ಸಚಿವರ ಸ್ವಕ್ಷೇತ್ರದಲ್ಲಿಯೇ ಗೌರವ ಧನ ಇಲ್ಲ3 ತಿಂಗಳಿಂದ ಕೆಲವು ಕಡೆ ಸಂಬಳ ಆಗಿಲ್ಲ NAMMUR EXPRESS NEWSಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗೌರವಧನ ಮಂಜೂರಾಗಿಲ್ಲ.3 ತಿಂಗಳಿಂದ ಕೆಲವು ಕಡೆ ಸಂಬಳ ಆಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.ಸಂಬಳ ಸಿಗದೆ ಜೀವನ ಸಾಗಿಸಲು ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ಪರದಾಡುತ್ತಿದ್ದಾರೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ 10 ಸಾವಿರ ರೂಪಾಯಿ ಮತ್ತು ಮಿನಿ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯರಿಗೆ 6,250 ರೂ ಹಾಗೂ ಸಹಾಯಕಿಯರಿಗೆ 5,250 ರೂಪಾಯಿ ಗೌರವಧನ ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಸರಿಯಾಗಿ ಪ್ರತಿ ತಿಂಗಳು ಗೌರವಧನ ಪಾವತಿಯಾಗುತ್ತಿತ್ತು. ಆದರೆ ಕಳೆದ 2-3 ತಿಂಗಳಿನಿಂದ ತಾಂತ್ರಿಕ ಸಮಸ್ಯೆಯಿಂದ ಗೌರವಧನ ಪಾವತಿ ಆಗಿಲ್ಲ. ಹೀಗಾಗಿ ದೈನಂದಿನ ಜೀವನ ನಡೆಸಲು ಅಂಗನವಾಡಿ ಸಿಬಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ಹಲವು ಜಿಲ್ಲೆಗಳ ತಾಲೂಕುಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್…
Author: Nammur Express Admin
ಮೊದಲ ಸ್ಥಾನದಲ್ಲಿ ಚೀನಾ, ಇನ್ನೊಂದು ವರ್ಷದಲ್ಲಿ ಭಾರತ ಮುಂದೆಆಗಲಿದೆ ಭಾರೀ ಅಸಮತೋಲನ: ಮುಂದೆ ಕಷ್ಟ ಕಷ್ಟ NAMMUR EXPRESS NEWSನವ ದೆಹಲಿ: ಜಗತ್ತಿನ ಜನಸಂಖ್ಯೆ ಮಂಗಳವಾರ (ನ.15) ಕ್ಕೆ 800 ಕೋಟಿ ಗಡಿ ದಾಟಿದೆ.ಅಚ್ಚರಿ ಎಂದರೆ ಮುಂದಿನ ಒಂದು ವರ್ಷದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತಿ ಹೆಚ್ಚು ಜನರಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರತದ ಜನಸಂಖ್ಯೆ 141 ಕೋಟಿ ಇದ್ದು, ಚೀನಾದಲ್ಲಿ 145 ಕೋಟಿಯಷ್ಟಿದೆ. 2050ರ ವೇಳೆಗೆ ಭಾರತ, ಚೀನಾ, ಪಾಕಿಸ್ತಾನ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ ಹಾಗೂ ತಾಂಜೇನಿಯಾದಲ್ಲಿ ವಿಶ್ವದ ಶೇ.50ರಷ್ಟು ಜನಸಂಖ್ಯೆ ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.1950ರ ಬಳಿಕ ವಿಶ್ವದಜನಸಂಖ್ಯೆ ಬೆಳವಣಿಗೆ ವೇಗ ತಗ್ಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದು ವರದಿ ಹೇಳಿದೆ. ಈ 2020ರ ನಂತರ ಜನಸಂಖ್ಯಾ ಏರಿಕೆ ಪ್ರಮಾಣ ಶೇ.1ಕ್ಕೆ ಇಳಿದಿದೆ. 2010ರಲ್ಲಿ 700 ಕೋಟಿಯಿದ್ದ ಜನಸಂಖ್ಯೆ 800 ಕೋಟಿ ಗಡಿ ತಲುಪಲು 12 ವರ್ಷ ತೆಗೆದುಕೊಂಡಿದೆ. 2037ರ ವೇಳೆಗೆ 900…
ನ.20ರಂದು ದೇವರ ದರ್ಶನ ಮಧ್ಯಾಹ್ನದಿಂದ ಇರಲ್ಲನ. 23ರಂದು ಲಕ್ಷದೀಪೋತ್ಸವ ಸಂಭ್ರಮಕುಕ್ಕೆ ಭಜನೋತ್ಸವದಲ್ಲಿ ಭಾಗವಹಿಸಲು ಅವಕಾಶ NAMMUR EXPRESS NEWSಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 20 ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದರ್ಶನವನ್ನು ನಿರ್ಬಂಧಿಸಲಾಗಿದೆ. ನವೆಂಬರ್ 20ರಂದು ಚಂಪಾಷಷ್ಠಿ ವಾರ್ಷಿಕ ಮೂಲಮೃತ್ತಿಕೆಯ ಪ್ರಸಾದ ತೆಗೆಯುವ ಆಚರಣೆ ನಡೆಸಲಾಗುತ್ತದೆ. ಈ ಕಾರಣಕ್ಕೆ ನವೆಂಬರ್ 20ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ದರ್ಶನ ಇರುವುದಿಲ್ಲ. ಮಧ್ಯಾಹ್ನ 2 ಗಂಟೆಯ ನಂತರವಷ್ಟೇ ದೇವರ ದರ್ಶನ ಲಭ್ಯವಾಗಲಿದೆ.ಚಂಪಾಷಷ್ಠಿ ಕೊರೋನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿನ ಚಂಪಾ ಷಷ್ಠಿಯ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲಾಗಿದೆ.ಬೀದಿ ಉರುಳು ಸೇವೆ ಮಾಡುವವರಿಗೆ ಅವಕಾಶ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನವೆಂಬರ್ 21ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದೀಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ 5ರಿಂದ ಬೆಳಗ್ಗೆ…
370 ಕೋಟಿಗೂ ಹೆಚ್ಚು ಹಣ: 1ಕೋಟಿ ಟಿಕೆಟ್ ಮಾರಾಟಒಬ್ಬರೇ 2-5 ಬಾರಿ ನೋಡಿದ ಮೊದಲ ಸಿನಿಮಾ..!ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ: ರಿಷಬ್ ಶೆಟ್ಟಿಎಲ್ಲೆಡೆ ಸಂಭ್ರಮ: ಕನ್ನಡದ ಹೆಮ್ಮೆಯ ಚಿತ್ರಕ್ಕೆ ಶುಭಾಷಯ NAMMUR EXPRESS NEWSಕನ್ನಡದ ಸಿನಿಮಾವೊಂದು ಸದ್ದಿಲ್ಲದೇ ಬಂದು ಇಡೀ ಭಾರತ ಚಿತ್ರರಂಗವನ್ನು ಕೇವಲ 25 ದಿನದಲ್ಲೇ ಅಲ್ಲೋಲ ಕಲ್ಲೋಲ ಮಾಡಿದ್ದು ಇದುವರೆಗೆ ಖಂಡಿತ ಸಿನಿಮಾ ರಂಗ ಕಂಡಿರಲಿಲ್ಲ.ಕರ್ನಾಟಕದ ಕರಾವಳಿಯ ಮೂಲೆಯೊಂದರ ಸಣ್ಣ ಕಥೆ ಮತ್ತು ದೈವ ಪವಾಡದ ಕಥೆ ಇಡೀ ಸಿನಿಮಾ ಜಗತ್ತನ್ನು ಬೆಚ್ಚಿ ಬೀಳಿಸಿದೆ.ಹೌದು. ನಮ್ಮ ಕನ್ನಡದ ಹೆಮ್ಮೆ ಕಾಂತಾರ ಸಿನಿಮಾ 50 ದಿನ ಪೂರೈಸಿದೆ. ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ.ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ ಎಲ್ಲರಿಗೂ ಧನ್ಯವಾದಗಳು. ಪಂಜುರ್ಲಿ ಮತ್ತು ಗುಳಿಗ ದೈವದಿಂದ ನಾವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇವೆ. ಆವೇಶವು ಅಜೇಯವಾಗಿ ಉಳಿದಿದೆ”…
ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ನ.19ಕ್ಕೆ ಆಯೋಜನೆಮಲ್ನಾಡ್ ಕ್ಲಬ್ ಸದಸ್ಯರು, ಆಸಕ್ತ ರೈತರು ಪಾಲ್ಗೊಳ್ಳಲು ಮನವಿ NAMMUR EXPRESS NEWSನ.19ನೇ ಶನಿವಾರದಂದು ಕೃಷಿ ತಜ್ಞರು, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಇವರೊಂದಿಗೆ ಮಲ್ನಾಡ್ ಕ್ಲಬ್ (ರಿ) ತೀರ್ಥಹಳ್ಳಿಯ ಸಿಲ್ವರ್ ಜುಬಿಲಿ ಹಾಲ್ ನಲ್ಲಿ ಸಂಜೆ 6:30ಕ್ಕೆ ಎಲೆ ಚುಕ್ಕಿ ರೋಗ ಮತ್ತು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಚರ್ಚೆ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾನ್ಯ ಸದಸ್ಯರುಗಳು ಹಾಗೂ ತಾಲೂಕಿನ ಆಸಕ್ತ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೂಲಕ ಕೋರಿದೆ. ಆಡಳಿತ ಮಂಡಳಿಯ ಪರವಾಗಿ ಎಸ್. ರಾಘವೇಂದ್ರ.ಕಾರ್ಯದರ್ಶಿ. ಮಲ್ನಾಡ್ ಕ್ಲಬ್ (ರಿ)ತೀರ್ಥಹಳ್ಳಿ. ದಿನಾಂಕ: ನ. 19ಸ್ಥಳ : ಮಲ್ನಾಡ್ ಕ್ಲಬ್ ಸಭಾಂಗಣಸಮಯ: ಸಂಜೆ 6:30ಕ್ಕೆ
ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿಹಲವು ಗಾಯನ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ವರ್ಷಿಣಿ ಪಿ ಭಟ್ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವರ್ಷಿಣಿ ಕಟ್ಟೆಹಕ್ಕಲು ಸಮೀಪದ ಪಟ್ಲಮನೆಯ ಪ್ರಕಾಶ್ ಭಟ್ ಮತ್ತು ಲಲಿತಾ ಇವರ ಪುತ್ರಿಯಾಗಿದ್ದು, ಇವರಿಗೆ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಶುಭಕೋರಿದ್ದಾರೆ.ಮಲೆನಾಡಿನ ಖ್ಯಾತ ಗಾಯಕಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ವರ್ಷಿಣಿ ಭಟ್ ಅವರು ಈಗಾಗಲೇ ಹಲವು ಸ್ಪರ್ಧೆ, ಗಾಯನ, ರಿಯಾಲಿಟಿ ಶೋಗಳಲ್ಲಿ ಗೆಲುವು ಸಾಧಿಸಿದ್ದಾರೆ.ವರ್ಷಿಣಿ ಭಟ್ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಇನ್ನೂ ಅನೇಕ ಪ್ರಶಸ್ತಿಗಳು ದೊರೆಯಲಿ ಎಂದು ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ಆಶಿಸುತ್ತದೆ.ಮನಸ್ವಿ ಭಟ್ ಪ್ರಥಮ ಸ್ಥಾನ, ಅಪೇಕ್ಷ ತೃತೀಯ ಸ್ಥಾನ: ತೀರ್ಥಹಳ್ಳಿ ತಾಲೂಕು ಮಟ್ಟದ ಹೈಸ್ಕೂಲ್ ವಿಭಾಗದ ಪ್ರತಿಭಾ ಕಾರಂಜಿ…
ವಿನಯ್ ಗುರೂಜಿ ಭಕ್ತವೃಂದದಿಂದ ಆಯೋಜನೆತಪ್ಪಿತಸ್ಥರ ವಿರುದ್ಧ ತನಿಖೆಗೆ ಪಟ್ಟು NAMMUR EXPRESS NEWSಕೊಪ್ಪ: ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ಪಟ್ಟಣದಲ್ಲಿ ಶ್ರೀ ವಿನಯ್ ಗುರೂಜಿ ಭಕ್ತವೃಂದ ಬೃಹತ್ ಪ್ರತಿಭಟನೆ ನಡೆಸಿತು.ಕೊಪ್ಪ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿರುವ ವಿನಯ್ ಗುರೂಜಿ ಭಕ್ತವೃಂದದವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೊಪ್ಪ ಠಾಣೆ ಪೊಲೀಸರು ಮಾಡಿದ್ದರು.ಕೊಪ್ಪ ಮುಖ್ಯ…
ಹೆಣ ಇಟ್ಕೊಂಡು ಬೇರೆ ಹುಡ್ಗೀರ್ ರಾಸಲೀಲೆಯುವತಿಯ ಕುತ್ತಿಗೆ ಸೀಳಿ ಕೊಂದು ಮೃತದೇಹದ ಜೊತೆಗೆ ವಿಡಿಯೋ!ದೇಶದಲ್ಲಿ ಹೆಚ್ಚಾಯ್ತು ಕ್ರೂರ ಅಪರಾಧ NAMMUR EXPRESS NEWSನವ ದೆಹಲಿ: ಮದುವೆಯಾಗಲು ಒತ್ತಾಯಿಸಿದಳು ಎನ್ನುವ ಕಾರಣಕ್ಕೆ ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು 35 ತುಂಡು ಮಾಡಿದ್ದ ದೆಹಲಿಯ ಅಫ್ತಾಬ್ ಪೊನಾವಾಲನ ವಿರುದ್ಧ ದೇಶದಲ್ಲಿ ಕಿಚ್ಚು ಎದ್ದಿದೆ.ಈ ನಡುವೆ ಆತನ ಮತ್ತಷ್ಟು ಲೈಂಗಿಕ ಹಪಾಹಪಿ, ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರೇಯಸಿ ದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಸಮಯದಲ್ಲೂ ಅಫ್ತಾಬ್ ಮತ್ತಷ್ಟು ಯುವತಿಯರ ಜೊತೆ ಡೇಟಿಂಗ್ ನಡೆಸಿ, ಅವರನ್ನು ಮನೆಗೆ ಕರೆತಂದು ಲೈಂಗಿಕ ಚಟುವಟಿಕೆ ನಡೆಸಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.ಶ್ರದ್ಧಾ ಹತ್ಯೆಯಾದ 15 – 20 ದಿನಗಳಲ್ಲಿ ಅಫ್ತಾಬ್ ಬಂಬಲ್ ಡೇಟಿಂಗ್ ಆಪ್ ನಲ್ಲಿ ಮತ್ತಷ್ಟು ಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ. ಯುವತಿಯ ಕತ್ತು ಸೀಳಿ ಶವದೊಂದಿಗೆ ವಿಡಿಯೋ ಪ್ರಿಯತಮನೇ ಕೊಲೆಗಾರನಾದ: ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ…
‘ಪುಣ್ಯಕೋಟಿ ದತ್ತು ಯೋಜನೆ’ಗೆ ವೇತನ ಕಡಿತಡಿ ವರ್ಗದ ನೌಕರರಿಗೆ ವಿನಾಯಿತಿ..ಯಾರಿಗೆ ಎಷ್ಟು? NAMMUR EXPRESS NEWSಬೆಂಗಳೂರು: ಗೋಶಾಲೆಯಲ್ಲಿ ಹಸುಗಳನ್ನು ಪೋಷಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರ ಬುಧವಾರ (ನ.16) ಮಂಜೂರಾತಿ ನೀಡಿದೆ.ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆ ಕಡಿತಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ, ಈ ಮಂಜೂರಾತಿ ನೀಡಲಾಗಿದೆ. ವಂತಿಗೆ ಕೊಡಲು ಇಚ್ಛೆ ಇಲ್ಲದವರು, ಪತ್ರವನ್ನು ಇದೇ 25ರ ಒಳಗೆ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಲಿಖಿತವಾಗಿ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಆದರೆ, ಸಂಘ ಸಲ್ಲಿಸಿದ್ದ ಪ್ರಸ್ತಾವ ಮತ್ತು ಸರ್ಕಾರದ ಮಂಜೂರಾತಿಗೆ ನೌಕರರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.ಪ್ರಸಕ್ತ ಸಾಲಿನ (2022-23) ಬಜೆಟ್‌ನಲ್ಲಿ ‘ಪುಣ್ಯಕೋಟಿ’ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದ್ದರು. ಅಲ್ಲದೆ, ಈ ಯೋಜನೆಯ ಧೈಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯಕ್ಕೆ ಸರ್ಕಾರದ ಹಾಗೂ ಸರ್ಕಾರದ ಇತರ ಅವಿಭಾಜ್ಯ ಅಂಗಗಳಾದ…
ಇನ್ಮುಂದೆ ಪಿಒಎಸ್ ಸಾಧನ ಅಳವಡಿಕೆ ಕಡ್ಡಾಯದೇಶಾದ್ಯಂತ ಹೊಸ ನಿಯಮ ಜಾರಿ NAMMUR EXPRESS NEWSನವದೆಹಲಿ: ಒಂದು ಕಡೆ, ಸರ್ಕಾರವು ಉಚಿತ ಪಡಿತರದ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಮತ್ತೊಂದೆಡೆ, ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ’ ಅನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ, ಇದರ ನಂತರ ಆನ್ಸೆನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅಂದರೆ ಪಿಒಎಸ್ ಸಾಧನವನ್ನು ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ, ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಸೈಲ್ಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಅಳವಡಿಕೆ ಮಾಡಲು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇದರ ನಂತರ, ಎಲ್ಲಾ ಕೋಟಾದಾರರು ಎಲೆಕ್ಟ್ರಾನಿಕ್ ಮಾಪಕಗಳನ್ನು ಇಟ್ಟುಕೊಳ್ಳುವುದು ಈಗ ಕಡ್ಡಾಯವಾಗಿದೆ.ಸರ್ಕಾರದ ಈ ಆದೇಶದ ನಂತರ, ಈಗ ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಆನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್…