Author: Nammur Express Admin

ಬಾಲಕಿ ರೇಪ್: ಪೊಲೀಸ್ ಅಧಿಕಾರಿ ಅರೆಸ್ಟ್! – 9ನೇ ತರಗತಿ ಬಾಲಕಿಯ ಬದುಕು ತೆಗೆದ ಪೊಲೀಸ್ ಅಧಿಕಾರಿ – ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ NAMMUR EXPRESS NEWS ಕೊಚ್ಚಿ: ಬಾಲಕಿಯೊಬ್ಬಳು ಗರ್ಭ ಧರಿಸಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಬಾಲಕಿ ಗರ್ಭಿಣಿಯಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಯೊಬ್ಬರನ್ನು ಅರ್ಯಾಂಕೋಡ್ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಕೇರಳದ ವೆಲ್ಲರಾಡದಲ್ಲಿ ನಡೆದಿದೆ. ಬಂಧಿತರನ್ನು ಮರಯೂರ್ ಠಾಣಾ ಸಿಪಿಒ ದಿಲೀಪ್ (43) ಎಂದು ಗುರುತಿಸಲಾಗಿದೆ. 9ನೇ ತರಗತಿಯ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವು ಅನುಭವಿಸುತ್ತಿದ್ದು, ಇತ್ತೀಚೆಗೆ ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಪಾಲಕರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುವುದು ಬೆಳಕಿಗೆ ಬಂದಿದೆ. ಆಕೆಯನ್ನು ವಿಚಾರಿಸಿದಾಗ ತನ್ನ ದೂರದ ಸಂಬಂಧಿಯೇ ಆಗಿರುವ ಆರೋಪಿ ದಿಲೀಪ್ ಕಾಮಕಾಂಡವನ್ನು ಬಿಚ್ಚಿಟ್ಟಿದ್ದು, ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ದಂಧೆ!…

Read More

ಮನೆಯಲ್ಲೇ ಗಾಂಜಾ ಬೆಳೆದ ವೈದ್ಯಕೀಯ ವಿದ್ಯಾರ್ಥಿಗಳು ಅರೆಸ್ಟ್! – ಶಿವಮೊಗ್ಗದಲ್ಲಿ ಘಟನೆ: ಇದೆಂಥಾ ಕಾಲ? – ಅನೈತಿಕ ಸಂಬಂಧಕ್ಕೆ ಪತಿಯನ್ನೇ ಕೊಂದ ಪತ್ನಿ! – ಮಗುವಿಗೆ ಹೊಡೆದ ಶಿಕ್ಷಕಿ ವಿರುದ್ಧ ಕೇಸ್! NAMMUR EXPRESS NEWS ಶಿವಮೊಗ್ಗ: ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಇದೀಗ ಶಿವಮೊಗ್ಗ ಪೊಲೀಸರು 5 ಮಂದಿ ಎಂಬಿಬಿಎಸ್ ವಿಧ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಭಾರೀ ಕುತೂಹಲ ಮೂಡಿಸಿದೆ. ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳು. ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ ಬೆಳೆಯುವ ಪಾಟ್‌ಗಳಲ್ಲಿ ಗಾಂಜಾ ಬೆಳೆದು, ಅದನ್ನು ಟೇಬಲ್‌ಫ್ಯಾನ್ ಗಾಳಿಯಿಂದ ಒಣಗಿಸಿ, ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇವರ…

Read More

ಇನ್ಮುಂದೆ ವಿದ್ಯುತ್ ಗೆ ಹಗಲು-ರಾತ್ರಿ ದರ ಬೇರೆ ಬೇರೆ! – ಕೇಂದ್ರದಿಂದ ನಿರ್ಧಾರ: ಏನಿದು ಹೊಸ ನಿಯಮ? – ರಾತ್ರಿ ವಿದ್ಯುತ್ ಉರಿಸಿದ್ರೆ ಬಿಲ್ ಜಾಸ್ತಿ..! NAMMUR EXPRESS NEWS ನವದೆಹಲಿ: ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ವಿದ್ಯುತ್ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಮಾಡಲು ಹೊರಟಿದೆ. ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ಇದರನ್ವಯ, ವಿದ್ಯುತ್ ಗೆ ಹಗಲು-ರಾತ್ರಿ ದರ ನಿಗದಿಯಾಗಲಿದೆ. ಹಗಲಿನ ವಿದ್ಯುತ್ ಶುಲ್ಕವು 20 ಪ್ರತಿಶತದವರೆಗೆ ಕಡಿಮೆಯಾಗುತ್ತದೆ. ಆದಾಗ್ಯೂ, ರಾತ್ರಿಯ ಪೀಕ್ ಅವರ್ ಗಳಲ್ಲಿ ವಿದ್ಯುತ್ ಶುಲ್ಕವನ್ನ ಶೇಕಡಾ 20ರಷ್ಟು ಹೆಚ್ಚಿಸಲಾಗುವುದು. ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯ ಶುಕ್ರವಾರ ಹೊಸ ವಿದ್ಯುತ್ ನಿಯಮಗಳನ್ನ ಪ್ರಕಟಿಸಿದೆ.ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈ ನೀತಿಯಿಂದ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಗ್ರಾಹಕರಿಗೆ…

Read More

ಚುನಾವಣೆ ಬಂದಾಗ ಶಸ್ತ್ರಭ್ಯಾಸ ಮಾಡಲ್ಲ! – ಮೋದಿ ಅವರನ್ನು ಮತ್ತೆ ಪ್ರಧಾನಿ ಸ್ಥಾನದಲ್ಲಿ ನೋಡ್ಬೇಕು: ಸಂಸದ ರಾಘವೇಂದ್ರ – ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರುದ್ಧ ಆಕ್ರೋಶ NAMMUR EXPRESS NEWS ತೀರ್ಥಹಳ್ಳಿ: ಹಿರಿಯರ ಸಂಘಟನೆ ಕಟ್ಟಿದ ಪರಿಣಾಮ ಎಲ್ಲಾ ಕಾರ್ಯಕರ್ತರ ಶ್ರಮದಿಂದ ಕೇಂದ್ರ ಸರ್ಕಾರವು 9 ವರ್ಷ ಪೂರೈಸಿದೆ. ದೇಶದ ಹಿತ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಆ ಸ್ಥಾನದಲ್ಲಿ ಕೂರಬೇಕು. ಅಲ್ಲಿಯವರೆಗೂ ನಮ್ಮೆಲ್ಲಾ ಕಾರ್ಯಕರ್ತರು ಶ್ರಮ ಪಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಶನಿವಾರ ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಣೆಗಾಗಿ ಬಂದಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಚುನಾವಣೆ ಬಂದಾಗ ಶಸ್ತ್ರಾಭ್ಯಾಸ ಮಾಡುವುದಿಲ್ಲ. ಯಾವತ್ತೂ ಕೂಡ ಕ್ರಿಯಾಶೀಲವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಬರಲಿವೆ. ಹಾಗಾಗಿ ನಿರಂತರವಾಗಿ ನಮ್ಮ ಕಾರ್ಯಕರ್ತರು ಕೆಲಸವನ್ನ ನಿರ್ವಹಿಸಲಿದ್ದಾರೆ ಎಂದರು. ನರೇಂದ್ರ ಮೋದಿ ಅವರು ಎರಡನೇ…

Read More

ಸುಧಾಮೂರ್ತಿ ಅವರಿಗೆ ದೇಶದ ಸಾಹಿತ್ಯ ಗೌರವ! – ಇನ್ಫೋಸಿಸ್ ಸುಧಾಮೂರ್ತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ – ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಪ್ರಶಸ್ತಿ – ವಿಜಯಶ್ರೀ ಹಾಲಾಡಿ, ಮಂಜು ನಾಯಕ್‌ ಚೆಲ್ಲೂರು ಅವರಿಗೂ ಪ್ರಶಸ್ತಿ NAMMUR EXPRESS NEWS ನವ ದೆಹಲಿ: 2023ನೇ ಸಾಲಿನ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ವಿಜಯಶ್ರೀ ಹಾಲಾಡಿ ಹಾಗೂ ಯುವಸಾಹಿತ್ಯ ಪುರಸ್ಕಾರಕ್ಕೆ ಮಂಜು ನಾಯಕ್‌ ಚೆಲ್ಲೂರು ಅವರು ಭಾಜನರಾಗಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಬಾಲ ಸಾಹಿತ್ಯ ಪುರಸ್ಕಾರ ಸಿಕ್ಕಿದೆ. ವಿಜಯಶ್ರೀ ಅವರ “ಸೂರಕ್ಕಿ ಗೇಟ್‌” ಕಾದಂಬರಿಗೆ ಪ್ರಶಸ್ತಿ ದೊರೆತ್ತಿದ್ದರೆ, ಮಂಜು ನಾಯಕ್‌ ಚೆಲ್ಲೂರು ಅವರ “ಪೂ ಮತ್ತು ಇತರೆ ಕಥೆಗಳು’ ಎನ್ನುವ ಸಣ್ಣ ಕಥಾಸಂಗ್ರಹಕ್ಕೆ ಪುರಸ್ಕಾರ ದೊರೆತಿದೆ. ಬಾಲಸಾಹಿತ್ಯ ಪುರಸ್ಕಾರದ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಜಯಶ್ರೀ ಸಿ. ಕಂಬಾರ್‌, ಡಾ| ಆನಂದ್‌ ವಿ.ಪಾಟೀಲ್‌…

Read More

ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ?! – ಕಾಂಗ್ರೆಸ್ ಮಣಿಸಲು ಎರಡು ಪಕ್ಷಗಳ ಮಾಸ್ಟರ್ ಪ್ಲಾನ್ NAMMUR EXPRESS NEWS ಬೆಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದೀಗ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನ ಗೆಲ್ಲಿಸಬೇಕು. ಒಂದಷ್ಟು ರಾಜಕೀಯ ಬದಲಾವಣೆ ಆಗಬೇಕು ಎನ್ನುವ ದೃಷ್ಟಿಯಿಂದ ಎರಡು ಪಕ್ಷಗಳಿಗೆ ಮೈತ್ರಿ ಅನಿವಾರ್ಯವಾಗಿದೆ. ಕುಮಾರಸ್ವಾಮಿ ಅವರು ಅಕ್ಕಿ ಬಗ್ಗೆ ಮಾತನಾಡಿ ಬಿಜೆಪಿ ಹೋರಾಟಕ್ಕೆ ಸಾಥ್ ನೀಡಿದ್ದು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿದೆ. ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್! HOW TO APPLY : NEET-UG COUNSELLING 2023

Read More

ಸೋತ ಶೆಟ್ಟರ್ ಕೈ ಹಿಡಿದ ಕಾಂಗ್ರೆಸ್! – ಮೇಲ್ಮನೆಗೆ ಶೆಟ್ಟರ್, ಬೋಸರಾಜ್‌, ತಿಪ್ಪಣ್ಣಪ್ಪ ಅವಿರೋಧ ಆಯ್ಕೆ NAMMUR EXPRESS NEWS ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಆಯ್ಕೆಯಾಗುವ ಮೂರು ಸ್ಥಾನಗಳಿಗೆ ಜಗದೀಶ ಶೆಟ್ಟರ್, ಸಚಿವ ಎನ್‌.ಎಸ್. ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಬೇರೆ ಯಾವುದೇ ಕ್ರಮಬದ್ಧ ನಾಮಪತ್ರ ಇರದ ಕಾರಣ ಇವರನ್ನು ಮೇಲ್ಮನೆ ಸದಸ್ಯರನ್ನಾಗಿ ಚುನಾವಣಾಧಿಕಾರಿಯೂ ಆದ ವಿಧಾನಸಭಾ ಕಾರ್ಯದರ್ಶಿ ಎಂ.ಕೆ, ವಿಶಾಲಾಕ್ಷಿ ಅಧಿಕೃತವಾಗಿ ಘೋಷಿಸಿದರು. ಇನ್ನು ಇದೇ ಸ್ಥಾನಗಳಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಾ.ಕೆ. ಪದ್ಮರಾಜನ್‌ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದ್ದವು. ಜೂ.30ರಂದು ಮತದಾನ ನಿಗದಿಯಾಗಿತ್ತು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣೆ ಪ್ರಕ್ರಿಯೆ ಶುಕ್ರವಾರವೇ ಅಂತ್ಯಗೊಂಡಿತು. ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್! HOW TO APPLY : NEET-UG COUNSELLING 2023

Read More

1ರಿಂದ 10ನೇ ತರಗತಿ ಮಕ್ಕಳಿಗೆ ಶೂ ಭಾಗ್ಯ! – ಮಕ್ಕಳ ಸುರಕ್ಷತೆಗೆ 125 ಕೋಟಿ ಬಿಡುಗಡೆ – ಶೂ, ಸಾಕ್ಸ್ ಖರೀದಿಸಲು ಎಸ್‌ಡಿಎಂಸಿಗಳಿಗೆ ಸೂಚನೆ – ಸಿಇಟಿ ಪಾಸ್ ಅದವರ ದಾಖಲೆ ಪರಿಶೀಲನೆ NAMMUR EXPRESS NEWS ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಒಂದು ಜತೆ ಶೂ ಮತ್ತು 2 ಜತೆ ಸಾಕ್ಸ್ ಸಿಗಲಿದೆ. ಶೂ ಹಾಗೂ ಸಾಕ್ಸ್ ಖರೀದಿಸಲು 2 ಶಾಲಾ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಶಾಲಾಭಿವೃದ್ಧಿ ಸಮಿತಿಗಳಿಗೆ ಸೂಚನೆ ನೀಡಿದೆ. ಖರೀದಿ ಪ್ರಕ್ರಿಯೆಗೆ 125 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ. ಇದರಲ್ಲಿ ಕೆ-2: ಮುಖಾಂತರ 90, 70 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಸಿಇಟಿ ದಾಖಲೆ ಆನ್‌ಲೈನ್‌ ಪರಿಶೀಲನೆ: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಬಯಸಿ ಸಿಇಟಿ ಪರೀಕ್ಷೆ ಬರೆದು ವಿವಿಧ ರಾಂಕ್ ಪಡೆದದು ಎ ಅರ್ಹತೆ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲಾತಿಗಳ ಆನ್‌ಲೈನ್‌ ಪರಿಶೀಲನೆ ಜೂ.…

Read More

ಲೈವ್ ವಿಡಿಯೋದಲ್ಲೇ ವಿಷ ಸೇವಿಸಿ ಶಿಕ್ಷಕ ಆತ್ಮಹತ್ಯೆ – ಹಣ ಡಬಲ್ ಮಾಡಿಕೊಡುವುದಾಗಿ ಮೋಸಕ್ಕೆ ಹತಾಶೆ – ತೆಂಗಿನ ಕಾಯಿ ತಲೆ ಮೇಲೆ ಬಿದ್ದು ಬಾಲಕ ಸಾವು – ಸರ್ಕಾರಿ ಕೆಲಸ ಕೊಡುವುದಾಗಿ ಲಕ್ಷ ಲಕ್ಷ ಗೋಲ್ ಮಾಲ್! NAMMUR EXPRESS NEWS ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಲೈವ್ ವಿಡಿಯೋ ಮಾಡುತ್ತಲೇ ಕ್ರಿಮಿನಾಶಕ ಸೇವಿಸಿ ಖಾಸಗಿ ಶಾಲೆಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ರಾಜು ಬ್ಯಾಡಗಿ (45) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಶಾಲೆಯ ಶಿಕ್ಷಕ ಎಂದು ತಿಳಿದುಬಂದಿದೆ. ಇವರು ಕುಷ್ಟಗಿ ಪಟ್ಟಣದಲ್ಲಿರುವ ಬುತ್ತಿ ಬಸವೇಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಾಜು, ಕುಷ್ಟಗಿ ಸಾಯಿಬಾಬಾ ದೇವಸ್ಥಾನ ಹಿಂಭಾಗ ತನ್ನ ಕೆಲವು ಮಿತ್ರರಿಗೆ ಲೈವ್ ವಿಡಿಯೋ ಮಾಡಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದರು. ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಲೈವ್ ವಿಡಿಯೋದಲ್ಲಿ ಏನಿದೆ.?:…

Read More

ಬಿಜೆಪಿ ರಾಜ್ಯ ಅಧ್ಯಕ್ಷ ಹುದ್ದೆಗೆ ಕಟೀಲ್ ಗುಡ್ ಬೈ! – 2 ಅವಧಿ ಪೂರೈಸಿದ ಚಾಣಾಕ್ಯನ ರಾಜೀನಾಮೆ – ಸೋಮಣ್ಣ ಅಧ್ಯಕ್ಷರಾಗ್ತಾರಾ? ಬೇರೆಯವರಿಗೆ ಸ್ಥಾನ? NAMMUR EXPRESS NEWS ಬಳ್ಳಾರಿ: ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಲಿಖಿತ ಮತ್ತು ಮೌಖಿಕವಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು. ನನ್ನ ಅವಧಿ ಮುಗಿದಿದ್ದು, ಸಹಜವಾಗಿ ಬದಲಾವಣೆ ನಡೆಯುತ್ತದೆ. ಎರಡು ಅವಧಿ ನಾನು ಪೂರ್ಣಗೊಳಿಸಿದೆ. ಅನಿರೀಕ್ಷಿತ ಫಲಿತಾಂಶದಿಂದ ಒಂದಷ್ಟು ಕಾರ್ಯಕರ್ತರನ್ನು ಮತ್ತೊಮ್ಮೆ ಗಟ್ಟಿಗೊಳಿಸಬೇಕಿದೆ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ಬಿಜೆಪಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ…

Read More