Author: Nammur Express Admin

ಶಿವಮೊಗ್ಗ ಜಿಲ್ಲೆಯಲ್ಲಿ ಆಟೋದರ ಪರಿಷ್ಕರಣೆ1.5 ಕಿಮಿ.ದೂರದವರೆಗಿನ ನಂತರದ ದೂರಕ್ಕೆ 20 ರೂ.ಸಮವಸ್ತ್ರ, ಆಟೋ ಮೀಟರ್ ಕಡ್ಡಾಯ NAMMUR EXPRESS NEWSಶಿವಮೊಗ್ಗ: ಆಟೋ ದರ ಶಿವಮೊಗ್ಗ ಜಿಲ್ಲೆಯಲ್ಲಿ ನಿಗದಿಯಾಗಲಿದೆ. 1.5 ಕಿಮಿ ದೂರಕ್ಕೆ 40 ರೂ. ನಿಗದಿ ಮಾಡಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಆಟೋದರ ಪರಿಷ್ಕರಣೆ ಮಾಡಲಾಗಿದ್ದು 1.5 ಕಿಮಿ.ದೂರದವರೆಗಿನ ನಂತರದ ದೂರಗಳಿಗೆ 20 ರೂ. ನಿಗದಿಪಡಿಸಲಾಗಿದೆ.ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆಟೋ ದರ ನಿಗದಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ 1.5 ಕಿ.ಮಿ ದೂರದವರೆಗೆ 40 ರೂ. ನಿಗದಿಗೆ ಅನುಮತಿ ನೀಡಲಾಯಿತು. 1.5 ಕಿಮಿ.ದೂರದವರೆಗಿನ ನಂತರದ ದೂರಗಳಿಗೆ 20 ರೂ. ಜಾರಿಯಾಗಲಿದೆ.ಸಮವಸ್ತ್ರ ಕಡ್ಡಾಯ!: ಆಟೋಚಾಲಕರಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಹಲವು ಬಾರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ದರ ಏರಿಕೆಗೆ ಮನವಿ ಸಲ್ಲಿಸಿತ್ತು. ಈ ಮನವಿ ಈ ಹಿಂದ…

Read More

ಕನ್ನಡದ ಸಿನಿಮಾ ಕಾಂತಾರ ಈಗ ಭಾರತದ ನಂ.1 ಸಿನಿಮಾಹಣ ಗಳಿಕೆಯಲ್ಲೂ ನಂ.1 ಆಗುವತ್ತ ಕಾಂತಾರ NAMMUR EXPRESS NEWSಬೆಂಗಳೂರು: ಕಾಂತಾರ ಸಿನಿಮಾ ಈಗ ಜಾಗತಿಕವಾಗಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಇನ್ನೊಂದು ಕಡೆ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಭಾರತದಲ್ಲಿ ಅತೀ ಹೆಚ್ಚು ಟಿಕೆಟ್ ಸೇಲ್ ಮಾಡಿದ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈ ಚಿತ್ರ ಕರ್ನಾಟಕದಲ್ಲಿ 1 ಕೋಟಿಗೂ ಟಿಕೆಟ್ ಗಳು ಮಾರಾಟವಾಗಿ ಈಗ ಹೊಸ ದಾಖಲೆಯನ್ನು ನಿರ್ಮಿಸಿದೆ.ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಶೀಘ್ರ್ರದಲ್ಲೇ ಅತಿ ಹೆಚ್ಚು ಬಾಕ್ಸ್ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.ಸದ್ಯಕ್ಕೆ ಕಾಂತಾರ ಕರ್ನಾಟಕದಲ್ಲಿ ಒಟ್ಟು 152.90 ಕೋಟಿ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಇನ್ನೊಂದೆಡೆಗೆ ಒಟ್ಟು 155 ಕೋಟಿ ನಿವ್ವಳದೊಂದಿಗೆ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರವು ಕೇವಲ 2.10 ಕೋಟಿಗಳಷ್ಟು ಹಿಂದೆ ಇದ್ದು,…

Read More

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕರು ನಡೆದಲ್ಲೇ ನಡೆದಕಂಪನಿ ಕೆಲಸದ ಜತೆ ಹೈನುಗಾರಿಕೆ ಮಾಡಿ ಗೆದ್ದಕಳಸದ ಶ್ರೇಯಾಂಸ್ ಜೈನ್ ಎಂಬ ಯುವಕನ ಸಾಹಸಗಾಥೆ NAMMUR EXPRESS NEWSಕಳಸ: ಮಲೆನಾಡಿನ ಯುವಕನೊಬ್ಬ ತನ್ನ ಬೆಲೆ ಬಾಳುವ ಹಸುವನ್ನು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲೇ 360 ಕಿ.ಮೀ ಕ್ರಮಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ. ಅಲ್ಲದೆ ಈ ಯುವಕನ ಸಾಹಸ, ಸಾಧನೆ, ಛಲ ಕೂಡ ಎಲ್ಲರಿಗೂ ಪ್ರೇರಣೆ..!ಕಳಸದ ಹಿರೇಬೈಲ್ ಗ್ರಾಮದ ಶ್ರೇಯಾಂಸ್ ಜೈನ್ ತಮ್ಮ ಮನೆಯಲ್ಲಿ ಸಾಕುತ್ತಿರುವ ಮೊದಲ ಗಿರ್ ಹಸುವನ್ನು ಶ್ರೀ ಧರ್ಮಸ್ಥಳ ದೇವಸ್ಥಾನಕ್ಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈಗ ಮೊದಲ ಕರುವನ್ನು ಬರೋಬ್ಬರಿ ಎರಡು ವರ್ಷಗಳ ಬಳಿಕ 360 ಕಿ.ಮೀ. ಗಿರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಹಸುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು. ಶ್ರೇಯಾಂಸ್ ಬೆಂಗಳೂರಿನ ಜಿಗಣಿಯವರು. ಲಾಕ್‌ಡೌನ್ ವೇಳೆ ಕಂಪನಿ ಕೆಲಸವನ್ನು ನಂಬದೆ ದನ ಸಾಕಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ್ದರು.…

Read More

ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಗಡುವುವೈದ್ಯಕೀಯ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ NAMMUR EXPRESS NEWSನವದೆಹಲಿ: ನ. 16 ರೊಳಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆಸುವ ಎರಡನೇ ಸುತ್ತಿನ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದು, ನವೆಂಬರ್ 16 ರ ಗಡುವು ನೀಡಲಾಗಿದೆ.ಈ ಕುರಿತ ಅಂಕಿ ಅಂಶಗಳನ್ನು ಅದೇ ದಿನ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ನೀಟ್ ಪಿಜಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಕೇಂದ್ರ ಸರ್ಕಾರ ಕೊನೆಯ ಸುತ್ತಿನ ಕೌನ್ಸೆಲಿಂಗ್ ನಡೆಸಬಹುದು. ಹೀಗಾಗಿ ಎರಡನೇ ಸುತ್ತಿನ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನವೆಂಬರ್ 16ರೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದೆ.

Read More

ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆರೈತರ ಸಾಲಕ್ಕಿಲ್ಲ ಜಪ್ತಿ, ಹರಾಜು NAMMUR EXPRESS NEWSಬೆಂಗಳೂರು : ರೈತರ ಸಾಲದ ಮೇಲೆ ಜಪ್ತಿ, ಹರಾಜು ಮಾಡದ ರೀತಿಯಲ್ಲಿ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಕೃಷಿ ಮೇಳದ ಅಂಗವಾಗಿ ಶನಿವಾರ ಜಿಕೆವಿಕೆ ಆವರಣದಲ್ಲಿ 125 ಸಾಧಕ ಕೃಷಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೈತರ ಸಾಲ ಮರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು ಸಹಾಯ ಮಾಡಬೇಕೆ ಹೊರತು ಯಾವುದೇ ಜಪ್ತಿ ಅಥವಾ ಹರಾಜು ಮಾಡಬಾರದೆಂದು ಸರ್ಕಾರ ಹಾಗೂ ಇತರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದರು. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿಯಾಗಿದೆ. ನ.1 ಇದರಿಂದ ಈಗಾಗಲೇ ಯಶಸ್ವಿನಿ ಯೋಜನೆ ಮರು ಜಾರಿಗೆ ತರಲಾಗಿದೆ. ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದ್ದೇವೆ. ಕೃಷಿ ಮೇಲೆ ಅವಲಂಬಿತರಾಗಿರುವ ಶೇ.60 ಎಷ್ಟು ಜನರು ಅಭಿವೃದ್ಧಿ ಹೊಂದರೆ, ದೇಶವು ಅಭಿವೃದ್ಧಿಯಾಗುತ್ತದೆ. ಜನವರಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಸಲಾಗುವುದು ಎಂದರು.

Read More

ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ..!ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್ಅಂತಿಮ ಮೀಸಲು, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ NAMMUR EXPRESS NEWSನವ ದೆಹಲಿ: ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ ಮಾಡಿ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನೆ ಮಾಡುವಂತೆ ಅದೇಶಿಸಿದೆ.ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್ ನಡೆಯಿಂದ ವಿಧಾನ ಸಭಾ ಬಳಿಕವೇ ಚುನಾವಣೆ ಸಾಧ್ಯತೆ ದಟ್ಟವಾಗಿದೆ.ರಾಜ್ಯದ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾವಿಕ್ರಮನಾಥ್ ಹಾಗೂ ನ್ಯಾ. ಅನಿರುದ್ ಬೋಸ್ ನೇತೃತ್ವದ ಪೀಠವು ವಜಾಗೊಳಿಸಿದೆ. ರಾಜ್ಯ ಸರ್ಕಾರವು ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಚುನಾವಣಾ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇರುವ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ಎರಡೂ ಪಂಚಾಯಿತಿಗಳಲ್ಲಿ…

Read More

ಅಪಘಾತದಿಂದ ಕಾರು ತುಂಗಾ ಕಾಲುವೆಗೆ ಬಿದ್ದಿದೆ40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗಚಂದ್ರಶೇಖರ್ ಸಾವಿನಲ್ಲಿ ಹಲವು ರಾಜಕೀಯ..!?ಪ್ರಕರಣದಲ್ಲಿ ವಿನಯ್ ಗುರೂಜಿ ಹೆಸರು ದುರ್ಬಳಕೆ!? NAMMUR EXPRESS NEWSದಾವಣಗೆರೆ: ಭಾರೀ ಕುತೂಹಲ ಕೆರಳಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರು ಅವರ ಸಾವು ಇದೀಗ ಅಪಘಾತ ಎಂಬುದು ದೃಢಪಟ್ಟಿದೆ.ಸರ್ಕಾರ ನಡೆಸಿದ ಎಫ್.ಎಸ್.ಎಲ್ ವರದಿಯಲ್ಲಿ ಚಂದ್ರಶೇಖರ್ ಸಾವಿನ ರಹಸ್ಯ ಬಯಲಾಗಿದ್ದು,ಓವರ್ ಸ್ಪೀಡ್‌ನಿಂದ ಚಂದ್ರು ಕಾರು ಸೇತುವೆಗೆ ಡಿಕ್ಕಿಯಾಗಿ ಕಾರು ತುಂಗಾ ಕಾಲುವೆಗೆ ಬಿದ್ದಿದೆ. ಇದರ ಪರಿಣಾಮ ಚಂದ್ರು ಸಾವನ್ನಪ್ಪಿದ್ದಾನೆ ಎಂಬ 40 ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ.ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ!: ಎಫ್ ಎಸ್ ಎಲ್ ರಿಪೋರ್ಟ್‌, ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ.40 ಪುಟಗಳ ಎಫ್ ಎಸ್ ಎಲ್ ವರದಿಯಲ್ಲಿ ಅಪಘಾತದಲ್ಲಿ ಚಂದ್ರಶೇಖರ್ ಸಾವು ಎಂದು ದೃಢಪಡಿಸಿ ದ್ದಾರೆ. ಓವರ್ ಸ್ಪೀಡ್‌ನಿಂದ ಚಂದ್ರು…

Read More

‘ಸುಪ್ರೀಂ’ ಆದೇಶ: ಸನ್ನಡತೆ ಆಧಾರದಲ್ಲಿ ಬಂಧಮುಕ್ತಆತ್ಮಹತ್ಯೆ ಬಾಂಬ್ ಸ್ಫೋಟ ಮಾಡಿ ಹತ್ಯೆ NAMMUR EXPRESS NEWSನವದೆಹಲಿ: 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ಹತ್ಯೆಗೈದ ಪ್ರಕರಣದಲ್ಲಿ ಕಳೆದ 30 ವರ್ಷಗಳಿಂದ ಜೈಲಿನಲ್ಲಿದ್ದ 6 ಅಪರಾಧಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ಹೊರಡಿಸಿದೆ.ರಾಜೀವ್ ಹತ್ಯೆ ಪ್ರಕರಣದ 7 ಅಪರಾಧಿಗಳ ಪೈಕಿ ಕಳೆದ ಮೇನಲ್ಲಿ ಒಬ್ಬನಿಗೆ ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಭಾಗ್ಯ ಕಲ್ಪಿಸಿತ್ತು. ಇದೀಗ ಉಳಿದ 6 ಮಂದಿಯನ್ನು ಬಂಧಮುಕ್ತಗೊಳಿಸುವುದರೊಂದಿಗೆ ರಾಜೀವ್ ಹತ್ಯೆ ಪ್ರಕರಣದ ಎಲ್ಲ ಅಪರಾಧಿಗಳೂ ಜೈಲಿನಿಂದ ಹೊರಬಂದಂತಾಗಿದೆ.ಯಾರಿಗೆ ಮುಕ್ತಿ?!: ನಳಿನಿ ಶ್ರೀಹರನ್, ಆರ್.ಪಿ.ರವಿಚಂದ್ರನ್, ಶಾಂತನ್, ಮುರುಗನ್ (ನಳಿನಿ ಪತಿ), ರಾಬರ್ಟ್ ಪಯಸ್ ಹಾಗೂ ಜಯಕುಮಾರ್ ಬಿಡುಗಡೆ ಆಗಲಿರುವವರು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠ ಇವರ ಬಿಡುಗಡೆಗೆ ಸೂಚಿಸಿದೆ. ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬದ ಕಾರಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈಗ ಎಲ್ಲರೂ ಶಿಕ್ಷೆ ಅನುಭವಿಸಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಅವರ…

Read More

ಮುಂಬಡ್ತಿ, ವೇತನ ಹೆಚ್ಚಳ: ಇನ್ನಾದ್ರೂ ಕೆಲಸ ಪಕ್ಕಾ ಮಾಡ್ತಾರಾ..? NAMMUR EXPRESS NEWSಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಿದೆ. ಅಲ್ಲದೆ ಉತ್ತಮ ವೇತನ ನೀಡಿದೆ.ಈ ಉನ್ನತೀಕರಣದಂತೆ ವೇತವನ್ನು ಹೆಚ್ಚಳ ಮಾಡಿ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಇಲಾಖೆಯ ಅಡಿಯಲ್ಲಿ ಮಂಜೂರಾಗಿರುವ 6021 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಲಾಗಿದೆ. ಅಲ್ಲದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದಿದ್ದಾರೆ. ಇನ್ನೂ ಪಿಡಿಓಗಳ ಉನ್ನತೀಕರಣ, ಪುನ‌ ಪದನಾಮೀಕರಿಸಿದ ನಂತ್ರ ವೇತನ ಶ್ರೇಣಿಯನ್ನು ರೂ.37,900 ರಿಂದ 70,850 ಇದ್ದದ್ದನ್ನು ಗ್ರೂಪ್ ಸಿ ವೃಂದದ 1500 ಪಿಡಿಓಗಳಿಗೆ ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ.40,900 ರಿಂದ 78,2000ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ ಉಳಿದ 4521 ಪಂಚಾಯ್ತಿ…

Read More

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ಮಲೆನಾಡು, ಬೆಂಗಳೂರಲ್ಲೂ ಮಳೆ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಈಗಾಗಲೇ ಬೆಂಗಳೂರು, ಮಲೆನಾಡಿನ ಹಲವು ಕಡೆ ಮಳೆಯಾಗಿದೆ.ಚೆನ್ನೈ ಅಲ್ಲಿ ಮಂಜು ಕವಿದ ವಾತಾವರಣ ಇದ್ದು ಬೆಂಗಳೂರಿನಲ್ಲೂ ಮಳೆ, ಮಂಜಿನ ವಾತಾವರಣ ಇದೆ.ಕರಾವಳಿಯ ಜಿಲ್ಲೆಗಳು ಸೇರಿದಂತೆ ಒಟ್ಟು ರಾಜ್ಯದ 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ರಾಜ್ಯದಲ್ಲಿ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಆರಂಭವಾಗಿದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಹಲವೆಡೆ ಮಳೆ ಆರಂಭವಾಗಿದ್ದು, ಬೆಂಗಳೂರಿನ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಹಲವು ಜಿಲ್ಲೆಗಳಲ್ಲಿ ನವೆಂಬರ್ 13 ಮತ್ತು 14ರಂದು ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಚಾಮರಾಜನಗರ, ಕೊಡಗು, ಮಂಡ್ಯ ಮೈಸೂರು, ಹಾಸನ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ…

Read More