (NATIONAL SKILL DEVELOPMENT CORPORATION INTERNATIONAL) ಹಾಗೂ AJINORAH ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯಾವುದೇ ಪದವೀಧರರು ವಿದೇಶದಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ ಬೃಹತ್ ಉದ್ಯೋಗ ಮೇಳ ಬೈಂದೂರಿಗೆ ಬರುತ್ತಿದೆ ಭಾರತದ ಅತಿ ದೊಡ್ಡ ಅಂತರಾಷ್ಟ್ರೀಯ ಉದ್ಯೋಗಗಳು. ದಿನಾಂಕ: 31 ಆಗಸ್ಟ್ 2024, ಸಮಯ : ಬೆಳಿಗ್ಗೆ 9.00ಕ್ಕೆ ಸ್ಥಳ : ಜೆ.ಎನ್.ಆರ್ ಅಡಿಟೋರಿಯಂ, ಎನ್ ಎಚ್ 66 ಬೈಂದೂರು ಕನಿಷ್ಠ ವಿದ್ಯಾರ್ಹತೆ 10+2 And any Degres, Nursing ಉದ್ಯೋಗ ಮೇಳದ ವಿಶೇಷತೆಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಉಚಿತ ವಸತಿ ವ್ಯವಸ್ಥೆ ಉಚಿತ ಊಟ ಉಪಹಾರ ಉಚಿತ ವೀಸಾ ಉಚಿತ ವಿಮಾನ ಟಿಕೆಟ್ ಅಂತರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಈ ಕೆಳಗಿನ ದೇಶಗಳ ಕಂಪನಿಗಳು ಭಾಗವಹಿಸುತ್ತದೆ ಜರ್ಮನ್ ಜಪಾನ್ – ಮಲೇಶಿಯಾ – ಕ್ರೋವೇಶಿಯ -…

Read More

ಟಾಪ್ 5 ನ್ಯೂಸ್ ಕರ್ನಾಟಕ 23 ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆ! – ದಾವಣಗೆರೆ: ಭಾರೀ ಮಳೆಗೆ ಕೊಚ್ಚಿ ಹೋದ ಟೊಮೆಟೊ ಬಾಕ್ಸ್ – ತುಮಕೂರು: ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿ! – ನೆಲಮಂಗಲ: ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಹೊಡೆದಾಟ! – ಮಂಡ್ಯ: ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ NAMMUR EXPRESS NEWS ಬೆಂಗಳೂರು: ಕರ್ನಾಟಕದ 23 ಜಿಲ್ಲೆಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸರು, ಶಿವಮಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಾವಣಗೆರೆಯಲ್ಲಿ ಭಾರೀ ಮಳೆ: ನ್ಯಾಮತಿಯಲ್ಲಿ ಕೊಚ್ಚಿ ಹೋದ…

Read More

ಟಾಪ್ 3 ನ್ಯೂಸ್ ಮಲ್ನಾಡ್ ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಬೈಕ್ ಪಲ್ಟಿ – ಹೊಸನಗರ : ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ – ಸಾಗರ: ಶರಾವತಿ ಹಿನ್ನೀರಿನಲ್ಲಿ ಯುವಕನ ಶವ ಪತ್ತೆ NAMMUR EXPRESS NEWS ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಾಗರವಳ್ಳಿ‌ ಗ್ರಾಮದಲ್ಲಿ ಎದೆ ಝಲ್ ಅನಿಸುವ ಡೆಡ್ಲಿ ಆಕ್ಸಿಡೆಂಟ್ ನಡೆದಿದ್ದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರೇಸ್​ಗೆ ಇಳಿದವರಂತೆ ಎರಡು ದ್ವಿಚಕ್ರ ವಾಹನಗಳೂ ವೇಗವಾಗಿ ಬಂದಿದ್ದು ಅದರಲ್ಲಿ ಒಂದು ಬೈಕ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ರೋಡ್ ಎಡ್ಜ್ ಗೆ ಬಂದು ಓವರ್ ಟೇಕ್ ಮಾಡಲು ಯತ್ನಿಸುವಾಗ ಆಯಾತಪ್ಪಿ 4 ಬಾರಿ ಬೈಕ್ ಪಲ್ಟಿ ಹೊಡೆದಿದೆ. ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ಕು ಬಾರಿ ಬೈಕ್ ‌ಪಲ್ಟಿಯಾಗಿ, ಚಾಲಕ ಹಾರಿ ಬಿದ್ದಿದ್ದಾನೆ. ಪವಾಡ ಸದೃಶದ ರೀತಿ ಚಾಲಕ ಎದ್ದು ನಿಂತಿದ್ದು ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಲ್ದೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿರುವ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ದೇವಿಯೇ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ** ವೃಷಭ ರಾಶಿ : ಇಂದು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿಯೂ ಸಮತೋಲನದಿಂದಿರಿ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ರುಚಿಕವಾದ ಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂದರ್ಭಗಳು…

Read More

ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು! – ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಪ್ರತಿಭಟನೆ NAMMUR EXPRESS NEWS ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಪ್ರತಿಭಟನೆ ನಡೆಯಿತು. ಚಿಕ್ಕಮಗಳೂರಲ್ಲಿ ಪ್ರತಿಭಟನೆ ಬಿಜೆಪಿ ನಗರ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ ಆರ್ ದೇವರಾಜ್ ಶೆಟ್ಟಿ ಮಾತನಾಡಿ. ಸಮಾಜವಾದಿ  ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಜನರ ಕಣ್ಣಿಗೆ ಮಂಕುಬೂದಿ ಎರಚಿದ್ದಾರೆ. ಅವರ ರಾಜಕೀಯ ನಾಟಕ ಈಗ ಬಯಲಾಗಿದೆ ಎಂದರು ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಅದನ್ನು ಬಿಟ್ಟು ಪ್ರದರ್ಶನ ಮಾಡುವುದು ಸರಿಯಲ್ಲ ಹೇಳಿದರು ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ ಎಸ್ ಪುಷ್ಪಜ್ ಮಾತನಾಡಿ ಭ್ರಷ್ಟಾಚಾರ ಹಣೆಪಟ್ಟಿ ಹೊತ್ತಿರುವ ಮುಖ್ಯಮಂತ್ರಿಗಳು ಸ್ಥಾನ ಕಳೆದುಕೊಳ್ಳುವ ಮುನ್ನವೇ ಪದ ತ್ಯಾಗಗೊಳಿಸಿ…

Read More

ಶೃಂಗೇರಿಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ – ಅಭಿನಯ ಲಹರಿ ನೃತ್ಯೋತ್ಸವಂ 2024 — ಆಗಸ್ಟ್ 24 ಮತ್ತು 25 ರಂದು ಕಾರ್ಯಕ್ರಮ: ಸರ್ವರಿಗೂ ಸ್ವಾಗತ NAMMUR EXPRESS NEWS ಬಿಜಿಎಸ್ ನೃತ್ಯ,‌ನಾಟಕ, ಸಂಗೀತ ತರಬೇತಿ ಶಾಲೆ.‌ಶೃಂಗೇರಿ ಇವರ ಸಹಯೋಗದೊಂದಿಗೆ, ನಾಟ್ಯ ಲಲಿತಕಲಾ ಟ್ರಸ್ಟ್ (ರಿ), ನಾಟ್ಯ ವೈಭವ ನ್ಯತ್ಯ ಅಕಾಡೆಮಿ ಶೃಂಗೇರಿ ಅರ್ಪಿಸುತ್ತಿರುವ ರಾಜ್ಯ ಮಟ್ಟದ ಅಭಿನಯ ಲಹರಿ ನೃತ್ಯೋತ್ಸವಂ 2024 ಆ.24 ಹಾಗೂ ಆ.25ರಂದು ನಡೆಯಲಿದೆ. ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಶೃಂಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಇವರ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಗುಣನಾಥ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿಯ ಶಾಸಕರಾದ ಟಿ ಡಿ ರಾಜೇಗೌಡರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ನಿರ್ದೇಶಕರಾದ ರಮೇಶ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೌರಮ್ಮ ತಹಸಲ್ದಾರ್. ಶೃಂಗೇರಿ ತಾಲ್ಲೂಕು., ಶ್ರೀ ಪ್ರವೀಣ್…

Read More