ತೀರ್ಥಹಳ್ಳಿಯಲ್ಲಿ ರೈತರ ಭಾರೀ ಪ್ರತಿಭಟನೆ ಶುರು! – ರೈತ ಸಂಘ ಸೇರಿ ಅನೇಕ ಸಂಘಗಳ ಸಾಥ್ – ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ NAMMUR EXPRESS NEWS ತೀರ್ಥಹಳ್ಳಿ: ರೈತರ ಜಾಗ ಒತ್ತುವರಿ ತೆರವು ವಿರೋಧಿಸಿ ತೀರ್ಥಹಳ್ಳಿಯ ಸಮಾನ ಮನಸ್ಕ ಸಂಘಟನೆಗಳು ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆ ಶುರುವಾಗಿದೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಜನ ಸ್ಪಂದನೆಯತ್ತ ರೈತರ ಹೋರಾಟ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೂ ಹೋರಾಟ ವ್ಯಾಪಿಸುತ್ತಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಜನ ಸಿದ್ಧತೆ ನಡೆಸಿದ್ದಾರೆ. ರೈತ ಪರ ಹೋರಾಟಕ್ಕೆ ಮೂರು ಪಕ್ಷಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ.
Author: Nammur Express Admin
ಜಿಪಂ, ತಾಪಂ ಚುನಾವಣೆಗೆ ಜೆಡಿಎಸ್ ಸಜ್ಜು! – ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ – ಬಿಜೆಪಿ ಜತೆ ಮೈತ್ರಿ ಮುಂದುವರಿಯಲಿದೆಯೇ..?! NAMMUR EXPRESS NEWS ಬೆಂಗಳೂರು: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಜೆಡಿಎಸ್ ಸಜ್ಜುಗೊಳ್ಳುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಜೆಡಿಎಸ್ ಮೈತ್ರಿ ಇದ್ದು ಮುಂಬರುವ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿಯಲಿದೆಯೇ ಎಂಬುದು ಕುತೂಹಲ ಮೂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು. ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಪಕ್ಷದ ಸಂಘಟನೆಯ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು,ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮಲ್ಲೇಶ್ ಬಾಬು ಅವರು ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು, ಶಾಸಕರು ಮತ್ತು ಮಾಜಿ ಾಸಕರು,…
ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಪಘಾತ! – ಬಾಳೆಬೈಲು ಬಳಿ ಕಾರು,ಬೈಕ್ ನಡುವೆ ಡಿಕ್ಕಿ: ಓರ್ವನಿಗೆ ಗಾಯ – ಕುಡುಮಲ್ಲಿಗೆ ಬಳಿ ಕೋಳಿ ಗೂಡ್ಸ್ ಪಲ್ಟಿ – ಬಿದರಗೋಡು ಬಳಿ ಕುಡಿತದ ಚಾಲನೆಗೆ ಇಬ್ಬರು ಬಲಿ – ಕುಡಿದು ವಾಹನ ಚಾಲನೆಗೆ ದಂಡ ಶುರು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಅಪಘಾತದ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಈ ತಿಂಗಳು ಅಪಘಾತಕ್ಕೆ ತಾಲೂಕಿನಲ್ಲಿ 10 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಚಾಲಕನಿಗೆ ಗಾಯವಾಗಿರುವ ಘಟನೆ ಪಟ್ಟಣದ ಬಾಳೆಬೈಲು ಬಳಿ ಭಾನುವಾರ ನಡೆದಿದೆ. ಭಾನುವಾರ ಮಧ್ಯಾಹ್ನ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುತ್ತಿದ್ದ ಕಾರೊಂದಕ್ಕೆ ಬೈಕ್ ಡಿಕ್ಕಿಯಾಗಿದೆ. ಬಾಳೇಬೈಲಿನ ಗುಡ್ ಲಕ್ ಗ್ರಾನೈಟ್ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸ್ವಲ್ಪ ನುಜ್ಜುಗುಜ್ಜಾಗಿದ್ದು ಬೈಕ್ ಚಾಲಕನಿಗೆ ಗಾಯವಾಗಿದೆ. ಕುಡುಮಲ್ಲಿಗೆ ಬಳಿ ಕೋಳಿ ಗೂಡ್ಸ್ ಪಲ್ಟಿ ತೀರ್ಥಹಳ್ಳಿ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕುಡುಮಲ್ಲಿಗೆ ತಿರುವಿನ ಬಳಿ…
ಸಿದ್ದರಾಮಯ್ಯಗೆ ಸಂಕಷ್ಟ: ರಾಜ್ಯದಲ್ಲಿ ಇಂದು ಹೋರಾಟ – ಕರ್ನಾಟಕದಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಕರೆ – ವಾಹನ ಸಂಚಾರ ಅಸ್ತವ್ಯಸ್ತ ಸಾಧ್ಯತೆ NAMMUR EXPRESS NEWS ಬೆಂಗಳೂರು: ಮೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಇಂದು ರಾಜ್ಯದ ಜಿಲ್ಲೆ, ತಾಲೂಕು ಕೇಂದ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಕೂಡಾ ಬೆಂಬಲ ನೀಡಿವೆ. ಸಿಎಂ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದು ಬೆಂಬಲಿಗರು ರೊಚ್ಚಿಗೆದ್ದಿದ್ದರು. . ಇವತ್ತು ಕೂಡಾ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಿ ದೊಡ್ಡ ಹೋರಾಟ ನಡೆಸಿದ್ದರು. ಇನ್ನು ಇಂದು ಕರ್ನಾಟಕದಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ವಾಹನ ಸವಾರರಿಗೆ ಪ್ರತಿಭಟನೆ ಬಿಸಿ ತಟ್ಟಲಿದೆ. ರಾಜ್ಯಪಾಲರ ಹಠಾವೋ ಕರ್ನಾಟಕ ಬಚಾವೋ ಹೆಸರಿನಲ್ಲಿ ಧರಣಿ ನಡೆಯಲಿದೆ. ಈಗಾಗಲೇ ಎಲ್ಲೆಡೆ ಪ್ರತಿಭಟನೆಗೆ ಸಿದ್ಧತೆ ನಡೆದಿದೆ.
ಮಕ್ಕಳ ನೃತ್ಯಕ್ಕೆ ತಲೆದೂಗಿದ ಜನ! – ಸ್ವಾತಂತ್ರ್ಯ ಸಂಭ್ರಮ: ರೋಟರಿ ಕ್ಲಬ್ ಅಚ್ಚುಕಟ್ಟಿನ ಆಯೋಜನೆ – ಸಾವಿರಾರು ಜನರ ಮೆಚ್ಚುಗೆ ಪಡೆದ ಮಕ್ಕಳ ನೃತ್ಯ – ನಿವೃತ್ತ ಯೋಧ ಎ. ಎಂ. ಕೃಷ್ಣಕುಮಾರ್ ಅವರಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. ಆರಗ ಜ್ಞಾನೇಂದ್ರ ಮಾತನಾಡಿ, ಇಂತಹ ಅದ್ಭುತ ಕಾರ್ಯಕ್ರಮ ಮಾಡಿದ ರೋಟರಿ ಸಂಸ್ಥೆಗೆ ಅಭಿನಂದನೆಗಳು, ದೇಶ ಭಕ್ತಿ ತುಂಬುವ ಕೆಲಸ ಆಗಿದೆ. ಸ್ವಾತಂತ್ರ್ಯ ಮಹತ್ವವನ್ನು ಪ್ರತೀ ಪೀಳಿಗೆಗೆ ಕೊಂಡೋಯ್ಯಬೇಕು.ದೇಶಕ್ಕಾಗಿ ನಾವೆಲ್ಲರೂ ಕೊಡುಗೆ ನೀಡೋಣ. ಜಗತ್ತಿನ ಮೂರನೇ ಅತೀ ದೊಡ್ಡ ಸೈನ್ಯ ಎಂದು ಬಣ್ಣನೆ ಮಾಡಿದರು. ರೋಟರಿ ಅ್ಯಕ್ಷರಾದ ಅನಿಲ್ ಮಾತನಾಡಿ, ರೋಟರಿ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸಹಕಾರ ಮಾಡಿದ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ರೋಟರಿ ಕ್ಲಬ್,…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಶ್ರಾವಣ ಹುಣ್ಣಿಮೆ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಗೆ ಸೇರಿದ ಜನರು ಬೇರೆಯವರಿಗೆ ಸಹಾಯ ಮಾಡುವುದರಿಂದ ಮಾನಸಿಕ ಶಾಂತಿಯನ್ನು ಹೊಂದುವರು. ಮನೆಯ ಹಿರಿಯ ವ್ಯಕ್ತಿಗಳ ಆಶೀರ್ವಾದವನ್ನು ನೀವು ಇಂದು ಪಡೆಯುವಿರಿ. ಇಂದು ಸಂಜೆ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಈ ದಿನ ನೀವು ಹೆಚ್ಚಿನ ಓಡಾಟ ಮಾಡಬೇಕಾಗುತ್ತದೆ ಮತ್ತು ಹೆಚ್ಚು ಹಣ ಖರ್ಚಾಗಬಹುದು. ** ವೃಷಭ ರಾಶಿ : ವೃಷಭ ರಾಶಿಗೆ ಸೇರಿದ ಜನರು ಇಂದು ತಮ್ಮ ಕುಟುಂಬದವರೊಂದಿಗೆ ಸಂತೋಷದ ಸಮಯವನ್ನು ಕಳೆಯುವರು ಮತ್ತು ಈ ದಿನ ನೀವು…
ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ! – ಎರಡು ದಿನಗಳಿಂದ ತುಂತುರು ಮಳೆ: ಜಾಸ್ತಿ ಆಗುತ್ತೆ ಮಳೆ – ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಸುದ್ದಿ ಓದಿ…! NAMMUR EXPRESS NEWS ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕೆಲವೊಮ್ಮೆ ಗಾಳಿ ವೇಗವು ಬೀಸಲಿದೆ. ರಾಜ್ಯಾದ್ಯಂತ ಇಂದು ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲೂ ವ್ಯಾಪಕ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಚದುರಿದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಬೀರ್ ಚದುರಿದಂತೆ ಾರಿ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ!.. ಎಚ್ಚರ! – ಡೆಂಘಿ ಆರ್ಭಟದ ನಡುವೆ ಝಿಕಾ ವೈರಸ್ ಅಬ್ಬರ – ಜನರಿಗೆ ಅರೋಗ್ಯ ಇಲಾಖೆ ಮಾಹಿತಿ NAMMUR EXPRESS NEWS ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಸೊಳ್ಳೆಯಿಂದ ಹರಡುವ ಝಿಕಾ ಪತ್ತೆ ಬೆನ್ನಲ್ಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮನೆಯ ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ. ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಜೋನ್ ಎಂದು ಪರಿಗಣಿಸಲಾಗುವುದು. ಈಗಾಗಲೆ ರಾಜ್ಯದಲ್ಲಿ 7 ಝಿಕಾ ವೈರಸ್ ಪತ್ತೆಯಾಗಿದೆ. ಸದ್ಯ ಝಿಕಾ ವೈರಸ್ ಭೀತಿ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದರ ಬಗ್ಗೆ ಅಗತ್ಯ ಕ್ರಮ ವಹಿಸಲು ಮುಂದಾಗಿದೆ. ಈಡಿಸ್ ಸೊಳ್ಳೆಯಿಂದ ಹರಡುವ ಝಿಕಾ ಪತ್ತೆ ಬೆನ್ನಲ್ಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ, ದದ್ದುಗಳು ಕಾಣಿಸಿಕೊಳ್ಳೋದು ಝಿಕಾ ವೈರಸ್ ಗುಣ ಲಕ್ಷಣ. ಇನ್ನು ಬಹುತೇಕ ಝೀಕಾ…
ರತ್ನಾಕರ್ ಶೆಟ್ಟಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಟ್ಟು – ಎಲ್ಲರ ಕಷ್ಟಕ್ಕೆ ಸ್ಪಂದಿಸುವ ದತ್ತಣ್ಣ ಅವರಿಗೆ ಸ್ಥಾನ ನೀಡಲು ಬೆಟ್ಟಮಕ್ಕಿ, ಸೀಬಿನಕೆರೆ ಭಾಗದ ಜನರ ಮನವಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಭವ್ಯ ಇತಿಹಾಸ ಇದೆ. ಅನೇಕ ಹಿರಿಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಹಿರಿಯರಾದ ದಿವಂಗತ ಬಿ ರವೀಂದ್ರ ಶೆಟ್ಟಿ, ಸಹೋದರಿ ವಿನೋದ ಶೆಟ್ಟಿ ಸೇರಿದಂತೆ ಅನೇಕರು ಅಧಿಕಾರ ನಿರ್ವಹಿಸಿದ್ದಾರೆ, ಹಾಗೆಯೇ ಯಶಸ್ವಿಯಾಗಿದ್ದಾರೆ. 3ನೇ ವಾರ್ಡಲ್ಲಿ ರತ್ನಾಕರ್ ಶೆಟ್ಟಿ ಅವರು ಜಯಶಾಲಿಯಾಗಿ ಪಟ್ಟಣ ಪಂಚಾಯತ್ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಕಷ್ಟದ ಹೊತ್ತಿನಲ್ಲಿ ಎಲ್ಲರ ಮನೆ ಬಾಗಿಲಿಗೆ ಬಂದು ಸಾಂತ್ವನ ಹೇಳುವ ರತ್ನಾಕರ್ ಶೆಟ್ಟಿ ( ದತ್ತಣ್ಣ) ಅಂತವರು ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ. ಬೆಟ್ಟಮಕ್ಕಿಯ ಭೂತರಾಯನ ಸೇವೆಯಲ್ಲಿ ಸದಾ ನಿರತರಾಗಿರುವ ಪಾತ್ರರಾದ ಜನರ ಹೃದಯದಲ್ಲಿರುವ ತ್ನಾಕರ್ ಶೆಟ್ಟಿ ಅಧ್ಯಕ್ಷರಾಗು ಸಮರ್ಥ ಅಭ್ಯರ್ಥಿ. ಪಕ್ಷ ಅವರನ್ನು ಪರಿಗಣಿಸ…
ರೈತರ ಜಾಗ ಒತ್ತುವರಿ: ಶೃಂಗೇರಿ ಕ್ಷೇತ್ರ ಬಂದ್! – ಕೊಪ್ಪ, ಎನ್. ಆರ್. ಪುರ, ಶೃಂಗೇರಿ ಸಂಪೂರ್ಣ ಸ್ತಬ್ದ – ರೈತರ ಹೋರಾಟಕ್ಕೆ ಜನರ ಬೆಂಬಲ – ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ NAMMUR EXPRESS NEWS ಶೃಂಗೇರಿ: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ರೈತರ ಜಾಗ ಒತ್ತುವರಿ ವಿರೋಧಿಸಿ ಕರೆ ಕೊಟ್ಟಿರುವ ಶೃಂಗೇರಿ ಕ್ಷೇತ್ರ ಬಂದ್ ಯಶಸ್ವಿಯಾಗಿದೆ. ಕೊಪ್ಪ, ಎನ್. ಆರ್. ಪುರ, ಶೃಂಗೇರಿ ತಾಲೂಕು ಸಂಪೂರ್ಣ ಸ್ತಬ್ದವಾಗಿದ್ದು ಪಕ್ಷಾತೀತವಾಗಿ ಹೋರಾಟ ಕಂಡು ಬಂತು. ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗಿಯಾದರು. ಅಂಗಡಿ ಮುಂಗಟ್ಟುಗಳು ಬಂದ್ ಮೂರು ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಸ್ ಸೇವೆ ಸಂಪೂರ್ಣ ಬಂದ್ ಆಗಿದ್ದವು. ಶಾಲಾ ಕಾಲೇಜುಗಳಿಗೆ ಕೆಲವೆಡೆ ರಜೆ ಘೋಷಣೆ ಮಾಡಲಾಗಿತ್ತು. ಎಲ್ಲೆಡೆ ಜನ ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಭಾಗಿಯಾದರು. ಜನ ಸ್ಪಂದನೆಯತ್ತ ರೈತರ ಹೋರಾಟ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೂ ಹೋರಾಟ…