ನೂತನ ಸಂಸದರ ಕಛೇರಿ ಆರಂಭಿಸಿ ಸಂಸದ ಕೋಟಾ * ಜನರ ಕಷ್ಟಗಳಿಗೆ ಸ್ಪಂದಿಸಲು ಕಛೇರಿ ಆರಂಭ * ವಾರದಲ್ಲಿ ಎರಡು ದಿನ ಜನರ ಅಹವಾಲು ಸ್ವೀಕಾರ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ನಗರಸಭೆ ಆವರಣದಲ್ಲಿ ಸಂಸದರ ನೂತನ ಕಛೇರಿ ಉದ್ಘಾಟಿಸಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯ ಎಲ್ಲ ಪರಿವಾರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಸಂಸದರ ಕಛೇರಿ ಆರಂಭಿಸಿದ್ದಾರೆ. ಜನಸಾಮಾನ್ಯರು ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಕಛೇರಿ ಸಹಾಯಕವಾಗಿದೆ,ಸಂಸದರ ಕಛೇರಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಛೇರಿಯಾಗಲಿ ಎಂಬ ಉದ್ದೇಶದಿಂದ ನೂತನ ಕಛೇರಿಗೆ ಚಾಲನೆ ನೀಡಲಾಗಿದೆ ಎಂದರು. ಸರ್ಕಾರಿ ಕಛೇರಿಗಳ ಸಮಯದಂತೆ ರಜಾ ದಿನಗಳನ್ನು ಹೊರತುಪಡಿಸಿ, ಅಗತ್ಯ ಸಿಬ್ಬಂದಿ ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ನಾನು ವಾರದಲ್ಲಿ ಎರಡು ದಿನ ಕಚೇರಿಯಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಉಪಚುನಾವಣೆಗೆ ಪಕ್ಷ ನನಗೆ ಉಸ್ತುವಾರಿಯಾಗಿ ಜವಾಬ್ದಾರಿ ನೀಡಿದ್ದು, ಸುಮಾರು 21 ದಿನ ಅದರ ಕೆಲಸ ಮಾಡಬೇಕಾಗಿದೆ.…
Author: Nammur Express Admin
ಅಂತೂ ತೀರ್ಥಹಳ್ಳಿ ಭೂ ನ್ಯಾಯ ಮಂಡಳಿ ಸದಸ್ಯರ ಆಯ್ಕೆ * ಸಂಜಯ್, ವಿಶ್ವನಾಥ ಶೆಟ್ಟಿ, ರುದ್ರಮೂರ್ತಿ, ಭೀಮೇಶ್ * ತೀರ್ಥಹಳ್ಳಿ ಭೂ ನ್ಯಾಯಮಂಡಳಿಯ ಸದಸ್ಯರುಗಳು ಯಾರು ಯಾರು? NAMMUR EXPRESS NEWS ತೀರ್ಥಹಳ್ಳಿ: ಅಂತೂ ಇಂತೂ ತೀರ್ಥಹಳ್ಳಿ ಭೂ ನ್ಯಾಯ ಮಂಡಳಿ ಸದಸ್ಯರ ಆಯ್ಕೆಯಾಗಿದೆ. ಪ್ರಸಿದ್ಧ ವಕೀಲ ಸಂಜಯ್, ಪತ್ರಕರ್ತ ವಿಶ್ವನಾಥ ಶೆಟ್ಟಿ, ಕಣಗಲಕೊಪ್ಪ ರುದ್ರಮೂರ್ತಿ, ರಂಜದಕಟ್ಟೆ ಭೀಮೇಶ ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ. ಶಿವಮೊಗ್ಗ ಉಪ ವಿಭಾಗದ ಸಹಾಯಕ ಆಯುಕ್ತರು ಮಂಡಳಿ ಅಧ್ಯಕ್ಷರಾಗಿದ್ದು, ತಾಲ್ಲೂಕು ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ತೀರ್ಥಹಳ್ಳಿ ತಾಲೂಕಲ್ಲಿ ಸಾವಿರಾರು ಅರ್ಜಿ! ತೀರ್ಥಹಳ್ಳಿ ತಾಲೂಕಲ್ಲಿ ಬಗೆಹರಿಯದ ಸಾವಿರಾರು ಸಮಸ್ಯೆ ಇರುವ ಭೂಮಿಗಳಿಗೆ ನ್ಯಾಯ ನೀಡಲು ಭೂ ನ್ಯಾಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆಯ್ಕೆಯಾಗಿರುವ ಎಲ್ಲಾ ಸದಸ್ಯರಿಗೆ ಶುಭಾಶಯಗಳು
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? – ಅಡಿಕೆ ದರ ಏರಿಕೆಯೋ? ಇಳಿಕೆಯೋ? NAMMUR EXPRESS NEWS ಹಸ – 63212 – 82121 ಬೆಟ್ಟೆ – 48599 – 55099 ರಾಶಿ – 35000 – 49449 ಗೊರಬಲು – 23000 – 3259
ಬಿಪಿಎಲ್ ಕಾರ್ಡುದಾರರಿಗೆ ಶಾಕ್! * ಬರೋಬ್ಬರಿ 22 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡು ರದ್ದು! * ಯಾವ ಕಾರಣಕ್ಕೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್ ? NAMMUR EXPRESS NEWS ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳು ರದ್ದಾಗಲಿವೆ. ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಹಾಗಾದರೆ ಯಾವ ಜಿಲ್ಲೆಯಿಂದ ಎಷ್ಟು ಕಾರ್ಡುಗಳು ರದ್ದಾಗಲಿವೆ. ಬೆಂಗಳೂರಿನಲ್ಲಿ 2.54 ಲಕ್ಷ, ಕಲಬುರಗಿಯಲ್ಲಿ 1.57 ಲಕ್ಷ, ಮೈಸೂರಿನಲ್ಲಿ 1.41 ಲಕ್ಷ, ಬೀದರ್ ನಲ್ಲಿ 1.30 ಲಕ್ಷ, ಬೆಳಗಾವಿಯಲ್ಲಿ 1.27 ಲಕ್ಷ, ಕೋಲಾರದಲ್ಲಿ 1.25 ಲಕ್ಷ, ದಕ್ಷಿಣ ಕನ್ನಡ 1.11 ಲಕ್ಷ, ಶಿವಮೊಗ್ಗ1.08 ಲಕ್ಷ, ಚಿಕ್ಕಮಗಳೂರು 1.05 ಲಕ್ಷ, ದಾವಣಗೆರೆ 85 ಸಾವಿರ, ಉಡುಪಿ 80 ಸಾವಿರ, ಬಾಗಲಕೋಟೆ…
ಕರಾವಳಿ ನವರಾತ್ರಿ ಪ್ರಯುಕ್ತ ದೇವಿಯ ವಿಶೇಷ ಅಲಂಕಾರ ಹೇಗಿದೆ? * ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ ! * ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವಿಯ ಅಲಂಕಾರ! * ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ! NAMMUR EXPRESS NEWS ನವರಾತ್ರಿಯ ಅಂಗವಾಗಿ ಕರಾವಳಿಯ ಎಲ್ಲಾ ಭಾಗದ ದೇವಾಲಯಗಳಲ್ಲೂ ಪೂಜೆ,ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯುತ್ತಿದೆ. ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೇವಿಗೆ ಅಲಂಕಾರ, ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿದೆ. ಕರಾವಳಿಯ ವಿವಿಧ ದೇವಿ ಅಲಂಕಾರ ಹೇಗಿದೆ? ನವರಾತ್ರಿ ಪ್ರಯುಕ್ತ ಅಲಂಕಾರದಿಂದ ಕಂಗೊಳಿಸುತ್ತಿರುವ ದೇವಿಯ ದಿವ್ಯ ದರ್ಶನಕ್ಕಾಗಿ ಹತ್ತು ಹಲವು ತಾಣಗಳಿಂದ ಜನರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೇವಿಯ ಅಲಂಕಾರ, ಪೂಜೆ ವಿಜೃಂಭಣೆಯಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ ! ಕಟೀಲ್ ಅಥವಾ ಕಟೀಲು ಕರ್ನಾಟಕದ ಪ್ರಸಿದ್ಧ ದೇವಾಲಯ ಪಟ್ಟಣವಾಗಿದೆ.ಇದು ಮಂಗಳೂರಿನಿಂದ ಸುಮಾರು…
ಹಾಸನದ ಎಪಿಜೆ ಕಾಲೇಜಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ – ಜಿಲ್ಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸ್ಪರ್ಧೆ – ಅಚ್ಚುಕಟ್ಟಿನ ಆಯೋಜನೆ: ಪೋಷಕರ ಮೆಚ್ಚುಗೆ NAMMUR EXPRESS NEWS ಹಾಸನ: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮತ್ತು ನಗರದ ಅರಸೀಕೆರೆ ರಸ್ತೆ ಬಿ.ಕಾಟೀಹಳ್ಳಿಯ ಎಪಿಜೆ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿದೆ. ಬೆಳಿಗ್ಗೆ 9 ಗಂಟೆಗೆ ಎಪಿಜೆ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಾವು ಕಲಿತಿರುವ ಕರಾಟೆಯ ಪಟ್ಟುಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಹದೇವ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪಾಲಾಕ್ಷ ಹೆಚ್.ಆರ್.ಮತ್ತು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ. ಹರೀಶ್…
ಚಿಕ್ಕಮಗಳೂರು ಸಮಾಜ ಕಲ್ಯಾಣ ಇಲಾಖೆ ಕಛೇರಿ ಮೇಲೆ ಲೋಕಾಯುಕ್ತ ದಾಳಿ..!! * ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತ ಬಲೆಗೆ * 10 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ NAMMUR EXPRESS NEWS ಚಿಕ್ಕಮಗಳೂರು: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಇಲಾಖೆ ವತಿಯಿಂದ ನೀಡುವ ಕಿರುಸಾಲಕ್ಕೆ 10 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ಸಮಯದಲ್ಲಿ ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1 ಲಕ್ಷಕ್ಕೆ 50 ರೂ. ಸಾವಿರ ಸಬ್ಸಿಡಿ, 50 ಸಾವಿರ ರೂ. ಲೋನ್ ಸ್ಯಾಂಕ್ಷನ್ ಮಾಡಲು 10 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ರಾಜ್ಯ ಮಟ್ಟದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ಆರಂಭ * ರಾಜ್ಯದ 6 ರಿಂದ 10 ವರ್ಷದ ಎಳೆಯರು ಭಾಗಿ * ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌ರಿಂದ ಉತ್ಸವದ ಉದ್ಘಾಟನೆ NAMMUR EXPRESS NEWS ಚಿಕ್ಕಮಗಳೂರು: ಅಕ್ಟೋಬರ್ 5 ರಿಂದ ಚಿಕ್ಕಮಗಳೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ 44ನೇ ರಾಜ್ಯಮಟ್ಟದ ಕಬ್ ಮತ್ತು ಬುಲ್ ಬುಲ್ ಉತ್ಸವ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್ ತಿಳಿಸಿದ್ದಾರೆ. ನಗರದ ಆದಿಚುಂಚನಗಿರಿ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಉತ್ಸವ ಆಯೋಜನೆಗೊಂಡಿದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉತ್ಸವದ ಉದ್ಘಾಟನೆ ನೆರವೇರಿಸಲಿದ್ದು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಣಿ ಚೆನ್ನಮ್ಮ ವಿವಿ ಕುಲಪತಿ ಎಸ್.ವಿ.ತ್ಯಾಗರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ,ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರು ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ರಾಜ್ಯದ…
ತಿರುಪತಿ ಲಡ್ಡು ವಿವಾದ ವಿಶೇಷ ತನಿಖಾ ತಂಡ ರಚನೆ! * ಸಿಬಿಐ,ಆಂಧ್ರಪ್ರದೇಶ ಪೊಲೀಸ್ ಅಧಿಕಾರಿಗಳು,ಆಹಾರ ಇಲಾಖೆ ಓರ್ವ ಅಧಿಕಾರಿ ತನಿಖಾ ತಂಡ !! * ಐಜಿಪಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಎಸ್‌ಐಟಿ ರಚಿನೆ! * ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ತನಿಖೆ! NAMMUR EXPRESS NEWS ನವದೆಹಲಿ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸ್ವತಂತ್ರ ವಿಶೇಷ ತನಿಖಾ ತಂಡ ರಚನೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ತಿರುಪತಿ ಲಡ್ಡು ವಿವಾದ ಕುರಿತಾದ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟ್ ನಲ್ಲಿ ಜಸ್ಟೀಸ್ ಬಿ.ಆರ್. ಗವಾಯಿ ಮತ್ತು ಜಸ್ಟೀಸ್ ಕೆ.ವಿ. ವಿಶ್ವನಾಥನ್ ಪೀಠದಲ್ಲಿ ನಡೆಯಿತು. ವಿಚಾರಣೆ ಬಳಿಕ ಪ್ರಕರಣ ಸಂಬಂಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿಬಿಐ ನಿರ್ದೇಶಕರ ನೇತೃತ್ವದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ಆಂಧ್ರಪ್ರದೇಶ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆಯ ಓರ್ವ ಅಧಿಕಾರಿಯನ್ನು ಒಳಗೊಂಡ ವಿಶೇಷ…
ಕ್ರಿಯೇಟಿವ್ ಕಾಲೇಜಿನ ಎನ್. ಎಸ್.ಎಸ್ ಶಿಬಿರ * ಅ. 4ರಿಂದ 07ರವರೆಗೆ ವೈವಿಧ್ಯಮಯ ಕಾರ್ಯಕ್ರಮ! * ಸಾರ್ವಜನಿಕಗೂ ಪಾಲ್ಗೊಳ್ಳಲು ಮುಕ್ತ ಅವಕಾಶ NAMMUR EXPRESS NEWS ಕಾರ್ಕಳ:ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024 ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 4ರಂದು ಎನ್.ಎಸ್.ಎಸ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಹಲವಾರು ಕಾರ್ಯಕ್ರಮಗಳು ನಡೆದಿದೆ. ಯಾವೆಲ್ಲಾ ಕಾರ್ಯಕ್ರಮಗಳ ಆಯೋಜನೆ? ಅ.5ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಮಾಣ ಪತ್ರ ಪುರಸ್ಕೃತ ಅಶು ಬಜಗೋಳಿ ವಿರಚಿತ, ತುಳು ಭಕ್ತಿ ಪ್ರಧಾನ ನಾಟಕ “ದೈವದೃಷ್ಟಿ” ಕಾರ್ಯಕ್ರಮ ಅ.6ರಂದು ಸ್ಥಳೀಯ ಪ್ರತಿಭೆ ಮಹಿಮಾ ಬಜಗೋಳಿ ಮತ್ತು ತಂಡದವರಿಂದ ಹಾಗೂ ಕ್ರಿಯೇಟಿವ್ ಹವ್ಯಾಸಿ ಕಲಾವಿದರಿಂದ “ಕ್ರಿಯೇಟಿವ್ ರಸಸಂಜೆ”ಕಾರ್ಯಕ್ರಮ. ಅ.07ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಕಲಾವಿದರಿಂದ ಯಕ್ಷಗಾನ ಪ್ರದರ್ಶನ,”ಕೃಪಾಸಿಂಧು” ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ, ಬಜಗೋಳಿ, ಕಾರ್ಕಳ ಹಾಗೂ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜಿಸಲಾಗಿದೆ. ಅ.7ರವರೆಗೆ ಸಂಜೆ…