ಫಿಲಿಪ್ಪೈನ್ಸ್ ನ ಮನಿಲಾದಲ್ಲಿ ಕನ್ನಡಿಗರ ಸಮಾಗಮ! – ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಆಯೋಜನೆ – ಕರ್ನಾಟಕದ ಹಲವು ಸಾಧಕರಿಗೆ ಪ್ರಶಸ್ತಿ NAMMUR EXPRESS NEWS ಮನಿಲಾ( ಪಿಲಿಫೈನ್ಸ್): ಫಿಲಿಪ್ಪೈನ್ಸ್ ನ ಮನಿಲಾದಲ್ಲಿ ಕನ್ನಡಿಗರ ಸಮಾಗಮವಾಗಿದ್ದು ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು ಹಲವು ಕನ್ನಡಿಗರಿಗೆ ವೇದಿಕೆಯಾಯಿತು. 39ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಕರ್ನಾಟಕದ ಹಲವು ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. 39ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮೈಕ್ರಾನ್ ಎಲೆಕ್ಟ್ರಿಕಲ್ಸ್ ನ ಪ್ರಾಜೆಕ್ಟ್ ಡೈರೆಕ್ಟರ್ ಡಾ.ನಾಗರಾಜ್ ವಿ ಮಾತನಾಡಿ, ಸ್ನೇಹದಿಂದ ಎಲ್ಲವನ್ನು ಗೆಲ್ಲುವ ಪ್ರಯತ್ನ ಮಾಡಬೇಕು. ಅದನ್ನು ಸಾಧ್ಯವಾಗಿಸುವುದು ಸುಲಭವೂ ಹೌದು. ಏಕೆಂದರೆ ಅಂತ ಶಕ್ತಿ ಸ್ನೇಹಕ್ಕೆ ಇದೆ. ಅದರೊಂದಿಗೆ ಕಲೆ ಮತ್ತು ಸಾಹಿತ್ಯಗಳು ಜೊತೆಗೂಡಿದರೆ ಮತ್ತಷ್ಟು ಸಾಮರಸ್ಯವನ್ನು ಸಾಧಿಸಬಹುದು. ಹಾಗಾಗಿ.ಜಗತ್ತನ್ನ ಬೆಸೆಯಲು ಸಾಂಸ್ಕೃತಿಕ ಮಾರ್ಗವೇ ಹೆಚ್ಚು ಸೂಕ್ತ ಎಂದರು. ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಮತ್ತು…
Author: Nammur Express Admin
ಆರಗ ಜ್ಞಾನೇಂದ್ರಗೆ ಮತ್ತೆ ಮಹತ್ವದ ಹುದ್ದೆ!? – ಪಕ್ಷದ ವಿರೋಧ ಪಕ್ಷದ ನಾಯಕ, ಪಕ್ಷದ ಅಧ್ಯಕ್ಷ ಹುದ್ದೆ ಸಾಧ್ಯತೆ – ಸರಳತೆ, ಹಿರಿತನ ಮತ್ತೆ ಕೈ ಹಿಡಿಯುವ ಸೂಚನೆ – ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜಾಣ್ಮೆ NAMMUR EXPRESS NEWS ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ, ಮಾಜಿ ಗೃಹಸಚಿವರಾದ ಆರಗ ಜ್ಞಾನೇಂದ್ರರವರಿಗೆ ವಿರೋಧ ಪಕ್ಷದ ನಾಯಕರಾಗುವ ಸಾಧ್ಯತೆ ಇದೆ. ಇನ್ನು ಪಕ್ಷದ ಅಧ್ಯಕ್ಷ ಸ್ಥಾನ ಕೂಡ ಚರ್ಚೆಯಲ್ಲಿದೆ. ಹೀಗಾಗಿ ಈಗ ಆರಗ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ ಆರಗ ಜ್ಞಾನೇಂದ್ರ ಹೆಸರನ್ನೇ ನೇಮಕ ಮಾಡುವಂತೆ ವರಿಷ್ಠರಿಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಅಂತಿಮ ಸರ್ಕಸ್ ನಡೆಯುತ್ತಿದೆ. ಆರಗ ಜ್ಞಾನೇಂದ್ರ ಅವರು ಗೃಹ ಮಂತ್ರಿಗಳಾಗಿ ಉತ್ತಮ ಹೆಸರು ಮಾಡಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಜತೆ ಜತೆಗೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ? HOW TO…
ಚೆಸ್ ಕ್ರೀಡೆಯಲ್ಲಿ ಸಹೋದರಿಯರ ಸಾಧನೆ! – ಮಂಗಳೂರಲ್ಲಿ ನಡೆದ ಸ್ಪರ್ಧೆಯಲ್ಲಿ ಪಾವನಿ, ಗಾನವಿ ಗೆಲುವು – ಸಹ್ಯಾದ್ರಿ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗದ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: ಸಹ್ಯಾದ್ರಿ ಪ್ರೌಢಶಾಲೆ, ಕುಶಾವತಿ, ತೀರ್ಥಹಳ್ಳಿಯ ಸಹೋದರಿ ವಿದ್ಯಾರ್ಥಿಗಳಾದ ಕು.ಪಾವನಿ ಮತ್ತು ಕು.ಗಾನವಿ ಅವರಿಗೆ ಚೆಸ್ ಕ್ರೀಡೆಯಲ್ಲಿ ಪ್ರಶಸ್ತಿ ಲಭಿಸಿದೆ. “King s Chess Academy “ ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ಜುಲೈ 2ರಂದು ಮಂಗಳೂರಿನಲ್ಲಿ ನಡೆದ “3rd KCA Trophy Inter State District Chess Tournment 2023′ ನಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ಪಾವನಿ 8ನೇ ತರಗತಿ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಹಾಗೂ ಕುಮಾರಿ ಗಾನವಿ 9ನೇ ತರಗತಿ ಆರನೇ ಸ್ಥಾನವನ್ನು ಪಡೆದು ಶಿಕ್ಷಣ ಸಂಸ್ಥೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಪ್ರತಿಭೆಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು…
BREAKING NEWS ಮತ್ತೊಂದು ಅಶ್ಲೀಲ ವಿಡಿಯೋ ವೈರಲ್!? – ಯುವಕ – ಯುವತಿಯ ಅಶ್ಲೀಲ ವಿಡಿಯೋ? – ಮತ್ತೊಂದು ಪ್ರಕರಣ::ತೀರ್ಥಹಳ್ಳಿಯ ಕುಡುಮಲ್ಲಿಗೆಯ ಬಳಿ ಯುವಕ ಯುವತಿಗೆ ತರಾಟೆ – ತೀರ್ಥಹಳ್ಳಿ ಪಟ್ಟಣದಲ್ಲೇ ಕಾಲೇಜು ಹುಡುಗಿಯರಿಗೆ ಕಿರಿಕ್! NAMMUR EXPRESS NEWS ತೀರ್ಥಹಳ್ಳಿ: ಸುಸಂಸ್ಕೃತರ ನಾಡು ತೀರ್ಥಹಳ್ಳಿ ಇತ್ತೀಚೆಗೆ ಅಶ್ಲೀಲ ಪ್ರಕರಣಗಳಿಂದ ಸುದ್ದಿಯಲ್ಲಿದೆ. ಯುವಕ ಯುವತಿಯರ ಅಶ್ಲೀಲ ವಿಡಿಯೋಗಳು ಬಾರಿ ಸದ್ದು ಮಾಡುತ್ತಿದೆ. ಇದೀಗ ಮತ್ತೊಂದು ವಿಡಿಯೋ ಅನೇಕ ಕಡೆ ಹರಿದಾಡುತ್ತಿದೆ. ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ಹಾಗೂ ಚಿಕ್ಕ ಉದ್ಯಮ ನಡೆಸುತ್ತಿರುವ ಯುವಕನ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಪ್ರಕರಣ ಈಗಾಗಲೇ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬದವರು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇನ್ನು ಸ್ಪಷ್ಟವಾಗಿಲ್ಲ. ಕಾರಲ್ಲಿ ಅಸಭ್ಯ ವರ್ತನೆ, ತರಾಟೆ! ತೀರ್ಥಹಳ್ಳಿ ತಾಲೂಕಿನ ಕುಡು ಮಲ್ಲಿಗೆ ಸಮೀಪ ಕಾರಿನಲ್ಲಿ ಯುವಕ ಯುವತಿ ಅಸಭ್ಯ ವರ್ತನೆ ಮಾಡುತ್ತಿದ್ದ ಘಟನೆ ತೀರ್ಥಹಳ್ಳಿ ಪಟ್ಟಣ ಸಮೀಪದ…
ಮಲೆನಾಡಿನಲ್ಲೂ ಜಡಿ ಮಳೆ ಜೋರು! – ಕಳೆದ ಮೂರು ದಿನಗಳಿಂದ ಸತತ ಮಳೆ – ಹಲವೆಡೆ ಹೆಚ್ಚಾಯಿತು ಎಲೆ ಚುಕ್ಕಿ ರೋಗ! NAMMUR EXPRESS NEWS ತೀರ್ಥಹಳ್ಳಿ : ಮಲೆನಾಡಿನ ಬಹುತೇಕ ಭಾಗಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಹೆಚ್ಚಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ನೀರಿನ ಪ್ರಮಾಣ ಹೆಚ್ಚಿದ್ದು ಅಂತರ್ಜಲವು ಕೂಡ ಹೆಚ್ಚಾಗುತ್ತಿದೆ. ಅನೇಕ ಕಡೆ ಮಳೆಯಿಂದಾಗಿ ಗಾಳಿ ಹೆಚ್ಚಳವಾಗಿರುವುದರಿಂದ ವಿದ್ಯುತ್ ಕಂಬಗಳು, ಮರಗಳು ಬಿದ್ದಿವೆ.ಇನ್ನೂ ನದಿ ಹಳ್ಳಗಳ ನೀರಿನ ಪ್ರಮಾಣ ಕೂಡ ಹೆಚ್ಚಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಫಿ ಗಿಡಗಳಿಗೆ ರೋಗ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇನ್ನು ಎಲೆಚುಕ್ಕಿ ರೋಗ ಕಳೆದ ಬಾರಿ ಹೆಚ್ಚು ಕಾಣಿಸಿದ್ದು ಅಡಿಕೆ ಫಸಲಿಗೆ ತೊಂದರೆಯಾಗಿದ್ದು ಈ ಬಾರಿ ಕೂಡ ಮತ್ತೆ ಎಲೆ ಚುಕ್ಕಿ ರೋಗದ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ. ಈಗಾಗಲೇ ಔಷಧಿ ಹೊಡೆಯುವ ಕಾರ್ಯ ಭರದಿಂದ ಸಾಗಿದ್ದು ಎಲೆ ಚುಕ್ಕಿ ರೋಗದ ಭೀತಿ ರೈತರಲ್ಲಿ ಉಂಟಾಗಿದೆ. ಇದನ್ನೂ…
ಶಾರುಖ್ ಖಾನ್‌ಗೆ ಆಕ್ಸಿಡೆಂಟ್! – ತೀವ್ರ ರಕ್ತಸ್ರಾವ, ಅಮೆರಿಕಾದಲ್ಲಿ ಚಿಕಿತ್ಸೆ – ಭಾರತಕ್ಕೆ ಮರಳಿ ವಿಶ್ರಾಂತಿ! – ಏನಾಯ್ತು.. ಈ ಅಪಘಾತ.. ಇಲ್ಲಿದೆ ಮಾಹಿತಿ! NAMMUR EXPRESS NEWS ಬಾಲಿವುಡ್ ಸ್ಟಾರ್ ಶಾರುಖ್ ಖಾನ್‌ಗೆ ಶೂಟಿಂಗ್ ವೇಳೆ ಅಪಘಾತವಾಗಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಶೂಟಿಂಗ್ ಸೆಟ್ ನಲ್ಲೇ ಈ ಅವಘಡ ಸಂಭವಿಸಿದ್ದು ಶಾರುಖ್ ಖಾನ್ ಅವರಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಅವರನ್ನು ಲಾಸ್ ಏಂಜಲೀಸ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಾರುಖ್ ಸದ್ಯ ಆರಾಮಾಗಿ ಇದ್ದಾರೆ, ವಿಶ್ರಾಂತಿ ಪಡೆಯುತ್ತಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಶಾರುಖ್ ಖಾನ್ ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇದನ್ನೂ ಓದಿ :…
ಉಡುಪಿ ಕ್ರಿಯೇಟಿವ್ ಕಾಲೇಜಲ್ಲಿ “ಕ್ರಿಯೇಟಿವ್ ಸಮಾಗಮ”! – ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು: ಎಸ್.ಎಲ್.ಅಶ್ವತ್ NAMMUR EXPRESS NEWS ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ.30 ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ಅಂಗವಾಗಿ “ಕ್ರಿಯೇಟಿವ್ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಅಶ್ವತ್ ಎಸ್ ಎಲ್ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪಿಯುಸಿ ಹಂತಕ್ಕೆ ಬಂದಿದ್ದು, ಬದುಕಿನ ದಿಕ್ಕನ್ನೇ ಬದಲಾಯಿಸುವ ಈ ಹಂತ ಜೀವನದ ಅಮೂಲ್ಯವಾದ ಘಟ್ಟ. ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾರ್ಥಕತೆಗೊಳಿಸುವಲ್ಲಿ ಶ್ರದ್ಧಾಪೂರ್ವಕವಾಗಿ ಸಕ್ರಿಯವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ. ವಿದ್ಯಾರ್ಥಿಗಳು ತಮ್ಮಸರ್ವಾಂಗೀಣ ಬೆಳವಣಿಗೆಯಲ್ಲಿ ಸಿದ್ಧಗೊಳಿಸುವಲ್ಲಿ ನಮ್ಮ ಕ್ರಿಯೇಟಿವ್ ಸಂಸ್ಥೆ ಸದಾ ತಮ್ಮಜೊತೆಗಿರುತ್ತದೆ ಎಂದು ಆಶಯದ ನುಡಿಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ…
ತೀರ್ಥಹಳ್ಳಿಗೆ ಗಣೇಶ್ ನೂತನ ಶಿಕ್ಷಣಾಧಿಕಾರಿ! – ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೋರಾಟದ ಸ್ವಾಗತ – ಮೂಡಬಿದ್ರೆಯಿಂದ ವರ್ಗಾವಣೆ: ತೀರ್ಥಹಳ್ಳಿಯ ಶಿಕ್ಷಣ ವ್ಯವಸ್ಥೆಗೆ ಬೇಕು ಮಾಸ್ಟರ್ ಪ್ಲಾನ್ NAMMUR EXPRESS NEWS ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದೆರಡು ತಿಂಗಳಿನಿಂದ ಖಾಲಿಯಿದ್ದ ಶಿಕ್ಷಣಾಧಿಕಾರಿಗಳ ಹುದ್ದೆಗೆ ಮೂಡಬಿದ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಎಂಬುವರನ್ನು ನೇಮಕ ಮಾಡಲಾಗಿದೆ. ಅವರು ತೀರ್ಥಹಳ್ಳಿ ನೂತನ ಬಿಇಓ ಆಗಿ ಸೇವೆ ಸಲ್ಲಿಸಲು ಆಗಮಿಸಿದ್ದಾರೆ. ಹೊಸನಗರ ತಾಲೂಕು ರಿಪ್ಪಿನಪೇಟೆ ಮೂಲದ ಗಣೇಶ್ ಅವರು ಉತ್ತಮ ಅಧಿಕಾರಿ ಎಂದೇ ಹೆಸರು ಪಡೆದಿದ್ದು ಕರಾವಳಿ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ತೀರ್ಥಹಳ್ಳಿಯ ಆಡಳಿತ ಅವರನ್ನು ಸ್ವಾಗತಿಸಿದೆ. ಹೊಸ ಬಿಇಓಗೆ ಹೋರಾಟದ ಸ್ವಾಗತ ತೀರ್ಥಹಳ್ಳಿ ಸೊಪ್ಪುಗುಡ್ಡೆ ವಿಶೇಷ ಚೇತನ ಶಾಲೆ ಮುಖ್ಯ ಉಪಾಧ್ಯಾಯರಾಗಿದ್ದ ಕುಮಾರ್ ಅವರನ್ನು ವರ್ಗಾವಣೆ ಮಾಡಿರುವ ಪ್ರಕರಣ ಈಗ ಹೋರಾಟದ ಸ್ವರೂಪ ಪಡೆದಿದೆ. ಮಂಗಳವಾರ ಬೆಳಿಗ್ಗೆ 11ಗಂಟೆಗೆ ತಾಲೂಕು ಕಚೇರಿ ಎದುರು ಸೊಪ್ಪುಗುಡ್ಡೆ ವಿಶೇಷ ಚೇತನ ಮಕ್ಕಳು ನಿರಶನ ನಡೆಸಲಿದ್ದಾರೆ. ಶಾಲೆಯ ಮಕ್ಕಳ…
ಕರಾವಳಿಯಲ್ಲಿ ಮಳೆ ಅಬ್ಬರಕ್ಕೆ ಇಬ್ಬರು ಬಲಿ! – ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ – ಉಡುಪಿ ಜಿಲ್ಲೆಯಲ್ಲಿ ಆಡಳಿತದ ಅಲರ್ಟ್ – 2 ದಿನ ಭಾರೀ ಮಳೆ ಸಾಧ್ಯತೆ! NAMMUR EXPRESS NEWS ಮಂಗಳೂರು: ಕರಾವಳಿಯಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ (43) ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಅಂಗಡಿ ಮೊಗರಿನಲ್ಲಿ ಗಾಳಿ ಮಳೆಯಿಂದಾಗಿ ಮರ ಉರುಳಿ ಆಯಿಷತ್ ಮಿನ್ಹಾ (11) ಸಾವನ್ನಪ್ಪಿದ್ದಾಳೆ. ಎರಡು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದಿರೆ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ನಾಲ್ಕು ದಿನ…
ಸಾಯಿ ಬಾಬಾ ಮಂದಿರಕ್ಕೆ ಕನ್ನ ಹಾಕಿದ ಕಳ್ಳರು! – ಬೀಗ ಮುರಿದು ಕಾಣಿಕೆ ಹುಂಡಿ ದೋಚಿದರು – ಎರಡನೇ ಬಾರಿ ಸಾಯಿ ಬಾಬಾ ಮಂದಿರ ಕಳ್ಳತನ – ತಿಜೂರಿಯನ್ನು ಒಡೆದ ಕಳ್ಳರು – ಅತಿ ಹೆಚ್ಚು ಭಕ್ತ ವರ್ಗ ಇರುವ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿದ ಖದೀಮರು NAMMUR EXPRESS NEWS ಸಿಂದಗಿ: ಸಿಂದಗಿ ಪಟ್ಟಣದ ಸಾಯಿ ಬಾಬಾ ಮಂದಿರಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಖದೀಮರ ತಂಡ ಕಾಣಿಕೆ ಪೆಟ್ಟಿಗೆ ಒಡೆದು ಹಣ ದೋಚಿದ್ದಾರೆ. ಹೊರಗಿನ ಗೇಟ್ ಬೀಗ ಒಡೆದು ಹಾಕಿ ಮಂದಿರದ ಒಳಗಿನ ತೀಜೂರಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಂದಾಜು 30 ಸಾವಿರ ಕಾಣಿಕೆ ಹಣ ಕಳುವಾಗಿದೆ ಹಾಗೂ 4 ವರ್ಷಗಳ ಹಿಂದೆ ಇದೇ ಮಂದಿರದಲ್ಲಿ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದು ಹಣ ದೋಚಿ ದೂರದಲ್ಲಿ ಬಿಸಾಡಿ ಹೋಗಿದ್ದರು. ಆ ಪ್ರಕರಣದ ಕುರಿತು ಸರಿಯಾದ ತನಿಖೆ ಆಗಿಲ್ಲ ಹಾಗೂ ಕಳ್ಳರನ್ನು ಬಂಧಿಸಿಲ್ಲ ಈ ಬಾರಿಯಾದರೂ ಸೂಕ್ತ ತನಿಖೆ ನಡೆಸಿ ಸರಿಯಾದ ಕೈಗೊಳ್ಳಬೇಕು ಎಂದು…