ಚಾರ್ಲಿ ನಾಯಿ ಆಯ್ತು, ಈಗ ಕುರಿ ಆಕ್ಟಿಂಗ್! – ಟಗರು ಪಲ್ಯದಲ್ಲಿ 7 ಸ್ಟಾರ್ ಸುಲ್ತಾನ ಹೆಸರಿನ ಟಗರು – ಮಜಾ ಭಾರತ ಕಾರ್ತಿಕ್ ಲೀಡ್ ರೋಲ್ – ಡಾಲಿ ಧನಂಜಯ ನಿರ್ಮಾಣದ ಸಿನಿಮಾ! ಸಿನಿಮಾ ಡೆಸ್ಕ್: ನಮ್ಮೂರ್ ಎಕ್ಸ್ ಪ್ರೆಸ್ ಕನ್ನಡ ಸಿನಿಮಾ ರಂಗದಲ್ಲಿ ಕುತೂಹಲ ಮೂಡಿಸಿರುವ ‘ಟಗರು ಪಲ್ಯ’ ಸಿನಿಮಾಗೆ ಈಗ ಟಗರು ಎಂಟ್ರಿಯಾಗಿದೆ. ಸಿನಿಮಾಗಳಲ್ಲಿ ನಾಯಿ, ಹಸು, ಕುದುರೆ ಮುಂತಾದ ಸಾಕುಪ್ರಾಣಿಗಳು ಪ್ರಮುಖ ಪಾತ್ರ ನಿರ್ವಹಿಸುವುದು ಸಾಮಾನ್ಯ, ಈಗ ಟಗರು ಪಲ್ಯ’ ಸಿನಿಮಾದಲ್ಲಿ 7 ಸ್ಟಾರ್ ಸುಲ್ತಾನ ಎಂಬ ಟಗರು ಮುಖ್ಯ ಪಾತ್ರದಲ್ಲಿ ನಟಿಸಿದೆ. ಈವರೆಗೆ ತೆರೆಯ ಮೇಲೆ ಕೆಲವು ದೃಶ್ಯಗಳಷ್ಟೇ ಬಂದು ಹೋಗುತ್ತಿದ್ದ ಟಗರು ಇದೇ ಮೊದಲ ಬಾರಿಗೆ ಸಿನಿಮಾ ಪೂರ್ತಿ ಇರುತ್ತದೆ. ಶಿವನಸಮುದ್ರದ ಬಳಿ ಇಡೀ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಕಳೆದ ವರ್ಷ ನಾಯಿ ನಟನೆಯ ಚಾರ್ಲಿ ಸಿನಿಮಾಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಈ ಸಿನಿಮಾಕ್ಕೆ ಟಗರು ನಟನೆ ಮಾಡಲಿದೆ. ‘ನಮ್ಮ ಸಿನಿಮಾದ…
Author: Nammur Express Admin
ನೀವೂ ಸ್ವಂತ ಉದ್ಯೋಗ ಮಾಡಬೇಕಾ? – ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರದಲ್ಲಿ ಸ್ವ ಉದ್ಯೋಗ ತರಬೇತಿ – ಜುಲೈ 4ರಿಂದ ವಿವಿಧ ತರಬೇತಿ: ಅರ್ಜಿ ಅಹ್ವಾನ – ಊಟ, ವಸತಿ, ಕಿಟ್ ಫ್ರೀ… ಏನಿದು ಯೋಜನೆ? NAMMUR EXPRESS NEWS ಬ್ರಹ್ಮಾವರ: ಸ್ವ ಉದೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಇಂದು ಅನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆ, ಬಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗು ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್‌ನೊಂದಿಗೆ ತರಬೇತಿ ನೀಡಲಾಗುವುದು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಮೊದಲ ಆದ್ಯತೆ. ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳಲ್ಲಿ ನಡೆಯಲಿರುವ ತರಬೇತಿಗಳು, ದಿನಾಂಕ:…
ಆನ್ಲೈನ್ ವಂಚನೆ ಹೆಚ್ಚಾಯ್ತು: ಮಹಿಳೆಯರೇ ಟಾರ್ಗೆಟ್!? – ಆನ್ಲೈನ್ ಅಲ್ಲೇ ತೀರ್ಥಹಳ್ಳಿ ಮಹಿಳೆ 11 ಲಕ್ಷ ಕಳೆದುಕೊಂಡಳು! – ಮಂಗಳೂರಲ್ಲಿ 1.12 ಲಕ್ಷ ಪೀಕಿದ ಆನ್ಲೈನ್ ವಂಚಕ! – ಮಂಗಳೂರಲ್ಲಿ ಹನಿ ಟ್ರ್ಯಾಪ್: 8 ಮಂದಿ ಅರೆಸ್ಟ್ NAMMUR EXPRESS NEWS ತೀರ್ಥಹಳ್ಳಿ/ ಮಂಗಳೂರು: ಇತ್ತೀಚಿಗೆ ಆನ್ಲೈನ್ ವಂಚನೆ ಹೆಚ್ಚಾಗಿದೆ. ದಿನೇ ದಿನೇ ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೆಲ ಆನ್ಲೈನ್ ಖದೀಮರು ಉದ್ಯೋಗ, ಹೂಡಿಕೆ, ಚಟವನ್ನೇ ತಮ್ಮ ದಾಳವನ್ನಾಗಿಸಿಕೊಂಡಿದ್ದಾರೆ. ಹೂಡಿಕೆ ಮಾಡಿ ಮಹಿಳೆ ಹಣ ಕಳೆದುಕೊಂಡಳು!: ಪಾರ್ಟ್ ಟೈಮ್ ಉದ್ಯೋಗ ಹುಡುಕುತ್ತಿದ್ದ ಮಹಿಳೆಯೊಬ್ಬರು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 11 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ತಾಲೂಕಿನ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ ವಾಗಿಡಲಾಗಿದೆ) ಟೆಲಿಗ್ರಾಂ ಆಪ್‌ನಲ್ಲಿ ಪಾರ್ಟ್ ಟೈಮ್ ಉದ್ಯೋಗವಿದೆ, ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ ಎಂದು ಮೆಸೇಜ್ ಬಂದಿತ್ತು. ಮೆಸೇಜ್ ನಂಬಿದ ಮಹಿಳೆ ಹಣ ಹೂಡಿಕೆ ಮಾಡಿದ್ದರು. ಮೊದಲಿಗೆ…
ಶಿವಮೊಗ್ಗದಿಂದ ವಿಮಾನ ಯಾನ ಫಿಕ್ಸ್! – ಎಲ್ಲೆಲ್ಲಿಗೆ ಹಾರುತ್ತೆ ವಿಮಾನ? ಇಲ್ಲಿದೆ ಡೀಟೇಲ್ಸ್ – ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭ NAMMUR EXPRESS NEWS ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ಉಡಾನ್ ಯೋಜನೆ ಅಡಿ ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಗಸ್ಟ್ 11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಶುರುವಾಗಲಿದೆ. ಈ ಸಂಬಂಧ ಇಂಡಿಗೋ ಸಂಸ್ಥೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ನಾಲ್ಕು ಹೊಸ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ. ನಾನ್ ರೀಜನಲ್ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಮಾರ್ಗವನ್ನು ಪರಿಗಣಿಸುವಂತೆ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದೆ. ಈಗ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಲಭಿಸಿದೆ.…
ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ?! – ಮುಂದಿನ ವರ್ಷ ಸಾಲ ಮನ್ನಾ: ಸಿಎಂ ಭರವಸೆ? NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಜಾರಿಗೆ ಹಣ ಹೊಂದಿಸುವುದು ಕಷ್ಟಕರ ಆಗಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಭರವಸೆ ನೀಡಿದ್ದಾರೆ. ಈ ಮೂಲಕ ಮಹಿಳಾ ಶಕ್ತಿಗೆ ಮತ್ತೆ ಶಕ್ತಿ ತುಂಬಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ, ಭರವಸೆ ನೀಡಿದ್ದು, ಅದರಂತೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಹಲವು ಮಹಿಳೆಯರು ಮುಖ್ಯಮಂತ್ರಿ ನಿವಾಸದ ಸಮೀಪ ಬುಧವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರ ನಿಯೋಗದೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು ಈ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ…
ಮೌರ್ಯ, ಮುರೊಳ್ಳಿ, ಸೆಂಥಿಲ್ ಸೇವೆ ಮರೆಯಿತೇ ಕಾಂಗ್ರೆಸ್?! – ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ವಾಗ್ಮಿಗಳು – ಸ್ಥಾನಮಾನ ಕೊಟ್ಟು ಸಂಘಟನೆಗೆ ಅವಕಾಶ ಕೊಡುತ್ತಾ? NAMMUR EXPRESS NEWS ಬೆಂಗಳೂರು: ಅಧಿಕಾರಕ್ಕೆ ಬಂದೊಡನೆ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸುವುದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ. ಇದೀಗ ಕಾಂಗ್ರೆಸ್ ಸರದಿ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಸಮಯದಲ್ಲೂ ವರ್ಷಗಟ್ಟಲೆ ಭಾಷಣ ಮಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಪ್ರಮುಖ ವಾಗ್ಮಿಗಳಾದ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳ್ಳಿ, ನಿವೃತ್ತ ಐಎಎಸ್ ಅಧಿಕಾರಿ ಸೆಸಿಕಾಂತ್ ಸೆಂಥಿಲ್ ಸೇರಿದಂತೆ ಅನೇಕ ಪ್ರಾಮಾಣಿಕರನ್ನು ಕಾಂಗ್ರೆಸ್ ಇನ್ನು ಗಮನ ವಹಿಸಿಲ್ಲ. ಎಂಎಲ್ಸಿ ಹುದ್ದೆಗಳಿಗೆ ಇಂತವರಿಗೆ ಅವಕಾಶ ಕೊಟ್ಟಲ್ಲಿ ಪಕ್ಷ ಬೆಳೆಯುತ್ತೆ ಜತೆಗೆ ಪಕ್ಷದ ಇಮೇಜ್ ಹೆಚ್ಚುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕಾಂಗ್ರೆಸ್ ಅನೇಕರಿಗೆ ಹುದ್ದೆ, ಸ್ಥಾನಮಾನ ನೀಡಿದ್ದು ಅದು ಪಕ್ಷ ಹಾಗೂ ಸಂಘಟನೆಗೆ ಅನುಕೂಲ ಆಗಿಲ್ಲ. ಅನೇಕ ಹುದ್ದೆಗಳಂತೂ ವಿಸಿಟಿಂಗ್ ಕಾರ್ಡ್, ವೇದಿಕೆ ಮೇಲೆ ಕೂರಲು ಮಾತ್ರ…
ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತಾ ಭಾರತ?! – ತವರಲ್ಲಿ ಕಪ್ ಗೆಲ್ಲಲು ಭಾರತದ ಮಾಸ್ಟರ್ ಪ್ಲಾನ್! – ಭಾರತದಲ್ಲಿ ಈ ಬಾರಿಯ ವಿಶ್ವ ಕಪ್ ಕ್ರಿಕೆಟ್ – ಅ. 5ರಿಂದ ನ.19ರವರೆಗೆ ತಂಡಗಳ ಹಣಾಹಣಿ – ಪಾಕ್, ಅಸೀಸ್, ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯಾಟ NAMMUR EXPRESS NEWS ಬೆಂಗಳೂರು: ಭಾರತೀಯರಿಗೆ ಕ್ರಿಕೆಟ್ ಎಂದರೆ ಅಚ್ಚು ಮೆಚ್ಚು. ಸತತ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಭಾರತಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಒದಗಿ ಬಂದಿದೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದ್ದು, ವರ್ಲ್ಡ್ ಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ. 2011ರಲ್ಲಿ ಭಾರತದಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. 12 ವರ್ಷಗಳ…
ತಂದೆಯಿಂದ ಮಗಳ ಕೊಲೆ, ಪ್ರಿಯಕರ ರೈಲಿಗೆ ತಲೆಕೊಟ್ಟು ಸಾವು! – ಕೋಲಾರದಲ್ಲೊಂದು ಮನ ಕಲಕುವ ಘಟನೆ – ಮಾಂಸಕ್ಕಾಗಿ ಎಮ್ಮೆಗೆ ಗುಂಡಿಟ್ಟ ದುಷ್ಕರ್ಮಿಗಳು! – ಶಿವಮೊಗ್ಗ ಒಂಟಿ ಮಹಿಳೆ ಕೊಲೆ: 6 ಮಂದಿ ಅರೆಸ್ಟ್! NAMMUR EXPRESS NEWS ಕೋಲಾರ: ಪ್ರೀತಿಸಿದ ಹುಡುಗನನ್ನೇ ಮದುವೆ ಆಗ್ತಿನಿ ಅಂತ ಪಟ್ಟು ಹಿಡಿದ ಮಗಳನ್ನು ಪಾಪಿ ತಂದೆ ಉಸಿರುಗಟ್ಟಿಸಿ ಹತ್ಯೆ ಮಾಡಿದರೆ, ಪ್ರೇಯಸಿ ಸಾವಿನಿಂದ ನೊಂದ ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದ್ದು ಈ ಘಟನೆ ಈಗ ಭಾರೀ ಸದ್ದು ಮಾಡಿದೆ. ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ (20) ಯುವತಿಯನ್ನು ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದರೆ ಅದೇ ಗ್ರಾಮದ ಗಂಗಾಧರ್ (24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಕೀರ್ತಿಯ ತಂದೆ ಬುದ್ಧಿವಾದ ಹೇಳಿದ್ದರು. ಆದರೆ ಮಗಳು ಗಂಗಾಧರ್…
ಜಿಪಂ, ತಾಪಂ ಚುನಾವಣೆ 3 ತಿಂಗಳ ಬಳಿಕ! – ಕೋರ್ಟ್ 12 ವಾರದ ಬಳಿಕ ವಿಚಾರಣೆ ಆದೇಶ – ಎಲ್ಲಾ ಪಕ್ಷದಲ್ಲೂ ಕುತೂಹಲ…ತಯಾರಿ ಜೋರು! NAMMUR EXPRESS NEWS ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕನಿಷ್ಠ 3 ತಿಂಗಳು ಮುಂದಕ್ಕೆ ಹೋಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದೆ. ಜಿಲ್ಲಾ, ತಾಲೂಕು ಪಂಚಾಯ್ತಿ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡನೆಗೆ ಹೈಕೋರ್ಟ್ ಕಾಲಾವಕಾಶ ನೀಡಿದ ಕಾರಣ, ಮತ್ತೆ ಚುನಾವಣೆ ಮುಂದೂಡಿಕೆ ಖಚಿತ ಎನ್ನಲಾಗಿದೆ. ಏನಿದು ಕೇಸ್?: ಹೈಕೋರ್ಟಿನಲ್ಲಿ ಸಲ್ಲಿಕೆಯಾಗಿದ್ದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಸಂಬಂಧದ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆಗೆ ಕಾಲಾವಕಾಶವನ್ನು ಎಜೆ ಶಶಿಕಿರಣ್ ಶೆಟ್ಟಿ ಕೇಳಿದರು. ರಾಜ್ಯ ಸರ್ಕಾರದ ಮನವಿ ಪುರಸ್ಕರಿಸಿದಂತ ಹೈಕೋರ್ಟ್ ವಿಭಾಗೀಯ ಪೀಠವು, 10 ವಾರಗಳ ಕಾಲಾವಕಾಶವನ್ನು ನೀಡಿದೆ. 10 ವಾರಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿಯನ್ನು ಅಂತಿಮಗೊಳಿಸುವಂತೆ ಸೂಚಿಸಿದೆ.…
ಅಡಿಕೆ ದರ: ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ? – ಶಿವಮೊಗ್ಗ, ಉತ್ತರ ಕನ್ನಡ, ಕರಾವಳಿ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 18009 – 39559 ಬೆಟ್ಟೆ 47299 – 54599 ರಾಶಿ 38389- 53211 ಸರಕು 49100- 81900 ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 -41500 ವೋಲ್ಡ್ ವೆರೈಟಿ 40000- 50000 ಕುಮಟ ಮಾರುಕಟ್ಟೆ ಕೋಕ 20199- 32899 ಚಿಪ್ಪು 29999 -33019 ಫ್ಯಾಕ್ಟರಿ 14509 -22749 ಹಳೆ ಚಾಲಿ 38169 -40399 ಹೊಸ ಚಾಲಿ 36099 -38599 ಪುತ್ತೂರು ಮಾರುಕಟ್ಟೆ ಕೋಕ 11000 -25000 ನ್ಯೂ ವೆರೈಟಿ 34000 -41500 ಬಂಟ್ವಾಳ ಮಾರುಕಟ್ಟೆ ಕೋಕ 12500 -25000 ನ್ಯೂ ವೆರೈಟಿ 27500- 41500 ವೋಲ್ಡ್ ವೆರೈಟಿ 48000 -50500 ಸಿದ್ದಾಪುರ ಮಾರುಕಟ್ಟೆ ಕೆಂಪುಗೋಟು 28012- 33012 ಕೋಕ 27099 -32899 ಚಾಲಿ 37399 -39309 ತಟ್ಟಿಬೆಟ್ಟೆ 38699- 48099 ಬಿಳೆ ಗೋಟು 29399- 33799 ರಾಶಿ 44099- 49869…