ಹೊಸದುರ್ಗ ಸ್ವಾತಂತ್ರ್ಯೋತ್ಸವದಲ್ಲಿ ಪ್ರಕೃತಿ ಉಳಿಸಲು ಪಣ – ಮನುಷ್ಯ ಪ್ರಕೃತಿಯ ವಿರುದ್ಧ ಹೋಗದೆ, ಅದನ್ನು ಉಳಿಸುವ ಕಾರ್ಯ ಮಾಡೋಣ: ಶಾಸಕ ಬಿ.ಜಿ. ಗೋವಿಂದಪ್ಪ ಕರೆ – ಸದ್ಗುರು ಪ್ರದೀಪ್ ಸೇರಿ ಹಲವು ಸಾಧಕರಿಗೆ ಸನ್ಮಾನದ ಗೌರವ NAMMUR EXPRESS NEWS ಹೊಸದುರ್ಗ: ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯರಿಗೂ ಸಡಗರ ಸಂಭ್ರಮದ ದಿನವಾಗಿದೆ. ಈ ಬಾರಿ ರಾಜ್ಯದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳ ನದಿಗಳು ಮೈದುಂಬಿ ಜಲಾಶಯಗಳು ಭರ್ತಿಯಾಗಿ ಹರಿಯುತ್ತಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮನುಷ್ಯ ಪ್ರಕೃತಿಯ ವಿರುದ್ಧ ಹೋಗದೆ, ಅದನ್ನು ಉಳಿಸಿ ಬೆಳೆಸುವ ಕಾರ್ಯಮಾಡಬೇಕು. ಸ್ವಾತಂತ್ರ್ಯ ದಿನದಂದು ಪ್ರಕೃತಿ ಪ್ರೇಮಿಗಳಾಗಲು ಸಂಕಲ್ಪ ಮಾಡೋಣ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಲಹೆ ನೀಡಿದರು. ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ’78 ನೇ ಸ್ವಾತಂತ್ರ್ಯ ದಿನಾಚರಣೆ ‘ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವ ಒಂದು ದಿನದ ಆಚರಣೆ ಆಗಬಾರದು, ಶಾಲಾ ಕಾಲೇಜುಗಳಲ್ಲಿ…
Author: Nammur Express Admin
ತೀರ್ಥಹಳ್ಳಿ: ಸಮಾಜ ಸೇವೆ ಮೂಲಕ ರಾಘವೇಂದ್ರ ಹುಟ್ಟು ಹಬ್ಬ! – ತೀರ್ಥಹಳ್ಳಿ ಬಿಜೆಪಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ – ರಾಘವೇಂದ್ರ ಅವರ ಸೇವೆಗೆ ಮುಖಂಡರ ಮೆಚ್ಚುಗೆ: ಶುಭಾಶಯ ಸಲ್ಲಿಕೆ NAMMUR EXPRESS NEWS ತೀರ್ಥಹಳ್ಳಿ: ಬಿಜೆಪಿ ಯುವ ಮೋರ್ಚ ತೀರ್ಥಹಳ್ಳಿ ಮಂಡಲ ವತಿಯಿಂದ ಸಂಸದ ಬಿ ವೈ ರಾಘವೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಹಾಗೂ ತೀರ್ಥಹಳ್ಳಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ನಡೆಯಿತು. ತೀರ್ಥಹಳ್ಳಿ ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ಬಿಜೆಪಿ ಪ್ರಮುಖ ಮುಖಂಡರಾದ ಚಂದವಳ್ಳಿ ಸೋಮಶೇಖರ್, ಮಧುರಾಜ್ ಹೆಗ್ಡೆ, ಸತ್ಯೆ0ದ್ರ ನಾಯಕ್, ರಕ್ಷಿತ್ ಮೇಗರವಳ್ಳಿ, ಯತಿರಾಜ್( ನವೀನ್ ), ವಿನುತ ಗೌಡ, ಗುರು, ಪವನ್,…
ವರಮಹಾಲಕ್ಷ್ಮೀ ಹಬ್ಬ: ಲಕ್ಷ್ಮಿಗೆ ದುಡ್ಡಿನ ಅಲಂಕಾರ! – ಗರಿ ಗರಿ ನೋಟುಗಳಿಂದ ಬನಶಂಕರಿ ದೇವಿಗೆ ಅಲಂಕಾರ – ಲಕ್ಷ್ಮಿಗೆ ವಿವಿಧ ಸೀರೆ ಉಡಿಸಿ ಸೇವೆ: ಎಲ್ಲೆಲ್ಲೂ ಜನವೋ ಜನ NAMMUR EXPRESS NEWS ನಾಡಿನಾದ್ಯಂತ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮನಗಳಲ್ಲೂ ಕಳೆಗಟ್ಟಿದೆ. ದೇಗುಲಗಳಂತೂ ಹೂಗಳಿಂದ ಝಗಮಗ ಅಂತಿವೆ. ಮನೆ ಮನೆಯಲ್ಲೂ ದೇವಿಗೆ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಬನಶಂಕರಿ ದೇವಿಗೆ ಮಾಡಿದ್ದ ನೋಟುಗಳ ಅಲಂಕಾರ ಎಲ್ಲರ ಗಮನ ಸೆಳೆದಿದೆ. ದೇವಿಯ ಹಿಂಬದಿ ಹಾಗೂ ಅಕ್ಕಪಕ್ಕ ನೋಟುಗಳಿಂದ ಅಲಂಕಾರ ಮಾಡಿದ್ದು, ಭಕ್ತರು ಬೆಳಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವಿಯನ್ನ ಕಣ್ತುಂಬಿಕೊಂಡಿದ್ದಾರೆ. ಬನಶಂಕರಿ ಅಮ್ಮನವರಿಗೆ ಒಂದು ಲಕ್ಷ ರೂ. ಹಣದಿಂದ ವಿಶೇಷ ಅಲಂಕಾರ ಮಾಡಲಾಗಿದೆ. 50, 10 ಮತ್ತು 20 ರೂ ಬಳಸಿಕೊಂಡು ಅಲಂಕಾರ ಮಾಡಿ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸುತ್ತಿದ್ದು, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಬಾಗಿನ ಕೊಟ್ಟು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸಿದ್ದರೆ. ವಿಭಿನ್ನ…
ವರ ಮಹಾಲಕ್ಷ್ಮಿ ಹಬ್ಬಕ್ಕೆ ಹಲವೆಡೆ ಭಾರೀ ಮಳೆ! – ಇನ್ನು ಒಂದು ವಾರ ಸಣ್ಣ ಮಳೆ ಸಾಧ್ಯತೆ – ಜುಲೈ ಅಲ್ಲಿ ಅಬ್ಬರಿಸಿದ ಮಳೆ ಆಗಸ್ಟ್ ಅಲ್ಲಿ ನಾಪತ್ತೆ! – ರಾಜ್ಯದಲ್ಲಿ ಬಹುತೇಕ ಡ್ಯಾಮ್ ಫುಲ್ ಫುಲ್ NAMMUR EXPRESS NEWS ಬೆಂಗಳೂರು: ವರ ಮಹಾಲಕ್ಷ್ಮಿ ಹಬ್ಬಕ್ಕೆ ಮಳೆ ಮತ್ತೆ ಪ್ರತ್ಯಕ್ಷವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ರಾಜ್ಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಮಳೆಯಾಗುವ ಮುನ್ಸೂಚನೆಗಳಿವೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಸರಾಸರಿ ಸಾಧಾರಣ ಮಳೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಆಧರಿಸಿ ಈ ಮಾಹಿತಿ ನೀಡಲಾಗಿದೆ. ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಯಾಪಕವಾಗಿ ಸಾಧಾರಣ…
ಕಾಂತಾರ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ – ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ಸಿನಿಮಾ – ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ: ರಿಷಬ್ ಶೆಟ್ಟಿಗೆ ಲಕ್ NAMMUR EXPRESS NEWS ನವದೆಹಲಿ: ಭಾರತ ಪ್ರತಿಷ್ಠಿತ ಸಿನಿಮಾ ರಂಗದ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡದ ‘ಕಾಂತಾರ’ ಚಲನಚಿತ್ರವು ಪ್ರಶಸ್ತಿ ಬಾಚಿಕೊಂಡಿದೆ. ಡಿವೈನ್ ಸ್ಟಾರ್, ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದಿದ್ದಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2024 ವಿಜೇತ ಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಇದು ಬಿಟ್ರೆ, ಮತ್ತೆ ಕನ್ನಡಕ್ಕೆ ಪ್ರಶಸ್ತಿಗಳೇ ಬಂದಿರಲಿಲ್ಲ. ಇನ್ನು ಪೈಪೋಟಿಯಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮುಟಿ ಅವರ ‘ನನ್ನಕಲ್ ನೆರತು ಮಯಕ್ಕಂ ‘ ಮತ್ತು ‘ರೋರ್ಸ್ಟಾಚ್’ ಚಿತ್ರಗಳಿಗೆ ಅವರ ಹೆಸರನ್ನು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಆಯ್ಕೆ ಮಾಡಲಾಗಿತ್ತು
ಶೀಘ್ರ ದಲ್ಲಿ ಜಿಲ್ಲಾ ಮತ್ತು ತಾಪಂ ಚುನಾವಣೆ?! – ಸರ್ಕಾರದಿಂದ ಸಿದ್ಧತೆ: ಕೋರ್ಟ್ ಕಟಕಟೆಗೆ ಮೀಸಲಾತಿ – ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ NAMMUR EXPRESS NEWS ಗದಗ: ರಾಜ್ಯದಲ್ಲಿ ಶೀಘ್ರ ಜಿಲ್ಲಾ ಮತ್ತು ತಾಪಂ ಚುನಾವಣೆ ಸರ್ಕಾರ ನಡೆಸಲಿದೆ ಎಂದು ಕಾನೂನು ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ. ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಈಗ ಸಿದ್ಧತೆ ನಡೆಸಿದ್ದೇವೆ ಎಂದರು. ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ಕ್ರಮ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹಾಗೂ ಮತ್ತಿತರರು 3 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದ ಎಲ್ಲ 31 ಜಿಪಂ ಹಾಗೂ ತಾಪಂ ಕ್ಷೇತ್ರ ಪುನರ್ ವಿಂಗಡಣೆ…
ಕರಾವಳಿಯಲ್ಲಿ ಸ್ವಾತಂತ್ರ್ಯ ಹಬ್ಬದ ಸಡಗರ! – ಕಾರ್ಕಳದ ಕ್ರಿಯೇಟಿವ್, ಉಡುಪಿ ತ್ರಿಶಾ ಕಾಲೇಜಿನಲ್ಲಿ ಸ್ವಾತಂತ್ರ್ಯ ಹಬ್ಬ ಬಾರ್ಕೂರು ರೋಟರಿ ಕ್ಲಬ್ ಸ್ವಾತಂತ್ರೋತ್ಸವ! – ಸೈನಿಕರಿಗೆ ಗೌರವಾರ್ಪಣೆ: ತ್ರಿವರ್ಣದ ರಂಗು NAMMUR EXPRESS NEWS ಕಾರ್ಕಳ : ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸ್ವಾತಂತ್ರ್ಯದ ಕನಸುಗಾರರು ಸ್ವಾತಂತ್ರ್ಯವನ್ನು ನಮಗೆ ಧಾರೆಯೆರೆದರು. ಅದನ್ನು ನಾವು ಉಳಿಸೋಣ. ಉಳಿಸಿ ಮುಂದಕ್ಕೆ ಬೆಳೆಸೋಣ ಎಂಬ ಸಂದೇಶವನ್ನು ನೀಡಿದರು. ಧ್ವಜಾರೋಹಣದ ಬಳಿಕ ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ” ಕ್ರಿಯೇಟಿವ್ ಸವಿಗಾನ ” ಎಂಬ ಶೀರ್ಷಿಕೆಯಡಿ ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ ಕಾರ್ಯಕ್ರಮ ‘ ಸಪ್ತಸ್ವರ’ ವೇದಿಕೆಯಲ್ಲಿ ನಡೆಯಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ -…
ನಾಳೆ ಖಾಸಗಿ ಆಸ್ಪತ್ರೆ ಓಪಿಡಿ ಬಂದ್?! – ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಖಂಡಿಸಿ ಹೋರಾಟ – ವೈದ್ಯರ ಮುಷ್ಕರದ ಕಾರಣ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ? NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ದಿನಗಳ ಹಿಂದಷ್ಟೇ ಸರ್ಕಾರಿ ವೈದ್ಯರು ಪ್ರತಿಭಟನೆ, ಮುಷ್ಕರ ನಡೆಸಿದ್ದರು. ಇದೀಗ ಖಾಸಗಿ ಆಸ್ಪತ್ರೆಗಳ ವೈದ್ಯರ ಸರದಿ. ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಮತ್ತು ಪ್ರತಿಭಟಿಸಿ ಕರ್ನಾಟಕದಾದ್ಯಂತ ಶನಿವಾರ ಹೊರರೋಗಿ ಸೇವೆ ವಿಭಾಗ (ಒಪಿಡಿ) ಬಂದ್ ಮಾಡುವುದಾಗಿ ವೈದ್ಯರು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ವೈದ್ಯರ ಮುಷ್ಕರದ ಕಾರಣ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.ಮುಖ್ಯ ಕಾರ್ಯದಶಿ ಜತೆಗೂ ಮಾತನಾಡಿದ್ದೇನೆ. ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಚರ್ಚಿಸಲು ಹೇಳಿದ್ದೇನೆ. ೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು. ಎಲ್ಲಾ…
ಎಲ್ಲೆಲ್ಲೂ ಮನೆ ಮಾಡಿದ ವರಮಹಾಲಕ್ಷ್ಮಿ ಹಬ್ಬದ ಸಡಗರ! – ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಮುಂಜಾನೆಯಿಂದ ಭಕ್ತರ ಕ್ಯೂ – ಅಂಗಡಿ, ಮನೆ, ಕಚೇರಿಗಳಲ್ಲಿ ವಿಶೇಷ ಪೂಜೆ NAMMUR EXPRESS NEWS ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಎಲ್ಲೆಡೆ ಕಂಡು ಬರುತ್ತಿದೆ. ಮಂಗಳಕರ ವಸ್ತುಗಳನ್ನು ತಂದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತೆ ಎಂಬುದು ಪ್ರತೀತಿ. ಹೀಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಹಿಂದೂ ಧರ್ಮದ ಪ್ರಕಾರ ಲಕ್ಷ್ಮಿ ದೇವರನ್ನು ಸಂಪತ್ತಿನ ಪ್ರಮುಖ ದೇವತೆಯಾಗಿ ಆರಾಧಿಸುವುದು ಮೊದಲಿನಿಂದಲೂ ರೂಢಿಯಲ್ಲಿದ್ದು, ಲಕ್ಷ್ಮಿಯನ್ನು ಆರಾಧಿಸುವುದರಿಂದ ಸಕಲ ಸಂಪತ್ತು ಒದಗಿಬರಲಿದೆ ಎಂಬ ನಂಬಿಕೆ ಇದೆ. ಇಂದು ಕರ್ನಾಟಕದ ಮೂಲೆ ಮೂಲೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಳಿಕೆಯಾದ ಚಿನ್ನದ ದರ ವರಮಹಾಲಕ್ಷ್ಮಿ ಹಬ್ಬದ ಮಹಿಳೆಯರಿಗೆ ಚಿನ್ನದ ದರ ಕುಸಿತ ಕಂಡಿದ್ದು ಖುಷಿ ಕೊಟ್ಟಿದೆ.ಮದುವೆ ಮತ್ತು ಗೃಹ ಪ್ರವೇಶ ಸೇರಿ ಹವು ಶುಭ ಕಾರ್ಯಗಳು ಶುರುವಾಗಿವೆ.…
ಮಂಗಳೂರು ವಿವಿಯಲ್ಲಿ ಮೇಳಿಗೆಯ ವಿಶ್ವೇಂದ್ರ ಸೇವೆಗೆ ಮೆಚ್ಚುಗೆ – ಅತ್ಯುತ್ತಮ ಸೇವೆ, ಕಷ್ಟದಲ್ಲಿರುವವರಿಗೆ ನೆರವು – ಕೌದಳ್ಳಿಯ ಶ್ರೀ ನಾಗರಕ್ತೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಂಜುನಾಥ್ ಗುರೂಜಿ ಅವರ ಪರಮ ಭಕ್ತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮೇಳಿಗೆಯ ವಿಶ್ವೇಂದ್ರ ಅವರು ಮಂಗಳೂರು ಯೂನಿವರ್ಸಿಟಿಯಲ್ಲಿ ಉತ್ತಮ ಸೇವಕರಾಗಿ ಗುರುತಿಸಿಕೊಂಡಿದ್ದಾರೆ ಕೌದಳ್ಳಿಯ ಶ್ರೀ ನಾಗರಕ್ತೇಶ್ವರಿ ಅಮ್ಮನವರ ಹಾಗೂ ಕ್ಷೇತ್ರದ ಧರ್ಮದರ್ಶಿಗಳಾದಂತಹ ಮಂಜುನಾಥ್ ಗುರೂಜಿ ಅವರ ಆಪ್ತ, ಪರಮ ಭಕ್ತರಾಗಿರುವ ಅವರು ಸದ್ದಿಲ್ಲದೇ ಸೇವೆ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜತೆಗೆ ಯಾರೇ ಕಷ್ಟದಲ್ಲಿದ್ದರೂ ಅವರ ಸಹಕಾರ ಮಾಡುತ್ತಿದ್ದಾರೆ. ಮಂಗಳೂರು ವಿವಿಯ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಅಡುಗೆಗಾರರಾಗಿ ಕೆಲಸ ಮಾಡುವ ವಿಶ್ವೆಂದ್ರ ಶುಚಿ ಹಾಗೂ ರುಚಿಯಾದ ಅಡುಗೆಗಳನ್ನು ತಮ್ಮ ಸೇವಾ ಮನೋಭಾವದಿಂದ ಮಾಡಿ ಬಡಿಸಿದ್ದಾರೆ. ಅಡುಗೆಯನ್ನು ಎಲ್ಲರೂ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಹಾಗೆ ಬಡವರಿಗೆ, ಹಸಿದವರಿಗೆ ಹಾಗೂ ಕಷ್ಟದಲ್ಲಿ ಇರುವವರಿಗೆ ಕಾಣದ ಕೈಗಳಂತೆ ಸಹಾಯವನ್ನು…