ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರನ ಮೃತದೇಹ ಪತ್ತೆ! – ನದಿಯಲ್ಲಿ ಶವ ಪತ್ತೆ: ಕುಟುಂಬದ ಕಣ್ಣೀರು – ಬ್ಲಾಕ್‌ಮೇಲ್ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್ – ಮಹಿಳೆ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿದ್ರಾ? NAMMUR EXPRESS NEWS ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರನ ಮೃತದೇಹ ಪತ್ತೆಯಾಗಿದೆ. ಇತ್ತ ಮುಲ್ತಾಜ್ ಅಲಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರ ಮುಲ್ತಾಜ್ ಅಲಿ (52) ಎಂಬುವವರು ಸಾಯುವುದಾಗಿ ಕುಟುಂಬಸ್ಥರಿಗೆ ಮಸೇಜ್ ಕಳಿಸಿ ಮಂಗಳೂರು ಹೊರವಲಯದ ಕೂಳೂರು ಬ್ರಿಡ್ಜ್‌ನಲ್ಲಿ ಕಾರು ನಿಲ್ಲಿಸಿ ನಾಪತ್ತೆ ಆಗಿದ್ದರು. ಇದೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಲ್ತಾಜ್ ಅವರ ಮೃತದೇಹ ಸಿಕ್ಕಿದೆ. ತಣ್ಣೀರುಬಾವಿ ಮುಳುಗುಗಾರರು ಮೃತದೇಹ ಪತ್ತೆ ಮಾಡಿ ಹೊರತೆಗೆದಿದ್ದಾರೆ. ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವ ಗೋಳಾಡಿದರು. ಏನಾಗಿತ್ತು? ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಮುಲ್ತಾಜ್ ಆಲಿ,…
Author: Nammur Express Admin
ಗ್ರಾಮ ಪಂಚಾಯಿತಿ ಆಡಳಿತ ಸ್ತಬ್ದ! – ಗ್ರಾಪಂ ಕಾರ್ಯದರ್ಶಿಗಳು, ನೌಕರರ ಜಿಲ್ಲೆಯಾದ್ಯಂತ ಧರಣಿ – ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸುವ ಸಾಧ್ಯತೆ: ಇತರ ಸೇವೆಗಳೂ ಬಂದ್? NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಅಗ್ರಹಿಸಿ ರಾಜ್ಯಾದ್ಯಂತ ಪಂಚಾಯತ್ ಅಭಿವೃದ್ಧಿ (ಪಿಡಿಒ), ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಇತರೆ ನೌಕರರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ಇವರು, ಎಲ್ಲ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸಿದ್ದಾರೆ. ಇದರೊಂದಿಗೆ ಇತರ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ. ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇತರೆ ನೌಕರರು ಧರಣಿ ನಡೆಸಿದ ಕಾರಣ ಪಂಚಾಯಿತಿಗಳು ಎಲ್ಲ ಸೇವೆಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಸೇವೆಗಳು ಬಂದ್ ಆಗಲಿದೆ. ಎರಡು ದಿನ ಮಾತ್ರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಮಟ್ಟದಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಧರಣಿ ಸ್ಥಳಕ್ಕೆ ಹೆಚ್ಚುವರಿ ಕಾರ್ಯದರ್ಶಿ ಉಮಾ ಧವನ್ ಭೇಟಿ ನೀಡಿ…
ಎತ್ತಿಗೆ ಕಟ್ಟಿದ ಹಗ್ಗ ಜೀವ ತೆಗೆಯಿತು! – ಸೊರಬ: ಎತ್ತು ಮೈ ತೊಳೆಯಲು ಹೋದ ಯುವಕ ನೀರುಪಾಲು! – ಚಿಕ್ಕಮಗಳೂರು: ಪ್ರವಾಸಕ್ಕೆ ಬಂದ ಟಿಟಿ ಡ್ರೈವರ್ ಸಾವು – ಶಿವಮೊಗ್ಗ : ಚಿರತೆ ಸಂಚಾರದಿಂದ ಭಯಭೀತರಾದ ಗ್ರಾಮಸ್ಥರು NAMMUR EXPRESS NEWS ಸೊರಬ: ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಕೋಟೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೋಟೆಕೊಪ್ಪ ಗ್ರಾಮದ ನಿವಾಸಿ ಸಂತೋಷ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಯುವಕ ತೆರಳಿದ್ದು, ಈ ವೇಳೆ ಎತ್ತು ಗಾಬರಿಗೊಂಡು ಓಡಿ ಹೋಗಿದೆ. ಎತ್ತಿನ ಹಗ್ಗವು ಸಂತೋಷ್ ಕಾಲಿಗೆ ಸುತ್ತಿಕೊಂಡು, ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಭೇಟಿಯಿತ್ತು, ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದೆ. ಈ ಸಂಬಂಧ ಸೊರಬ ಪೊಲೀಸ್…
ಜಿಲ್ಲಾ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿ.ಯು. ಕಾಲೇಜು ಮತ್ತೊಮ್ಮೆ ಮೇಲುಗೈ! – 23 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ: ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿ NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿ.ಯು. ಕಾಲೇಜು ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಸೆಪ್ಟೆಂಬರ್ 29 ಮತ್ತು 30 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕಾಲೇಜಿನ ತಂಡವು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಶಾಲಿಗಳಾಗುವ ಮೂಲಕ ಒಂದೇ ಕಾಲೇಜಿನ 23 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಥ್ರೋಬಾಲ್ : ಆದ್ವಿ, ಮಾನ್ಯ, ಕವಿಶ್ರೀ, ನಾಗಶ್ರೀ, ನಮನ, ರೋಹಾನಿ, ಆಪ್ತ ರೈ, ತೇಜಸ್ವಿನಿ, ಸಾನಿಕ, ದೀಕ್ಷಾ. ವಾಲಿಬಾಲ್: ಆರ್ಯ, ಸೃಷ್ಟಿ, ದೃತಿ, ನವಮಿ, ನವ್ಯ. ಜಾವೆಲಿನ್ ಥ್ರೋ : ಸಾಗರ್ 400 ಮೀ. & 4× 400 ರಿಲೇ:…
ಹೆಬ್ರಿಯಲ್ಲಿ ಏಕಾಏಕಿ ಜಲ ಪ್ರಳಯ! – ನೆರೆಯಲ್ಲಿ ತೇಲಿಹೋದ ಎರಡು ಕಾರು, ಎರಡು ಬೈಕ್ – ವಿಜಯ ನಗರದಲ್ಲಿ ಸಿಡಿಲಿಗೆ ಎರಡು ಸಾವು – ಭಾರೀ ಮಳೆ ಅಲರ್ಟ್: ಎಚ್ಚರ ಎಚ್ಚರ NAMMUR EXPRESS NEWS ಹೆಬ್ರಿ: ಒಂದೆರಡು ಗಂಟೆ ಸುರಿದ ಭಾರೀ ಮಳೆ ಉಡುಪಿ ಜಿಲ್ಲೆ ಹೆಬ್ರಿಯಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಪಶ್ಚಿಮ ಘಟ್ಟದ ತಪ್ಪಲು ಉಡುಪಿಯ ಹೆಬ್ರಿಯಲ್ಲಿ ಮೇಘ ಸ್ಫೋಟಗೊಂಡಿದೆ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಭಾರೀ ಮಳೆ ಸುರಿದಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಉಂಟಾಗಿದೆ. ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದಿದೆ. ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಎರಡು ಬೈಕ್‌ಗಳು ಭಾರೀ ನೆರೆಯಿಂದ ಕೊಚ್ಚಿ ಹೋಗಿದೆ. ಮೊದಲು ಕೇರಳ ಮೂಲದ ವ್ಯಕ್ತಿಗೆ ಸೇರಿದ್ದ ರಬ್ಬರ್ ತೋಟ ಜಲಾವೃತಗೊಂಡಿದೆ. ಬಳಿಕ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ನವರಾತ್ರಿ 5ನೇ ದಿನ ಯಾವ ರಾಶಿಯವರಿಗೆ ಒಳಿತು? ಯಾವ ರಾಶಿಯವರಿಗೆ ಕೆಡುಕು? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಸ್ವಯಂ ನಿಯಂತ್ರಣದಲ್ಲಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಕೆಲಸದಲ್ಲಿ ಹೆಚ್ಚಳ ಕಂಡುಬರಲಿದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಹಣಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ವಿದೇಶದಲ್ಲಿ ಅಥವಾ ನಗರದ ಹೊರಗೆ ಓದಲು ಬಯಸುವವರಿಗೆ ಕುಟುಂಬದಿಂದ ಬೆಂಬಲ ಸಿಗುತ್ತದೆ. ** ವೃಷಭ ರಾಶಿ : ಇಂದು ನಿಮ್ಮ ವೃತ್ತಿ ಜೀವನದಲ್ಲಿ ನೀವು ಹೊಸ ಗುರುತನ್ನು ಸೃಷ್ಟಿಸಿಕೊಳ್ಳಬಹುದು. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಇನ್ನೂ ತಾಳ್ಮೆ ಕಾಯ್ದುಕೊಳ್ಳಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯು…
ಮೈಸೂರಿನಲ್ಲಿ ಬಾವಿ ಪತ್ನಿ ಕೊಂದು ನೇಣು ಹಾಕಿದನೇ ಗಂಡ!? – ಎಚ್.ಡಿ.ಕೋಟೆಯಲ್ಲಿ ನಡೆದ ದುರಂತ: ಕೊಲೆ ಮಾಡಿಲ್ಲ ಎಂದ! – ಹಾಸನದಲ್ಲಿ ಶಾರ್ಟ್ ಸರ್ಕ್ಯೂಟ್: ಐವರು ಪ್ರಾಣಾಪಾಯದಿಂದ ಪಾರು NAMMUR EXPRESS NEWS ಮೈಸೂರು: ಬಾವಿ ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪವೊಂದು ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕವಿತಾ (20) ಕೊಲೆಯಾದ ದುರ್ದೈವಿ. ನಿರಂಜನ ಅಲಿಯಾಸ್ ಜಗ್ಗ ಎಂಬಾತನ ಮೇಲೆ ಕೊಲೆ ಆರೋಪವಿದೆ. ಪುಟ್ಟಮಲ್ಲಪ್ಪ ಹಾಗೂ ಶಿವನಂಜಮ್ಮ ದಂಪತಿ ಪುತ್ರಿ ಕವಿತಾಳಿಗೆ ಇದೇ ಅಕ್ಟೋಬರ್ 21ಕ್ಕೆ ನಿರಂಜನ ಜತೆಗೆ ಮದುವೆ ದಿನಾಂಕ ನಿಶ್ಚಯವಾಗಿತ್ತು. ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದಿದ್ದ. ಈ ವೇಳೆ ಕವಿತಾ ಜತೆಗೆ ಜಗಳ ಮಾಡಿ ಕೊಲೆ ಮಾಡಿ ನೇಣು ಹಾಕಿ ಪರಾರಿ ಆಗಿದ್ದಾನೆ. ಮನೆಯ ಹೆಂಚು ತೆಗೆದು ಓಡಿ ಹೋಗುವಾಗ ಗ್ರಾಮಸ್ಥರಿಂದ ತಡೆಯುವ ಯತ್ನ ನಡೆದಿದೆ. ಎಚ್.ಡಿ.ಕೋಟೆ ಅಂತರಸಂತೆ ಠಾಣೆಗೆ ತೆರಳಿ ಪೊಲೀಸರಿಗೆ ಆರೋಪಿ…
5 ದಿನ ರಾಜ್ಯದಲ್ಲಿ ಮತ್ತೆ ಭಾರಿ ಮಳೆ! – ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ನಲುಗಿದ ಜನ – ರಾತ್ರಿ ಮಳೆ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು – ಮಲೆನಾಡು, ಕರಾವಳಿಯಲ್ಲಿ ಭೀಕರ ಮಳೆ – ಮಲೆನಾಡಲ್ಲಿ ಅಡಿಕೆ, ಕಾಫಿ ಕಥೆ ಗೋವಿಂದ! – ಉತ್ತರ ಕನ್ನಡ ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು – ದಾವಣಗೆರೆಯಲ್ಲಿ ಮನೆ ಕುಸಿದು ಸಾವು NAMMUR EXPRESS NEWS ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಇನ್ನೂ 5 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲೆಡೆ ಮಳೆಯ ವಾತಾವರಣ ಕಂಡು ಬರುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಚುರುಕಾಗಿದ್ದು, ಧಾರಾಕಾರ ಮಳೆ ಸುರಿದು ಜನ ತತ್ತರಿಸುವಂತೆ ಮಾಡಿದೆ. ಇದೀಗ ದಕ್ಷಿಣ ಕರ್ನಾಟಕ ಭಾಗದಲ್ಲಿಯೂ ಮಳೆ ಅಬ್ಬರ…
ಮಾಜಿ ಶಾಸಕ ಮೊಯ್ದಿನ್ ಬಾವ ಸೋದರ ನಾಪತ್ತೆ!? – ಕುಳೂರು ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ – ಸೇತುವೆಯಿಂದ ಹಾರಿದ ಸಂಶಯ ; ಕಮಿಷನರ್! – ಉಡುಪಿ: ಚಲಿಸುತ್ತಿದ್ದ ಬಸ್ಸಿನಲ್ಲಿ ಏಕಾಏಕಿ ಬೆಂಕಿ,ತಪ್ಪಿದ ದುರಂತ – ಕಡಬ: ಬೈಕ್ ಅಪಘಾತ: ದ್ವಿಚಕ್ರ ಸವಾರ ಸಾವು NAMMUR EXPRESS NEWS ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸೋದರ ಮುಲ್ತಾಜ್ ಆಲಿ ನಾಪತ್ತೆಯಾಗಿದ್ದು ನಗರದ ಕುಳೂರು ಸೇತುವೆಯಲ್ಲಿ ಕಾರು ಬಿಟ್ಟು ಕಾಣೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಶಂಕೆ ಮೂಡಿದೆ. ಕುಳೂರು ಸೇತುವೆಯಲ್ಲಿ ತನ್ನ ಬಿಎಂಡಬ್ಲ್ಯು ಕಾರನ್ನು ಅಪಘಾತಪಡಿಸಿದ ರೀತಿಯಲ್ಲಿ ಬಿಟ್ಟಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸೇತುವೆ ಆಸುಪಾಸಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಪೊಲೀಸರು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ನಸುಕಿನ ಮೂರು ಗಂಟೆ ವೇಳೆಗೆ ಮುಮ್ರಾಜ್ ಮನೆಯಿಂದ ಹೊರಟಿದ್ದು ಈ ವೇಳೆ ತನ್ನ ಮಗಳಿಗೆ ವಾಯ್ಸ್ ಮೆಸೇಜ್ ಹಾಕಿದ್ದರು. ನಾನು ಬದುಕುಳಿಯಲ್ಲ…
ಜೆಡಿಎಸ್ ನಾಯಕ ಕುಮಾರಸ್ವಾಮಿ ಮನೆಯಲ್ಲಿ ತೀರ್ಥಹಳ್ಳಿ ನೇಗಿಲು! – ತೀರ್ಥಹಳ್ಳಿ ಜೆಡಿಎಸ್ ನಾಯಕರಿಂದ ಕೊಟ್ಟ ನೆನಪಿನ ಕಾಣಿಕೆ – ಕುಮಾರಸ್ವಾಮಿ ಅವರ ರೈತ ಪರ ಕಾಳಜಿಗೆ ಗೌರವ NAMMUR EXPRESS NEWS ತೀರ್ಥಹಳ್ಳಿ: ಮಾಜಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಜಾತ್ಯಾತೀತ ಜನತಾದಳ ವತಿಯಿಂದ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಮತ್ತು ಯುವ ಜೆಡಿಎಸ್ ಅಧ್ಯಕ್ಷರಾದ ರಾಘವೇಂದ್ರ ತಲಬಿ ಅವರ ನೇತೃತ್ವದಲ್ಲಿ ಎಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ಸನ್ಮಾನಿಸಿ ರೈತರ ಜೀವ, ಜೀವನ, ರೈತಧರ್ಮದ ಗುರುತಾದ ನೇಗಿಲನ್ನು ನೀಡಿದ್ದು, ಆ ನೇಗಿಲನ್ನು ಕುಮಾರಸ್ವಾಮಿ ಅವರ ಮನೆಯ ಕಪಾಟಿನ ಒಳಗೆ ದೇವರ ಪಟದ ಮುಂದೆ ಇಡಲಾಗಿದೆ. ಕುಮಾರಸ್ವಾಮಿ ಅವರ ರೈತ ಪರ ಕಾಳಜಿ, ರೈತರ ಮೇಲಿನ ಪ್ರೀತಿ, ರೈತರ ವಸ್ತುಗಳ ಮೇಲಿನ ಪ್ರೀತಿ ಇಲ್ಲಿ ಬಿಂಬಿತವಾಗಿದೆ. ರೈತರ ಪ್ರತೀಕವಾದ ನೇಗಿಲು ಜೋಪಾನವಾಗಿ ಮನೆಯ ದೇವರ ಫೋಟೋದ ಮುಂದಿಟ್ಟಿರುವುದು ತೀರ್ಥಹಳ್ಳಿಯ ಕಾರ್ಯಕರ್ತರಿಗೆ ಸಂತೋಷದ ವಿಚಾರವಾಗಿದೆ.…