Author: Nammur Express Admin

ತೀರ್ಥಹಳ್ಳಿ, ಗಾಜನೂರಲ್ಲಿ ತುಂಗಾ ನದಿಗೆ ಬಾಗಿನ..! – ಕಟ್ಟಡ ಸೋರಿಕೆ ಬಗ್ಗೆ ಶಾಸಕ ಸ್ಪೋಟಕ ಹೇಳಿಕೆ – ಕೈಯಲ್ಲಿ ಆಗದವರು ಮಾತನಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ NAMMUR EXPRESS NEWS ಶಿವಮೊಗ್ಗ/ತೀರ್ಥಹಳ್ಳಿ: ತೀರ್ಥಹಳ್ಳಿ ಶಾಸಕ, ಶಿವಮೊಗ್ಗ ಸಂಸದ ರಾಘವೇಂದ್ರ ಸೇರಿ ಗಾಜನೂರು ತುಂಗಾ ಆಣೆಕಟ್ಟಿಗೆ ಬಾಗಿನ ಅರ್ಪಿಸಿದ ಬಳಿಕ ಶನಿವಾರ ಮಧ್ಯಾಹ್ನ 12:30 ಕ್ಕೆ ಶಾಸಕ ಅರಗ ಜ್ಞಾನೇಂದ್ರ, ತಮ್ಮ ಪಕ್ಷದ ಮುಖಂಡರ ಒಳಗೊಂಡು ಹಾಗೂ ತಾಲೂಕು ದಂಡಾಧಿಕಾರಿ ಸೇರಿ, ತುಂಗಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದ ನೇತೃತ್ವವನ್ನು ಲಕ್ಷ್ಮೀಶ ತಂತ್ರಿಗಳು ನಡೆಸಿಕೊಟ್ಟರು. ತೀರ್ಥಹಳ್ಳಿ ತಾಲೂಕಿಗೆ ಯಾವುದೇ ತೊಂದರೆ ತಾಪತ್ರಯ ಆಗೋದು ಬೇಡ. ಈ ಬಾರಿ ಮಳೆ ಚೆನ್ನಾಗಿ ಬಂದಿದೆ, ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಒಳ್ಳೆಯದಾಗಲಿ. ಬೆಳೆಗಳು ಉತ್ತಮವಾಗಿ ಬರಲಿ ತಾಲೂಕು, ನಮ್ಮ ನಾಡಿಗೆ ಸಮೃದ್ಧಿ ಉಂಟಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಕೈಯಲ್ಲಿ ಆಗದವರು ಮಾತನಾಡುತ್ತಾರೆ… ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಸೋರಿಕೆಯ ಪ್ರಶ್ನೆಯ…

Read More

ಕರಾವಳಿ ಟಾಪ್ ನ್ಯೂಸ್ ಪುತ್ತೂರು: ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ಯುವಕ ನಾಪತ್ತೆ! – ಹೊಳೆಗೆ ಹಾರಿದನೋ..? ಮೃತದೇಹಕ್ಕಾಗಿ ಶೋಧ – ಬೆಳ್ತಂಗಡಿ: ಮಳೆಯಿಂದಾಗಿ ಶಿಶಿಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ನೀರು! – ಮಂಗಳೂರು: ಸರ್ಕಾರಿ ಬಸ್‌ ಮೇಲೆ ಉರುಳಿ ಬಿದ್ದ ಮರ! – ಕಟೀಲು ಕ್ಷೇತ್ರಕ್ಕೆ ಬಾಲಿವುಡ್ ನಿರ್ದೇಶಕಿ ಏಕ್ತಾ ಕಪೂರ್ ಭೇಟಿ! – ಮಂಗಳೂರು: ಮೊಗೇ‌ರ್ ಕುದ್ರು ಗ್ರಾಮ ಜಲಾವೃತ…! NAMMUR EXPRESS NEWS ಪುತ್ತೂರು: ಹೊಳೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಪುತ್ತೂರು-ಸವಣೂರು ರಸ್ತೆಯ ಸರ್ವೆಯ ತುಂಬಿ ಹರಿಯುವ ಗೌರಿ ಹೊಳೆ ಬಳಿ ನಡೆದಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಹೊಳೆಯಲ್ಲಿ ಸನ್ಮಿತ್‌ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಮುಕ್ರಂಪಾಡಿಯ ಇಂಡಸ್ಟ್ರಿಯಲ್‌ ಎಸ್ಟೇಟ್‌ ಬಳಿಯ ಮಹೀಂದ್ರ ಶೋರೂಂ ನ ಉದ್ಯೋಗಿ ಸನ್ಮಿತ್‌ (21) ಹೊಳೆಗೆ ಹಾರಿದ ಯುವಕನಾಗಿದ್ದಾನೆ. ಈತನ ಸ್ಕೂಟರ್ ಹೊಳೆಯ ಬದಿಯಿಂದ 150ಮೀ ದೂರದಲ್ಲಿ ನಿಲ್ಲಿಸಿದ್ದು ಅದರಲ್ಲಿ ಮೊಬೈಲ್‌ ಫೋನ್‌,…

Read More

ಚಿತ್ರದುರ್ಗ ಟಾಪ್ 5 ನ್ಯೂಸ್..! – ಚಿತ್ರದುರ್ಗ: ಹೆದ್ದಾರಿಯಲ್ಲಿ ಕರಡಿ ಸಾವು.! – ದರ್ಶನ್ ಗ್ಯಾಂಗ್‌ನ 4ನೇ ಆರೋಪಿ ತಾಯಿ ನಿಧನ – ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ! – ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ – ದಾವಣಗೆರೆ: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು! NAMMUR EXPRESS NEWS ಚಿತ್ರದುರ್ಗ: ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗೆರೆಯಿಂದ ಸೀಬಾರ ಬೈಪಾಸ್‌ನಲ್ಲಿ ವಾಹನವೊಂದು ಡಿಕ್ಕಿಯಾಗಿ ಕರಡಿ ಮೃತಪಟ್ಟಿದೆ. ತಮಟಕಲ್ಲು ಬಳಿ ಹೆದ್ದಾರಿಯ ಬೈಪಾಸ್‌ನಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಕರಡಿ ಸ್ಥಳದಲ್ಲೇ ಮೃತಪಟ್ಟಿದೆ. ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಸುತ್ತಲೂ ಬೆಟ್ಟ ಗುಡ್ಡಗಳಿರುವುದರಿಂದ ಕರಡಿ ಸೇರಿದಂತೆ ವನ್ಯಜೀವಿಗಳು ಅತ್ತಿಂದಿತ್ತ ಓಡಾಡುವುದು ಸಾಮಾನ್ಯ. ಆದರೆ, ಹೊಸದಾಗಿ ನಿರ್ಮಾಣವಾಗಿರುವ ಹೆದ್ದಾರಿಯಲ್ಲಿ ಈ ಪ್ರಾಣಿಗಳು ಸಂಚರಿಸುವಾಗ ಅಪಘಾತಗಳಾಗುತ್ತಿರುವುದು ಆತಂಕದ ವಿಚಾರವಾಗಿದೆ. ಈ ಹಿಂದೆಯೂ ಸಾಕಷ್ಟು ಅಪಘಾತಗಳು…

Read More

ನಾಯಿ ಬೈಕಿಗೆ ಕಟ್ಟಿ ಎಳೆದ ದೃಶ್ಯ ವೈರಲ್! – ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಘಟನೆ – ದೃಶ್ಯ ಮೊಬೈಲಲ್ಲಿ ಸೆರೆ: ವ್ಯಾಪಕ ಆಕ್ರೋಶ NAMMUR EXPRESS NEWS ಶಿರ್ವ: ಮೂ ಕಪ್ರಾಣಿಗಳ ಬಗೆಗಿನ ಕಳಕಳಿ ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಕರುಳು ಹಿಂಡುವ ಘಟನೆಯೊಂದು ಕಂಡುಬಂದಿದೆ. ವ್ಯಕ್ತಿಯೊರ್ವ ಸರಪಳಿಯಿಂದ ನಾಯಿಯ ಕುತ್ತಿಗೆಗೆ ಬಿಗಿದು ಅದನ್ನು ತನ್ನ ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಶಿರ್ವ ಪೇಟೆಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು,ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯ ಈ ಬಗೆಯ ಅಮಾನುಷ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

Read More

ಮೈಸೂರು ಟಾಪ್ 3 ನ್ಯೂಸ್..! – ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಗಂಭೀರ..! – ಕೆಆರ್ ಎಸ್ ನಿಂದ ನದಿಗೆ ಹರಿದ ನೀರು: ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ತಾತ್ಕಾಲಿಕ ಬಂದ್ – ಮನೆಯ ಗೋಡೆ ಕುಸಿದು ಗೃಹಿಣಿ ಸಾವು! NAMMUR EXPRESS NEWS ಮೈಸೂರು: ಗ್ಯಾಸ್‌ ಟ್ಯಾಂಕರ್‌ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೈಸೂರಿನ ಹೊರ ವಲಯದ ರಿಂಗ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಚಂದ್ರು ಮತ್ತು ಪ್ರೇಮಾ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿಯಾದ ಈ ದಂಪತಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗ್ಯಾಸ್ ಟ್ಯಾಂಕ‌ರ್ ಬೈಕ್‌ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಚಂದ್ರು ಅವರು ಗಂಭೀರ ಗಾಯಗೊಂಡರೆ, ಸಣ್ಣ-ಪುಟ್ಟ ಗಾಯದಿಂದ ಪ್ರೇಮಾ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ರಸ್ತೆ ಪೂರ್ತಿ ರಕ್ತಸಿಕ್ತವಾಗಿತ್ತು. ಸ್ಥಳಕ್ಕೆ ವಿವಿ ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

Read More

12 ಕಾಲು ಬೆರಳು, 13 ಕೈಬೆರಳಿರುವ ಮಗು! – ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಘಟನೆ – ಮಗು ನೋಡಲು ಜನವೋ ಜನ..! NAMMUR EXPRESS NEWS ಬಾಗಲಕೋಟೆ : ರಾಜ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು 12 ಕಾಲ್ಪೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ನಡೆದಿದೆ. ಮಗುವಿನ ಬಲಗೈಗೆ 6, ಎಡಗೈಗೆ 7 ಮತ್ತು ಎರಡು ಕಾಲಿನಲ್ಲಿ ಕೂಡ 6 ಬೆರಳುಗಳಿವೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕ್ರೋಮೋಸೋಮ್ ಗಳಿಂದ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಹೆಂಡತಿ ಮಕ್ಕಳ ಭಾಗ್ಯ ಕರುಣಿಸುವಂತೆ ಕುಂದರಗಿಯ ಭುವನೇಶ್ವರಿ ದೇವಿಗೆ ಹರಕ್ಕೆ ಹೊತ್ತಿದ್ದಳು. ಹರಕ್ಕೆ ಹೊತ್ತ 4ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರೆಯಿತು ಎಂದು ಮಗುವಿನ ತಂದೆ ಗುರಪ್ಪ ಸಂತಸ ಹಂಚಿಕೊಂಡಿದ್ದಾರೆ

Read More

ಶಿವಮೊಗ್ಗ ಜಿಲ್ಲೆಯ ಟಾಪ್ 5 ನ್ಯೂಸ್ ಶಿಕಾರಿಪುರ: ಬಾವಿಯಲ್ಲಿ ಬಿದ್ದು ಕರಡಿ ಸಾವು! – ತೀರ್ಥಹಳ್ಳಿ: ಮನೆ ಮೇಲೆ ಬಿದ್ದ ತೆಂಗಿನ ಮರ – ಸಾಗರ: ಮುಂದುವರೆದ ಮಳೆ: 3 ಮನೆಯ ಗೋಡೆ ಕುಸಿತ – ಸೊರಬ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನಾಪತ್ತೆ – ಹೊಸನಗರ : ಸೊನಲೆ ಬೋರಿಕೊಪ್ಪದಲ್ಲಿ ಧರೆ ಕುಸಿತ NAMMUR EXPRESS NEWS ಶಿಕಾರಿಪುರ: ಬಾವಿಯಲ್ಲಿ ಬಿದ್ದ ಕರಡಿಯನ್ನು ಅರಣ್ಯ ಇಲಾಖೆ ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿದ ಘಟನೆ ತಾಲೂಕಿನ ಹುಲ್ಲಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಹುಲ್ಲಿನ್ ಕಟ್ಟೆ ಗ್ರಾಮದ ಸುಮಾರು 40 ರಿಂದ 50 ವರ್ಷದ ಹಳೆಯ ಬಾವಿಯಲ್ಲಿ ಹತ್ತು ವರ್ಷದ ಕರಡಿ ಬಿದ್ದಿದನ್ನ ಗಮನಿಸಿದ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕ ದಳದ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ಜೀವಂತವಾಗಿ ಮೇಲಕ್ಕೆ ಎತ್ತಿದರು. ತೀವ್ರ ಗಾಯಗೊಂಡಿದ್ದ…

Read More

ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸೇವೆ! – ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪತ್ರಕ್ಕೆ ರೈಲ್ವೆ ಇಲಾಖೆ ತುರ್ತು ಸ್ಪಂದನೆ – ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ NAMMUR EXPRESS NEWS ಮಂಗಳೂರು: ಶಿರಾಡಿ ಘಾಟಿ ಹಾಗೂ ಸಂಪಾಜೆ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮಂಗಳೂರು ನಡುವೆ ಹೆಚ್ಚುವರಿ ರೈಲು ಸಂಚಾರವನ್ನು ಪ್ರಾರಂಭಿಸಬೇಕೆಂದು ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ತುರ್ತು ಸ್ಪಂದಿಸಿರುವ ರೈಲ್ವೆ ಇಲಾಖೆಯು ಮಂಗಳೂರು ಹಾಗೂ ಬೆಂಗಳೂರು ನಡುವೆ ಇಂದಿನಿಂದಲೇ ಮುಂದಿನ ನಾಲ್ಕು ದಿನಗಳಿಗೆ ವಿಶೇಷ ರೈಲು ಸಂಚಾರವನ್ನು ಪ್ರಾರಂಭಿಸಿದೆ. ಈ ರೈಲು ಸೇವೆಗಳು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ನೀಡಿದೆ. ರಸ್ತೆ…

Read More

ಎನ್. ಆರ್ ಪುರ ಆಸ್ಪತ್ರೆ ಸೋರುತೈತೆ..! – ರೋಗಿಗಳಿಗೆ, ಜನರಿಗೆ ಮಳೆಗಾಲದಲ್ಲಿ ಸಂಕಟ – ನೆನೆದುಕೊಂಡು ಚೀಟಿ ತೆಗೆದುಕೊಳ್ಳಬೇಕು NAMMUR EXPRESS NEWS ಎನ್.ಆರ್.ಪುರ: ಸಾರ್ವಜನಿಕ ಆಸ್ಪತ್ರೆ ನರಸಿಂಹರಾಜಪುರ ಇಲ್ಲಿನ ಹೊರ ರೋಗಿಗಳ ನೋಂದಣಿ ವಿಭಾಗದ ಬಳಿ ಮಳೆ ನೀರು ಸೋರುತ್ತಿದ್ದು., ನೋಂದಣಿಗೆ ಬಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್ ನಾಗೇಶ್‌ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು ಜನರು ಆರ್‌ಸಿಸಿ ಕಟ್ಟಡದೊಳಗೆ ಮಳೆಯಲ್ಲಿ ನೆನೆದುಕೊಂಡು ತಮ್ಮ ಹೆಸರು ನೋಂದಾಯಿಸುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ವೈದ್ಯರ ಕೊಠಡಿಗಳ ಎದುರು ಹೊರ ರೋಗಿಗಳಿಗಾಗಿ ಆಸದ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ಮೇಲೂ ನೀರು ಬೀಳುತ್ತಿದ್ದು ಯಾರೂ ಕೂರಲಾಗಲಾಗದ ಪರಿಸ್ಥಿತಿ ಇದೆ. ಈ ಬಗ್ಗೆ ಮಾನ್ಯ ಶಾಸಕರು ಗಮನ ಹರಿಸಿ ಆಸ್ಪತ್ರೆಯಲ್ಲಿ ಮಳೆಯ ನೀರು ಸೋರದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಫೋನ್ ಇಲ್ಲ! ಸರ್ಕಾರಿ ಆಸ್ಪತ್ರೆಯಲ್ಲಿ…

Read More

ಇನ್ನು ಮಳೆ ಕಡಿಮೆ ಆಗಲ್ಲ!.. ಹುಷಾರು! – ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರಿ ಮಳೆ – ಗಾಳಿ ಸಹಿತ ಬಾರಿ ಮಳೆ: 11 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ – 15 ದಿನದಿಂದ ಬಿಡದ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ NAMMUR EXPRESS NEWS ಬೆಂಗಳೂರು: ಮಳೆಗಾಲ ಈ ಸಲ ಭಾರೀ ಅವಾಂತರ ಸೃಷ್ಟಿ ಮಾಡಿದ್ದು ಸಾವಿರಾರು ಕೋಟಿ ನಷ್ಟ ಮಾಡಿದೆ. ಎಲ್ಲಾ ಕಡೆ ರಸ್ತೆ, ಸೇತುವೆ, ಕಟ್ಟಡ ಕುಸಿಯುತ್ತಿದೆ. 15 ದಿನದಿಂದ ಬಿಡದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ರಾಜ್ಯಾದ್ಯಂತ ಭಾರಿ ಮಳೆಯಾಗಲಿದ್ದು, ಮುಂಜಾಗ್ರತಾ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ತುಮಕೂರು…

Read More