ಶ್ರಾವಣ ಮಾಸ: ಎಲ್ಲೆಡೆ ವಿಶೇಷ ಪೂಜೆ! – ಸಾಲು ಸಾಲು ಹಬ್ಬಕ್ಕೆ ಸಿದ್ಧತೆ: ಮಳೆ ಕೊಂಚ ಕಡಿಮೆ – ವ್ಯಾಪಾರಿಗಳಿಗೆ ಉದ್ಯಮ ಅಭಿವೃದ್ಧಿ ನಿರೀಕ್ಷೆ NAMMUR EXPRESS NEWS ಆಗಸ್ಟ್ 5 ರಿಂದ ಶಿವನಿಗೆ ಸಮರ್ಪಿತವಾದ ಶ್ರಾವಣ ಮಾಸ ಪ್ರಾರಂಭವಾಗಿದೆ . ಶಿವಭಕ್ತರು ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ವರ್ಷ ಶ್ರಾವಣ ಮಾಸವು ಸೋಮವಾರದಿಂದ ಆರಂಭವಾಗುತ್ತಿರುವುದರಿಂದ ಶ್ರಾವಣ ಮಾಸದ ಮಹತ್ವ ಮತ್ತಷ್ಟು ಹೆಚ್ಚಿದೆ. ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ! ಆ.5 ರಿಂದ ಶುರುವಾದ ಶ್ರಾವಣ ಮಾಸ ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಹಾಗೂ ಆಭರಣದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದು ಈ ವರ್ಷ ಭರ್ಜರಿ ವಹಿವಾಟು ಕಾಣುವ ನಿರೀಕ್ಷೆ ಇದೆ. ಮಳೆ ಕೊಂಚ ಕಡಿಮೆ: ಜನ ಪಟ್ಟಣಗಳತ್ತ…
Author: Nammur Express Admin
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುರುವಾಯ್ತು ಹೋರಾಟ! – ಜಮೀನು ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ – ರೈತ ಹಿತ ರಕ್ಷಣಾ ಸಮಿತಿಗೂ ಬಿಜೆಪಿ ಬೆಂಬಲ – ಅರಣ್ಯ ಇಲಾಖೆಗೆ ಡಿ.ಎನ್. ಜೀವರಾಜ್ ಎಚ್ಚರಿಕೆ NAMMUR EXPRESS NEWS ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರ ಯಾವುದೇ ರೈತರ ಜಮೀನು ತೆರವುಗೊಳಿಸಲು ಹೊರಟರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ತಡೆಯಲಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಒತ್ತುವರಿ ತೆರವು ಶುರುವಾಗಿದೆ. ಈ ಹಿನ್ನೆಲೆ ಇದೀಗ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಆದರೆ ಅರಣ್ಯ ಇಲಾಖೆ ಮತ್ತು ಸರ್ಕಾರ 3 ಎಕರೆ ಮೇಲ್ಪಟ್ಟ ಒತ್ತುವರಿ ತೆರವು ಮಾಡುವುದಾಗಿ ಹೇಳಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದಿವೆ. ಬಿಜೆಪಿ ಮತ್ತು ಜೆಡಿಎಸ್ ಸಾಥ್ ನೀಡಿವೆ. ಬಿಜೆಪಿ, ಜೆಡಿಎಸ್ ಜಂಟಿ ಹೋರಾಟ! ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಬ್ರಹ್ಮ ಯೋಗದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮನೆಯ ವಾತಾವರಣ ಶಾಂತಿಯಿಂದ ಕೂಡಿರಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳು ದೂರವಾಗುವುದು. ಮಕ್ಕಳ ಪ್ರಗತಿಯನ್ನು ನೋಡಿ ಮನಸ್ಸು ಸಂತೋಷವಾಗಿರುವುದು. ಈ ದಿನ ಹಠಾತ್ ಆಗಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಬೇಕಾಗುವುದು. ನೀವು ಆರ್ಥಿಕ ಸಮಸ್ಯೆಯಿಂದ ಚಿಂತೆಗೊಳಗಾಗಿದ್ದರೆ ಈ ದಿನ ನಿಮಗೆ ಅದರಿಂದ ಮುಕ್ತಿ ದೊರಕುವುದು. ** ವೃಷಭ ರಾಶಿ : ಒಡಹುಟ್ಟಿದವರ ಸಂಪೂರ್ಣ ಬೆಂಬಲ ಪಡೆಯುವುದರಿಂದ ನಿಧಾನವಾಗಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡುವ ಯೋಜನೆಯನ್ನು ಮಾಡುವಿರಿ. ಆದರೆ ಇದರಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ.…
ಅಂತಾರಾಷ್ಟ್ರೀಯ ಶಾಸಕರ ಸಭೆಯಲ್ಲಿ ಖಾದರ್, ಮಂಜುನಾಥ್ ಭಂಡಾರಿ – ಅಮೇರಿಕಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಕರ್ನಾಟಕದ ಶಾಸಕರ ತಂಡ ಭಾಗಿ – ಶಾಸಕರ ಯೋಜನೆ, ನೀತಿ, ಸವಾಲುಗಳ ಬಗ್ಗೆ ಚರ್ಚೆ NAMMUR EXPRESS NEWS ಮಂಗಳೂರು/ ಬೆಂಗಳೂರು: ಅಂತಾರಾಷ್ಟ್ರೀಯ ಶಾಸಕರ ಸಭೆಗೆ ಕರ್ನಾಟಕದ ರಾಯಭಾರಿಗಳಾಗಿ ಸ್ಪೀಕರ್ ಯು.ಟಿ. ಖಾದರ್ ಮತ್ತು ಎಮ್.ಎಲ್.ಸಿ. ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಅಮೆರಿಕಾದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯಲ್ಲಿ ಆಗಸ್ಟ್ 5 ರಿಂದ 7ರವರೆಗೆ ಜರುಗಿದ ಅಂತರಾಷ್ಟ್ರೀಯ ಶಾಸಕರ ಸಮ್ಮೇಳದಲ್ಲಿ ಕರ್ನಾಟಕದ ಸರ್ಕಾರದ ಪರವಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೆಂಟಕಿ ರಾಜ್ಯದ ಹೊನ್ಲೆ ಆಂಡಿ ಬೇಷೀರ್ ಮತ್ತು ಹೊನ್ಲೆ ಸೆನೆಟರ್ ವೇನ್ ಹಾರ್ಪರ್ ಅವರಿಗೆ ಮೈಸೂರು ಶಾಲು ನೀಡಿ ಗೌರವಿಸಿದರು. ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಮುಖ್ಯ ಸಚೇತಕರಾದ ಅಶೋಕ್ ಪಟ್ಟೆನ್ ಮತ್ತು ಸಲೀಂ ಅಹಮದ್ ಮತ್ತು ಕರ್ನಾಟಕದ ಒಟ್ಟು 10 ಶಾಸಕರು ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 5600 ಶಾಸಕರು ಈ…
ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಾನವ ಸರಪಳಿ – ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷಕ್ಕೆ ಖಂಡನೆ – ಆ.13ಕ್ಕೆ ಪ್ರತಿಭಟನೆ, ತಹಸೀಲ್ದಾರ್ ಮೂಲಕ ಆಗ್ರಹ ಪತ್ರ NAMMUR EXPRESS NEWS ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿ, ತೀರ್ಥಹಳ್ಳಿ ವತಿಯಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಆರಂಭವಾದ ಪ್ರತಿಭಟನೆ, ಕ್ರಮೇಣ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷ,ಅನಾಚಾರ-ಅತ್ಯಾಚಾರ,ಸುಲಿಗೆ,ದರೋಡೆ, ಪೂಜಾ ಮಂದಿರ ಹಾನಿ, ಆಸ್ತಿ-ಮಾನ-ಜೀವ ಹರಣಕ್ಕೆ ತಿರುಗಿದೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಹಿತ ಇನ್ನಿತರ ಮುಗ್ದ ಜೀವಿಗಳಿಗೆ ಆಗುತ್ತಿರುವ ಜನಾಂಗೀಯ ದ್ವೇಷದಿಂದ ರಕ್ಷಣೆ ಒದಗಿಸಲು ಆಗ್ರಹಿಸಿ, ಈ ಕಾರಣಕ್ಕಾಗಿ ಮಾನವ ಸರಪಳಿ ಹೋರಾಟ 13.08.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಮತ್ತು ತಾಲೂಕು ದಂಡಾಧಿಕಾರಿಗಳ ಮೂಲಕ ಆಗ್ರಹ ಪತ್ರ ನೀಡಲು ಹಿಂದೂ ಹಿತರಕ್ಷಣಾ ಸಮಿತಿ ನಿರ್ಧಾರ ಮಾಡಿದೆ. ಹಿಂದೂ ಪ್ರಮುಖರು ಪ್ರೇರಣದಲ್ಲಿ ಮಂಗಳವಾರ ಬೆಳಿಗ್ಗೆ l 10 ಗಂಟೆಗೆ ಸೇರಲು ಕರೆ ನೀಡಲಾಗಿದೆ.
ಟಾಪ್ 3 ನ್ಯೂಸ್ ಚಿಕ್ಕಮಗಳೂರು ಚಿಕ್ಕಮಗಳೂರು: ಹಾಡಹಗಲೇ ಕಳ್ಳರ ಕೈಚಳಕ – ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು – ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಿಸಿದ್ದ ಪರಿಚಿತ ವ್ಯಕ್ತಿ ಸಾವು NAMMUR EXPRESS NEWS ಚಿಕ್ಕಮಗಳೂರು: ತರೀಕೆರೆ ಪಟ್ಟಣದ ಎಂ.ಜಿ ರಸ್ತೆಯಲ್ಲಿರುವ ಟಿ.ಬಿ ಕೃಷ್ಣ ಎಂಬುವರ ಮನೆಯಲ್ಲಿ ಹಾಡಹಗಲೇ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಮಾಲೀಕ ಟಿ.ಬಿ ಕೃಷ್ಣ ಹಾಗೂ ಮನೆಯ ಸದಸ್ಯರು ತಮ್ಮ ತೋಟಕ್ಕೆ ತೆರಳಿದ್ದಾಗ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ಕೈಚಳಕ ತೋರಿದ್ದಾರೆ. ಮನೆಯ ಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ 16 ಗ್ರಾಂ ಚಿನ್ನ, 38 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ 21,000 ನಗದು ಕಳ್ಳತನ ಮಾಡಿದ್ದು, ಒಟ್ಟು 1,36,000 ರೂ ಮೌಲ್ಯದ ವಸ್ತುಗಳೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. – ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ…
ತರುಣ್- ಸೋನಲ್ ಮದುವೆಯಲ್ಲಿ ಮನಗೆದ್ದ ಸನ್ನಿಧಿ ಕೆಟರರ್..! – ತೀರ್ಥಹಳ್ಳಿ ಮೂಲದವರ ಅಡುಗೆಯ ಸ್ವಾಧಕ್ಕೆ ಅತಿಥಿಗಳ ಮೆಚ್ಚುಗೆ – ಸುಭಾಷ್ ಜೆ ಎಸ್, ಸಂತೋಷ್ ಶೆಟ್ಟಿ ಮಾಲೀಕತ್ವದ ಸಂಸ್ಥೆ – 450 ಅಡುಗೆ ಸಿಬ್ಬಂದಿಯಿಂದ ಸಸ್ಯಾಹಾರಿ ಭೋಜನ ತಯಾರಿ – ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಂಸ್ಥೆಗೆ ಅಭಿನಂದನೆಗಳು NAMMUR EXPRESS NEWS ಬೆಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಬೆಂಗಳೂರಿನಲ್ಲಿ ಭಾನುವಾರ ಅದ್ದೂರಿಯಾಗಿ ನಡೆದಿದ್ದು ಈ ಮದುವೆಯಲ್ಲಿ ಮಲೆನಾಡಿನ ತೀರ್ಥಹಳ್ಳಿ ಮೂಲದ ಸನ್ನಿಧಿ ಕೆಟರರ್ ಸಂಸ್ಥೆ ತನ್ನ ಅಡುಗೆ ಸೇವೆ ನೀಡಿತು. ತರುಣ್ ಸೋನಲ್ ಮದುವೆಗೆ ಶುದ್ಧ ಸಸ್ಯಾಹಾರಿ ಅಡುಗೆಯನ್ನು ಬೆಂಗಳೂರಿನ ಸನ್ನಿದಿ ಕೇಟರರ್ಸ್ ಸಂಸ್ಥೆ ಮಾಡಿದ್ದು ಎಲ್ಲಾ ಸಿನಿಮಾ ನಟ ನಟಿಯರು ಸೇರಿ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ತೀರ್ಥಹಳ್ಳಿ ತಾಲೂಕು ಗುಡ್ಡೆಕೊಪ್ಪ ಸುಭಾಷ್ ಜೆ ಎಸ್ ಹಾಗೂ ಸಂತೋಷ್ ಶೆಟ್ಟಿ ಮಾಲೀಕತ್ವದ ಈ ಸಂಸ್ಥೆ ಅಚ್ಚುಕಟ್ಟಿನ ಆಯೋಜನೆ ಮಾಡಿತ್ತು. ವಿಶೇಷ ಸೇವೆ ಜತೆಗೆ ಭೂರಿ ಭೋಜನ!…
ಕುಡ್ಲಂಗಿಪ್ಪ ಕುಂದಾಪ್ರದವರ ಸಂಭ್ರಮ! – ಗ್ರಾಮೀಣ ಕ್ರೀಡಾಕೂಟ: ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್ – ಮಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮ್ಮಿಲನ NAMMUR EXPRESS NEWS ಮಂಗಳೂರು: ಹಗ್ಗಜಗ್ಗಾಟ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಜಿದ್ದಾಜಿದ್ದಿಯ ಹೋರಾಟದ ರೋಮಾಂಚನ, ವೇದಿ ಕೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳ ಖುಷಿ, ಹೆಂಗ್ಸ್ ಪಂಚೇತಿ ಮತ್ತಿತರ ಹಾಸ್ಯಭರಿತ ಗೋಷ್ಠಿಗಳ ಕಚಗುಳಿ, ಎಲ್ಲೆಲ್ಲೂ ಕುಂದಾಪ್ರ ಕನ್ನಡದ ರಸಗವಳ… ಕುಡಂಗಿಪ್ಪ ಕುಂದಾಪ್ರದವ್ (ಮಂಗಳೂರಿನಲ್ಲಿರುವ ಕುಂದಾಪುರ ದವರು) ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಯ ಮೈದಾನ ದಲ್ಲಿ ಭಾನುವಾರ ಆಯೋಜಿಸಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಒಂದು ಪ್ರದೇಶದ ವಿಶಿಷ್ಟ ಭಾಷೆ, ಸಂಸ್ಕೃತಿಯನ್ನು ಅನಾವರಣಗೊಳಿಸಿತು. ಇದ್ ಭಾಷಿ ಅಲ್ಲ, ಬದ್ ಎಂಬ ಘೋಷವಾಕ್ಯದಡಿ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆ, ಕುಂದಾಪುರದ ಆಹಾರ ಇತ್ಯಾದಿ ಇತ್ತು. -ಆಸಾಡಿ ಒಡ್ರಂಗ್ ಒಂದಿನ ಒಟ್ಟಾಪ’ ಎಂದು ಹೇಳುತ್ತಲೇ ಒಟ್ಟುಗೂಡಿದ ಕುಂದಾಪುರದವರು ಮಳಿ ಅಂದ್ರೆ, ಒಗಿ ಎತ್ತಲೇ ಎಂದು ಹೇಳಿದ್ದರಿಂದಲೋ ಏನೋ ಮಳೆ ಬಿಡುವು…
ಒಲಿಂಪಿಕ್ಸಲ್ಲಿ ಅಮೇರಿಕಾ ಮತ್ತೆ ಚಾಂಪಿಯನ್! – ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ – ಜಪಾನ್ 3, ಆಸ್ಟ್ರೇಲಿಯಾ 4ನೇ ಸ್ಥಾನ, ಪಾಕ್ ಕೂಡ ಚಿನ್ನ ಗೆದ್ದಿತು! – ಭಾರತಕ್ಕೆ 6 ಪದಕ: 71ನೇ ಸ್ಥಾನಕ್ಕೆ ತೃಪ್ತಿ NAMMUR EXPRESS NEWS ಪ್ಯಾರಿಸ್ ಒಲಂಪಿಕ್ಸ್ ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು. ಸ್ಪರ್ಧೆಗಳು ಭಾನುವಾರ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್ಬಾಲ್ ಒಲಿಂಪಿಕ್ಸ್ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ…
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ ನವಚೇತನ ಚಾರಿಟೆಬಲ್ ಟ್ರಸ್ಟ್ – ಶೃಂಗೇರಿ ಸಹಾಯ ಹಸ್ತ ತಂಡ ಭಾಗಿ: ಮಂಜುನಾಥ್ ನಾಯಕತ್ವದಲ್ಲಿ ಸೇವೆ – ಶೃಂಗೇರಿ, ಕೊಪ್ಪ ತಾಲೂಕಿನ ಹಲವು ಶಾಲೆಗಳಿಗೆ ವಿತರಣೆ NAMMUR EXPRESS NEWS ಜಗದ್ಗುರು ವಿದುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳ 32 ನೇ ವರ್ಧಂತಿ ಮಹೋತ್ಸದ ಶುಭ ಸಂದರ್ಭದಲ್ಲಿ ನವಚೇತನ ಚಾರಿಟೆಬಲ್ ರಾಮನಗರ ವತಿಯಿಂದ ಸರ್ಕಾರಿ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು. ಟ್ರಸ್ಟ್‌ನ ಈ ಸೇವಾ ಕಾರ್ಯದಲ್ಲಿ ಶೃಂಗೇರಿ ಸಹಾಯ ಹಸ್ತ ತಂಡ ಭಾಗಿಯಾಗಿ ಸಹಕರಿಸಿತು. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಿ ಅರವು ಮೂಡಿಸುತ್ತಿರುವ ನವ ಚೇತನ ಟ್ರಸ್ಟ್ ಕಳೆದ ಮೂರು ದಿನಗಳಿಂದ ಶೃಂಗೇರಿ ತಾಲೂಕಿನ ಹಲವು ಸರ್ಕಾರಿ ಶಾಲೆಗಳು ಸೇರಿದಂತೆ ಹರಿಹರಪುರ,ಭಂಡಿಗಢಿ ಭಾಗದ ಶಾಲೆಗಳಲ್ಲಿ ಟ್ರಸ್ಟ್‌ನ ಮುಖ್ಯಸ್ಥರಾದ ಮಂಜುನಾಥ್ ಮತ್ತವರ ತಂಡದ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಶೃಂಗೇರಿಯ ಸರ್ಕಾರಿ ಫ್ರೌಢಶಾಲೆ (ಗುಡ್ಡದ ಹಸ್ಕೂಲ್)…