Author: Nammur Express Admin

ಉಡುಪಿ ಘಟನೆ ಮಾಸುವ ಮುನ್ನ ವಿಟ್ಲ ಬಳಿ ಗ್ಯಾಂಗ್ ರೇಪ್! – ಕೇರಳ ಮೂಲದ ಯುವಕರಿಂದ ಬಾಲಕಿ ಅತ್ಯಾಚಾರ – ವಿದ್ಯಾರ್ಥಿನಿಯರ ಚಿತ್ರೀಕರಣ ಕೇಸ್‌: ತನಿಖಾಧಿಕಾರಿ ಬದಲಾವಣೆ – ಗೌಪ್ಯ ಸ್ಥಳದಲ್ಲಿ ವಿದ್ಯಾರ್ಥಿನಿಯರ ವಿಚಾರಣೆ NAMMUR EXPRESS NEWS ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗ್ಯಾಂಪ್‌ ರೇಪ್‌ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರುವಾಯಿ ಗ್ರಾಮದ 16 ವರ್ಷ ಪ್ರಾಯದ ಬಾಲಕಿಗೆ ಕೇರಳ ಭಾಗದ ಕೆಲವು ಯುವಕರಿಂದ ಹಲವು ಸಮಯದಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಶನಿವಾರ ವಿಟ್ಲ ಠಾಣೆಗೆ ಆಗಮಿಸಿದ ಪರಿಶಿಷ್ಟಪಂಗಡದ ಬಾಲಕಿಯ ಪೋಷಕರು ಘಟನೆಯ ಬಗ್ಗೆ ಕೇರಳ ಮೂಲದ ಕೆಲವು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ಚಿತ್ರೀಕರಣ ಕೇಸ್‌: ತನಿಖಾಧಿಕಾರಿ ಬದಲಾವಣೆ ಖಾಸಗಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಯನ್ನು ಉಡುಪಿ ಎಸ್‌ಪಿ ಬದಲಾಯಿಸಿದ್ದಾರೆ.…

Read More

ಬೀದಿ ನಾಯಿಗಳಿಗೆ ಹಾಕ್ತಾರೆ ‘ಮೈಕ್ರೋ ಚಿಪ್’! – ನಾಯಿಗಳಿಗೆ ಈಗ ಸಂತಾನ ಹರಣಕ್ಕೆ ಹೊಸ ಪ್ಲಾನ್ – ನಾಯಿ ಎಷ್ಟಿದೆ ಎಂದು ಸಮೀಕ್ಷೆಗಾಗಿ ನಾಯಿಗೆ ಚಿಪ್ – ಬೆಂಗಳೂರಲ್ಲಿವೆ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳು! NAMMUR EXPRESS NWES ಬೆಂಗಳೂರು: ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೀಕರಣದ ಪುನಾರಾರ್ವತನೆ ತಪ್ಪಿಸುವುದಕ್ಕೆ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಮೂಲಕ ಪ್ರತಿಯೊಂದು ಬೀದಿ ನಾಯಿಯ ದತ್ತಾಂಶ ದಾಖಲೆಯನ್ನು ಡಿಜಿಟಲಿಕರಣಗೊಳಿಸುವ ಸಿದ್ಧತೆಯನ್ನು ಬಿಬಿಎಂಪಿ ನಡೆಸಿದೆ. ರಾಜಧಾನಿ ನಗರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಈ ನಾಯಿಗಳಿಗೆ ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ, ಆಯಂಟಿ ರೇಬಿಸ್ ಸೇರಿದಂತೆ ವಿವಿಧ ರೋಗಗಳಿಗೆ ಲಸಿಕೆ, ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಯಾವ ನಾಯಿಗೆ ಈಗಾಗಲೇ ಸಂತಾನ ಹರಣ ಶಸ್ತ್ರಚಿಕಿತ್ಸೆ, ಆಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ಯಾವ ನಾಯಿಗೆ ನೀಡಿಲ್ಲ ಎಂಬುದು ತಿಳಿಯುವುದು ಕಷ್ಟ. ಹೀಗಾಗಿ, ಪ್ರತಿ ವರ್ಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು…

Read More

ಆಗಸ್ಟ್ 1 ದುಬಾರಿ ದಿನ! – ಅನೇಕ ದಿನ ಬಳಕೆಯ ವಸ್ತುಗಳ ನೂತನ ದರ ಜಾರಿ – ನಂದಿನಿ ಹಾಲು, ಹೋಟೆಲ್ ದರವೂ ಹೆಚ್ಚಳ – ಕೆಎಸ್‌ಆರ್‌ಟಿಸಿ ಬಸ್ ಬಾಡಿಗೆ ದರ ಏರಿಕೆ ಆಯ್ತು NAMMUR EXPRESS NEWS ಬೆಂಗಳೂರು : ವಿದ್ಯುತ್, ಹಾಲಿನ ದರ ಹೆಚ್ಚಳದ ನಂತರ ಇದೀಗ ಒಪ್ಪಂದದ ಮೇಲೆ ಪಡೆಯಲಾಗುವ ಕೆಎಸ್‌ಆರ್‌ಟಿಸಿ ಬಸ್ ಬಾಡಿಗೆ ದರದಲ್ಲೂ ಏರಿಕೆ ಮಾಡಲಾಗಿದೆ. ಆ.1ರಿಂದ ಬಹುತೇಕ ವಸ್ತುಗಳ ಬೆಲೆ ಏರಿಕೆ ಆಗಲಿದೆ. ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಹೊರೆ ಭರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯ ಬೊಕ್ಕಸ ತುಂಬಿಸಲು ಮತ್ತು ಶಕ್ತಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಆದಾಯ ಹೆಚ್ಚಳಕ್ಕೆ ರಾಜ್ಯದ ಪ್ರಮುಖ ಇಲಾಖೆಗಳಿಗೆ ಸೂಚಿಸಿದ ಬೆನ್ನಲ್ಲೇ ಸಾರಿಗೆ ಇಲಾಖೆಯ ಬಸ್ ದರ ಹೆಚ್ಚಳಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ರಸ್ತೆ ಸಾರಿಗೆಯ 7 ವಿಧದ ಬಸ್‌ಗಳ ದರವನ್ನು ಪ್ರತಿ ಕಿ. ಮೀ.ಗೆ 2 ರೂಪಾಯಿ ನಿಂದ 5 ರೂಪಾಯಿಯವರೆಗೆ ಹೆಚ್ಚಿಸಲಾಗಿದ್ದು, ನೂತನ ದರ…

Read More

ಅಯ್ಯೋ…ಖಾಸಗಿ ವಿಡಿಯೊ ವೈರಲ್ ಆಗಿದ್ದಕ್ಕೆ ಪ್ರೇಮಿಗಳ ಆತ್ಮಹತ್ಯೆ! – ದಾವಣಗೆರೆಯಲ್ಲಿ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ – ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಕಾರು NAMMUR EXPRESS NWES ದಾವಣಗೆರೆ: ( Davanagere ) ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ವಿಡಿಯೊ ಟ್ರೋಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ದಾವಣಗೆರೆ ನಗರದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಮಹಡಿ ಮೇಲೆ ಏಕಾಂತದಲ್ಲಿ ಇದ್ದರು. ಯಾರೋ ಕಿಡಿಗೇಡಿಗಳು ಇದನ್ನೂ ಮೊಬೈಲ್‌ನಲ್ಲಿ ಸೆರೆಯಿಡಿದು ವೈರಲ್ ಮಾಡಿದ್ದರು. ಖಾಸಗಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಮನನೊಂದು ತುಂಬಿಗೆರೆ ಗ್ರಾಮದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತ ಆಲೂರಟ್ಟಿ ತಾಂಡಾದ ರತನ್ (20) ಜು.29 ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಆದರೆ ಆತನೂ ರಾತ್ರಿ ಹಾಸ್ಟೆಲ್ ಸಮೀಪದಲ್ಲಿದ್ದ ಮರಕ್ಕೆ ನೇಣಿ ಬಿಗಿದುಕೊಂಡು ಮೃತಪಟ್ಟಿದ್ದಾನೆ. ಬೆಳಗ್ಗೆ ಜು.29 ಮರದಲ್ಲಿ ಯುವಕನ ಶವ ನೇತಾಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು…

Read More

ಛೇ.. ನೀಚ ತಾಯಿ ತಂದೆ ಹೀಗೂ ಇದ್ದಾರೆ! – ರೀಲ್ಸ್ ಮಾಡಲು ಐಫೋನ್ ಖರೀದಿಸಲು ಮಗುವನ್ನೇ ಮಾರಿದ ತಂದೆ ತಾಯಿ! – ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ನದಿಗೆ ಹಾರಿದಳು! – ಗೋಡೆಗಳ ಮೇಲೆ ಅಶ್ಲೀಲ ಬರಹ: ಆರೋಪಿ ಪಾಗಲ್ ಪ್ರೇಮಿಯ ಬಂಧನ! NAMMUR EXPRESS NEWS ಮೊಬೈಲ್, ಸಾಮಾಜಿಕ ಜಾಲ ತಾಣದ ಹುಚ್ಚು ಇಡೀ ಬದುಕನ್ನೇ ನಾಶ ಮಾಡುತ್ತಿದೆ. ಈ ನಡುವೆ ತಂದೆ ತಾಯಿ ಮೊಬೈಲ್ ಖರೀದಿ ಮಾಡಲು ಮಗುವನ್ನೇ ಮಾರಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ( Reels ) ರೀಲ್ಸ್ ಹುಚ್ಚಿಗೆ ಬಿದ್ದಿದ್ದ ದಂಪತಿ, ಐಫೋನ್ 14 ಪ್ರೋ ಖರೀದಿಸಲು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ತಾಯಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ತಂದೆ ಜಯದೇವ್‌ ಘೋಷ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. 8 ತಿಂಗಳ ಮಗು…

Read More

ಐಟಿ ರಿಟರ್ನ್ಸ್‌ ಸಲ್ಲಿಸದಿದ್ರೆ 5,000 ರೂ. ದಂಡ! – ಜು.31 ಕೊನೆ ದಿನ: 3 ದಿನ ಮಾತ್ರ ಬಾಕಿ – ಐಟಿ ಮಾಡದಿದ್ರೆ ಲೋನ್ ಸಿಗಲ್ಲ NAMMUR EXPRESS NEWS ನವ ದೆಹಲಿ: 2021-22ರ ಆದಾಯಕ್ಕೆ ಸಂಬಂಧಿಸಿದಂತೆ 2022-23ನೇ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ (ಐಟಿಆರ್‌) ಸಲ್ಲಿಕೆಗೆ ಜು.31 ಕೊನೆಯ ದಿನವಾಗಿದೆ. ಗಡುವು ವಿಸ್ತರಣೆ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆಯಾದರೂ, ವಿಸ್ತರಣೆ ಮಾಡುವುದಿಲ್ಲ ಎಂದು ಐಟಿ ಇಲಾಖೆ ಈಗಾಗಲೇ ಅನೇಕ ಸಲ ಸ್ಪಷ್ಟಪಡಿಸಿದೆ. ಇದರ ನಡುವೆ ಗಡುವಿನ ದಿನಾಂಕಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಅಂದಹಾಗೇ, ಗಡುವು ಮುಗಿದ ಬಳಿಕವೂ ತಡವಾಗಿ ಈ ವರ್ಷದ ಡಿಸೆಂಬರ್‌ 31ರವರೆಗೂ ಐಟಿಆರ್‌ ದಾಖಲಿಸಲು ಅವಕಾಶವಿರುತ್ತದೆ. ಆದರೆ, ದಂಡ ತೆರಬೇಕಾಗುತ್ತದೆ. ತೆರಿಗೆ ವಿನಾಯಿತಿಯ ಪ್ರಯೋಜನವೂ ತಪ್ಪಲಿದೆ. ದೊಡ್ಡ ಮೊತ್ತದ ತೆರಿಗೆ ಪಾವತಿದಾರರು ತೆರಿಗೆ ಪಾವತಿಸುವುದರಲ್ಲಿ ತಡವಾದರೆ, ಪಾವತಿಸದ ತೆರಿಗೆಗೆ ಶೇಕಡ 2ರಷ್ಟು ಬಡ್ಡಿಯು ಆಗಸ್ಟ್‌ನಿಂದ ಅನ್ವಯವಾಗಲಿದೆ. ತಡವಾಗಿ ಐಟಿಆರ್‌ ಸಲ್ಲಿಕೆಯಾದರೆ, ಐದು…

Read More

ಮಂಗಳೂರು ಕುಕ್ಕರ್ ಸ್ಫೋಟ ಕೇಸ್ ಟ್ವಿಸ್ಟ್! – ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತು ಪತ್ತೆ – ಶಂಕಿತ ಯಾಸಿನ್ ಸ್ಥಳ ಮಹಜರು: ಎಲ್ಲೆಲ್ಲಿ ಚಟುವಟಿಕೆ? NAMMUR EXPRESS NEWS ಬೆಂಗಳೂರು: ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ವೇಳೆ ಎನ್‌ಐಎ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಸ್ಪೋಟಕಕ್ಕೆ ಸಂಬಂಧಿಸಿದ ವಸ್ತುವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಘಟನೆಯಿಂದ ಮತ್ತಷ್ಟು ತನಿಖೆ ನಡೆಯಲಿದೆ. ಎನ್‌ಐಎ ಅಧಿಕಾರಿಗಳು ಇದೇ ಗುರುವಾರದಂದು ಶಿವಮೊಗ್ಗದಲ್ಲಿ ಶಂಕಿತ ಯಾಸಿನ್ ಎಂಬಾತನನ್ನು ಸ್ಥಳ ಮಹಜರ್‌ಗೆ ಕರೆತಂದಿದ್ದಾರೆ. ಈ ವೇಳೆ ಆತನಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಸ್ಫೋಟಕದ ವಸ್ತು ಅಧಿಕಾರಿಗಳಿಗೆ ಲಭ್ಯವಾಗಿದೆ. ಕಳೆದ ಗುರುವಾರದಂದು ಯಾಸಿನ್‌ನನ್ನ ಕರೆದುಕೊಂಡು ಬಂದಿದ್ದ ಎನ್‌ಐಎ ಅಧಿಕಾರಿಗಳು ಶಿವಮೊಗ್ಗ ತೀರ್ಥಹಳ್ಳಿ, ಹೊನ್ನಾಳಿ ಸುತ್ತಮುತ್ತ ಸ್ಥಳಮಹಜರು ನಡೆಸಿದ್ದಾರೆ. ಈ ಮಹಜರ್ ವೇಳೆ ಯಾಸಿನ್ ತನ್ನ ಸಂಬಂಧಿಕರ ಮನೆಯೊಂದರ ಸ್ಲಾಬ್ ಮೇಲೆ ಅಡಗಿಸಿಟ್ಟಿದ್ದ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದನ್ನ ತೆಗೆದು ಅಧಿಕಾರಿಗಳಿಗೆ ನೀಡಿದ್ದಾನೆ. ರೆಡ್ ಪಾಸ್ಪರಸ್ ಪೌಡರ್ ಇದಾಗಿದ್ದು, ಸ್ಫೋಟಕದಲ್ಲಿ ಬಳಸುವ ಗನ್‌…

Read More

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನಾಚರಣೆ ಸಂಭ್ರಮ! – ಜುಲೈ 29ರಂದು ಸಂಜೆ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ – 19 ಮಂದಿ ಸಾಧಕರಿಗೆ ಸನ್ಮಾನ: ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ( Thirthahalli ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಘಟಕದ ಆಶ್ರಯದಲ್ಲಿ ಜು.29 ರಂದು ಶನಿವಾರ ಸಂಜೆ 4-30 ಗಂಟೆಗೆ ತೀರ್ಥಹಳ್ಳಿಯ ತುಂಗಾ ಸೇತುವೆ ಸಮೀಪವಿರುವ ಲಯನ್ಸ್ ಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನಾಚರಣೆ ಸಂಭ್ರಮಕ್ಕೆ ಸರ್ವರಿಗೂ ಪತ್ರಕರ್ತರ ಸಂಘ ಸ್ವಾಗತ ಮಾಡಿದೆ. ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ 19 ಮಂದಿ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ಘಾಟಿಸುವರು. ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪಾಂಶುಪಾಲ ಮತ್ತು ಪ್ರಸಿದ್ದ ವ್ಯಂಗ್ಯಚಿತ್ರಕಾರರಾದ ನಟರಾಜ್ ಅರಳಸುರುಳಿ ಅವರು ದಿಕ್ಸೂಚಿ ಭಾಷಣ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀರ್ಥಹಳ್ಳಿ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ವಹಿಸಲಿದ್ದಾರೆ. ಮುಖ್ಯ…

Read More

10 ಕೋಟಿ ಲಾಟರಿ ಹಣ ಗೆದ್ದ ಮಹಿಳೆಯರು! – ಎಲ್ಲರೂ ಸೇರಿ ಲಾಟರಿ ಟಿಕೆಟ್ ತೆಗೆದುಕೊಂಡಿದ್ದರು – ಒಬ್ಬೊಬ್ಬರಿಗೆ ತಲಾ 90 ಲಕ್ಷ ರೂ. ಹಂಚಿಕೆ! NAMMUR EXPRESS NEWS ಮಲಪ್ಪುರಂ: ನಗರ ಸ್ವಚ್ಛಗೊಳಿಸುವ 11 ಮಹಿಳೆಯರ ಪೌರಕಾರ್ಮಿಕ ಗುಂಪೊಂದು 10 ಕೋಟಿ ಲಾಟರಿ ಹಣ ಗೆದ್ದಿದೆ. ಈ ಪ್ರಕರಣ ಭಾರೀ ಕುತೂಹಲ ಮೂಡಿಸಿದೆ. ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್ ಬಂಪರ್ ಆಪ‌ ವಿಜೇತರನ್ನು ಘೋಷಣೆ ಮಾಡಿದ್ದು 11 ಮಹಿಳೆಯರು ವಿಜೇತರಾಗಿದ್ದಾರೆ. ಪರಪ್ಪಂನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ’ಯ 11 ಮಹಿಳೆಯರು ತಲಾ 25 ಷೇರು ಹಾಕಿ ವಾರದ ಹಿಂದೆ 250 ರೂ.ಲಾಟರಿ ಟಿಕೇಟ್ ಖರೀದಿಸಿದ್ದರು. ಇದೀಗ ಅವರು ಕೋಟಿ ಕೋಟಿ ಹಣ ಗೆದ್ದಿದ್ದಾರೆ. ನಾವು ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೇಟ್ ಖರೀದಿಸಿದ್ದೇವು, ಈಗ ಬಹುಮಾನ ಗೆದ್ದಿರುವುದು ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ ಲಾಟರಿ ಹಣ ವಿಜೇತೆ ರಾಧಾ ಎನ್ನುವ ಮಹಿಳೆ. ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ,…

Read More

ರಾಷ್ಟ್ರ ಬಿಜೆಪಿಯಿಂದ ಸಿ.ಟಿ.ರವಿಗೆ ಕೊಕ್! – ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆರವು – ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರಾ ಸಿ.ಟಿ ರವಿ? NAMMUR EXPRESS NEWS ಬೆಂಗಳೂರು: ( Bangalore ) ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗುತ್ತಿದ್ದು, ಬಿಜೆಪಿಯಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ( C T Ravi ) ಸಿಟಿ ರವಿ ಅವರನ್ನು ಸ್ಥಾನದಿಂದ ತೆರವು ಮಾಡಲಾಗಿದ್ದು ಇದೀಗ ರಾಜ್ಯಾಧ್ಯಕ್ಷರಾಗುತ್ತಾರಾ ಎನ್ನುವ ಕುತೂಹಲ ಮೂಡಿದೆ. ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಸ್ಥಾನ ಖಾಲಿ ಇದೆ. ಇಲ್ಲಿ ಪಕ್ಷವನ್ನು ಸಂಘಟನೆ ಮಾಡುವಂತಹ ಪಕ್ಷಕ್ಕೆ ಇಮೇಜ್ ಕೊಡುವಂತಹ ಒಬ್ಬ ನಾಯಕನ ಅವಶ್ಯಕತೆ ಇರುವುದರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ ಅವರ ಹೆಸರು ಕೇಳಿ ಬಂದಿತ್ತು, ಈ ಹಿನ್ನೆಲೆಯಲ್ಲಿ ಅವರನ್ನು ತೆರವು ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನೂ ಮಹತ್ವದ ಸಭೆ ಶೀಘ್ರದಲ್ಲೇ ನಡೆಯಲಿದೆ. ರಾಜ್ಯದಲ್ಲಿ ಒಕ್ಕಲಿಗ ನಾಯಕನಿಗೆ ಹುದ್ದೆ ಸಿಗಲಿದೆ ಎನ್ನಲಾಗಿದೆ. ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ…

Read More