ಬಕ್ರೀದ್ ಹಬ್ಬಕ್ಕೆ ಸಜ್ಜು: ನಾಟಿ ಕುರಿಗಳಿಗೆ ಡಿಮ್ಯಾಂಡ್! – ಬೆಂಗಳೂರು ಸೇರಿ ಎಲ್ಲೆಡೆ ಕುರಿಗಳಿಗೆ ಹೆಚ್ಚಿದ ಬೇಡಿಕೆ – ಎಲ್ಲಾ ಕಡೆ ಬಕ್ರೀದ್ ಹಬ್ಬದ ಸಂಭ್ರಮಕ್ಕೆ ಸಿದ್ಧತೆ – 1.20 ಲಕ್ಷದವರೆಗೆ ಒಂದು ಕುರಿ ಮಾರಾಟ! NAMMUR EXPRESS NEWS ಬೆಂಗಳೂರು: ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆಯೇ ಎಲ್ಲೆಡೆ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ಶುರುವಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ. ಈ ಬಾರಿ ನಾಟಿ ಮತ್ತು ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಕ್ಕೆ ಇನ್ನೂ 2 ದಿನ ಬಾಕಿ ಇರುವಂತೆ ವ್ಯಾಪಾರ ಜೋರಾಗಿದೆ. ಬೆಂಗಳೂರಲ್ಲಿ ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು,…
Author: Nammur Express Admin
ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು! – ಕನ್ನಡದ ಖ್ಯಾತ ಸಿನಿಮಾ ಚಾರ್ಲಿ ಮೂಲಕ ಜನರ ಮನ ಗೆದ್ದ ನಾಯಿ – ಚಾರ್ಲಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ಸ್ಪೆಷಲ್ ಅಪಿಯರೆನ್ಸ್ NAMMUR EXPRESS CINEMA ಚಾರ್ಲಿ 777 ಸಿನಿಮಾದಲ್ಲಿ ಪ್ರಮುಖ ಪಾತ್ರದಾರಿಯಾಗಿ ಅಭಿನಯಿಸಿದ ಚಾರ್ಲಿ ನಾಯಿ ಈಗ ನಾಡಿನ ಹೆಮ್ಮೆಯ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿದೆ. ಕನ್ನಡದ ಚಿತ್ರವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಕೆಜಿಎಫ್ ಬಳಿಕ ಚಾರ್ಲಿ ಸಿನಿಮಾ. ಇಲ್ಲಿ ಚಾರ್ಲಿಯ ಸೆಂಟಿಮೆಂಟ್, ನಟನೆ, ರಕ್ಷಿತ್ ಶೆಟ್ಟಿ ನಟನೆ ಎಲ್ಲವೂ ಗೆದ್ದಿತ್ತು. ಇದೀಗ ‘ಚಾರ್ಲಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ಸ್ಪೆಷಲ್ ಅಪಿಯರೆನ್ಸ್ ಅವಾರ್ಡ್ ಸಿಕ್ಕಿದ್ದು ಖುದ್ದು ಚಾರ್ಲಿ ಕಾರ್ಯಕ್ರಮದಲ್ಲಿ ಹಾಜರಾಗಿ ಪಡೆದುಕೊಂಡಿದೆ. ಕಿರಣ್ ರಾಜ್ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರವು ಒಂದು ವರ್ಷ ಪೂರೈಸಿದ್ದು, ಚಾರ್ಲಿ ಪಾತ್ರದಲ್ಲಿ ಮಿಂಚಿದ್ದ ಲ್ಯಾಬ್ರಡಾರ್ ರಿಟ್ರಿವ ‘ಚಾರ್ಲಿ’ ಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್…
ಬೆಲೆ ಏರಿಕೆ ಬಿಸಿ: ಬದುಕು ಬರ್ಬಾತ್! – ಟೊಮ್ಯಾಟೊ, ನುಗ್ಗೆಕಾಯಿ, ಬೀನ್ಸ್, ಮೆಣಸು ಮುಟ್ಟಕಾಗೋಲ್ಲ – ಮಳೆ ಇಲ್ಲ,ಇಳುವರಿ ಕಡಿಮೆ: ಬೆಲೆ ಏರಿಕೆ? – ಹಾಲು, ಬೇಳೆ ಕೂಡ ಏರಿಕೆ ಸಾಧ್ಯತೆ – ಹೋಟೆಲ್ ಊಟ, ಉಪಹಾರ ಕೂಡ ಏರುತ್ತಾ? NAMMUR EXPRESS NEWS ಬೆಂಗಳೂರು: ತರಕಾರಿ ಬೆಲೆ ಗಗನಕ್ಕೇರುತ್ತಿದ್ದು ಜನರ ಬದುಕು ಹೊರೆ ಆಗುತ್ತಿದೆ. ಒಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ, ಗ್ಯಾಸ್ ಬೆಲೆ ಏರಿಕೆ ಹೆಚ್ಚಾದ ಹಿನ್ನೆಲೆ ತರಕಾರಿ ಕೂಡ ಈಗ ಹೆಚ್ಚಾಗಿದೆ. ಮಳೆ ಹಿನ್ನೆಲೆ ತರಕಾರಿ ಇಳುವರಿ ಕಡಿಮೆ ಆದ ಹಿನ್ನೆಲೆ ಬೇಡಿಕೆ ಹೆಚ್ಚಾಗಿದ್ದು ಬೆಲೆ ಏರಿದೆ. ಇನ್ನೊಂದು ಕಡೆ ಬೇಳೆ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ. ಟೊಮ್ಯಾಟೊ ಬೆಲೆ ಕಳೆದ ಕೆಲವು ದಿನಗಳಿಂದ ಗಗನಮುಖಿಯಾಗಿದ್ದು, ನೂರರ ಸನಿಹ ಬಂದು ನಿಂತಿದೆ. 15 ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ 1,500 ರೂ ಆಗಿದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ…
ಜಯದೇವ ಸಂಸ್ಥೆ, ನಿತಿನ್ ಕಾಮತ್, ಅದಿತಿ ಅಶೋಕ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ! – ಕೆಂಪೇಗೌಡ ಜನ್ಮ ದಿನದ ಹಿನ್ನೆಲೆ ಘೋಷಣೆ NAMMUR EXPRESS NEWS ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆ, ಜೆರೋಧಾ ಕಂಪನಿ ಸಂಸ್ಥಾಪಕ ನಿತಿನ್ ಕಾಮತ್, ಗಾಲ್ಪ್ ಆಟಗಾರ್ತಿ ಅದಿತಿ ಅಶೋಕ್ ಸೇರಿ ಮೂವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸೋಮವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಂಪೇಗೌಡ ಅವರ 514ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನ 198 ಮಂದಿಗೆ ಕೆಂಪೇಗೌಡ ಪ್ರಶಸ್ತಿ ಘೋಷಣೆ ಮಾಡಿದ್ದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಹಾಗೆಯೇ ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಆಚರಣೆ ನಡೆಯಲಿದೆ. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಲಕ್ಷ ಲಕ್ಷ ಮಂದಿಗೆ ಹೃದಯ ಸಮಸ್ಯೆ ಪರಿಹಾರ ನೀಡಿದ್ದಲ್ಲದೆ ಲಕ್ಷ ಜನರ ಜೀವ ಉಳಿಸಿದ ಸಂಸ್ಥೆಗೆ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕದ ಖ್ಯಾತ ಯುವ ಉದ್ಯಮಿ, ಜೆರೋಧಾ…
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಶುರು! – ಅರ್ಜಿ ಹಾಕೋದು ಹೇಗೆ..? : ಅರ್ಜಿ ಸಲ್ಲಿಸಲು ಏನು ಬೇಕು?. ಇಲ್ಲಿ ಕ್ಲಿಕ್ ಮಾಡಿ…! – ಮನೆ ಯಜಮಾನಿಗೆ 2000 ರೂ. ಬರುತ್ತೆ! NAMMUR EXPRESS NEWS ಜೂ.27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಕರ್ನಾಟಕ ರಾಜ್ಯದ ಮಹಿಳೆಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಅದರ ಅಧಿಕೃತ ವೆಬ್‌ಸೈಟ್ sevasindhuservices.karnataka.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ರಾಜ್ಯದ ಗೃಹಿಣಿಯರ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ, ಕಾಂಗ್ರೆಸ್ ಸರಕಾರವು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದೆ. ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಕರ್ನಾಟಕದವರಾಗಿರಬೇಕು ಹಾಗೂ ನೀವು ನಿಮ್ಮ ಕುಟುಂಬದ ಮುಖ್ಯಸ್ಥರಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ. ಈ ರಾಜ್ಯದ ಎಲ್ಲಾ ಮಹಿಳೆಯರಿಗೆ ಈ ಯೋಜನೆಯ ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ಕರ್ನಾಟಕ ರಾಜ್ಯ ಸರಕಾರವು ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನವನ್ನು ಬಿಡುಗಡೆ ಮಾಡಿದೆ. ಇನ್ನು ಈ ಯೋಜನೆಯಡಿ ಅರ್ಜಿ ಸಲ್ಲಿಕೆ ಜೂನ್ 27ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು…
ತೀರ್ಥಹಳ್ಳಿ ಹನಿಟ್ರ್ಯಾಪ್ ಪ್ರಕರಣ: ಮೂವರು ಅರೆಸ್ಟ್! – ಫೋಟೋ ನೆಪದಲ್ಲಿ ಅಧಿಕಾರಿ ಜತೆ ಮಹಿಳೆ ಸಲುಗೆ – ಮಂಗಳೂರು: ಯುವತಿ ಹಿಂದೆ ಬಂದಿದ್ದು ಪ್ರಶ್ನಿಸಿದ್ದಕ್ಕೆ ಚಾಕು ಇರಿತ! – ಅಪಘಾತದಲ್ಲಿ ಕಾಲು ಕಳೆದುಕೊಂಡರಾ ಯುವ ನಟ? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೋರ್ವಳು ನೀವು ನಮ್ಮ ಸ್ಟುಡಿಯೋದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ. ಈ ಸಣ್ಣಕರೆ ಅಧಿಕಾರಿ ಮತ್ತು ಮಹಿಳೆಯ ಜೊತೆ ಸಲುಗೆಯಿಂದ ಇರುವಂತೆ ಮಾಡಿದೆ. ಹತ್ತಿರಕ್ಕೆ ಕರೆಸಿದೆ. ಒಂದು ಮನೆಯಲ್ಲಿದ್ದಾಗ ಈ ಮಹಿಳೆ ಸ್ನೇಹಿತರ ಮತ್ತೊಂದು ಗ್ಯಾಂಗ್ ಬಂದು ಕದ ತಟ್ಟಿದ್ದಾರೆ. ಆಗ ಅಧಿಕಾರಿಯ ನಗ್ನ ಫೋಟೊ ತೆಗೆದು ಅಧಿಕಾರಿಗೆ ಹಣದ ಬೇಡಿಕೆ ಇಟ್ಟಿದೆ. 15 ಲಕ್ಷದ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಹಂತ ಹಂತವಾಗಿ ಅಧಿಕಾರಿಗಳು ಹಣ ನೀಡಿದ್ದಾರೆ.…
ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅರ್ಜಿ ಆಹ್ವಾನ – ಶಿವಮೊಗ್ಗ ಜಿಲ್ಲೆಯ ಹಲವೆಡೆ ಉದ್ಯೋಗ NAMMUR EXPRESS NEWS ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳ ನೇಮಕಕ್ಕೆ ಅರ್ಜಿ ಅಹ್ವಾನಿಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಸಹಾಯಕರು (ಅರಣ್ಯ) – 4 ಹುದ್ದೆ, ತಾಂತ್ರಿಕ ಸಹಾಯಕರು (ಕೃಷಿ) 3 ಹುದ್ದೆ, ತಾಂತ್ರಿಕ ಸಹಾಯಕರು (ತೋಟಗಾರಿಕೆ) 4 ಹುದ್ದೆ, ತಾಂತ್ರಿಕ ಸಹಾಯಕರು (ಸಿವಿಲ್) 2 ಹುದ್ದೆಗಳು, ಡೇಟಾ ಎಂಟ್ರಿ ಆಪರೇಟರ್ 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅ.20ರಿಂದ ಅರ್ಜಿ ಸಲ್ಲಿಸಲು ಅವಕಾಶವಿದೆ. ನವೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ಸ್ಥಳೀಯ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಕಚೇರಿ ಭೇಟಿ ಮಾಡಿ ಮಾಹಿತಿ ಪಡೆಯಿರಿ. ಮೊಬೈಲ್ ಅಂಗಡಿಯಲ್ಲಿ ಕೆಲಸ ಇದೆ ತೀರ್ಥಹಳ್ಳಿಯ ಪ್ರತಿಷ್ಠಿತ…
ಶಿವಮೊಗ್ಗದಲ್ಲೇ ಮತ್ತೆ ಘರ್ಷಣೆ: ಪೊಲೀಸ್ ಬಂದೋಬಸ್ತ್! – ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ: ಇಬ್ಬರ ಬಂಧನ – ಎನ್.ಆರ್.ಪುರದಲ್ಲಿ ರೈತ ಆತ್ಮಹತ್ಯೆ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಮತ್ತೆ ಯುವಕರ ನಡುವಿನ ಗಲಾಟೆ ಇದೀಗ ಪೊಲೀಸರಿಗೆ ತಲೆನೋವು ಉಂಟು ಮಾಡಿದೆ. ಭಾನುವಾರ ನಡೆದ ಸಣ್ಣಪುಟ್ಟ ಗಲಾಟೆ ಸಂಘರ್ಷಕ್ಕೆ ತಿರುಗುವ ಸಾಧ್ಯತೆ ಹಿನ್ನೆಲೆ ಹೊರಜಿಲ್ಲೆಯಿಂದ ಪೊಲೀಸರನ್ನ ಕರೆಯಿಸಿಕೊಂಡು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಏನಿದು ಘಟನೆ?: ಭಾನುವಾರ ದೌಪದಮ್ಮ ವೃತ್ತ ಮತ್ತು ಟಿಪ್ಪುನಗರದಲ್ಲಿ ಯುವಕರ ಮೇಲೆ ನಡೆದ ಹಲ್ಲೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಜಿಪಿ ತ್ಯಾಗರಾಜನ್ ನಗರಕ್ಕೆ ಆಗಮಿಸಿ ಸೂಕ್ಷ್ಮ ಪ್ರದೇಶದಲ್ಲಿ ರೌಂಡ್ಸ್ ಹಾಕಿದ್ದಾರೆ. ಎಡಿಜಿಪಿ ಹಿತೇಂದ್ರ ನಗರಕ್ಕೆ ಆಗಮಿಸಲಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ. ಇಬ್ಬರ ಬಂಧನ: ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದು ಇಬ್ಬರ ಹೆಸರು ಇನ್ನೂ ತಿಳಿದು ಬರಬೇಕಿದೆ. ಹೊಸನಗರ: ಬಸ್ ನಿಲ್ದಾಣದಲ್ಲಿ ಶವ ಪತ್ತೆ…
ಉನ್ನತ ವಿದ್ಯಾಭ್ಯಾಸ ಮಾಡಿದವರಿಗೆ ಗುಡ್ ನ್ಯೂಸ್! – 4,055 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ – ಏನೇನು ಅರ್ಹತೆ… ನೀವೂ ಅರ್ಜಿ ಸಲ್ಲಿಸಬಹುದೇ? NAMMUR EXPRESS NEWS ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ 4,055 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪಿಯು ಇಲಾಖೆ, ಕಾಲೇಜುಗಳಿಗೆ ಸೂಚಿಸಿದೆ. ಬಡ್ತಿ, ನಿಧನ, ವಯೋನಿವೃತ್ತಿ ಖಾಲಿ ಇರುವ ಹುದ್ದೆ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಟ್ಟಾರೆ 4055 ಹುದ್ದೆ ನೇಮಕ ಮಾಡಿಕೊಳ್ಳಬಹುದು ಎಂದು ಇಲಾಖೆಯು ಕಾಲೇಜುಗಳು, ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದೆ. ತಿಂಗಳಿಗೆ 12 ಸಾವಿರ ರೂ ವೇತನದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಳೆದ ವರ್ಷ ನೇಮಕದ ಸಂದರ್ಭದಲ್ಲಿ ನಿಯಮಗಳ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಈ ಬಾರಿ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.…
ಇನ್ನು ನಿಮ್ಮೂರಲ್ಲಿ ನೆಟ್ವರ್ಕ್ ಸಮಸ್ಯೆ ಇರಲ್ಲ!? – ಶಿವಮೊಗ್ಗ ಜಿಲ್ಲೆಯ 87 ಕಡೆ ಹೊಸ ಮೊಬೈಲ್ ಟವರ್ – ಕಾಡಿನ ಊರು ತೀರ್ಥಹಳ್ಳಿಗೂ 27 ಟವರ್ ಭಾಗ್ಯ! NAMMUR EXPRESS NEWS ಮಲೆನಾಡಿನ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಸಿಗಲಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 2275 ಕೋಟಿ ವೆಚ್ಚದಲ್ಲಿ ಒಟ್ಟು 87 ಮೊಬೈಲ್ ಟವರ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ಹೇಳಿದ್ದಾರೆ. ಇನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಮೊಬೈಲ್ ಸಿಗ್ನಲ್ ಸಮಸ್ಯೆ ಇರುವ ಕಡೆಗಳಲ್ಲಿ 27 ಮೊಬೈಲ್ ಟವರ್ ನಿರ್ಮಿಸಲಿದ್ದು, ಈ ವರ್ಷದ ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳ್ಳಲಿದೆ. ತೀರ್ಥಹಳ್ಳಿ ಪಟ್ಟಣ ಸಮೀಪದಲ್ಲಿ ತುಂಗಾನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳುತ್ತಿರುವ ಕೆ56 ಕೋಟಿ ವೆಚ್ಚದ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಲೆನಾಡು ಕರಾವಳಿ ಭಾಗದಲ್ಲಿ ಇರುವ ದೂರವಾಣಿ ಸಂಪರ್ಕದ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ದೂರಸಂಪರ್ಕ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತಾಗಿ…