Author: Nammur Express Admin

ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ಹುದ್ದೆ – ಕೇವಲ 16 ಮತಗಳ ಅಂತರದಿಂದ ಸೋತಿದ್ದ ರೆಡ್ಡಿ ಬಿಜೆಪಿ ಒಳಗೆ ಮುಸುಕಿನ ಗುದ್ದಾಟ! – ಹೈಕಮಾಂಡ್ ಮೌನ: ಗುಪ್ತ ಗುಪ್ತ ಸಭೆ ಜೆಡಿಎಸ್ ಬಲವರ್ಧನೆಗೆ ಕುಮಾರಣ್ಣ ಪ್ಲಾನ್ – ಜಿಲ್ಲಾವಾರು ಪಕ್ಷ ಸಂಘಟನೆಗೆ ಯೋಜನೆ NAMMUR EXPRESS NEWS ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೇಮಕವಾಗಿದ್ದಾರೆ. ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಮಹಿಳಾ ಕಾಂಗ್ರೆಸ್‌ಗೆ ಸೌಮ್ಯಾ ರೆಡ್ಡಿ, ಚಂಡೀಗಢಕ್ಕೆ ನಂದಿತಾ ಹೂಡ, ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಚುಕು ನಾಚಿ ನೇಮಕವಾಗಿದ್ದಾರೆ. ಸೌಮ್ಯಾ ರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಎದುರು ಸೋತಿದ್ದರು.…

Read More

ಮಧ್ಯ ರಾತ್ರಿ ನಿದ್ದೆಕೆಡಿಸಿದ ಮಳೆ, ಗುಡುಗು! – ಮಲೆನಾಡು ಭಾಗದಲ್ಲಿ ವಿಚಿತ್ರ ಮಳೆ, ಗುಡುಗು – ಒಂದು ವಾರದಿಂದ ಕಾಣೆಯಾಗಿದ್ದ ಮಳೆ – ತುಂಗಾ ಸೇರಿ ನದಿ, ಹಳ್ಳಗಳ ನೀರು ಮಾಯ! NAMMUR EXPRESS NEWS ಮಲೆನಾಡು: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಕೆಲವೆಡೆ ವಿಪರೀತ ಗಾಳಿಯೊಂದಿಗೆ ಮಳೆಯಾದರೆ, ಇನ್ನೂ ಕೆಲವೆಡೆ ಭಾರೀ ಗುಡುಗು ಸಮೇತ ಧಾರಾಕಾರವಾಗಿ ಮಳೆಯಾಗಿದೆ. ಮಧ್ಯರಾತ್ರಿ ಗುಡುಗು ಸಿಡಿಲಿನ ಅಬ್ಬರಕ್ಕೆ ಜನ ಭಯಭೀತರಾಗಿದ್ದು ಹಲವೆಡೆ ಕಂಡು ಬಂದಿದೆ. ಮಳೆಯ ಸದ್ದಿಗೆ ರಾತ್ರಿ 2 ಗಂಟೆಗೆ ಎಚ್ಚೆತ್ತ ಜನ ಆತಂಕಗೊಂಡಿದ್ದರು. ಒಂದು ವಾರದಿಂದ ಕಾಣೆಯಾಗಿದ್ದ ಮಳೆ! ಮಲೆನಾಡು ಭಾಗದಲ್ಲಿ ಒಂದು ವಾರದಿಂದ ಮಳೆ ಮರೆಯಾಗಿ ಬಿಸಿಲು ಹೆಚ್ಚಾಗಿತ್ತು. ಆ ಕಾರಣ ಜನ ಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದರೆ ಮಂಗಳವಾರ ರಾತ್ರಿ ಭಾರೀ ಗುಡುಗು ಮಳೆ ಅಚ್ಚರಿ ತಂದಿದೆ. ನದಿ, ಹಳ್ಳಗಳ ನೀರು ಮಾಯ! ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ತುಂಗಾ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗಣೇಶನ ಕೃಪೆಯಿಂದ ಈ ರಾಶಿಯವರ ಕಾರ್ಯಗಳೆಲ್ಲವೂ ಸಿದ್ಧಿ..! NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಖ್ಯಾತಿ ಹೆಚ್ಚಾಗುವುದರೊಂದಿಗೆ ನೀವು ಯಶಸ್ಸು ಪಡೆಯುವಿರಿ. ಪ್ರೀತಿಯಲ್ಲಿರುವ ಈ ರಾಶಿಯವರಿಗೆ ಇಂದು ತಮ್ಮ ಸಂಗಾತಿಯೊಂದಿಗೆ ದೂರ ಪ್ರಯಾಣಿಸುವ ಅವಕಾಶ ಲಭಿಸುವುದು. ಇಂದು ಮಕ್ಕಳಿಂದ ನಿಮ್ಮ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ತಂದೆಯ ಬೆಂಬಲದಿಂದಾಗಿ ಸಂಜೆಯ ವೇಳೆಗೆ ನಿಮ್ಮ ಕಷ್ಟಗಳೆಲ್ಲವ ದೂರವಾಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ** ವೃಷಭ ರಾಶಿ : ಇಂದು ಗೌರವಕ್ಕೆ ಪಾತ್ರರಾಗುವರು. ಈ ದಿನ ನಿಮ್ಮ ಗಮನವು ಕೆಲಸದ ಸ್ಥಳದಲ್ಲಿ ಯಾವುದಾದರೂ ಹೊಸ ಯೋಜನೆಯ ಮೇಲೆ ಕೇಂದ್ರೀತವಾಗಿರುವುದು. ಇಂದು ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಲಭಿಸುವುದು. ಇದರಿಂದಾಗಿ…

Read More

ಮದುವೆಗೆ ಹುಡುಗಿ ಹುಡುಕುವ. ನಕಲಿ ಗ್ಯಾಂಗ್ ಅರೆಸ್ಟ್! – ಮದುವೆ ಇಲ್ಲದಿದ್ರು ತೊಂದರೆ ಇಲ್ಲ… ಲಕ್ಷ ಲಕ್ಷ ಕಳೆದುಕೊಳ್ಳಬೇಡಿ – ಶಿಕ್ಷಕಿಗೆ ಅಶ್ಲೀಲ ಮೆಸೇಜ್: ಶಿಕ್ಷಕನಿಗೆ ಧರ್ಮದೇಟು! – ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ! – ರಾಜ್ಯದಲ್ಲಿ 1 ವರ್ಷಕ್ಕೆ 68,450 ಹೆಚ್‌ಐವಿ ಕೇಸ್! NAMMUR EXPRESS NEWS ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ. ಮದುವೆಯಾಗಿ ವಂಚಿಸುವ ನಕಲಿ ಹೆಣ್ಣು ಹಾಗೂ ಗ್ಯಾಂಗ್‌ನ ಕಥೆ ಇದು.ಇಲ್ಲಿ ಎಂಟು ಜನ ಹುಡುಗಿ ಕಡೆಯವರು ಬರುತ್ತಾರೆ. ಹೆಣ್ಣು ತೋರಿಸುತ್ತಾರೆ. ಮದುವೆಯನ್ನೂ ಮಾಡಿಸುತ್ತಾರೆ. ಮದುವೆಯಾದ ನಾಲ್ಕೂ ದಿನಕ್ಕೆ ಮದುಮಗಳು ವರನ ಮನೆಯಲ್ಲಿದ್ದ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿಯಾಗ್ತಾಳೆ. ತುಮಕೂರಿನಲ್ಲಿ ಇಂಥ ದೋಖಾ ಮ್ಯಾರೇಜ್ ಕಂಪನಿ ಪತ್ತೆಯಾಗಿದೆ. ಮದುವೆ ವಯಸ್ಸು ಮೀರಿದ ಯುವಕರೇ ಈ…

Read More

ಹೊಸದುರ್ಗದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಸಂಭ್ರಮ – ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ – ಮದಕರಿ ಪ್ರತಿಮೆ ಲೋಕಾರ್ಪಣೆ ಶೀಘ್ರ: ಶಾಸಕ ಬಿ.ಜಿ. ಗೋವಿಂದಪ್ಪ ಮಾಹಿತಿ NAMMUR EXPRESS NEWS ಹೊಸದುರ್ಗ ಪಟ್ಟಣದ ಮದಕರಿ ವೃತ್ತದಲ್ಲಿ ರಾಜ ವೀರ ಮದಕರಿ ಮನಾಯಕರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ವಿದ್ಯಾರ್ಥಿ ಜೀವನ ಬಹಳ ಮಹತ್ತರವಾದುದು. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಮುಂದಿನ ಭವಿಷ್ಯ ನಿರ್ಧರಿಸುತ್ತದೆ. ‘ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಅಧ್ಯಯನದಲ್ಲಿ ಒಡಗಬೇಕು. ಆಗ ಮಾತ್ರ ಜೀವನ ಸರಿಯಾದ ರೀತಿಯಲ್ಲಿ ಸಾಗಲು ಸಾಧ್ಯ’ ಎಂದು ಹೇಳಿದರು. ಅಂಕಗಳಿಕೆ ಆಧಾರಿತ ಶಿಕ್ಷಣದಿಂದ ಉತ್ತಮ ಸಮಾಜ…

Read More

ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು – ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಸಂಘಟನೆ – ಶೃಂಗೇರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ NAMMUR EXPRESS NEWS ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೃಂಗೇರಿ ವಿಭಾಗದ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಉದ್ಘಾಟನೆಗೊಂಡಿದೆ. ತಾಲೂಕಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆ ಉದ್ಘಾಟಿಸಿದ ರಾಜ್ಯಾಧ್ಯಕ್ಷರಾದ ನಾರಾಯಣ ಜಿ. ಈಳಿಗೇರ‌ರವರು ಶೃಂಗೇರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯ, ತಾಲೂಕಿನ ನೂತನ ಪದಾಧಿಕಾರಿಗಳಿಗೆ ಸಂಸ್ಥೆಯ ಗುರುತಿನ ಕಾರ್ಡ್,ಆದೇಶ ಪ್ರತಿಯನ್ನು ಹಸ್ತಾಂತರಿಸಿದರು. ಸಾಮಾಜದಲ್ಲಿ ವಿವಿಧ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಧ್ವನಿಎತ್ತಿ,ಸಾರ್ವಜನಿಕರ ಧ್ವನಿಯಾಗ ಮಾನವ ಹಕ್ಕಗಳ ರಕ್ಷಿಸುವ ಜವಾಬ್ದಾರಿ ಎಲ್ಲಾ ತಂಡದ ಸದಸ್ಯರ ಮೇಲಿದೆ. ಮಾನವ ಹಕ್ಕುಗಳ ಪರವಾಗಿ ಧೈರ್ಯವಾಗಿ ಧ್ವನಿ ಎತ್ತುವಂತೆ ಹಾಗೂ ಕಾನೂನು ಗೌರವಿಸಿ ಕಾನೂನಿನಡಿಯಲ್ಲಿ ಎಲ್ಲರೂ ನ್ಯಾಯಯುತವಾದ ಸಮಾಜ ನಿರ್ಮಾಣದ ಜವಾಬ್ದಾರಿ ನಿಭಾಯಿಸುವಂತೆ ಕರೆನೀಡಿದರು. ವೇದಿಕೆಯಲ್ಲಿದ್ದ ಪೋಲೀಸ್ ಉಪನಿರೀಕ್ಷಕರಾದ ಶ್ರೀಜಕ್ಕಣ್ಣನವರ್ ಮಾತನಾಡಿ ಇಂತಹ ಸಂಘ ಸಂಸ್ಥೆಗಳಿಂದ…

Read More

ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹ ಲಕ್ಷ್ಮಿ ಹಣ? – ಎರಡು ತಿಂಗಳ 4000 ರೂ.ಹಣ ಒಟ್ಟಿಗೆ ಜಮೆ – ಸರ್ಕಾರ ಹೇಳಿದ್ದೇನು? ಯಾವಾಗ ಸಿಗುತ್ತೆ ಹಣ? NAMMUR EXPRESS NEWS ಬೆಂಗಳೂರು : ಕಾಂಗ್ರೆಸ್ ಸರಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಎರಡು ಕಂತಿನ ಹಣ ಇನ್ನೂ ಜಮೆ ಆಗಿಲ್ಲ. ವರಮಹಾಲಕ್ಷ್ಮಿ ಹಬ್ಬದಂದು ಮಹಿಳೆಯರ ಖಾತೆಗೆ ಹಣ ಜಮೆ ಆಗೋದು ಖಚಿತ ಎನ್ನಲಾಗುತ್ತಿದೆ. ಲೋಕ ಸಭೆ ಚುನಾವಣೆ ವೇಳೆ ಹಣ ಜಮೆ ಆಗಿತ್ತು. ಗೃಹಲಕ್ಷ್ಮೀ ಯೋಜನೆಯ ಜೂನ್, ಜುಲೈ ತಿಂಗಳ ಒಟ್ಟು 4000 ರೂಪಾಯಿ ಹಣ ಗೃಹಿಣಿಯರ ಖಾತೆಗೆ ಜಮೆ ಆಗೋದಕ್ಕೆ ಬಾಕಿ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಈ ಮಾಹಿತಿ ನೀಡಿದ್ದಾರೆ. ಈ ಹಿಂದೆ ಜುಲೈ ಅಂತ್ಯದಲ್ಲಿ ಅಥವಾ ಅಗಸ್ಟ್ ಮೊದಲ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುತ್ತೆ ಅಂತಾ ಹೇಳಲಾಗಿತ್ತು. ಆದ್ರೆ ಅಗಸ್ಟ್ ಅರ್ಧ ತಿಂಗಳು ಕಳೆದರೂ ಕೂಡ…

Read More

ಆಗುಂಬೆ ಬಳಿ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು! – ಬೈಕ್ ಪಿಕ್ ಅಪ್ ಡಿಕ್ಕಿ: ಚಾಲಕ ಪರಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ! – ಬಾಡಿಗೆ ಮನೆಯಲ್ಲೇ ಸಾವು: ಶಿವಮೊಗ್ಗದಲ್ಲಿ ಘಟನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪದ ಬಿದರಗೋಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗಸರಕೋಣೆ ಶರತ್ (35) ಮತ್ತು ಪಿಕಪ್ ವಾಹನದಲ್ಲಿದ್ದ ಕೇರಳ ಮೂಲದ ಮತ್ತೋರ್ವ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದು ಮೃತನ ಹೆಸರು ಪತ್ತೆಯಾಗಿಲ್ಲ. ಪಿಕಪ್ ವಾಹನ ಓಡಿಸುತ್ತಿದ್ದ ಬಾವಿ ಕೆಲಸ ಮಾಡುವ ಸಂತೋಷ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾರೆ ಮಧ್ಯಾಹ್ನ 1.15ಕ್ಕೆ ಬಿದರಗೋಡು ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಏಕಾಏಕಿ ಪಿಕಪ್ ವಾಹನಕ್ಕೆ ಅಪ್ಪಳಿಸಿದೆ. ಅಪ್ಪಳಿಸಿದ ಹೊಡೆತಕ್ಕೆ ಚಾಲಕ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಇದ್ದ ಪಿಕಪ್ ವಾಹನ ಚಲಿಸುತ್ತಿರುವ ವೇಗವನ್ನು ಕಡಿತಗೊಳಿಸಲು ಮುಂದಾಗಿದ್ದು ಗುಂಡಿಗೆ ಬಿದ್ದು ವಾಹನದಲ್ಲಿದ್ದ ಕೇರಳ ಮೂಲದ ಯುವಕ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ. ಆಗುಂಬೆ…

Read More

11ನೇ ಬಾರಿಗೆ ಗೆದ್ದ ಬಂಡೆ ವೆಂಕಟೇಶ್! – ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ – ಸಹಕರಿಸಿದ ಸರ್ವರಿಗೂ ಬಂಡೆ ವೆಂಕಟೇಶ್ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: ರಾಜಕೀಯ ನಾಯಕ ಬಂಡೆ ವೆಂಕಟೇಶ್ ಇದೀಗ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 11ನೇ ಬಾರಿಗೆ ಬಂಡೆ ವೆಂಕಟೇಶ್ ಮತ್ತು ಶ್ರುತಿ ವೆಂಕಟೇಶ್ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ಆಗಸ್ಟ್ 11ರಂದು ನಡೆದಿದ್ದ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ತೀರ್ಥಹಳ್ಳಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಜನಪ್ರಿಯ ನಾಯಕ, ತೀರ್ಥಹಳ್ಳಿ ಒಕ್ಕಲಿಗ ಸಂಘದ ನಿರ್ದೇಶಕರು,ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರು ಮತ್ತು ರಾಜ್ಯ ಗ್ರಾಮ ಪಂಚಾಯತಿ ಒಕ್ಕೂಟದ ಉಪಾಧ್ಯಕ್ಷರಾಗಿರುವ ಬಂಡೆ ವೆಂಕಟೇಶ್ ಅವರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿ ಸ್ಪರ್ಧೆ ಮಾಡಿರುವ ಶ್ರುತಿ ವೆಂಕಟೇಶ್ ಕೂಡ…

Read More

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು! – 21 ಮಂದಿ ನೂತನ ನಿರ್ದೇಶಕರ ಆಯ್ಕೆ: ಯಾರು ಯಾರು ಇಲ್ಲಿದೆ ಮಾಹಿತಿ – ಕಡಿದಾಳ್ ಗೋಪಾಲ್, ಅದಿಮೂರ್ತಿ, ಸುದರ್ಶನ್ ತಾಯಿಮನೆ, ಬಂಡೆ ವೆಂಕಟೇಶ್ ಸೇರಿ 20 ಜನರ ಗೆಲುವು NAMMUR EXPRESS NEWS ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ 21ನೇ ಸ್ಥಾನಗಳಿಗೆ ನಡೆದ ಚುನಾವಣೆ ಮತ ಎಣಿಕೆ ಸೋಮವಾರ ತಡ ರಾತ್ರಿವರೆಗೆ ನಡೆದಿದ್ದು, ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ಹೆಸರು ಪಡೆದ ಮತ 1) ಬಿ ಎ ರಮೇಶ್ ಹೆಗ್ಡೆ= 2001 2) ರವಿಕುಮಾರ್ =1856 3) ಡಾ. ಕಡಿದಾಳ್ ಗೋಪಾಲ್=1805 4) ಆಶಿತ್ ಬಳಗಟ್ಟೆ =1630 5) ಬಂಡೆ ವೆಂಕಟೇಶ್ =1527 6) ಸುದರ್ಶನ್ ತಾಯಿಮನೆ = 1461 7) ಎಂ ಎ ರಮೇಶ ಹೆಗ್ಡೆ = 1442 8) ಉಂಬಳೇಬೈಲು ಮೋಹನ್ = 1436 9) ಪುಟ್ಟಸ್ವಾಮಿ =1417 10) ಆದಿಮೂರ್ತಿ…

Read More