Author: Nammur Express Admin

ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಶುರು! – ಯಾರು ಬಿಲ್ ಪಾವತಿಸಬೇಕು? ಯಾರಿಗೆ ಫ್ರೀ? – ಅನ್ನ ಭಾಗ್ಯ ಕೂಡ ಶುರು: ಏನಿದು ಯೋಜನೆ?! NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಗೃಹ ಜ್ಯೋತಿ ಜಾರಿಗೆ ಬರಲಿದೆ, ಇದರ ಜೊತೆಯಲ್ಲಿ ಶನಿವಾರದಿಂದ ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬರಲಿದೆ. ಶನಿವಾರ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು, 200 ಯುನಿಟ್‌ವರೆಗಿನ ಕರೆಂಟ್ ಬಳಕೆಗೆ ಬಿಲ್ ಪಾವತಿ ಮಾಡುವ ಅಗತ್ಯ ಇರೋದಿಲ್ಲ. ಆಗಸ್ಟ್ ರಿಂದ ನಿಮ್ಮ ಕೈ ಸೇರಲಿರುವ ಬಿಲ್‌ನಲ್ಲಿ ಈ ವಿನಾಯಿತಿ ಪಡೆಯಬಹುದು. 12 ತಿಂಗಳ ನಿಮ್ಮ ಕರೆಂಟ್ ಬಳಕೆ ಸರಾಸರಿ 200 ಯುನಿಟ್ ಆಗಿದ್ದರೆ ಸಂಪೂರ್ಣ ವಿದ್ಯುತ್ ಬಿಲ್ ಸರ್ಕಾರವೇ ಭರಿಸಲಿದೆ. ಆದರೆ ಇದಕ್ಕಿಂತ ಕೊಂಚ ಯುನಿಟ್ ಬಳಕೆ ಹೆಚ್ಚಾದರೂ ಅದಕ್ಕೆ ನೀವೆ ಜವಾಬ್ದಾರರಾಗುತ್ತೀರಿ. ಜೂನ್ 18ರಿಂದ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಆರಂಭಗೊಂಡಿದ್ದು ಈಗಾಗಲೇ 8 ಲಕ್ಷ ಜನರು…

Read More

ಇದು ಸೋಷಿಯಲ್ ಮೀಡಿಯಾ ಜಮಾನ! – ಒಳ್ಳೆಯದಕ್ಕೆ ಬಳ್ಸಿದ್ರೆ ಒಳ್ಳೇದು, ಕೆಟ್ಟದಕ್ಕೆ ಬಳ್ಸಿದ್ರೆ ಕೆಟ್ಟದ್ದು – ಸೋಷಿಯಲ್ ಮೀಡಿಯಾ ಚಟ ಅಂಟಿದ್ರೆ ಬಿಡೋದೇ ಇಲ್ಲ – ಯುವ ಜನತೆಯ ಬದುಕು ಬಹುತೇಕ ಇದಕ್ಕೆ ಬಲಿ!? ಸೋಷಿಯಲ್ ಮೀಡಿಯಾ ದಿನದ ವಿಶೇಷ ಈ ಯುಗವನ್ನು ಸೋಷಿಯಲ್ ಮೀಡಿಯಾ ಯುಗ ಎಂದರೆ ಕಂಡಿತಾ ಸುಳ್ಳು ಆಗೋದಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗಿನ ಅರ್ಧಕ್ಕಿಂತ ಹೆಚ್ಚಿನ ಜನರ ಪರಪಂಚ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಆಗಿದೆ. ಮಾನವ ಸಹಜತೆಯಿಂದ ದೂರ ಹೋಗಿ ಬೆರಗಿನ ಪ್ರಪಂಚವನ್ನೇ ತನ್ನ ಪ್ರಪಂಚ ಎಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚೂ ಬೆಳೆದಂತೆ ಸಂಬಂಧಗಳು ಕಾಲಕ್ರಮೇಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲವೂ ಕಾಲ್ಪನಿಕ ಜಗತ್ತಿಗೆ ಜಾರುತ್ತಿದೆ. ದೇಶದ ಅಸ್ತಿ ಎಂದೇ ಕರೆಯುವ ಯುವ ಜನತೆಯು ದಿನದ 2 4 ಗಂಟೆ ಫೋನ್, ಸಾಮಾಜಿಕ ಜಾಲತಾಣ ಎಂದೂ ಸಮಯವನ್ನು ವ್ಯಯ ಮಾಡುತ್ತಾರೆ.ತಮ್ಮ ಅರ್ಹತೆ ಮತ್ತೆ ಕೌಶಲ್ಯವನ್ನು ವ್ಯಯ ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಅಸಮತೋಲನ,…

Read More

ಮರಗಳನ್ನೇ ಮಕ್ಕಳಂತೆ ಸಾಕಿದ ಮಹಾತಾಯಿ! – ಸಾಲು ಮರದ ತಿಮ್ಮಕ್ಕ ಜನ್ಮ ದಿನದ ವಿಶೇಷ – ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ ತಿಮ್ಮಕ್ಕ NAMMUR EXPRESS NEWS ಸಾಲು ಮರದ ತಿಮ್ಮಕ್ಕ ಎಂದು ಕರೆಯಲ್ಪಡುವ ತಿಮ್ಮಕ್ಕ ಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಸಾಕಿದ್ದ ಪರಿಸರವಾದಿ ಸಾಲು ಮರದ ತಿಮ್ಮಕ್ಕ ಅವರ ಜನ್ಮ ದಿನ ಇಂದು. ಇಂದು ಅವರ ಸೇವೆಯನ್ನು ಗೌರವಿಸುವ ದಿನ. ಹುಲಿಕಲ್ ಮತ್ತು ಕುದೂರಿನ ನಡುವಿನ ಹೆದ್ದಾರಿಯ 45-ಕಿಲೋಮೀಟರ್ (28 ಮೈಲಿ) ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ . ಅವರು ಸುಮಾರು 8000 ಇತರ ಮರಗಳನ್ನು ನೆಟ್ಟಿದ್ದಾರೆ. ತನ್ನ ಗಂಡನ ಬೆಂಬಲದೊಂದಿಗೆ, ಅವಳು ಮರಗಳನ್ನು ನೆಡುವುದರಲ್ಲಿ ಜೀವನ ಸೆವೆಸಿದ್ದಾರೆ. ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ ಮತ್ತು ಹತ್ತಿರದ ಕ್ವಾರಿಯಲ್ಲಿ ಸಾಂದರ್ಭಿಕ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಕೆಲಸವನ್ನು ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ. ಅವರ ಕೆಲಸವನ್ನು ಭಾರತ ಸರ್ಕಾರ ಗುರುತಿಸಿದೆ ಮತ್ತು ಅವರಿಗೆ 2019…

Read More

ಮೋದಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ!? – ಜುಲೈ 3ಕ್ಕೆ ಕೇಂದ್ರ ಮಂತ್ರಿ ಮಂಡಲದ ಸಭೆ – ಮೋದಿ, ಅಮಿತ್ ಶಾ,ನಡ್ದಾ ನಡುವೆ ಸಭೆ – ಕರ್ನಾಟಕದಲ್ಲೂ ಭಾರೀ ಬದಲಾವಣೆ ಸಾಧ್ಯತೆ? NAMMUR EXPRESS NEWS ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 3ರಂದು ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದು ಸಚಿವ ಸ್ಥಾನದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಮೋದಿಯವರು ಬಿಜೆಪಿಯ ಉನ್ನತ ನಾಯಕರೊಂದಿಗೆ ತೀವ್ರ ಸಮಾಲೋಚನೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದ್ದು, ಮಂತ್ರಿಮಂಡಲದ ಪುನರ್ ರಚನೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸೆಪ್ಟೆಂಬರ್‌ನಲ್ಲಿ ಜಿ 20 ಶೃಂಗಸಭೆ ನಡೆದ ಪ್ರಗತಿ ಮೈದಾನದಲ್ಲಿನ ನೂತನ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 3 ರ ಸಭೆ ನಡೆಯುವ ಸಾಧ್ಯತೆಯಿದೆ. ಮೋದಿ ಅವರು ಬುಧವಾರ ಮತ್ತು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇತರರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಸಭೆಯಲ್ಲಿ ನಡ್ಡಾ ಭಾಗವಹಿಸಿದ್ದರಿಂದ ಈ ವರ್ಷಾಂತ್ಯದಲ್ಲಿ…

Read More

ಬಿಜೆಪಿಯಲ್ಲಿ ನಾಯಕರ ನಡುವೆಯೇ ಗುದ್ದಾಟ! – ವಲಸಿಗರು, ಮೂಲ ಬಿಜೆಪಿ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ – ಇತ್ತ ಬೊಮ್ಮಾಯಿ, ಹೈಕಮಾಂಡ್, ಕಟೀಲ್ ವಿರುದ್ಧವೂ ರೇಣುಕಾಚಾರ್ಯ ಗುಡುಗು – ಯಾವ ನಾಯಕರು ಏನು ಹೇಳಿದರು..? NAMMUR EXPRESS NEWS ಬೆಂಗಳೂರು: ಬಿಜೆಪಿಯಲ್ಲಿ ಚುನಾವಣೆ ಮುಗಿದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಒಂದು ಕಡೆ ಸೋಲಿನ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಕೊಡಬೇಕು ಎಂಬ ಒತ್ತಾಯ ಹೆಚ್ಚಿದೆ. ಇನ್ನೊಂದು ಕಡೆ ಬಿಜೆಪಿ ಪ್ರಮುಖ ನಾಯಕರೇ ಪಕ್ಷದ ಹುದ್ದೆ ಅನುಭವಿಸಿದವರ ಮೇಲೆ ಮುಗಿ ಬಿದ್ದಿದ್ದಾರೆ. ವಲಸಿಗರ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಬಾಂಬ್ ಸಿಡಿಸಿದ್ದೇ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿ, ಶೆಟ್ಟರ್, ಈಶ್ವರಪ್ಪ ಸೇರಿ ಪಕ್ಷ ಬೆಳೆಸಿದವರಿಗೆ ಅನ್ಯಾಯ ಆಗಿದೆ. ಕಾಂಗ್ರೆಸ್ ಇಂದ ಬಿಜೆಪಿಗೆ ಬಂದವರೇ ಬಿಜೆಪಿಯ ನಾಯಕರಿಗೆ ಇಷ್ಟ ಎಂದು ರೇಣುಕಾಚಾರ್ಯ ಹೇಳಿಕೆ ಈಗ ಮತ್ತಷ್ಟು ಚರ್ಚೆಗೆ ಕಾರಣ ಆಗಿದೆ. ಮಾಜಿ…

Read More

ಅಂಗನವಾಡಿ ಕಾರ್ಯಕರ್ತೆಯರಿಂದ “ಮೊಬೈಲ್ ವಾಪಾಸ್” ಹೋರಾಟ! – ಸ್ಟೋರೇಜ್ ಇಲ್ಲದ ಮೊಬೈಲ್, ಕೆಲಸ ಮಾತ್ರ ಮಾಡ್ಬೇಕು – ಜು.10ರಂದು ಪ್ರತಿಭಟನೆಗೆ ಕಾರ್ಯಕರ್ತರು ಸಜ್ಜು! NAMMUR EXPRESS NEWS ಬೆಂಗಳೂರು: ‘ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ಜುಲೈ 10ರಂದು ವಾಪಸ್ ಮಾಡುವ ಮೂಲಕ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲು ಸಿದ್ಧತೆ ನಡೆದಿದೆ. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ‘ಸರ್ಕಾರ ನೀಡಿರುವ ಮೊಬೈಲ್‌ಗಳಲ್ಲಿ ನೆಟ್‌ವರ್ಕ್, ರಾಮ್, ಸ್ಟೋರೇಜ್ ಸಮಸ್ಯೆ ಇದೆ. ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿಲ್ಲ’ ಎಂದರು. ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣ್‌ ಆಪ್ ಅಲ್ಲಿ ಪ್ರತಿನಿತ್ಯ ಮಕ್ಕಳ, ಪೋಷಕರ ಹಾಜರಾತಿ, ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ. ಈಗಾಗಲೇ ನಾಲ್ಕು ವರ್ಷಗಳ ಹಿಂದೆ ನೀಡಿರುವ ಮೊಬೈಲ್‌ಗಳು ಹಾಳಾಗಿವೆ. ಆದ್ದರಿಂದ, ಆರೋಗ್ಯ ಸಮೀಕ್ಷೆ ಕೈಗೊಳ್ಳಲು ಹೊಸ ಮೊಬೈಲ್‌ಗಳನ್ನು ನೀಡಬೇಕು. ಇಲ್ಲವಾದರೆ, ಕೈಪಿಡಿಯಲ್ಲಿ ದಾಖಲಿಸಲು ಅವಕಾಶ ನೀಡಬೇಕು. ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವ…

Read More

ಜುಲೈ 3 ರವರೆಗೆ ಭಾರೀ ಮಳೆ! – ಕರಾವಳಿಯಲ್ಲಿ ಮಳೆ ಆರ್ಭಟ: ಎಚ್ಚರ ಎಚ್ಚರ – ಕರಾವಳಿಯಲ್ಲಿ ಎಲ್ಲೋ ಅಲರ್ಟ್ – ಮಲೆನಾಡಲ್ಲೂ ಮಳೆ ಸಾಧ್ಯತೆ NAMMUR EXPRESS NEWS ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಜೂನ್ 30 ರಿಂದ  ಜುಲೈ 03ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೊ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ವಿಜಯನಗರ ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮತ್ತು ಶಿವಮೊಗ್ಗ ಉತ್ತರ ಒಳನಾಡಿನ ಚಾಮರಾಜನಗರ, ಕೋಲಾರ, ಬೀದರ್, ಕಲಬುರಗಿ, ವಿಜಯಪುರ, ಮೈಸೂರು, ರಾಮನಗರ, ಹಾಸನ, ಕೊಪ್ಪಳ, ರಾಯಚೂರು, ಧಾರವಾಡ,ಬೆಳಗಾವಿ, ಹಾವೇರಿ, ಗದಗ, ಯಾದಗಿರಿ ಮತ್ತು ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆವರೆಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 7 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ನಲ್ಲಿ…

Read More

ಅಡಿಕೆ, ಕಾಳು ಮೆಣಸಿಗೂ ಬೆಳೆ ವಿಮೆ! – ಕೇಂದ್ರ ಕೃಷಿ ಇಲಾಖೆಯಿಂದ ಹೊಸ ಟೆಂಡರ್ – ಅಡಿಕೆ, ಕಾಳು ಮೆಣಸು ಬೆಳೆಗಾರರಿಗೆ ಚಿಂತೆ ಬೇಡ – ಜ್ಞಾನೇಂದ್ರ, ರಾಘವೇಂದ್ರ ಸ್ಪಷ್ಟನೆ NAMMUR EXPRESS NEWS ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಲಾಭ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೂ ದೊರೆಯಲಿದೆ. ಈ ಯೋಜನೆಯ ಪ್ರೀಮಿಯಂ ಪಾವತಿಸಲು ಅಡಿಕೆ ಬೆಳೆಗಾರರಿಗೆ ಅವಕಾಶ ದೊರೆಯದೇ ಇರುವ ಕುರಿತು ವರದಿಯಾಗಿದೆ. ಈ ವಿಮಾ ಯೋಜನೆಯ ಉಸ್ತುವಾರಿಗಾಗಿ ವಿಮಾ ಕಂಪನಿಯೊಂದನ್ನು ನೇಮಿಸುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬಹುಶಃ ಹತ್ತರಿಂದ ಹದಿನೈದು ದಿನಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೂ ಪ್ರೀಮಿಯಂ ಪಾವತಿಸಲು ಅವಕಾಶ ಲಭ್ಯವಾಗಲಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಕೃಷಿ ಇಲಾಖೆಯ ಕಾರ್ಯದರ್ಶಿ ಜೊತೆ ನಾನು ಮಾತನಾಡಿದ್ದು ಟೆಂಡರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು 15 ದಿನ…

Read More

ಮದುವೆಗೆ ಹೆಣ್ಣು ಸಿಗದ ಕಾರಣ ಯುವಕ ಆತ್ಮಹತ್ಯೆ! – ಫ್ರೀ ಬಸ್ಸಲ್ಲಿ ಹೋದ ಹೆಂಡ್ತಿ ಮನೆಗೆ ಬಂದಿಲ್ಲ ಅಂತ ಬಸ್ ಅಡಿ ಬಿದ್ದು ಸಾಯಲು ಹೋದ ಕುಡುಕ ಗಂಡ.! – ಅಕ್ರಮ ಆಸ್ತಿ ಗಳಿಕೆ: ತಹಶೀಲ್ದಾರ್ ಅಜಿತ್ ರೈ ಅರೆಸ್ಟ್ – ಮಂಗಳೂರು: ಬೈಕ್ ಅಪಘಾತಕ್ಕೆ ಇಬ್ಬರು ಸಾವು! – ತಹಸೀಲ್ದಾರ್ ಹತ್ರ 10 ಐಷಾರಾಮಿ ಕಾರು: 130 ಕೋಟಿ ಅಸ್ತಿ?! NAMMUR EXPRESS NEWS ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದಲ್ಲಿ ಟ್ರಿಪ್ಪಿಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಅಂತ ಬಸ್ ಅಡಿ ಬಿದ್ದು ಸಾಯಲು ಹೋದ ಕುಡುಕ ಗಂಡನೊಬ್ಬ ಬಸ್ ಚಕ್ರದಡಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕುಡುಕ ಪತಿಯೊಬ್ಬ ಫ್ರೀ ಬಸ್ಸಿನಲ್ಲಿ ಟ್ರಿಪ್‌ಗೆ ಹೋದ ತನ್ನ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್ ಟೈಯರ್‌ಗೆ ತಲೆಕೊಟ್ಟಿದ್ದಾನೆ. ಇದರಿಂದಾಗಿ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ…

Read More

ಆಧಾರ್ ಪ್ಯಾನ್ ಲಿಂಕ್‌: ಜೂ.30 ಕೊನೆ ದಿನ! – 1000 ರೂ ದಂಡಕ್ಕೆ ಕೊನೆ ದಿನ – ಕೂಡಲೇ ಲಿಂಕ್ ಮಾಡಿ.. ಇಲ್ಲದಿದ್ರೆ ದಂಡ ಫಿಕ್ಸ್ NAMMUR EXPRESS NEWS ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ಜೂನ್ 30ರವರೆಗೆ 1000 ರೂಪಾಯಿ ದಂಡದೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಬೇಕಾಗುತ್ತದೆ. ದಂಡ ಕಟ್ಟಿಯೂ ಪಾನ್ ಆಧಾರ್ ಲಿಂಕ್ ಮಾಡದೆ ಇದ್ದರೆ ಟಿಡಿಎಸ್ ಮತ್ತು ಟಿಸಿಎಸ್ ದರವೂ ಹೆಚ್ಚಾಗಿ ನಿಮಗೆ ನಷ್ಟವಾಗಲಿದೆ. ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಲಿಂಕ್ ಮಾಡದೆ ಇದ್ದರೆ ಪರಿಣಾಮ ಏನಾಗುತ್ತದೆ? ಆದಾಯ ತೆರಿಗೆ ನಿಯಮದ ಪ್ರಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವು ಬಾರಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಅವಕಾಶ ನೀಡಿತ್ತು. ಹಲವು ಡೆಡ್‌ಲೈನ್ ನೀಡಿತ್ತು. ಆ ಡೆಡ್‌ಲೈನ್‌ಗಳೆಲ್ಲವೂ ಮುಗಿದ ಬಳಿಕ 1000…

Read More