Author: Nammur Express Admin

ರೇಷನ್ ಕಾರ್ಡ್ ಇದ್ದವರಿಗೆ ಇದು ಕಡ್ಡಾಯ! – ಆ. 31ರೊಳಗೆ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರ ಇ -ಕೆವೈಸಿ ಕಡ್ಡಾಯ – ಕೆವೈಸಿ ಮಾಡಿಸದಿದ್ದರೆ ಮುಂದೆ ಪಡಿತರ ಸಿಗಲ್ಲ NAMMUR EXPRESS NEWS ಬೆಂಗಳೂರು: ಎಲ್ಲಾ ಬಗೆಯ ಪಡಿತರ ಚೀಟಿದಾರರು ತಮ್ಮ ಕುಟುಂಬ ಸದಸ್ಯರ ಇ ಕೆವೈಸಿ ನಡೆಸುವುದು ಅಗತ್ಯ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಪ್ರಕಟಣೆ ತಿಳಿಸಿದೆ. ಎಲ್ಲಾ ಪಡಿತರ ಚೀಟಿದಾರರು ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವದು ಕಡ್ಡಾಯವಾಗಿದ್ದು, ಆ.31 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆ.7.00 ರಿಂದ ರಾ. 9.00 ರವರೆಗೆ ಉಚಿತವಾಗಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಮುಂದೆ ಪಡಿತರ ನೀಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Read More

ದರ್ಶನ್, ಕೇಜ್ರಿವಾಲ್ ಜೈಲುವಾಸವೇ ಗತಿ! – ಸೆ. 5ರವರೆಗೆ ದರ್ಶನ್ ಜೈಲುಪಾಲು! – ಅರವಿಂದ್ ಕೇಜ್ರವಾಲ್ ನ್ಯಾಯಾಂಗ ಬಂಧನ ವಿಸ್ತರಣೆ NAMMUR EXPRESS NEWS ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ತಮಗೆ ಮನೆ ಊಟ ಬೇಕೆಂದು ಹಾಕಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಆರೋಗ್ಯ ಸಮಸ್ಯೆಯನ್ನು ಕಾರಣವನ್ನಾಗಿ ನೀಡಿ ಮನೆ ಊಟಕ್ಕೆ ಹಾಗೂ ಇತರೆ ಕೆಲವು ವಸ್ತುಗಳಿಗೆ ಬೇಡಿಕೆ ಇರಿಸಿದ್ದರು. ಮನೆ ಊಟ ಹಾಗೂ ಇತರೆ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು (ಆಗಸ್ಟ್ 20) ಹೈಕೋರ್ಟ್ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಕಾಡುತ್ತಿರುವುದಾಗಿ ಕಾರಣ ನೀಡಿ, ಮನೆ…

Read More

ಪುತ್ತೂರು: ಯುವತಿಗೆ ಚೂರಿ ಇರಿದ ಯುವಕ! – ಯುವತಿ ಆಸ್ಪತ್ರೆಗೆ ದಾಖಲು: ಸ್ಥಳದಲ್ಲಿ ಉದ್ವಿಗ್ನ – ಅನ್ಯ ಕೋಮಿನ ಯುವತಿ: ಏನಿದು ಘಟನೆ? NAMMUR EXPRESS NEWS ಪುತ್ತೂರು: ಅನ್ಯ ಕೋಮಿನ ಯುವತಿಗೆ ಯುವಕ ಚೂರಿ ಇರಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇಬ್ಬರು ಒಂದೇ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು, ಬಾಲಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಬಾಲಕ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂದು ತಿಳಿದು ಬಂದಿದೆ. ಬಾಲಕಿಗೆ ನಿನ್ನನ್ನು ಲವ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ವಿಧ್ಯಾರ್ಥಿನಿ ಬಾಲಕನಿಗೆ ಬೈದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಬಾಲಕ ಬಾಲಕಿಯ ಕೈಗೆ ಬ್ಲೇಡ್‌ನಿಂದ ಇರಿದು ಪರಾರಿಯಾಗಿದ್ದಾನೆ. ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಲ್ಲದೆ, ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಶಿಕ್ಷಕಿ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ಥೆ ಬಾಲಕಿ ಆರೋಪಿಸಿದ್ದಾಳೆ. ಸದ್ಯ ಆಸ್ಪತ್ರೆಯ ಮುಂದೆ ಜನಸ್ತೋಮ ಸೇರಿದ್ದು, ್ಥಳದಲ್ಲಿ ಬಿಗುವಿ…

Read More

ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಶಿಕ್ಷಣ ಸೇವೆ – ತಾವು ಕಲಿತಿರುವ ಬಿಜೂರು ಶಾಲೆಗೆ ಸಮವಸ್ತ್ರ ವಿತರಣೆ – ಸಮಾಜ, ಶೈಕ್ಷಣಿಕ ಕೆಲಸ, ದಾನ ಧರ್ಮದ ಕೆಲಸ ಕಾರ್ಯ NAMMUR EXPRESS NEWS ಬೈಂದೂರು: ಶಿಕ್ಷಣ ಪ್ರೇಮಿ, ಉದ್ಯಮಿ ಗೋವಿಂದ ಬಾಬು ಪೂಜಾರಿ ಸರ್ಕಾರಿ ಶಾಲೆ ಉಳಿವಿಗಾಗಿ ಹಾಗೂ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಸಹ ಉತ್ತಮವಾದ ಸೌಕರ್ಯಗಳೊಂದಿಗೆ ವಿದ್ಯಾಭ್ಯಾಸ ಮಾಡುವಂತೆ ಆಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ತಾವು ಕಲಿತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೂರು ಈ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಮಕ್ಕಳು ಬಂದು ಹೋಗುವುದಕ್ಕೆ ಅನುಕೂಲವಾಗುವಂತೆ ಶಾಲೆಗೆ ವಾಹನವನ್ನು ಒದಗಿಸುವುದರೊಂದಿಗೆ ಗೋವಿಂದ ಬಾಬು ಪೂಜಾರಿಯವರ ಶ್ರೀ ವರಲಕ್ಷ್ಮಿ ಚಾರಿ ಟ್ರಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ನೀಡಲಾಯಿತು. ಸಭಾ ಕಾರ್ಯಕ್ರಮದ ಅಂಗವಾಗಿ ದಾನಿಗಳಾದ ಗೋವಿಂದ ಪೂಜಾರಿ ದಂಪತಿಗಳು ಎಸ್ ಡಿ ಎಂ ಸಿ ಸದಸ್ಯರು ಹಳೇ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸ ಿಕ್ಷಕರು…

Read More

ಕಾಂಗ್ರೆಸ್ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ದೂರು – ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ನಾಯಕರ ಖಂಡನೆ – ಅಬಲಾಶ್ರಮದಲ್ಲಿ ವಿಜಯೇಂದ್ರ ರಕ್ಷಾ ಬಂಧನ ಆಚರಣೆ NAMMUR EXPRESS NEWS ಬೆಂಗಳೂರು: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಹಾಗೂ ಪೂರ್ವ ನಿಯೋಜಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ಎಸ್.ಸಿ.ಮೋರ್ಚಾದ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಸಿಮೆಂಟ್‌ ಮಂಜು, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನಮಂತು, ಮಾಜಿ ಸಂಸದರಾದ ಎಸ್‌.ಮುನಿಸ್ವಾಮಿ, ಶಾಸಕರಾದ ಡಾ.ಅವಿನಾಶ್ ಜಾಧವ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಬಲಾಶ್ರಮದಲ್ಲಿ ವಿಜಯೇಂದ್ರ ರಕ್ಷಾ ಬಂಧನ ಆಚರಣೆ ಪವಿತ್ರ ರಕ್ಷಾಬಂಧನದ ಅಂಗವಾಗಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ…

Read More

ಅಯ್ಯೋ ದೇವ್ರೇ.. ನಕಲಿ ಬೆಳ್ಳುಳ್ಳಿ ಪತ್ತೆ! – ಸಿಮೆಂಟ್ ನಿಂದ ಮಾಡಿದ ನಕಲಿ ಬೆಳ್ಳುಳ್ಳಿ – ಆಹಾರ ವಸ್ತು ಖರೀದಿ ಮಾಡುವಾಗ ಹುಷಾರ್ NAMMUR EXPRESS NEWS ಮುಂಬೈ : ಮಾರುಕಟ್ಟೆಯಲ್ಲಿ ಹಲವು ಬಗೆಯ ನಕಲಿ ವಸ್ತುಗಳು ಕಾಣಿಸಿಕೊಂಡಿರುವಾಗಲೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ವಿಭಿನ್ನ ವಿಡಿಯೋ. ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಅಕೋಲಾದಲ್ಲಿ ಈ ಘಟನೆ ನಡೆದಿದೆ. ಮನೆಯ ಹೊರಗಿನ ಬೀದಿಬದಿ ವ್ಯಾಪಾರಿಯಿಂದ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿ 250 ಗ್ರಾಂ ಬೆಳ್ಳುಳ್ಳಿ ಖರೀದಿಸಿದ್ದಾರೆ. ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲು ಪ್ರಯತ್ನಿಸಿದಾಗ ತಾನು ಮೋಸ ಹೋಗಿರುವುದು ಅರಿವಾಯಿತು. ಬೆಳ್ಳುಳ್ಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಸಿಮೆಂಟ್ ನಿಂದ ಮಾಡಲ್ಪಟ್ಟಿದೆ ಎಂದು ತಿಳಿದುಬಂದಿದೆ. ಒಂದು ನೋಟದಲ್ಲಿ ಮೂಲವನ್ನು ಸೋಲಿಸುವ ನಕಲಿ ಬೆಳ್ಳುಳ್ಳಿ ಇದೀಗ ಭಾರೀ ಸದ್ದು ಮಾಡಿದೆ. ಅನೇ ಮಾರಾಟಗಾರು ಸಿಮೆಂಟ್ ಮತ್ತು ನೈಜ ಬೆಳ್ಳುಳ್ಳಿಯೊಂದಿಗೆ ತಯಾರಿಸಿದ ವಸ್ತುಗಳನ್ನು ಬೆರೆಸಿ ಗ್ರಾಹಕರನ್ನು ಮರುಳು…

Read More

ಪ್ರೆಸ್ಟೀಜ್ ಎಕ್ಸ್‌ಕ್ಯೂಸಿವ್ ಸೇಲ್ಸ್! – ಶಿವಮೊಗ್ಗದಲ್ಲಿ ಆಗಸ್ಟ್ 21 ರಿಂದ 31ರವರೆಗೆ ಮಾರಾಟ – ಭಾರೀ ರಿಯಾಯಿತಿಯಲ್ಲಿ ನಿಮ್ಮ ನೆಚ್ಚಿನ ವಸ್ತು ಖರೀದಿಸಿ ಪ್ರೆಸ್ಟೀಜ್ ಜ್ಯಾಕ್‌ಪಾಟ್ ಸೇಲ್ 40% ರಿಂದ 50% ರಿಯಾಯಿತಿ* ದಿನಾಂಕ : ಆಗಸ್ಟ್ 21 ರಿಂದ 31 ರ ವರೆಗೆ ಸಮಯ : ಬೆಳಿಗ್ಗೆ 10.30 ರಿಂದ ರಾತ್ರಿ 8.30 ವರೆಗೆ ವಾರ್ಷಿಕ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಸೀಮಿತ ದಾಸ್ತಾನು, ದಾಸ್ತಾನು ಮುಗಿಯುವ ಮುನ್ನ ತ್ವರೆ ಮಾಡಿ. *ಪ್ರೆಸ್ಟೀಜ್ ಕಂಪನಿಯಲ್ಲಿ ಇವಾಗ ಮಾಡ್ಯೂಲರ್ ಕಿಚನ್ ಕೂಡ ಲಭ್ಯವಿದ್ದು, ನಿಮ್ಮ ಮನೆಗೆ ಬೇಕಾದ ರೀತಿಯಲ್ಲಿ ಲಭ್ಯ ಪ್ರೆಸ್ಟೀಜ್ ಮಾಡ್ಯೂಲರ್ ಕಿಚನ್ , ವಾರ್ಡ್ರೋಬ್, ಟಿವಿ ಯೂನಿಟ್ಸ್, ಬಾರ್ ಕೌಂಟರ್, ಬೆಡ್ರೂಮ್ ಕಾಟ್, ಡ್ರೆಸ್ಸಿಂಗ್ ಟೇಬಲ್, ಸ್ಟಡಿ ಟೇಬಲ್ ಗಳು ಮಾಡಿಕೊಡಲಾಗುವುದು ಭೇಟಿ ನೀಡಿ

Read More

ಟಾಪ್ 4 ನ್ಯೂಸ್ ಚಿಕ್ಕಮಗಳೂರು ಚಿಕ್ಕಮಗಳೂರು: ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ವರದಕ್ಷಿಣೆ ಕಿರುಕುಳ ದೂರು – ಗೋಣಿಕೊಪ್ಪಲು : ಕಾಫಿತೋಟದಲ್ಲಿ ಕಾಡಾನೆ ಮೃತದೇಹ ಪತ್ತೆ – ಕಡಬಗೆರೆ: ಕಾಂಗ್ರೆಸ್ ಅಧ್ಯಕ್ಷೆ ಅವರ ಮನೆ ಮೇಲೆ ಮೆಸ್ಕಾಂ ಅಧಿಕಾರಿಗಳ ದಾಳಿ – ಎನ್. ಆರ್. ಪುರ: ಬಾರಿ ಮಳೆಯಿಂದ ರಸ್ತೆ ಮುಳುಗಡೆ NAMMUR EXPRESS NEWS ಚಿಕ್ಕಮಗಳೂರು: ಗೃಹಿಣಿ ಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಚಂದುಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಭಿಕ್ಷಾ (25) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ನಾಲ್ಕು ವರ್ಷದ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬುವವರ ಜೊತೆ ಸುಭಿಕ್ಷಾ ವಿವಾಹವಾಗಿದ್ದರು. ಮೃತರಿಗೆ ಎರಡುವರೆ ವರ್ಷದ ಗಂಡು ಮಗು ಇದ್ದು ಇದೀಗ ಸುಭಿಕ್ಷಾ ಕುಟುಂಬದವರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಬಿಎನ್ಎಸ್ ಕಾಯ್ದೆಯ ಪ್ರಕಾರ ತಹಶೀಲ್ದಾರ್ ಸ್ಥಳ ಮಹಜರ್ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಕುಿತ ಪ್ರಕರಣ ದಾಖಲಾಗಿದೆ. – ಗೋಣಿಕೊಪ್ಪಲು : ಕಾಫಿತೋಟದಲ್ಲಿ ಕಾಡಾನೆ ಮೃತದೇಹ ಪತ್ತೆ ಗೋಣಿಕೊಪ್ಪಲು:…

Read More

ಕಾಫಿ ನಾಡಲ್ಲಿ ರಾಜ್ಯಪಾಲರ ವಿರುದ್ಧ ಹೋರಾಟ! – ರಾಜಕೀಯ ದುರುದ್ದೇಶದಿಂದ ಪ್ರಾಸಿಕ್ಯೂಷನಿಗೆ ಅನುಮತಿ: ಖಂಡನೆ – ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಪ್ರತಿಭಟನೆ NAMMUR EXPRESS NEWS ಚಿಕ್ಕಮಗಳೂರು: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಪಕ್ಷಪಾತಿ ನಡೆಯನ್ನು ಖಂಡಿಸಿ ಹಾಗೂ ರಾಜಭವನವನ್ನು ಹಾಗೂ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತರೀಕೆರೆ, ಕಡೂರು, ಮೂಡಿಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಯಿತು. ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ರಾಜೇಗೌಡ ಇದ್ದರು. ಇನ್ನುಳಿದಂತೆ ಆಯಾ ಕ್ಷೇತ್ರದಲ್ಲಿ ಶಾಸಕರು, ನಾಯಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Read More

ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ! – ಆ.20ರಿಂದ ಅ.18ರ ವರೆಗೆ ಪಟ್ಟಿ ಪರಿಷ್ಕರಣೆ – ನೀವೂ ಸೇರಿ… ನಿಮ್ಮವರನ್ನು ಸೇರಿಸಿ…! NAMMUR EXPRESS NEWS ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೇ ತಿಂಗಳು 20ರಿಂದ ಮತಪಟ್ಟಿ ಪರಿಷ್ಕರಣೆ ನಡೆಯಲಿದೆ. ಮತಪಟ್ಟಿಗೆ ಪರಿಷ್ಕರಣೆ ವೇಳೆ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ, 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುಹದು ಎಂದು ಆಯೋಗವು ತಿಳಿಸಿದೆ. ಆ.20ರಿಂದ ಅ.18ರವರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅ.19ರಿಂದ ಅ.28ರ ವರೆಗೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ದ ಪಡಿಸಲಾಗುವುದು. ಅ.29ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗ ಅ.29ರಿಂದ ನ.28ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸುವ…

Read More