ಹೆಬ್ರಿ ಗ್ರಾಮಕ್ಕೆ ಸ್ಕ್ಯಾನಿಂಗ್ ಸೆಂಟರ್ ಇಲ್ಲ! – ಸ್ಕ್ಯಾನಿಂಗ್ ಸೆಂಟರ್ ಇಲ್ಲದೆ ರೋಗಿಗಳ ಪರದಾಟ – ಹೆಬ್ರಿ ಗ್ರಾಮಕ್ಕೆ ಒಂದು ಸ್ಕ್ಯಾನಿಂಗ್ ಸೆಂಟರ್ ಬೇಕು: ಅಭಿಯಾನ NAMMUR EXPRESS NEWS ಹೆಬ್ರಿ: ಹೆಬ್ರಿಯಲ್ಲಿ ತಾಲೂಕು ಇದ್ದರೂ ಸ್ಕ್ಯಾನಿಂಗ್ ಸೆಂಟರ್ ಕೊರತೆ ಎದ್ದು ಕಾಣುತ್ತಿದೆ. ಹೆಬ್ರಿ ಗ್ರಾಮದಲ್ಲಿ 10 ಕ್ಕೂ ಅಧಿಕ ಖಾಸಗಿ ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಮುದಾಯ ಆರೋಗ್ಯ ಕೇಂದ್ರ, 1 ಖಾಸಗಿ ಆಸ್ಪತ್ರೆಗಳು ಹೆಬ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇಷ್ಟು ವ್ಯವಸ್ಥೆ ಇದ್ದರೂ ಸಹ ರೋಗಿಗಳಿಗೆ ವೈದ್ಯರು ಒಂದು ಸ್ಕ್ಯಾನಿಂಗ್ ಮಾಡಲಿಕ್ಕೆ ಹೇಳಿದರೆ ರೋಗಿಗಳು ಹೆಬ್ರಿಯಿಂದ ಕಾರ್ಕಳಕ್ಕೆ ಅಥವಾ ಬ್ರಹ್ಮಾವರ, ಉಡುಪಿ, ಮಣಿಪಾಲ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಕೊಂಡು ಬರಬೇಕಾಗುತ್ತದೆ. ಹೆಬ್ರಿ, ಚಾರಾ, ಶಿವಪುರ, ಕುಚ್ಚೂರು, ಬೇಳಂಜೆ, ಸೋಮೇಶ್ವರ, ಸೀತಾದಿ, ಮದ್ರಾಡಿ, ಇಲ್ಲಿ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಳಿಗಾಗಿ ಬಂದರೆ ಅವರು ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೆಬ್ರಿ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿರುತ್ತಾರೆ. ಹೆಬ್ರಿ ಗ್ರಾಮವು…
Author: Nammur Express Admin
ಒತ್ತುವರಿ ತೆರವು ವಿರೋಧಿಸಿ ತೀರ್ಥಹಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ – ಆ.19ರಿಂದ ತೀರ್ಥಹಳ್ಳಿಯ ಬಾಳೇಬೈಲಿನ ಎ.ಪಿ.ಎಂ.ಸಿ. ಇಂದ ಪ್ರತಿಭಟನಾ ಮೆರವಣಿಗೆ ಆರಂಭ – ತಾಲ್ಲೂಕು ಕಛೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆ: ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಲ್ಲಿ ಒತ್ತುವರಿ ತೆರವು ವಿರೋಧಿಸಿ ತೀರ್ಥಹಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಆ.19ರಿಂದ ತೀರ್ಥಹಳ್ಳಿಯ ಬಾಳೇಬೈಲಿನ ಎ.ಪಿ.ಎಂ.ಸಿ. ಇಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ತಾಲ್ಲೂಕು ಕಛೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಾವಿರಾರು ಮಂದಿ ರೈತರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ರೈತರ ಬೃಹತ್ ಪ್ರತಿಭಟನೆ ರೈತರು ಹೇಳಿದ್ದೇನು? ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಅಂದರೆ ಮಳೆನಾಡಿನಲ್ಲಿ ನಮ್ಮ ಕಾಲಘಟ್ಟದಲ್ಲಿ ಹಿಂದೆಂದಿಗೂ ಕಂಡು ಕೇಳರಿಯದಂತಹ ಈ ಮಳೆಗಾಲದಲ್ಲಿ ಅತ್ಯಂತ ಭೀಕರ ಅನಾಹುತಗಳು ಸೃಷ್ಟಿಯಾಗುತ್ತಿವೆ. ಬಿರುಗಾಳಿ, ಮೇಘ ಸ್ಫೋಟ, ಭೂ ಕುಸಿತ, ಪ್ರವಾಹ ಇತ್ಯಾದಿ ನೈಸರ್ಗಿಕ ಆಪತ್ತುಗಳು ಸಹಜ ಮಾನ್ಸೂನ್ ಮಾರುತುಗಳಿಂದ ಉಂಟಾಗುವುದು ಅಪರೂಪದ ವಿದ್ಯಮಾನ: ಆದರೆ ಇತ್ತೀಚಿನ ಹವಾಮಾನ ವೈಪರೀತ್ಯಗಳು, ಜಾಗತಿಕ ತಾಪಮಾನ…
ನರ್ಸಿಂಗ್ ಕಾಲೇಜುಗಳಿಗೆ ದಾಖಲಾಗಲು ಸುವರ್ಣಾವಕಾಶ – ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಲಭ್ಯ – ಈಗ ಅತೀ ಹೆಚ್ಚು ಬೇಡಿಕೆ ಇರುವ ನರ್ಸಿಂಗ್ ಕೋರ್ಸ್ NAMMUR EXPRESS NEWS 2024 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದ್ದು, ನರ್ಸಿಂಗ್ ಕಾಲೇಜುಗಳಲ್ಲಿ PCBSc ಮತ್ತು GNM ಕೋರ್ಸುಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನೂ ಕೆಲವೊಮ್ಮೆ ಹಲವು ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯಿಂದಾಗಿ ಅತ್ಯುತ್ತಮ ಕೋರ್ಸ್ ಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಅವಕಾಶಗಳು ಮತ್ತು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ PCBSc ಮತ್ತು GNM ಕೋರ್ಸುಗಳಿಗೆ ದಾಖಲಾಗಲು ಬಯಸುವವರು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು. Admission is open 2024 PCBSc And GNM. For admission enquiries Plz contact 8310079905 7483185632
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನೂತನ ಸಾರಥಿ ಯಾರು? – ನಡೆಯುತ್ತಾ ಭಾರೀ ರಾಜಕೀಯ ಗೇಮ್ ಪ್ಲಾನ್? – ಆ. 27ಕ್ಕೆ ತೀರ್ಥಹಳ್ಳಿ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಪ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಆಗಸ್ಟ್ 27ರಂದು ದಿನಾಂಕ ನಿಗದಿಯಾಗಿದೆ. ಆ. 27ಕ್ಕೆ ಬೆಳಿಗ್ಗೆ 11 ರಿಂದ 12 ನಾಮಪತ್ರ ಸಲ್ಲಿಕೆ, 12-30ರಿಂದ 12-45 ನಾಮಪತ್ರ ಪರಿಶೀಲನೆ, 12-45ರಿಂದ 1 -00 ವರೆಗೆ ನಾಮಪತ್ರ ವಾಪಾಸ್ ಪಡೆಯಲು ಅವಕಾಶ. ನಂತರ 1 ಗಂಟೆಗೆ ಅಗತ್ಯ ಬಿದ್ದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಮೀಸಲಾತಿ ಏನೇನಿದೆ? ಪ.ಪಂ.ನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬನಮ್ ಹೆಸರು ಮುಂಚೂಣಿಯಲ್ಲಿದೆ. ಅಧ್ಯಕ್ಷರ ಸ್ಥಾನಕ್ಕೆ ಯಾರು ಯಾರು ಆಕಾಂಕ್ಷಿಗಳು? ತೀರ್ಥಹಳ್ಳಿ…
ಸ್ವಾತಂತ್ರ್ಯ ಹಬ್ಬದಲ್ಲಿ ದೇಶ ಪ್ರೇಮ ಮೆರೆದ ತೀರ್ಥಹಳ್ಳಿ ಜನ! – 78ನೇ ಸ್ವಾತಂತ್ರೋತ್ಸವದ ಸವಿ ನೆನಪಿಗೆ 78ನೇ ಬಾರಿ ಫ್ರಾನ್ಸಿಸ್ ರಕ್ತದಾನ – ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ವತಿಯಿಂದ ವೃದ್ಧಾಶ್ರಮಕ್ಕೆ ವಸ್ತುಗಳ ವಿತರಣೆ – ಸಂಗೊಳ್ಳಿ ರಾಯಣ್ಣನ ವೇಷ ಧರಿಸಿದ ಪುಟಾಣಿ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಎಲ್ಲೆಡೆ ಸ್ವಾತಂತ್ರ್ಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅನೇಕ ಕಡೆ ವಿವಿಧ ಸಾಮಾಜಿಕ ಕೆಲಸಗಳು ನಡೆದಿವೆ. 78ನೇ ಬಾರಿ ಫ್ರಾನ್ಸಿಸ್ ರಕ್ತದಾನ..! 78ನೇ ಸ್ವಾತಂತ್ರೋತ್ಸವದ ಸವಿ ನೆನಪಿಗೆ 78ನೇ ಬಾರಿ ರಕ್ತದಾನ ಮಾಡಿದ ಶಿವಮೊಗ್ಗ ಜಿಲ್ಲಾ ಟಿ ಸಿ ಸಿ ಓ ಎಚ್ ಜಿಲ್ಲಾ ಅಧ್ಯಕ್ಷರು ಆದ ಪ್ರಾನ್ಸಿಸ್ ಅವರು ಇದೀಗ ಎಲ್ಲರಿಗೂ ಮಾದರಿ ಆಗಿದ್ದಾರೆ. ಸಂಗೊಳ್ಳಿ ರಾಯಣ್ಣನ ವೇಷ ಧರಿಸಿದ ಪುಟಾಣಿ! ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಹೆಮ್ಮೆಯ ಕನ್ನಡಿಗ, ರಾಣಿ ಚೆನ್ನಮ್ಮನ ಬಂಟನಾಗಿ ಬ್ರಿಟೀಷರಿಗೆ ಸಿಂಹಸ್ವಪ್ನನಾಗಿದ್ದ ಕ್ರಾಂತಿ ಕಿಡಿ “ಸಂಗೊಳ್ಳಿ ರಾಯಣ್ಣ” ಜನ್ಮ ದಿನದಂದು ಸ್ವಾರ್ಥವಿಲ್ಲದ ಸವಾಮಿನಿ್ಟೆ, ಸಾಮಾಜಿಕ…
ಟಾಪ್ ನ್ಯೂಸ್ ಕರಾವಳಿ ಕಾರಿನಲ್ಲಿ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವು! – ಮಣಿಪಾಲದಲ್ಲಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಸಾವು – ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕಳ್ಳತನ – ಕರಾವಳಿಯ ಮೂವರನ್ನು ವಿದೇಶದಲ್ಲಿ ಮೂವರನ್ನು ಕೂಡಿಟ್ಟು ಆನ್ಲೈನ್ ವಂಚನೆ ದಂಧೆ NAMMUR EXPRESS NEWS ಮಣಿಪಾಲ: ಕಾರಿನಲ್ಲೇ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಆನಂದ (37) ಸಾವನ್ನಪ್ಪಿರುವವರು. ಇವರು ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿ ರಾತ್ರಿ ಮಲಗಿಕೊಂಡಿದ್ದರು.ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕಳ್ಳತನ! ಕುಂದಾಪುರ: ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ನುಗ್ಗಿ ಸಾವಿರರೂ ರೂ. ನಗದು ಕಳ್ಳತನ ಮಾಡಿರುವ ಬಗ್ಗೆ ಆ. 17 ರಂದು ಶನಿವಾರ ಬಳಿಗ್ಗೆ ೆಳಕಿಗೆ ಬಂದಿದೆ. ಇತ್ತೀಚಿಗೆ 7 ಕೋಟಿ…
ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ! – ಮುಡಾ ತನಿಖೆಗೆ ರಾಜ್ಯಪಾಲರ ಒಪ್ಪಿಗೆ: ಮುಂದೆ ಏನಾಗುತ್ತೆ? – ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ NAMMUR EXPRESS NEWS ಬೆಂಗಳೂರು: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇನ್ನೊಂದು ಸುತ್ತಿನ ರಾಜಕೀಯ ಕ್ಷೋಭೆಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಇಂದು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದ್ದರು. ದೂರುದಾರ ಅಬ್ರಹಾಂ ಅವರನ್ನು ಇಂದು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಶನ್‌ಗೆ ದೂರು ದಾಖಲಿಸಲು ಅನುಮತಿ ನೀಡಿದರು. ಕಳೆದ ಒಂದು ವಾರದಿಂದ ರಾಜಭವನದ ನಡೆ ನಿಗೂಢವಾಗಿತ್ತು. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಯಾವ ಕ್ರಮ ಜರುಗಿಸಲಿದ್ದಾರೆ ಎಂಬ ಕುತೂಹಲ ಇತ್ತು. ದಿಲ್ಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಕಳೆದ ವಾರ ಬೆಂಗಳೂರಿಗೆ ಮರಳಿದ ಬಳಿಕ, ತಾವು ಕೊಟ್ಟಿದ್ದ ೋಟೀಸ್‌ಗೆ ರಾಜ್ಯ ಸಚಿವ ಸಂಪುಟದ…
ತೀರ್ಥಹಳ್ಳಿಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ರಂಗು! – ದೇಗುಲಗಳಲ್ಲಿ ಜನವೋ ಜನ: ಮಹಿಳೆಯರ ವಿಶೇಷ ಪೂಜೆ – ಮಾರಿಕಾಂಬೆ, ಇಂದಾವರ ಮಹಾಲಕ್ಷ್ಮಿ ದೇಗುಲಕ್ಕೆ ಸಾವಿರಾರು ಜನ – ಮನೆ ಮನೆಯಲ್ಲೂ ಪೂಜೆ: ಕಚೇರಿಗಳಲ್ಲಿ ಆಚರಣೆ NAMMUR EXPRESS NEWS ತೀರ್ಥಹಳ್ಳಿ: ವರ ಮಹಾಲಕ್ಷ್ಮಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದು, ತೀರ್ಥಹಳ್ಳಿ ತಾಲ್ಲೂಕಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು. ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಸನ್ನಿದಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಭಕ್ತ ಜನರ ಶ್ರೇಯೋಭಿವೃದ್ಧಿಗಾಗಿ ಶ್ರೀಯುತ ಜಕ್ಕಣ್ಣಗೌಡರ್ ತಹಶೀಲ್ದಾರ್ ತೀರ್ಥಹಳ್ಳಿ, ಹಾಗು ನಿತ್ಯ ಅನ್ನಸಂತರ್ಪಣಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ಅಮ್ಮನವರಿಗೆ ಉಡಿ ತುಂಬಿ, ಮುತ್ತೈದೆಯರಿಗೆ ಬಾಗಿನ ಸಮರ್ಪಿಸಲಾಯಿತು. ಇಂದಿನ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಸುಮಾರು 700 ಕ್ಕೂ ಹೆಚ್ಚು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿ, ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿಸಲಾಯಿತು. ಇಂದಾವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾವಿರಾರು ಜನ ತೀರ್ಥಹಳ್ಳಿ: ತಾಲೂಕಿನ ಇಂದಾವರದಲ್ಲಿ ನೆಲೆಸಿರುವ ಶ್ರೀ ಮಹಾ…
ಕಮ್ಮರಡಿ, ರಾಮಕೃಷ್ಣಪುರದಲ್ಲಿ ಸ್ವಾತಂತ್ರ್ಯ ಹಬ್ಬದ ಸಂಭ್ರಮ! – ಸರ್ಕಾರಿ, ಖಾಸಗಿ ಸಾರ್ವಜನಿಕರಿಗೆ ಸಿಹಿ ಹಂಚಿ ಆಚರಣೆ – ಸಾಧಕರಿಗೆ ಸನ್ಮಾನ: ಎಲ್ಲೆಲ್ಲೂ ಸ್ವಾತಂತ್ರ್ಯ ಹಬ್ಬ – ಕಲಿತ ಶಾಲೆಗೆ ಸೇವೆ ನೀಡಿದ ರಾಮಕೃಷ್ಣಪುರದ ಸಮರ್ಪಣಾ ತಂಡ NAMMUR EXPRESS NEWS ತೀರ್ಥಹಳ್ಳಿ: ಆಟೋ ಚಾಲಕರು ಮತ್ತು ಮಾಲೀಕರ ಸಂಘ ಕಮ್ಮರಡಿ (ಕೊಪ್ಪ ಸರ್ಕಲ್ ) ಇವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸುವ ಮೂಲಕ ಯಶಸ್ವಿಯಾಗಿದೆ. ಕಮ್ಮರಡಿಯಲ್ಲಿನ ಅಂಗನವಾಡಿ, ವಿಶ್ವತೀರ್ಥ ಪ್ರೌಢ ಶಾಲೆ , ಮಾದರಿ ಪ್ರಾರ್ಥಮಿಕ ಶಾಲೆ, ಬಾನೊಳ್ಳಿ ಹಿರಿಯ ಪ್ರಾರ್ಥಮಿಕ ಶಾಲೆ, ಚಿಕ್ಕಳೂರು ಪ್ರಾರ್ಥಮಿಕ ಶಾಲೆ, ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಯಶಸ್ವಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ೀಲಕಂ ಭಟ್ರು (ಹಿರಿಯ ನಾಟಿ ವೈದ್ಯರು )ಹಾಲುಗೋಡು ಕಮ್ಮರಡಿ, ಸಮರ್ಥ್ ಹೆಬ್ಬಾರ್ಡಿ (ಸಲಹೆಗಾರರು ), ಶ್ರೀಧರ್ ಶಿಕ್ಷಕರು, ವೆಂಕಟೇಶ್ ಶಿಕ್ಷಕರು, ಜ್ಯೋತಿ ಶಿಕ್ಷಕರು, ಚಂದ್ರು ನಾಯಕ್ (ಆಟೋ ಚಾಲಕರ ಸಂಘದ ಅಧ್ಯಕ್ಷರು )ಕಮ್ಮರಡಿ ಕೊಪ್ಪ ಸರ್ಕಲ್…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಸುತ್ತಮುತ್ತಲಿನ ವಾತಾವರಣ ಸಂತೋಷದಿಂದ ಕೂಡಿರಲಿದೆ. ಆದರೆ ತಾಯಿಯೊಂದಿಗೆ ಈ ದಿನ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದಿರಿ. ಸಂಜೆ ಮನೆಗೆ ಅತಿಥಿಗಳ ಆಗಮನದಿಂದಾಗಿ ಮನೆಯ ಎಲ್ಲಾ ಸದಸ್ಯರು ಕಾರ್ಯನಿರತವಾಗಿರುವರು. ನೀವು ಈ ದಿನ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದರೆ ಸರಿಯಾಗಿ ಯೋಚಿಸಿದ ನಂತರವೇ ಪ್ರಯಾಣವನ್ನು ಕೈಗೊಳ್ಳಿ, ಇಲ್ಲದಿದ್ದರೆ ಕಷ್ಟ ಎದುರಾಗಬಹುದು. ** ವೃಷಭ ರಾಶಿ : ಪ್ರೀತಿಯ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಆದರೆ ಮನೆಯ ಸದಸ್ಯರ ಕಾರಣದಿಂದಾಗಿ ಸಮಸ್ಯೆ ಎದುರಾಗಬಹುದು. ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ ಮತ್ತು ಸಹೋದರರೊಂದಿಗೆ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ರ್ಚಯನ್ನು ನಡೆಸುವಿರಿ **…