ಗ್ಯಾರಂಟಿ ಯೋಜನೆ ಅರ್ಜಿ ಹಾಕಲು ಸೈಬರ್ ಗೋಲ್ ಮಾಲ್!? – ಗೃಹಲಕ್ಷ್ಮೀ ಯೋಜನೆ ತಾತ್ಕಾಲಿಕ ಸ್ಥಗಿತ – ಅರ್ಜಿದಾರರಿಂದ ಕೆಲವು ಸೈಬರ್ ಗಳ ಹಣ ವಸೂಲಿ NAMMUR EXPRESS NEWS ಬೆಂಗಳೂರು: ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆ ಅರ್ಜಿ ಹಾಕಲು ಸೈಬರ್ ಗೋಲ್ ಮಾಲ್ ಶುರುವಾಗಿದೆ. ಕಂಪ್ಯೂಟರ್ ಸೆಂಟರಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಸರ್ಕಾರ ಇದೀಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಮನೆಯೊಡತಿಯರಿಗೆ 2000 ರೂ.ಮಾಸಿಕ ನೀಡುವ ಗೃಹಲಕ್ಷ್ಮೀ ಯೋಜನೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಅರ್ಜಿದಾರರು ಎದುರಿಸುತ್ತಿರುವ ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಗೃಹಲಕ್ಷ್ಮಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಗೃಹ ಲಕ್ಷ್ಮಿಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಖಾತರಿಗಳಲ್ಲಿ ಒಂದಾಗಿದ್ದು, ಇದು ರಾಜ್ಯಾದ್ಯಂತ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ. ನೀಡುವ ವಾಗ್ದಾನ ಹೊಂದಿದೆ. ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಭ್ರಷ್ಟಾಚಾರ ಮುಕ್ತ ವಾತಾವರಣವನ್ನು ಖಾತ್ರಿಪಡಿಸಿ ಯೋಜನೆಗೆ ಅರ್ಜಿ ಸಲ್ಲಿಸುವ…
Author: Nammur Express Admin
ಮಕ್ಕಳ ಮದುವೆ ಸಂಭ್ರಮದಲ್ಲೇ ಅಪ್ಪ ವಿಧಿಯಾಟಕ್ಕೆ ಬಲಿ! – ನಿರ್ದೇಶಕ ಶಿವಶಂಕರ್ ಹೃದಯಾಘಾತದಿಂದ ನಿಧನ – ಸೊರಬ ಪುರಸಭೆ ನೌಕರ ಲೋಕಾಯುಕ್ತ ದಾಳಿಗೆ! NAMMUR EXPRESS NEWS ಸಾಗರ: ಇಬ್ಬರು ಮಕ್ಕಳ ಮದುವೆ ಸಂಭ್ರಮದಲ್ಲೇ ಅಪ್ಪ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ. ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಆನಂದಪುರದ ಕಡೆ ತೆರಳುತ್ತಿದ್ದ ಪಾದಾಚಾರಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮೃತಪಟ್ಟವರು ಬನವಾಸಿ ನಿವಾಸಿ ಮಂಜುನಾಥ ಗೌಡ. ಆ ಮನೆಯಲ್ಲಿ ಇಬ್ಬರು ಹೆಣ್ಮಕ್ಕಳ ಮದುವೆ ಇತ್ತು. ಇಡೀ ಮನೆ ಬಂಧು ಮಿತ್ರರಿಂದ ಖುಷಿಖುಷಿಯಾಗಿ ನಲಿದಾಡುತ್ತಿತ್ತು. ಆದರೆ, ಒಮ್ಮಿಂದೊಮ್ಮೆಗೇ ಈ ಮನೆಯಲ್ಲಿ ಸೂತಕದ ಕಳೆ ಆವರಿಸಿದೆ. ಮದುವೆಯಾಗಬೇಕಾದ ಆ ಇಬ್ಬರು ಹೆಣ್ಣು ಮಕ್ಕಳ ತಂದೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಪೇಟೆಗೆ ಬಂದಿದ್ದ ಮಂಜುನಾಥ್ ಅವರಿಗೆ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರು ಅಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ…
ಶಿಕ್ಷಣ ಕ್ಷೇತ್ರಕ್ಕೆ ಹೊಸ ಬೆಳಕು ನೀಡುತ್ತೇನೆ: ಮಧು ಬಂಗಾರಪ್ಪ – ಶಿವಮೊಗ್ಗ ಜಿಲ್ಲೆಯ ಅನೇಕ ಕಡೆ ಅಭಿವೃದ್ಧಿ ಪರಿಶೀಲನೆ – ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ NAMMUR EXPRESS NEWS ತೀರ್ಥಹಳ್ಳಿ: ನನಗೆ ಸಿಕ್ಕಿರುವ ಶಿಕ್ಷಣ ಇಲಾಖೆ ದೊಡ್ಡದು, ಸಾಕಷ್ಟು ಸಮಸ್ಯೆಗಳು ಕೂಡ ಇವೆ. ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಶಾಲೆಗಳಿವೆ. ಮೂಲಭೂತ ಸೌಕರ್ಯಗಳ ಕೊರತೆಯಿದೆ. ಎಲ್ಲವನ್ನು ಬಗೆಹರಿಸುತ್ತವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಇಲಾಖೆಗೆ ಸಂಬಂಧಿಸಿದ ಅನುದಾನಕ್ಕೆ ಬಜೆಟ್ ಅಲ್ಲಿ ಸೇರಿಸಲು ಪ್ರಯತ್ನ ಮಾಡುತ್ತಿದ್ದೇನೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಪ್ರಕರಣ ಕೋರ್ಟ್ ಅಲ್ಲಿದೆ. ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ಕಮಿಟಿ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದರು. ಶಿವಮೊಗ್ಗ ಜಿಲ್ಲೆಯ ಸಮಸ್ಯೆಗಳಿಗೆ ದನಿಯಾಗಲಿದ್ದೇನೆ. ಸೊರಬ, ಆನವಟ್ಟಿ ಹಾಗೂ ತಾಳಗುಪ್ಪದಲ್ಲಿ ಸಚಿವರ ಸ್ಥಳೀಯ ಕಚೇರಿ ಶುರು ಮಾಡಿದ್ದೇನೆ. ಇದರಿಂದ ಜನರ ಅಹವಾಲು ಸ್ವೀಕರಿಸಲು…
ಹೆಲ್ಮೆಟ್ ಹಾಕಿದರೆ ಮಾತ್ರ ಈ ಬೈಕ್ ರನ್ ಆಗುತ್ತೆ..! – ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ತೆಗೆದರೆ ಬೈಕ್ ಸ್ಟಾಪ್ – ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? NAMMUR EXPRESS NEWS ಬೈಕ್ ಸವಾರರೇ ಇದು ನಿಮಗೆ ಹೊಸ ಸುದ್ದಿ. ಹೆಲ್ಮೆಟ್ ಹಾಕಿದರೆ ಮಾತ್ರ ಈ ಬೈಕ್ ರನ್ ಆಗುತ್ತೆ. ಇಲ್ಲದಿದ್ರೇ ಓಡೋದೇ ಇಲ್ಲ.. ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಬೈಕ್ ಸ್ಟಾರ್ಟ್ ಆಗುತ್ತೆ!. ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ತೆಗೆದರೆ ಬೈಕ್ ಸ್ಟಾಪ್ ಆಗಲಿದ್ದು ಓಲಾ ಕಂಪನಿಯಿಂದ ಹೊಸದೊಂದು ಟೆಕ್ನಾಲಜಿ ಬರಲಿದೆ. ಈಗಂತೂ ಬೈಕ್ನಲ್ಲಿ ಎಲ್ಲಿಗೆ ಪ್ರಯಾಣ ಬೆಳೆಸಿದರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೂ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಅಷ್ಟಕಷ್ಟೇ. ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕಂಡರಷ್ಟೇ ಹೆಲ್ಮೆಟ್ ಹಾಕಿಕೊಂಡು ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ಮತ್ತೆ ಅದನ್ನು ತೆಗೆದು ಬಿಡೋರು ತುಂಬಾ ಜನ ಸಿಗ್ತಾರೆ. ಆದರೆ ಈಗ ಇದೆಲ್ಲ ನಡೆಯಲ್ಲ. ಹೆಲ್ಮೆಟ್ಗಾಗಿ ಸ್ಪೆಷಲ್ ತಂತ್ರಜ್ಞಾನ ಒಂದು ಕಂಡುಹಿಡಿಯಲಾಗಿದೆ. ಅದು ಹೇಗೆ…
ಲೋಕಸಭಾ ಚುನಾವಣೆಗೆ ಸುಧಾಕರ್ ಶೆಟ್ಟಿ ಅಖಾಡಕ್ಕೆ! – ಚಿಕ್ಕಮಗಳೂರು ಉಡುಪಿ ಕ್ಷೇತ್ರದಿಂದ ಸ್ಪರ್ಧೆ ಮನಸು – ಟಿಕೆಟ್ ನೀಡುವಂತೆ ವರಿಷ್ಠರಿಗೆ ಕೇಳುತ್ತೇನೆ: ಸುಧಾಕರ್ ಶೆಟ್ಟಿ NAMMUR EXPRESS NEWS ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಕಣ ನಿಧಾನಕ್ಕೆ ರಂಗೇರಿದೆ. ಈಗಲೇ ಟಿಕೆಟ್ ರಾಜಕೀಯ ಶುರುವಾಗಿದೆ. ಈ ನಡುವೆ ಚಿಕ್ಕಮಗಳೂರು ಉಡುಪಿ ಲೋಕಸಭಾ ಚುನಾವಣೆಗೆ ಜೆಡಿಎಸ್ಸಿನಿಂದ ಆಕಾಂಕ್ಷಿಯಾಗಿದ್ದೇನೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿಕೆ ನೀಡಿರುವುದು ಕುತೂಹಲ ಮೂಡಿದೆ. ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಸಚಿವರಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದೆ. ಈ ನಡುವೆ ಸುಧಾಕರ್ ಶೆಟ್ಟಿ ಅವರ ಹೇಳಿಕೆ ಮಹತ್ವ ಪಡೆದಿದೆ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡುತ್ತೇನೆ!: ನಾನು ಪಕ್ಷದ ನಿಷ್ಠಾವಂತ ಕಟ್ಟಾಳು, ನನಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಕೇಳುತ್ತೇನೆ, ಚಿಕ್ಕಮಗಳೂರು ಹಾಗೂ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದ್ದೇನೆ. ಪಕ್ಷದ ವರಿಷ್ಠರು…
ದಿವ್ಯಾ ಉರುಡುಗ ಹೊಸ ಫೋಟೋ ಶೂಟ್! – ಕನ್ನಡದ ಬಹು ಬೇಡಿಕೆಯ ನಟಿ ಮದುವೆ ಯಾವಾಗ? – ಮತ್ತಷ್ಟು ಸಿನಿಮಾದಲ್ಲಿ ನಟಿಸ್ತಾರಾ ನಟಿ!? NAMMUR EXPRESS NEWS ನಟಿ, ಬಿಗ್ ಬ್ಯಾಸ್ ಖ್ಯಾತಿಯ ದಿವ್ಯಾ ಉರುಡುಗ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ದಿವ್ಯಾ ಉರುಡುಗ ಎರಡು ಬಾರಿ ಅವರು ಬಿಗ್ ಬಾಸ್ಗೆ ಕಾಲಿಟ್ಟಿದ್ದರು. ಈಗ ದಿವ್ಯಾ ಉರುಡುಗ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಇದರ ಜೊತೆಗೆ ಎರಡು ಪ್ರಶ್ನೆ ಇಟ್ಟಿದ್ದಾರೆ.ದಿವ್ಯಾ ಉರುಡುಗ ಅವರು ಅರವಿಂದ್ ಕೆಪಿಯನ್ನು ಪ್ರೀತಿಸುತ್ತಿದ್ದಾರೆ. ಇವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಮೊದಲ ಪ್ರಶ್ನೆ. ಅಲ್ಲದೆ ದಿವ್ಯಾ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ‘ಅರ್ದಂಬರ್ಧ ಪ್ರೇಮ ಕಥೆ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ದಿನಾಂಕಕ್ಕಾಗಿ…
ಧಾರವಾಡ – ಬೆಂಗಳೂರು ವಂದೇ ಭಾರತ್ ರೈಲು – ಜೂ.27ರಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ – ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚಾರ NAMMUR EXPRESS NEWS ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಜೂನ್ 27ರಂದು ಚಾಲನೆಗೊಂಡಿದೆ. ಬೆಂಗಳೂರು-ಧಾರವಾಡ ಮಧ್ಯೆ ಕೇವಲ ಮೂರು ನಿಲುಗಡೆ ಇದ್ದು, ಕನಿಷ್ಠ ಆರು ನಿಲುಗಡೆಗೆ ಅವಕಾಶ ನೀಡಿದರಷ್ಟೇ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಧಾರವಾಡದಿಂದ ಹೊರಡಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜೂ.27ರ ಬೆಳಿಗ್ಗೆ 10ಕ್ಕೆ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಿದ್ದಾರೆ. ಉದ್ಘಾಟನೆಯ ದಿನದ ವಿಶೇಷವಾಗಿ ಧಾರವಾಡದಿಂದ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತಲುಪುವ ನಡುವೆ 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ವಂದೇಭಾರತ್ ಎಕ್ಸ್‌ಪ್ರೆಸ್ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್ ಇಡಲು ಅನುಕೂಲಕರ ಸ್ಥಳ…
ಆಳ್ವಾಸ್ ಕಾಲೇಜು, ಎಐಇಟಿ: ‘ಸಂಸ್ಕೃತ ಚಿಂತನ’! – ಪುರಾತನ ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಆಸಕ್ತಿ ಬೇಕು: ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್ NAMMUR EXPRESS NEWS ಮೂಡುಬಿದಿರೆ: ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಾಹಿತಿ ಪ್ರೊ.ಗೋಪಾಲಕೃಷ್ಣ ಎನ್. ಭಟ್ ಹೇಳಿದರು. ಅವರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು(ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜ್ಞಾನ ವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು. ಓಂ ಉಚ್ಚಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದರು. ಪಶ್ಚಿಮ ಬಂಗಾಳದ ಬೇಲೂರು…
ಮೈಸೂರಿನ ಪ್ರತಿಷ್ಠಿತ ಹೋಟೆಲಲ್ಲಿ ಬೌ ಬೌ ಬಿರಿಯಾನಿ! – ನಾಯಿ ಮಾಂಸ ನೋಡಿ ಅಧಿಕಾರಿಗಳಿಗೆ ಬಿಗ್ ಶಾಕ್ – ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು!: 7 ಮಂದಿ ಪಾರು NAMMUR EXPRESS NEWS ಮೈಸೂರು: ಮೈಸೂರಿನ ಹೋಟೆಲ್‌ವೊಂದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬೌ ಬೌ ಮಾಂಸ ಪತ್ತೆಯಾಗಿದೆ. ಅಧಿಕಾರಿಗಳು ದಾಳಿ ಮಾಡಿದ ಹೋಟೆಲ್ ಮೈಸೂರಿನ ಕೆ.ಆರ್.ನಗರದ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಬೆಳಕಿಗೆ ಬಂದಿದೆ. ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ವೇಳೆ ನಾಯಿ ಮಾಂಸ ಅಲ್ಲದೆ ಕೊಳೆತ ಇತರ ಮಾಂಸಗಳನ್ನೂ ಪತ್ತೆ ಹಚ್ಚಿದ್ದಾರೆ. ಕೊಳೆತ ಮಾಂಸದ ಜೊತೆಗೆ ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್ ಹಿಡಿದ ಮಾಂಸಾಹಾರ ಪತ್ತೆಯಾಗಿದೆ ಈ ರೀತಿಯ ಆಹಾರವನ್ನು ಸೇವಿಸುವುದರಿಂದ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಮೂಲಕರಿಗೆ ದಂಡ ವಿಧಿಸಿ ರೆಸ್ಟೋರೆಂಟ್ ಬಂದ್ ಮಾಡಿಸಿದ್ದಾರೆ. ನಡು ರಸ್ತೆಯಲ್ಲೇ ಹೊತ್ತಿ ಉರಿದ…
ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಶುರು – ಏನೇನು ಹಂತ ಇದೆ… ವಿದ್ಯಾರ್ಥಿಗಳೇನು ಮಾಡಬೇಕು? – ಸಿಇಟಿ ಸಂಪೂರ್ಣ ಕೌನ್ಸೆಲಿಂಗ್ ಮಾಹಿತಿ ಇಲ್ಲಿದೆ NAMMUR EXPRESS NEWS ಬೆಂಗಳೂರು: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆಯನ್ನು ಸೂಚಿಸಿದೆ. ಈ ಪ್ರಕ್ರಿಯೆಯು ಜೂನ್ 27 ರಿಂದ ಪ್ರಾರಂಭವಾಗಲಿದ್ದು, ಜುಲೈ 15, 2023 ರಂದು ಕೊನೆಗೊಳ್ಳುತ್ತದೆ. ಇನ್ನು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET ) 2023 ಕೌನ್ಸೆಲಿಂಗ್ ಜುಲೈ ಕೊನೆಯ ವಾರದಲ್ಲಿ (2023 ಕ್ಕೆ ತಾತ್ಕಾಲಿಕ) ನಡೆಯುವ ನಿರೀಕ್ಷೆಯಿದೆ. ಕೆಸಿಇಟಿ 2023 ಕೌನ್ಸೆಲಿಂಗ್ ಅನ್ನು ಕರ್ನಾಟಕ ಶಿಕ್ಷಣ ಪ್ರಾಧಿಕಾರ (ಕೆಇಎ) 2 ಸುತ್ತುಗಳಲ್ಲಿ ನಡೆಸಲಿದೆ. ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿ, ಸಂಸ್ಥೆ ಮತ್ತು ಕೋರ್ಸ್ ಆದ್ಯತೆಯ ಆಧಾರದ ಮೇಲೆ ಸೀಟುಗಳನ್ನು ಹಂಚಲಾಗುತ್ತದೆ. ಅಭ್ಯರ್ಥಿಗಳು ಆದ್ಯತೆಯ ಪಟ್ಟಿಯನ್ನು ಭರ್ತಿ ಮಾಡುವಾಗ ತಮ್ಮ ಅಂಕಗಳು, ಮೆರಿಟ್ ಪಟ್ಟಿ, ಸಂಸ್ಥೆಗಳಲ್ಲಿ ಸೀಟು ಲಭ್ಯತೆ ಮತ್ತು ಮೀಸಲಾತಿಗಳನ್ನು ಪರಿಗಣಿಸಬೇಕು. KCET Counselling 2023 :…