ಚಿಕ್ಕಮಗಳೂರು: ಜಮೀನು ಒತ್ತುವರಿ ತೆರವು ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ – ತೀರ್ಥಹಳ್ಳಿ : ಅನಾರೋಗ್ಯದಿಂದ ಜಿಗುಪ್ಪೆಗೊಂಡು ಬಾವಿಗೆ ಹಾರಿದ ವ್ಯಕ್ತಿ! – ಸಾಗರ: ಜೋಗ ಜಲಪಾತ, ಫಾಲ್ಸ್ ಸಮೀಪವೇ ಇದ್ದ ಮನೆ ತೆರವು – ಶಿವಮೊಗ್ಗ : ವಿದ್ಯುತ್ ಶಾಕ್ ತಗುಲಿ ಯುವಕ ಸಾವು – ಸಾಗರ: ಬಾಣಂತಿಗೆ ಕಪಾಳಮೋಕ್ಷ ಆರೋಪ! ವೈದ್ಯ ಡಾ. ನಾಗೇಂದ್ರಪ್ಪ ವಿರುದ್ಧ ಪ್ರಕರಣ ದಾಖಲು! – ಶಿವಮೊಗ್ಗ : ಧಾರವಾಹಿ ನಟಿಯ ಪ್ರೇಮ ಪ್ರಕರಣ, ಪ್ರಿಯಕರನ ಆತ್ಮಹತ್ಯೆ! NAMMUR EXPRESS NEWS ಚಿಕ್ಕಮಗಳೂರು: ಒತ್ತುವರಿ ತೆರವು ವೇಳೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಕೆ.ಆರ್ ಪೇಟೆ ಪೋಸ್ಟ್ ಕಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಬೊಮ್ಮನ ಕೊಡಿ ಕೆರೆ ಪಕ್ಕ ಆಲಮ್ಮ, ಕಲ್ಲೇಗೌಡ ಇವರ ಜಮೀನು ಇದ್ದು, ಕೆರೆಯ ಒಂಬತ್ತು ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು…
Author: Nammur Express Admin
ಅರಸೀಕೆರೆ: ಭಯ ಹುಟ್ಟಿಸಿದ್ದ ಚಿರತೆ ಸೆರೆ! – ಬೇಲೂರು ತಾಲೂಕಿನಲ್ಲಿ ಕಡೆಮೆಯಾಗದ ಗಜಪಡೆ ಗಲಾಟೆ – ಹಾಸನ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ: ಜನರಿಗೆ ಸಂಕಷ್ಟ NAMMUR EXPRESS NEWS ಹಾಸನ: ಹಾಸನ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಕಾಡಾನೆ ಹಾಗೂ ಇತರೆ ವನ್ಯಜೀವಿಗಳ ಕಾಟ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ. ಹೌದು; ಮಲೆನಾಡು ಭಾಗದಲ್ಲಿ ಕಾಡಾನೆ ಕಾಟ ಮಿರಿ ಮೀರಿದ್ದರೆ, ಉಳಿದ ಕಡೆಗಳಲ್ಲಿ ಚಿರತೆ ಹಾವಳಿ ಜನರಿಗೆ ತೊಂದರೆ ಕೊಡುತ್ತಿದೆ. ಇದೇ ಕಾರಣಕ್ಕೆ ಅರಸೀಕೆರೆ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ರೈತರು, ಸ್ಥಳೀಯರಿಗೆ ತೊಂದರೆ, ಸಾಕುಪ್ರಾಣಿಗಳ ಜೀವಕ್ಕೆ ಕಂಟಕ ಆಗಿದ್ದ ಚಿರತೆ ಕಡೆಗೂ ಬೋನಿಗೆ ಬಿದ್ದಿದೆ. ಇದರಿಂದ ಚಿರತೆ ಆತಂಕದಿಂದ ಭಯಗೊಂಡಿದ್ದ ಗ್ರಾಮಸ್ಥರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭಯ ಹುಟ್ಟಿಸಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಈ ಚಿರತೆ…
ಹಾಸನ ಜಿಲ್ಲೆಯಲ್ಲೂ ರಂಗೇರುತ್ತಿದೆ ಚುನಾವಣಾ ಅಖಾಡ! – ಅ.9ರಿಂದ ಸರ್ಕಾರಿ ನೌಕರರ ಸಂಘದ ಎಲೆಕ್ಷನ್ ಪ್ರಕ್ರಿಯೆ ಆರಂಭ – ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಶ್ರೀನಿವಾಸ್-ಹಾಲಿ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಕಣಕ್ಕೆ NAMMUR EXPRESS NEWS ಹಾಸನ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ೨೦೨೪- ೨೯ನೇ ಸಾಲಿಗೆ ತಾಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರು ಮತ್ತು ಪದಾಧಿಕಾರಿಗಳು ಜಿಲ್ಲೆ ಹಾಗೂ ರಾಜ್ಯಾಧ್ಯಕ್ಷರ ಚುನಾವಣೆಗಳಿಗೆ ದಿನಾಂಕ ನಿಗದಿ ಪಡಿಸಲಾಗಿದೆ. ಕಳೆದ ಸೆ.೧೨ ರಂದು ಅಧಿಸೂಚನೆ ಸಹ ಹೊರ ಬಿದ್ದಿದೆ.ಈ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲೂ ಚುನಾವಣೆಗಾಗಿ ಸಿದ್ಧತೆ, ಪ್ರಚಾರ, ಪರಸ್ಪರ ಓಲೈಸುವ ಕಾರ್ಯದಲ್ಲಿ ವಿವಿಧ ಸ್ಥಾನಗಳ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ತಾಲೂಕು ಶಾಖೆಗಳ ನಿರ್ದೇಶಕ ಚುನಾವಣೆ ಮೊದಲು ನಡೆಯಲಿದ್ದು, ನಂತರ ತಾಲೂಕು ಅಧ್ಯಕ್ಷರ ಎಲೆಕ್ಷನ್ ನಡೆಯಲಿದೆ. ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆಗೆ ತಾಲೂಕುಗಳ ಅಧ್ಯಕ್ಷರು ಮತ್ತು ನಗರ ಹಾಸನ ನಗರ, ತಾಲೂಕು ವ್ಯಾಪ್ತಿಯ ನಿರ್ದೇಶಕರು ಮತ ಚಲಾಯಿಸಲಿದ್ದಾರೆ. ಶ್ರೀನಿವಾಸ್-ಶಿವಸ್ವಾಮಿ ಕಣಕ್ಕೆ: ಜಿಲ್ಲಾಧ್ಯಕ್ಷರ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ನವರಾತ್ರಿ ಮೂರನೇ ದಿನ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಬಹಳಷ್ಟು ಆತ್ಮವಿಶ್ವಾಸ ಇರುತ್ತದೆ, ಆದರೆ ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಹೆಚ್ಚಿನ ಶ್ರಮ ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆದಾಯದ ಪರಿಸ್ಥಿತಿ ಸುಧಾರಿಸಲಿದೆ. ನೀವು ರಾಜಕಾರಣಿಯನ್ನು ಭೇಟಿಯಾಗಬಹುದು. ** ವೃಷಭ ರಾಶಿ : ಇಂದು ನೀವು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಅನಾವಶ್ಯಕ ಚಿಂತೆಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಜೀವನದಲ್ಲಿ ಏರಿಳಿತಗಳಿರುತ್ತವೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಗೌರವ ಸಿಗಲಿದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ.…
ತೀರ್ಥಹಳ್ಳಿಯಲ್ಲಿ ನೂತನ ಉದ್ಯಮಗಳ ಶುಭಾರಂಭ – ದಸರಾ ವಿಶೇಷ ದಿನ: ಹೊಸ ಉದ್ಯಮಕ್ಕೆ ಶುಭಾಶಯಗಳು – ಮಂಜುನಾಥ ಸೂಪರ್ ಮಾರ್ಟ್, ತುಂಗಾ ಮೋಟರ್ಸ್ ಆರಂಭ – ನೂತನ ಮಳಿಗೆ ಮಾಡರ್ನ್ ಕ್ಲಾತ್ ಹೌಸ್ ಉದ್ಘಾಟನೆ ಮಾಡಿದ ಗರುಡ ರಾಮ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶುಕ್ರವಾರ ನೂತನ ಉದ್ಯಮಗಳ ಶುಭಾರಂಭ ನಡೆಯಿತು. ದಸರಾ ವಿಶೇಷ ದಿನವಾಗಿದ್ದರಿಂದ ಹೊಸ ಉದ್ಯಮಕ್ಕೆ ಶುರುವಾಯಿತು. ಬಾಳೆಬೈಲಲ್ಲಿ ಮಂಜುನಾಥ ಸೂಪರ್ ಮಾರ್ಟ್, ಸೊಪ್ಪುಗುಡ್ಡೆಯಲ್ಲಿ ತುಂಗಾ ಮೋಟರ್ಸ್, ನೂತನ ಮಳಿಗೆ ಮಾಡರ್ನ್ ಕ್ಲಾತ್ ಹೌಸ್ ಉದ್ಘಾಟನೆಗೊಂಡಿದ್ದು ಗಣ್ಯರು, ಸ್ಥಳೀಯರು ಶುಭ ಹಾರೈಸಿದರು. ತುಂಗಾ ಮೋಟರ್ಸ್ ಹೀರೋ ಬೈಕ್ ಮಾರಾಟ ಮಳಿಗೆಯಾಗಿದೆ. ತೀರ್ಥಹಳ್ಳಿಗೆ ಬಂದ ಗರುಡ ರಾಮ್ ಸೊಪ್ಪುಗುಡ್ಡೆಯಲ್ಲಿ ಪ್ರಾರಂಭಿಸುತ್ತಿರುವ ನೂತನ ಮಳಿಗೆ ಮಾಡ್ರನ್ ಕ್ಲಾತ್ ಹೌಸ್ ಅನ್ನು ಮುಖ್ಯ ಅತಿಥಿಯಾಗಿ ಕೆ.ಜಿ.ಎಫ್. ಚಿತ್ರದ ಗರುಡ ಖ್ಯಾತಿಯ ನಟ ಗರುಡ ರಾಮ್ ಉದ್ಘಾಟನೆ ಮಾಡಿದರು. ಸ್ಥಳೀಯ ನಾಯಕರು, ಸ್ನೇಹಿತರು ಹಾಜರಿದ್ದರು
ನೋಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ ಸುದರ್ಶನ್ ತಾಯಿಮನೆ ತಂಡ! – ಜೆ.ಸಿ.ಐ ಶಿವಮೊಗ್ಗ ರಾಯಲ್ಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ತರಬೇತಿ – ಸತತವಾಗಿ 24 ಗಂಟೆ, 24 ವಿಷಯ, 24 ಸಂಪನ್ಮೂಲ ವ್ಯಕ್ತಿಗಳ ತರಬೇತಿ NAMMUR EXPRESS NEWS ಶಿವಮೊಗ್ಗ: ಜೆ ಸಿ ಐ ಶಿವಮೊಗ್ಗ ರಾಯಲ್ಸ್ ಘಟಕದ ನೇತೃತ್ವದಲ್ಲಿ ಮತ್ತು ಶಿವಮೊಗ್ಗದ ಎಲ್ಲಾ ಜೆಸಿ ಘಟಕಗಳ ಸಹಕಾರದೊಂದಿಗೆ, ದಿನಾಂಕ 24 ಮೇ 2024 ರಂದು ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸತತ 24 ಗಂಟೆಗಳ, 24 ವಿಷಯಗಳ, 24 ತರಬೇತುದಾರರನ್ನು ಒಳಗೊಂಡ, ತರಬೇತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ನ್ಯಾಷನಲ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಗುರುತಿಸಿ ವಿಶ್ವದಾಖಲೆಯ ನೋಬೆಲ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಳಿಸುವ ಮೂಲಕ ನ್ಯಾಷನಲ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಅನ್ನು ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕ ಮತ್ತು ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆ ಪರವಾಗಿ ಈ ವರ್ಲ್ಡ್ ರೆಕಾರ್ಡ್…
ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘದ ವಾರ್ಷಿಕ ಸಭೆ – ಸಂಘಟನೆ ಜತೆಗೆ ಸಮುದಾಯದ ಸೇವೆಗೆ ಬದ್ಧ ಎಂದ ನಿರ್ದೇಶಕರು – ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸಂಘದ ಬಗ್ಗೆ ಗಣ್ಯರ ಮೆಚ್ಚುಗೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ 2023-2024 ನೇ ಸಾಲಿನ ಪ್ರಥಮ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬಂಟರ ಭವನದಲ್ಲಿ ಬುಧವಾರ ನಡೆಯಿತು. ಪ್ರಥಮ ವರ್ಷದ ಸರ್ವ ಸದಸ್ಯರ ಮಹಾಸಭೆ ಸಂಘದ ಅಧ್ಯಕ್ಷರಾದ ಡಾಕಮ್ಮ ಅಧ್ಯಕ್ಷತೆಯಲ್ಲಿ ಎಲ್ಲಾ ನಿರ್ದೇಶಕರು, ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ಆರ್.ಎಂ. ಮಂಜುನಾಥ ಗೌಡ, ಹೆಚ್.ಎನ್.ವಿಜಯದೇವ್, ಸಿರಿಬೈಲ್ ಧರ್ಮಶ್ ಭಾಗವಹಿಸಿ ಸಂಘದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥಗೌಡ ಮತ್ತು ಹಿರಿಯ ಸಹಕಾರಿ ವಿಜಯ್ ದೇವ್ ಅವರು ನೆರವೇರಿಸಿದರು. ಪ್ರಾಸ್ತಾವಿಕ ನುಡಿಗಳನ್ನು ನಿರ್ದೇಶಕರಾದ ಸುಜನೀ ಗೌಡ ಮಾಡಿದರು. ಪ್ರಾರ್ಥನೆಯನ್ನು ಕಲಾವತಿ ರವಿ ಅವರು ನೆರವೇರಿಸಿದರು, ಸ್ವಾಗತವನ್ನು ಶೈಲಾ ಅಶ್ವತ್…
ಕರಾವಳಿಯಲ್ಲಿ ದಸರಾ ಸಂಭ್ರಮ – ಯಾವ ದೇವಾಲಯದಲ್ಲಿ ದೇವಿಗೆ ಹೇಗೆ ಹೇಗೆ ಅಲಂಕಾರ
ರಾಜ್ಯದ ವಿವಿಧ ಭಾಗದ ದಸರಾ ಸಂಭ್ರಮ – ಯಾವ ದೇವಾಲಯದಲ್ಲಿ ದೇವಿಗೆ ಹೇಗೆ ಹೇಗೆ ಅಲಂಕಾರ
ಮಲೆನಾಡಲ್ಲಿ ದಸರಾ ಸಂಭ್ರಮ – ಯಾವ ದೇವಾಲಯದಲ್ಲಿ ದೇವಿಗೆ ಹೇಗೆ ಹೇಗೆ ಅಲಂಕಾರ