ಭಾರತಕ್ಕೆ ಬಂತು ಮತ್ತೊಂದು ಕಂಚು! – ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲುವು – ಭಾರತಕ್ಕೆ 6ನೇ ಪದಕ ತಂದುಕೊಟ್ಟ ಅಮನ್ NAMMUR EXPRESS NEWS ಹಾಕಿ ಮತ್ತು ಜಾವಲಿನ್ ಥ್ರೋ ಅಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಪಡೆದಿದ್ದ ಭಾರತ ಶುಕ್ರವಾರ ಮಧ್ಯ ರಾತ್ರಿ ಮತ್ತೊಂದು ಕಂಚು ಪದಕ ಗೆದ್ದಿದೆ. ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 6ನೇ ಪದಕ ತಂದಿದ್ದಾರೆ. 21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪದಕ ಗೆದ್ದರು. ಭಾರತ…
Author: Nammur Express Admin
ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ! – ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ – ಕುಕ್ಕೆ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ – ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ NAMMUR EXPRESS NEWS ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ ಮನೆ ಮಾಡಿದೆ. ಜನ ಮುಂಜಾನೆಯಿಂದಲೇ ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ ನಡೆಯಿತು. ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯಿತು. ಕುಡುಪುವಿನಲ್ಲಿ ಸಾವಿರಾರು ಜನ ಮಂಗಳೂರಿನ ಕುಡುಪುವಿನ ಅನಂತ ಪದ್ಮನಾಭ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಪೂಜೆಯಲ್ಲಿ ಭಾಗಿಯಾದ್ರು. ಸುಮಾರು 3 ಲೋಡ್ನಷ್ಟು ಎಳೆನೀರು ಅಭಿಷೇಕ ಮಾಡಲಾಯಿತು. ಕಾಪುವಿನಲ್ಲಿ ನಿಜ ಹಾವಿಗೆ ಪೂಜೆ ಕಾಪುವಿನ ಮಜೂರು ನಿವಾಸಿ ಗೋವರ್ಧನ್ ರಾವ್ ರವರು ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ದಿಟ ನಾಗನಿಗೆ ಅಭಿಷೇಕ ನೆರವೇರಿಸಿದ್ದಾರೆ. ಗಾಯಗೊಂಡ ನಾಗರ ಹಾವನ್ನು…
ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ನಾಯಕರ ಹವಾ! – ಜೀವರಾಜ್, ಸಿ.ಟಿ ರವಿ ಸೇರಿ ಅನೇಕ ಪ್ರಮುಖರ ನಾಯಕತ್ವ – ಸಾವಿರಾರು ಪ್ರಮುಖ ಕಾರ್ಯಕರ್ತರು, ಮುಖಂಡರು ಹಾಜರ್ NAMMUR EXPRESS NEWS ಚಿಕ್ಕಮಗಳೂರು: ಕಾಂಗ್ರೇಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಎಲ್ಲಾ ತಾಲೂಕಿನ ಬಿಜೆಪಿ ವಿವಿಧ ಪದಾಧಿಕಾರಿಗಳು, ಕಾರ್ಯರ್ತರು ಪಾಲ್ಗೊಂಡಿದ್ದಾರೆ. ಇನ್ನು ಕೇವಲ ಒಂದು ದಿನದಲ್ಲಿ ಮೈಸೂರು ಚಲೋ ಪಾದಯಾತ್ರೆ ಯಲ್ಲಿ ಜಿಲ್ಲೆಯ ಹಲವು ನಾಯಕರು ಭಾಗಿಯಾಗಲಿದ್ದಾರೆ. ಕೊನೆ ದಿನದ ಪಾದಯಾತ್ರೆ ಹಾಗೂ ಸಮಾರೋಪಕ್ಕೆ ವೇದಿಕೆ ಸಜ್ಜುಗೊಂಡಿದ್ದು ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ಡಿ.ಎನ್ ಜೀವರಾಜ್,ಸಿ.ಟಿ ರವಿ,ದೀಪಕ್ ದೊಡ್ಡಯ್ಯ,ಸುರೇಶ್,ಬೆಳ್ಳಿ ಪ್ರಕಾಶ್ ಸೇರಿದಂತೆ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು, ಪ್ರಮುಖ ನಾಯಕರು ಸಾಥ್ ನೀಡಿದ್ದಾರೆ.
ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು! – ನಮ್ಮದೇ ಬೆಕ್ಕು ಕಚ್ಚಿತೆಂದು ನಿರ್ಲಕ್ಷ್ಯ ಒಳ್ಳೆಯದಲ್ಲ! – ನಾಗರಾಜನ ಮುಂದೆ ಕೇಕ್ ಕಟ್ ಮಾಡಿ ಯುವಕರ ಹುಚ್ಚಾಟ: ನಾಗರ ಪಂಚಮಿ ದಿನ ವೈರಲ್ NAMMUR EXPRESS NEWS ಶಿವಮೊಗ್ಗ: ಸಾಕು ಬೆಕ್ಕೇ ಮಹಿಳೆಯೊಬ್ಬರ ಪ್ರಾಣ ಹೋಗಲು ಕಾರಣವಾಗಿದೆ. ಶಿವಮೊಗ್ಗದ ಶಿಕಾರಿಪುರದ ತರಲಘಟದಲ್ಲಿ ಮಹಿಳೆಯೊಬ್ಬರಿಗೆ ಸಾಕು ಬೆಕ್ಕು ಕಚ್ಚಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾರೆ. 50 ವರ್ಷ ವಯಸ್ಸಿನ ಗಂಗೀಬಾಯಿ ಮೃತ ಮಹಿಳೆ. ಬೆಕ್ಕು ಎರಡು ತಿಂಗಳ ಹಿಂದೆ ಕಚ್ಚಿತ್ತು. ಬೆಕ್ಕು ಕಚ್ಚಿದ್ದರಿಂದ ಮಹಿಳೆಗೆ ರೇಬಿಸ್ ಕಾಯಿಲೆ ತಗುಲಿದೆ. ಇನ್ನೊಬ್ಬ ವ್ಯಕ್ತಿಗೂ ಇದೇ ಬೆಕ್ಕು ಕಚ್ಚಿತ್ತು. ಬೆಕ್ಕು ಕಚ್ಚಿದ್ದರಿಂದ ಮಹಿಳೆ 5 ಇಂಜೆಕ್ಷನ್ ಪಡೆಯಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದ ಬಳಿಕ ಹುಷಾರಾಗಿದ್ದೇನೆಂದು ಉಳಿದ ಇಂಜೆಕ್ಷನ್ ಪಡೆಯಲು ನಿರ್ಲಕ್ಷಿಸಿದ್ದರು. ಆರೋಗ್ಯವಾಗಿದ್ದುದರಿಂದ ಮಹಿಳೆ ನಾಟಿ ಕೆಲಸಕ್ಕೆ ಹೋಗಿದ್ದರು. ನೀರಿಗಿಳಿದು ಕೃಷಿ ಕೆಲಸದಲ್ಲಿ ತೊಡಗಿದ್ದುದರಿಂದ, ರೇಬಿಸ್ ಕಾಯಿಲೆ ತೀವ್ರಗೊಂಡಿದೆ. ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ. ಬೆಕ್ಕು ಕಚ್ಚಿದರೂ ರೇಬಿಸ್…
ಉಡುಪಿಯ ಕಾಪುವಿನಲ್ಲಿ ನಾಗರ ಹಾವಿಗೆ ಪೂಜೆ! – ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ನಿವಾಸದಲ್ಲಿ ಪೂಜೆ – 1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡುತ್ತಿರುವ NAMMUR EXPRESS NEWS ಉಡುಪಿ: ನಾಗರ ಪಂಚಮಿಯಂದು ಕರಾವಳಿಯಲ್ಲಿ ನಾಗನ ಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ನಾಗನ ಹುತ್ತಕ್ಕೆ ಹಾಲೆರೆದು ನಾಗರಪಂಚಮಿಯನ್ನು ಆಚರಿಸುತ್ತಾರೆ ಆದರೆ ಇಲ್ಲಿ ಜೀವಂತ ಹಾವಿಗೆ ತನು ಎರೆಯುವುದರ ಮೂಲಕ ನಾಗರಪಂಚಮಿಯನ್ನು ಆಚರಣೆ ಮಾಡಲಾಗಿದೆ. ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ಅವರು ಹಾವುಗಳ ರಕ್ಷಣೆ ಮಾಡುತ್ತಾರೆ. ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೆ ಹಾವುಗಳೂ ಸಂಕಷ್ಟದಲ್ಲಿದ್ದರೆ ಗೋವರ್ಧನ್ ನೆರವಿಗೆ ಧಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ. 1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡಿದ್ದಾರೆ. ತನ್ನ ಆರೈಕೆಯಲ್ಲಿ ಇರುವ ಹಾವುಗಳಿಗೆ ತನು ಏರೆಯುವ ಮೂಲಕ ನಾಗರ ಪಂಚಮಿಯನ್ನು ಆಚರಿಸುತ್ತಾರೆ. ಎಲ್ಲಾ ಕಡೆ…
ಟಾಪ್ 4 ನ್ಯೂಸ್ ಮಲ್ನಾಡ್ ಶಿವಮೊಗ್ಗ: ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ – ಮೂಡಿಗೆರೆ: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು – ಸಾಗರ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ – ಶಿವಮೊಗ್ಗ: ಶ್ರೀಗಂಧದ ತುಂಡು ಸಾಗಾಟ ಮೂವರು ಸೆರೆ NAMMUR EXPRESS NEWS ಶಿವಮೊಗ್ಗ : ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕ ನೋರ್ವನ ಶವವೊಂದು ಪತ್ತೆಯಾಗಿದ್ದು ಆತನನ್ನು ಸ್ಥಳೀಯ ನಿವಾಸಿ ನಿತಿನ್ ಎಂದು ಗುರುತಿಸಲಾಗಿದೆ. ಅಂಗವಿಕಲನಾಗಿದ್ದ ನಿತಿನ್ (29) ತುದಿಗಾಲಿನಲ್ಲಿ ನಡೆಯುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಚಹದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇವರ ತಾಯಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಗ್ರಾಮದಲ್ಲಿನ ಕೆರೆಯಲ್ಲಿ ಅಂಗಾತ ಬಿದ್ದು ಎರಡು ಕಾಲು ಗಳು ಕೆರೆಯಹೊರಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದನು. ನಿತಿನ್ ಮತ್ತು ಅವರ ತಾಯಿ ಇಬ್ಬರೇ ಇದ್ದು ಕೆರೆಯಲ್ಲಿ ಆಯತಪ್ಪಿ ಅಥವಾ ಕಾಲು ಜಾರಿ ಬಿದ್ದಿರುವ…
ಮುಂಜಾನೆಯಿಂದ ನಾಗರ ಪೂಜೆ! – ನಾಗ ದೇವಾಲಯ, ನಾಗರಕಟ್ಟೆಯಲ್ಲಿ ಪೂಜೆ – ಹೂವು, ಹಣ್ಣು ಹಾಕಿ ವಿಶೇಷ ಪ್ರಾರ್ಥನೆ NAMMUR EXPRESS NEWS ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುವ ಈ ಹಬ್ಬದ ದಿನ ನಾಗ ದೇವರನ್ನು ಪೂಜಿಸಿ ಉಪವಾಸ ಮಾಡುವ ಸಂಪ್ರದಾಯವಿದೆ. ನಾಗ ದೇವರನ್ನು ಪೂಜಿಸುವುದರಿಂದ ವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ. ಹಾಗಾಗಿ ನಾಗ ದೇವಾಲಯ, ನಾಗರ ಕಟ್ಟೆಗಳಲ್ಲಿ ನಾಗನಿಗೆ ಹಾಲು ಎರೆದು ವಿಶೇಷ ಪೂಜೆ ಮಾಡಲಾಗುತ್ತಿದೆ. ಮುಂಜಾನೆ ಎದ್ದು ಶುದ್ಧರಾಗಿ ಹೊಸ ಬಟ್ಟೆಯನ್ನು ಧರಿಸಿ, ನಾಗರ ಕ್ಲಲುಗಳಿಗೆ ಹಾಲೆರೆದು, ಅರಿಶಿನ,ಕುಂಕುಮ, ಕೇದಿಗೆ ಹೂವು, ನಾಗರಿಗೆ ಪ್ರಿಯವಾದ ಭೋಗವನ್ನು ಅರ್ಪಿಸಿ, ದೂಫ ದೀಪ ಬೆಳಗಿ ಪ್ರದಕ್ಷಿಣೆಯನ್ನು ಹಾಕಲಾಗುತ್ತಿದೆ. ಎಂಟು ಹಾವುಗಳನ್ನು ಈ ಹಬ್ಬದ ಪ್ರಮುಖ ದೇವರುಗಳೆಂದು ಪರಿಣಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ,…
ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಸಜ್ಜು! – ಭಾರತದ ಹೆಮ್ಮೆಯ ದಿನಕ್ಕೆ ಹಲವು ವಿಶೇಷ – ರಾಜಧಾನಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಶುರು NAMMUR EXPRESS NEWS ಬೆಂಗಳೂರು: ದೇಶದ ಸ್ವಾತಂತ್ರ್ಯ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಸ್ವಾತಂತ್ರ್ಯ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಇದೀಗ ದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹಬ್ಬಕ್ಕೆ ಭಾರೀ ಸಿದ್ಧತೆ ನಡೆದಿದೆ. ಇನ್ನು ಹಳ್ಳಿ ಹಳ್ಳಿಯಲ್ಲೂ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಶುರು ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆರಂಭವಾಗುತ್ತಿದ್ದು, ಆಗಸ್ಟ್ 19ರ ವರೆಗೆ ಫ್ಲವರ್ ಶೋ ಇರಲಿದೆ. 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಈ ಬಾರಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್ಶೋ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು…
ನೀರಜ್ ಚೋಪ್ರಾಗೆ ಬೆಳ್ಳಿ, ಹಾಕಿಯಲ್ಲಿ ಕಂಚು ಸಂಭ್ರಮ! – ಭಾರತದ ಚಿನ್ನದ ಪದಕದ ಆಸೆ ಈಡೇರಲಿಲ್ಲ – ಭಾರತಕ್ಕೆ ಐದನೇ ಪದಕ ತಂದುಕೊಟ್ಟ ಚೋಪ್ರಾ NAMMUR EXPRESS NEWS ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಸ್ಟಾರ್ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಹಾಗೂ ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್ ದಾಖಲೆಯ 92.97 ಮೀಟರ್ ಎಸೆಯುವ ಮೂಲಕ ಬಂಗಾರ ಗೆದ್ದರು. ಹೀಗಾಗಿ ನೀರಜ್ ಚೋಪ್ರಾ ಅವರಿಗೆ ಬೆಳ್ಳಿಯ ಪದಕ ಲಭಿಸಿತು. ಅವರು 89.45 ದೂರ ಎಸೆಯುವ ಮೂಲಕ ಭಾರತಕ್ಕೊಂದು ಪದಕವನ್ನು ತಂದುಕೊಟ್ಟರು. ಇದು ಭಾರತದ ಪಾಲಿಗೆ ಹಾಲಿ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಐದನೇ ಪದಕ. ನೀರಜ್ ತಂದ ಬೆಳ್ಳಿಯೇ ಅದರಲ್ಲಿ ಗರಿಷ್ಠ ಪದಕವಾಗಿದೆ. ಆದಾಗ್ಯೂ ನೀರಜ್ ಚಿನ್ನ ಗೆಲ್ಲುತ್ತಾರೆಂಬ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆ ಹುಸಿಯಾಯಿತು. ನೀರಜ್ ಚೋಪ್ರಾ ಅವರ ಮೊದಲ ಎಸೆತವೇ ಪೌಲ್. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ…
ನಾಗರ ಪಂಚಮಿ ದಿನ ರಾಶಿ ಭವಿಷ್ಯ ಹೇಗಿದೆ? – ನಾಗದೇವನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ** ಮೇಷ ರಾಶಿ: ಇಂದು ತುಂಬಾ ಶುಭ ದಿನವಾಗಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೋಪ ಮತ್ತು ವಾದಗಳನ್ನು ನಿಯಂತ್ರಿಸಿ, ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಇಂದು, ನೀವು ಹೆಚ್ಚು ಕೆಲಸ ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳಿರುವುದಿಲ್ಲ. ** ವೃಷಭ ರಾಶಿ : ನಿಮಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ, ನಿಮ್ಮ ಪ್ರೇಮ ಜೀವನ ಇಂದು ಸಂತೋಷವಾಗಿರುತ್ತದೆ. ** ಮಿಥುನ ರಾಶಿ…