Author: Nammur Express Admin

ಜೆಡಿಎಸ್ ನಾಯಕ ಕುಮಾರಸ್ವಾಮಿ ಮನೆಯಲ್ಲಿ ತೀರ್ಥಹಳ್ಳಿ ನೇಗಿಲು! – ತೀರ್ಥಹಳ್ಳಿ ಜೆಡಿಎಸ್ ನಾಯಕರಿಂದ ಕೊಟ್ಟ ನೆನಪಿನ ಕಾಣಿಕೆ – ಕುಮಾರಸ್ವಾಮಿ ಅವರ ರೈತ ಪರ ಕಾಳಜಿಗೆ ಗೌರವ NAMMUR EXPRESS NEWS ತೀರ್ಥಹಳ್ಳಿ: ಮಾಜಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಜಾತ್ಯಾತೀತ ಜನತಾದಳ ವತಿಯಿಂದ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಮತ್ತು ಯುವ ಜೆಡಿಎಸ್ ಅಧ್ಯಕ್ಷರಾದ ರಾಘವೇಂದ್ರ ತಲಬಿ ಅವರ ನೇತೃತ್ವದಲ್ಲಿ ಎಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ಸನ್ಮಾನಿಸಿ ರೈತರ ಜೀವ, ಜೀವನ, ರೈತಧರ್ಮದ ಗುರುತಾದ ನೇಗಿಲನ್ನು ನೀಡಿದ್ದು, ಆ ನೇಗಿಲನ್ನು ಕುಮಾರಸ್ವಾಮಿ ಅವರ ಮನೆಯ ಕಪಾಟಿನ ಒಳಗೆ ದೇವರ ಪಟದ ಮುಂದೆ ಇಡಲಾಗಿದೆ. ಕುಮಾರಸ್ವಾಮಿ ಅವರ ರೈತ ಪರ ಕಾಳಜಿ, ರೈತರ ಮೇಲಿನ ಪ್ರೀತಿ, ರೈತರ ವಸ್ತುಗಳ ಮೇಲಿನ ಪ್ರೀತಿ ಇಲ್ಲಿ ಬಿಂಬಿತವಾಗಿದೆ. ರೈತರ ಪ್ರತೀಕವಾದ ನೇಗಿಲು ಜೋಪಾನವಾಗಿ ಮನೆಯ ದೇವರ ಫೋಟೋದ ಮುಂದಿಟ್ಟಿರುವುದು ತೀರ್ಥಹಳ್ಳಿಯ ಕಾರ್ಯಕರ್ತರಿಗೆ ಸಂತೋಷದ ವಿಚಾರವಾಗಿದೆ.…

Read More

ಸರ್ಫೆಸಿ ಕಾಯ್ದೆ ನೆಪದಲ್ಲಿ ಬೆಳಗಾರರ ತೋಟ ಹರಾಜಿಗೆ ಆಕ್ರೋಶ * ಮೂಡಿಗೆರೆ ಸೇರಿ ಕಾಫಿ ನಾಡ ರೈತರಿಂದ ಪ್ರತಿಭಟನೆಗೆ ಸಜ್ಜು * ಅಕ್ಟೋಬರ್ 10 ರಂದು ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ * ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಹೇಳಿಕೆ NAMMUR EXPRESS NEWS ಚಿಕ್ಕಮಗಳೂರು: ಸರ್ಫೆಸಿ ಕಾಯಿದೆ ನೆಪದಲ್ಲಿ ಬೆಳಗಾರರ ಕಾಫಿ ತೋಟಗಳನ್ನು ಹರಾಜು ಹಾಕಲು ಮುಂದಾಗುತ್ತಿರುವ ಕ್ರಮ ವಿರೋಧಿಸಿ ಕೆನರಾ ಬ್ಯಾಂಕ್ ಮಂಗಳೂರು ವಿಭಾಗೀಯ ಕಚೇರಿ ಮುಂದೆ ಅ.10 ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸರ್ಫೆಸಿ ಕಾಯ್ದೆ ಬಾಧಿತ ರೈತರು ಹೇಳಿದ್ದಾರೆ. ಮೂಡಿಗೆರೆ ತಾಲ್ಲೂಕು ಬೆಳಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಾಫಿ ಕೃಷಿ ಅಭಿವೃದ್ಧಿಪಡಿಸಲು ಬೆಳೆಗಾರರು ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದು, ಹವಾಮಾನ ವೈಪರಿತ್ಯ, ಬೆಲೆ ಏರಿಳಿತ ಮತ್ತಿತರೆ ನಾನಾ ಕಾರಣದಿಂದ ಸಾಲ ಕಟ್ಟಲು ವಿಳಂಬವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ನೊಟೀಸ್ ನೀಡಿ ಸರ್ಫೆಸಿ ಕಾಯಿದೆ ಮುಂದಿಟ್ಟುಕೊಂಡು ಬೆಳೆಗಾರರ ಕಾಫಿ ತೋಟಗಳನ್ನು ಆನ್‌ಲೈನ್ ಮೂಲಕ ಹರಾಜು…

Read More

ತೀರ್ಥಹಳ್ಳಿಯಲ್ಲಿ ಎಣ್ಣೆ ಆಫರ್…! – ತೀರ್ಥಹಳ್ಳಿಯಲ್ಲಿ ಮದ್ಯದಂಗಡಿಗಳ ಕಾಂಪಿಟಿಷನ್! – ಮದ್ಯದ ಬಾಟಲ್ ಮೇಲೆ ಕೆಲವರು 5 ರಿಂದ 10 ರೂಪಾಯಿ ಕಡಿಮೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಇತ್ತೀಚಿಗೆ ಹೊಸ ಮದ್ಯದಂಗಡಿಗಳು ತೆರೆದಿದ್ದು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಕ್ಯಾಂಪಿಟಿಷನ್ ಮಾಡುತ್ತ ಮದ್ಯದ ಬಾಟಲ್ ಮೇಲೆ ಕೆಲವರು 5 ರಿಂದ 10 ರೂಪಾಯಿ ಕಡಿಮೆ ಮಾರಾಟ ಮಾಡುತ್ತಿದ್ದಾರೆ. ಇದು ಗ್ರಾಹಕರಿಗೆ ಸಂತಸವನ್ನು ತರಿಸಿದೆ. ಕಳೆದ ಎರಡು ವರ್ಷದಲ್ಲಿ 6 ರಿಂದ 7 ಮದ್ಯದಂಗಡಿ ತೆರೆದ ಕಾರಣ ಯಾರ ಮಾತನ್ನು ಯಾರೂ ಕೇಳುವಂತಿಲ್ಲ ಹಾಗಾಗಿ ನಮ್ಮ ಮದ್ಯ ಮಾರಾಟ ಸಂಘದ ಯಾವುದನ್ನೂ ನಿಯಂತ್ರಿಸಲು ಆಗುತ್ತಿಲ್ಲ ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಹಾಗೂ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಮದ್ಯದಂಡಗಡಿ ತೆರೆಯಲು ತಮ್ಮ ಸಂಪೂರ್ಣ ಸಹಕಾರ ನೀಡುತ್ತಿರುವ ಅಬಕಾರಿ ಅಧಿಕಾರಿಗಳಿಗೆ ಈ ಸಮಯದಲ್ಲಿ ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಈಗಾಗಲೇ ಮದ್ಯ ಮಳಿಗೆ ಹೆಚ್ಚಾಗಿದ್ದು ಇನ್ನಷ್ಟು ಮದ್ಯ ಅಂಗಡಿಗಳು ಆರಂಭವಾಗಿರುವುದು ಇದೀಗ…

Read More

ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿ ಶುರು * ಇಡೀ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ * ರಿಯಾಯಿತಿಗಳು ಮತ್ತು ನೋಂದಣಿ ಕ್ರಮ ಹೇಗಿದೆ? * ತೀರ್ಥಹಳ್ಳಿಯಲ್ಲಿ 20,000ಕ್ಕೂ ಅಧಿಕ ಸದಸ್ಯರ ನೋಂದಣಿ NAMMUR EXPRESS NEWS ತೀರ್ಥಹಳ್ಳಿ: ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿಯು ಆರಂಭವಾಗಿದೆ. ತೀರ್ಥಹಳ್ಳಿಯ ಮಕ್ಕಿಮನೆ ಮೆಡಿಕಲ್ ಪ್ರಶಾಂತ್ ಅವರು ಈ ಬಗ್ಗೆ ಮಾಹಿತಿ ನೀಡಿದರು. ಅ. 4, 2024 ಭಾರತೀಯ ಆರೋಗ್ಯ ವ್ಯವಸ್ಥೆಯು ದೂರದರ್ಶಿತ್ವದ ನಾಯಕ ಡಾ. ಟಿ.ಎಂ.ಏ. ಪ್ರೈ, ಅವರ ಸಮರ್ಪಣೆಯಲ್ಲಿ,ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡುವುದು ಈ ಕಾರ್ಡ್‌ ಉದ್ದೇಶವಾಗಿದೆ. ಉಚಿತ ಆರೋಗ್ಯ ಸೇವೆಯನ್ನು ನೀಡುವುದು ಸವಾಲಿನವಾಗಿದ್ದರೂ, ಈ ಉಪಕ್ರಮವು ರಿಯಾಯಿತಿ ವೆಚ್ಚದಲ್ಲಿ, ಆರೋಗ್ಯ ಸೇವೆಯನ್ನು ಖಚಿತಪಡಿಸುತ್ತದೆ.2023 ರಲ್ಲಿ 360,000 ಹಾಗೂ ತೀರ್ಥಹಳ್ಳಿಯಲ್ಲಿ 20,000ಕ್ಕೂ ಅಧಿಕ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. * ರಿಯಾಯಿತಿಗಳು ಮತ್ತು ನೋಂದಣಿ ಕ್ರಮ ಹೇಗಿದೆ? ಮಣಿಪಾಲ್ ಆರೋಗ್ಯ ಕಾರ್ಡ್‌ರರು ತಜ್ಞ ಮತ್ತು ಸೂವರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲಿ 50%…

Read More

ಅಡಿಕೆ ಆಯ್ತು ಈಗ ಭತ್ತದ ಬೆಳೆಗೆ ಕಂದು ಜಿಗಿ ಹುಳು ರೋಗ! – ರೈತರು ಎಚ್ಚರಿಕೆ ವಹಿಸಲು ಕೃಷಿ ಇಲಾಖೆ ಮಾಹಿತಿ ಬಿಡುಗಡೆ – ಹತೋಟಿ ಕ್ರಮಗಳು ಹೇಗೆ?: ಸಿಂಪರಣೆ ಮಾಡುವಾಗ ಎಚ್ಚರಿಕೆ ಕ್ರಮ NAMMUR EXPRESS NEWS ಶಿವಮೊಗ್ಗ/ ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳು ಬಾಧೆ ಕಂಡುಬಂದಿರುತ್ತದೆ. ಸಾಮಾನ್ಯವಾಗಿ ಕಂದು ಜಿಗಿ ಹುಳು ಅತಿ ಶೀಘ್ರದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಭಿವೃದ್ಧಿಯಾಗಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ ಆದ್ದರಿಂದ ರೈತರು ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ತಿಳಿಸಿದೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಂದು ಜಿಗಿ ಬಾಧೆಯಲ್ಲಿ ಹುಳುಗಳು ಸಸ್ಯದ ಬುಡ ಭಾಗದಲ್ಲಿ ರಸ ಹೀರಿ ಬೆಳೆಯನ್ನು ಸುಟ್ಟಂತೆ ಮಾಡಿ ಸಂಪೂರ್ಣವಾಗಿ ನಾಶಪಡಿಸುತ್ತದೆ. * ಹತೋಟಿ ಕ್ರಮಗಳು ಹೇಗೆ? ಹುಳುವಿನ ಹತೋಟಿಗೆ ಮಾನೋಕ್ರೋಟೋಫಾಸ್ 36 ಎಸ್ ಎಲ್ ಪ್ರತಿ ಲೀಟರ್ ನೀರಿಗೆ 2 ಮಿಲಿ ಅಥವಾ ಕ್ಲೋರೋಪೈರಿಫಾಸ್ 20 ಇಸಿ…

Read More

ಮಕ್ಕಳ ಹೆಸರಲ್ಲಿ ದುಡ್ಡು ವಸೂಲಿ ಮಾಡಿದ ಅಪರಿಚಿತರು! – ತೀರ್ಥಹಳ್ಳಿ ತಾಲೂಕಿನಲ್ಲಿ ಹಲವೆಡೆ ಪ್ರಕರಣ: ಏನಿದು ಘಟನೆ? – ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಂದ ಹಣ ವಸೂಲಿ! NAMMUR EXPRESS NEWS ತೀರ್ಥಹಳ್ಳಿ: ಮಾಳೂರು ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಳೂರು ಹೆಸರು ಹೇಳಿಕೊಂಡು ವಿದ್ಯಾರ್ಥಿಗಳ ಮನೆಗೆ ಇಬ್ಬರು ವ್ಯಕ್ತಿಗಳು ಭೇಟಿ ನೀಡಿ ಹಣ ಲಪಟಾಯಿಸಿರುವ ಘಟನೆ ವರದಿಯಾಗಿದೆ. ಶಾಲೆಯ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ನಿಖರವಾಗಿ ತಿಳಿಸಿ ( ಉದಾ : ಹೆಸರು, ಶಾಲೆ ಹೆಸರು, ತಂದೆ ತಾಯಿ ಹೆಸರು, ಸ್ನೇಹಿತರ ಹೆಸರು, ತರಗತಿ, ಶಿಕ್ಷಕರ ಹೆಸರು, …. ) ನಿಮ್ಮ ಮಗ / ಮಗಳು ಯಾವುದೋ ಒಂದು ಸ್ಪರ್ಧೆಯ ಹೆಸರು ಹೇಳಿ, ಆ ಸ್ಪರ್ಧೆಗೆ ಸೆಲೆಕ್ಟ್ ಆಗಿದ್ದಾನೆ / ಳೆ. ನಿಮಗೆ ಈ ಪುಸ್ತಕಗಳ ಅವಶ್ಯಕತೆ ಇದೆ. ಇದನ್ನು ಕೊಂಡುಕೊಳ್ಳಲೇಬೇಕು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ತಿಳಿಸಿದ್ದಾರೆ ಹೀಗೆ ಅದು, ಇದು ಹೇಳಿ…

Read More

ಆಂಬುಲೈನ್ಸ್‌ಗೆ ಕೈ ಅಡ್ಡಹಾಕಿ ದಾರಿ ಬಿಡದೇ ಸತಾಯಿಸಿದ ಕುಡುಕರು! – ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ – ಭೀಕರ ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದ ಘಟನೆ NAMMUR EXPRESS NEWS ತರೀಕೆರೆ: ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಣ್ಣೆ ನಶೆಯಲ್ಲಿ ಬೈಕ್ ಸವಾರರು ಅಂಬುಲೈನ್ಸ್‌ಗೆ ದಾರಿ ಬಿಡದೇ ಸತಾಯಿಸಿದ ಘಟನೆ ನಡೆದಿದೆ. ಸೈರನ್ ಹಾಕಿ,ಹಾರನ್ ಮಾಡಿದರೂ ಜಾಗ ಬಿಡದೇ ಸತಾಯಿಸಿದ ಕಿಡಿಗೇಡಿಗಳು ತರೀಕೆರೆ ತಾಲೂಕಿನ ಕೆಂಚಾಪುರ ಗೇಟ್ ಬಳಿ ಬುಲೆರೋ ಹಾಗೂ ಟ್ರಾಕ್ಟರ್ ನಡೆವೆ ನಡೆದಿದ್ದ ಭೀಕರ ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿ ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಗೆ ಸಾಗಿಸುವಾಗ ಕುಡುಕರು ಈ ಕಿರಿಕ್ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 15 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಲಿಂಗದಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ನೂತನ ಸಂಸದರ ಕಛೇರಿ ಆರಂಭಿಸಿ ಸಂಸದ ಕೋಟಾ * ಜನರ ಕಷ್ಟಗಳಿಗೆ ಸ್ಪಂದಿಸಲು ಕಛೇರಿ ಆರಂಭ * ವಾರದಲ್ಲಿ ಎರಡು ದಿನ ಜನರ ಅಹವಾಲು ಸ್ವೀಕಾರ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ನಗರಸಭೆ ಆವರಣದಲ್ಲಿ ಸಂಸದರ ನೂತನ ಕಛೇರಿ ಉದ್ಘಾಟಿಸಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯ ಎಲ್ಲ ಪರಿವಾರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಸಂಸದರ ಕಛೇರಿ ಆರಂಭಿಸಿದ್ದಾರೆ. ಜನಸಾಮಾನ್ಯರು ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಕಛೇರಿ ಸಹಾಯಕವಾಗಿದೆ,ಸಂಸದರ ಕಛೇರಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಛೇರಿಯಾಗಲಿ ಎಂಬ ಉದ್ದೇಶದಿಂದ ನೂತನ ಕಛೇರಿಗೆ ಚಾಲನೆ ನೀಡಲಾಗಿದೆ ಎಂದರು. ಸರ್ಕಾರಿ ಕಛೇರಿಗಳ ಸಮಯದಂತೆ ರಜಾ ದಿನಗಳನ್ನು ಹೊರತುಪಡಿಸಿ, ಅಗತ್ಯ ಸಿಬ್ಬಂದಿ ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ನಾನು ವಾರದಲ್ಲಿ ಎರಡು ದಿನ ಕಚೇರಿಯಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಉಪಚುನಾವಣೆಗೆ ಪಕ್ಷ ನನಗೆ ಉಸ್ತುವಾರಿಯಾಗಿ ಜವಾಬ್ದಾರಿ ನೀಡಿದ್ದು, ಸುಮಾರು 21 ದಿನ ಅದರ ಕೆಲಸ ಮಾಡಬೇಕಾಗಿದೆ.…

Read More

ಅಂತೂ ತೀರ್ಥಹಳ್ಳಿ ಭೂ ನ್ಯಾಯ ಮಂಡಳಿ ಸದಸ್ಯರ ಆಯ್ಕೆ * ಸಂಜಯ್, ವಿಶ್ವನಾಥ ಶೆಟ್ಟಿ, ರುದ್ರಮೂರ್ತಿ, ಭೀಮೇಶ್ * ತೀರ್ಥಹಳ್ಳಿ ಭೂ ನ್ಯಾಯಮಂಡಳಿಯ ಸದಸ್ಯರುಗಳು ಯಾರು ಯಾರು? NAMMUR EXPRESS NEWS ತೀರ್ಥಹಳ್ಳಿ: ಅಂತೂ ಇಂತೂ ತೀರ್ಥಹಳ್ಳಿ ಭೂ ನ್ಯಾಯ ಮಂಡಳಿ ಸದಸ್ಯರ ಆಯ್ಕೆಯಾಗಿದೆ. ಪ್ರಸಿದ್ಧ ವಕೀಲ ಸಂಜಯ್, ಪತ್ರಕರ್ತ ವಿಶ್ವನಾಥ ಶೆಟ್ಟಿ, ಕಣಗಲಕೊಪ್ಪ ರುದ್ರಮೂರ್ತಿ, ರಂಜದಕಟ್ಟೆ ಭೀಮೇಶ ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ. ಶಿವಮೊಗ್ಗ ಉಪ ವಿಭಾಗದ ಸಹಾಯಕ ಆಯುಕ್ತರು ಮಂಡಳಿ ಅಧ್ಯಕ್ಷರಾಗಿದ್ದು, ತಾಲ್ಲೂಕು ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ತೀರ್ಥಹಳ್ಳಿ ತಾಲೂಕಲ್ಲಿ ಸಾವಿರಾರು ಅರ್ಜಿ! ತೀರ್ಥಹಳ್ಳಿ ತಾಲೂಕಲ್ಲಿ ಬಗೆಹರಿಯದ ಸಾವಿರಾರು ಸಮಸ್ಯೆ ಇರುವ ಭೂಮಿಗಳಿಗೆ ನ್ಯಾಯ ನೀಡಲು ಭೂ ನ್ಯಾಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆಯ್ಕೆಯಾಗಿರುವ ಎಲ್ಲಾ ಸದಸ್ಯರಿಗೆ ಶುಭಾಶಯಗಳು

Read More