Author: Nammur Express Admin

ಕಾರ್ಕಳದಲ್ಲಿ ನಾಳೆ ಅದ್ದೂರಿ ಹುಲಿ ನೃತ್ಯ ಪ್ರದರ್ಶನ! – ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಆಯೋಜನೆ – ಕರಾವಳಿಯಲ್ಲೇ ಅತೀ ದೊಡ್ಡ ಹುಲಿ ವೇಷ ಪ್ರದರ್ಶನ NAMMUR EXPRESS NEWS ಕಾರ್ಕಳ: ಕಾರ್ಕಳದಲ್ಲಿ ಐತಿಹಾಸಿಕ ಅದ್ದೂರಿ ಹುಲಿ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಕಾರ್ಕಳದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಸ್ಪರ್ಧೆ ನಡೆಯಲಿದೆ. ಅ.4 ಸಂಜೆ 6 ಗಂಟೆಗೆ ಇಂದ್ರಪ್ರಸ್ಥ (ಗುರುದೀಪ್ ಗಾರ್ಡನ್)ನಲ್ಲಿ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಅವರ ‘ಪಿಲಿ ರಂಗ್ ದೈಸಿರ’ಎಂಬ ತಂಡದ ಭರ್ಜರಿ ಊದು ಪೂಜೆ ಪ್ರಾರಂಭವಾಗಲಿದೆ. ಅ.05ರಂದು ಸಂಜೆ 5.30ಕ್ಕೆ ಅನಂತಶಯನದಿಂದ ಬಂಡಿಮಠದವರೆಗೆ ಶೋಭಾಯಾತ್ರೆ ಬಳಿಕ ಕಾರ್ಯಕ್ರಮ ಜೊತೆಗೆ ಸಭಾ ಕಾರ್ಯಕ್ರಮ ಹಾಗೂ ಬಂಡಿಮಠ ಬಸ್‌ ಸ್ಟ್ಯಾಂಡ್ ನಲ್ಲಿ ಹುಲಿ ನೃತ್ಯ ಪ್ರದರ್ಶನವೂ ಅದ್ದೂರಿಯಿಂದ ನಡೆಯಲಿದೆ. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಹುಲಿಗಳ ಪ್ರದರ್ಶನ ಕರಾವಳಿಯಲ್ಲಿ ಗಮನ ಸೆಳೆಯಲಿದೆ.

Read More

ಶಿವಮೊಗ್ಗದಲ್ಲಿ ಅರಣ್ಯ ಸಚಿವರಿಗೆ ರೈತರ ಪತ್ರ! – ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ – ರೈತರನ್ನು ಒಕ್ಕಲೆಬ್ಬಿಸುವ ಕಾರಣಕ್ಕೆ ದೂರು ಪತ್ರ ಸಲ್ಲಿಕೆ – ತಕ್ಷಣವೇ ಕಡಿವಾಣ ಹಾಕಲು ರೈತ ಸಂಘ ಪತ್ರ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ ಅರ್ಪಿಸಿತು. ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯ ಹಂಚಿನ ಸಿದ್ದಾಪುರ, ಅಗರದಹಳ್ಳಿ, ತಡಸ, ಮಲ್ಲಿಗೇನಹಳ್ಳಿ, ಗುಡುಮುಗಟ್ಟೆ, ಇಟ್ಟಿಗೆಹಳ್ಳಿ, ದಿಗ್ಗೇನಹಳ್ಳಿ, ಆದ್ರಿಹಳ್ಳಿ, ಆನವೇರಿ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆ ವಿನಾ ಕಾರಣ ತೊಂದರೆ ನೀಡುತ್ತಿದೆ. ನಿಯಮಾನುಸಾರ ಜಮೀನಿಗೆ ಸಾಗುವಳಿ ಚೀಟಿ ಪಡೆದು, ಖಾತೆ, ಪಹಣಿ ದಾಖಲೆ ಹೊಂದಿರುವ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸಂಘಟನೆ ಮನವಿ ಪತ್ರದಲ್ಲಿ ದೂರಿದೆ. ಜೊತೆಗೆ ರೈತರು ಭೂ ಕಬಳಿಕೆ ಮಾಡಿದ್ದಾರೆ ಎಂದು ಬೆಂಗಳೂರಿನ ಭೂ ಕಬಳಿಕೆ…

Read More

ತೀರ್ಥಹಳ್ಳಿಗೆ ಬಂದ ಶ್ರೀರಾಮ, ಲಕ್ಷ್ಮಣ, ಆಂಜನೇಯ! – ಕೊಪ್ಪ ಸರ್ಕಲ್ ಅಲ್ಲಿ 45 ಅಡಿ ಎತ್ತರದ ಪ್ರತಿಮೆ – ದಸರಾ ಅಂಗವಾಗಿ ತೀರ್ಥಹಳ್ಳಿಯಲ್ಲಿ ಹೊಸ ಮೆರುಗು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಗೆ ಬಂದ ಶ್ರೀರಾಮ, ಲಕ್ಷ್ಮಣ, ಆಂಜನೇಯ…! ಹೌದು. ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸುಮಾರು 45 ಅಡಿ ಪ್ರತಿಮೆಯನ್ನು ಕೊಪ್ಪ ಸರ್ಕಲ್ ಅಲ್ಲಿ ದಸರಾ ಅಂಗವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲಾ ಸ್ಟೇಟಸ್, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಲಕ್ಷ್ಮಣ, ಶ್ರೀರಾಮ, ಆಂಜನೇಯ ಇರುವ ಮಹಾದ್ವಾರ ಇದೀಗ ತಾಲೂಕಿನ ಗಮನ ಸೆಳೆದಿದೆ. ಈ ಬಾರಿಯ ತೀರ್ಥಹಳ್ಳಿ ದಸರಾಕ್ಕೆ ಮಹಾದ್ವಾರ ಹೆಚ್ಚಿನ ರಂಗು ನೀಡಲಿದೆ

Read More

ಬೈಂದೂರಿನ ಉಪ್ಪಂದದಲ್ಲಿ ಸಾವಿರಾರು ಜನ ಅಸ್ವಸ್ಥ! – ಕಲುಷಿತ ನೀರು ಸೇವಿಸಿ ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥ! – 500 ಹಾಗೂ ಮೇಡಿಕಲ್ ನಲ್ಲಿ 600ಕ್ಕೂ‌ ಹೆಚ್ಚು ಜನ ಅಸ್ವಸ್ಥ NAMMUR EXPRESS NEWS ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದು, ಇಡೀ‌ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಮತ್ತು 7ನೇ ವಾರ್ಡ್ನಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲುಷಿತ ನೀರು ಸೇವಿಸಿದ ಕರ್ಕಿಹಳ್ಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರು ಪೂರೈಕೆ ಆಗಿದೆ ಎಂದು ಹೇಳಲಾಗುತ್ತಿದ್ದು, ಕರ್ಕಿಕಳ್ಳಿಯಲ್ಲಿ ಸುಮಾರು 500 ಹಾಗೂ ಮೇಡಿಕಲ್ ನಲ್ಲಿ 600ಕ್ಕೂ‌ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ವಾರ್ಡ್ನ ಪ್ರತಿ ಮನೆಯಲ್ಲಿ ಮೂರಕ್ಕೂ…

Read More

ಚಿಕ್ಕಮಗಳೂರಿನಲ್ಲಿ ಸಂಸದರ ನೂತನ ಕಛೇರಿ ಉದ್ಘಾಟನೆ! * ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿ ಸಂಸದರ ನೂತನ ಕಛೇರಿ * ಸಂಸದ ಕೋಟ ಶ್ರೀನಿವಾಸ ಪೂಜಾರಿ,ಸಿ.ಟಿ ರವಿ,ಭೋಜೇಗೌಡ ಭಾಗಿ * ಶೃಂಗೇರಿ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ NAMMUR EXPRESS NEWS ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರ ಚಿಕ್ಕಮಗಳೂರಿನ ನೂತನ ಕಛೇರಿಯನ್ನು ಶುಕ್ರವಾರ ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿ ಉದ್ಘಾಟಿಸಲಾಯಿತು. ನೂತನ ಕಛೇರಿಯ ಉದ್ಘಾಟನೆ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ,ಇನ್ನೊಬ್ಬ ಸದಸ್ಯರಾದ ಎಸ್.ಎಲ್ ಭೋಜೇಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಉಳಿದಂತೆ ಬಿಜೆಪಿ ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ, ನಗರಸಭೆಯ ಅಧ್ಯಕ್ಷರಾದ ಸುಜಾತ, ಉಪಾಧ್ಯಕ್ಷರಾದ ಅನುಮಧುಕರ್ ಹಿರಿಯ ಮುಖಂಡರಾದ ಕೋಟೆ ರಂಗಣ್ಣ, ರಾಜ್ಯ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳು ರಾಜಪ್ಪ, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕಲ್ಮುರಡಪ್ಪ ಸೇರಿದಂತೆ ಎಲ್ಲಾ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ಶೃಂಗೇರಿ ಪಟ್ಟಣ ಪಂಚಾಯತ್‌ ಸ್ಥಾಯಿ ಸಮಿತಿಗೆ ನೂತನ…

Read More

ಅ.8ಕ್ಕೆ ಚಿತ್ರದುರ್ಗ ಮುರುಘರಾಜೇಂದ್ರ ಮಠಕ್ಕೆ ಸಿಎಂ! * ಶರಣ ಸಂಸ್ಕಂತಿ ಉತ್ಸವ, ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ * ಜಯದೇವ ದಿಗ್ವಿಜಯ’ ಸ್ಮರಣ ಸಂಚಿಕೆ ಲೋಕಾರ್ಪಣೆ NAMMUR EXPRESS NEWS ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 8 ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಮುರುಘರಾಜೇಂದ್ರ ಬೃಹನ್ಮಠದಿಂದ ಆಯೋಜಿಸಿರುವ ಶರಣ ಸಂಸ್ಕಂತಿ ಉತ್ಸವ ಹಾಗೂ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಅಕ್ಟೋಬರ್ 10 ರಂದು ಚಿತ್ರದುರ್ಗಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಇದೇ ದಿನಾಂಕವನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದು,ಮುಖ್ಯಮಂತ್ರಿಗಳ ಭೇಟಿ ಅಧಿಕೃತವಾಗಿ ನಿಗಧಿಯಾಗಿರುವ ಬಗ್ಗೆ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ.ಬಸವಕುಮಾರ ಸ್ವಾಮೀಜಿ ತಿಳಿಸಿದ್ದಾರೆ. ಮಂಗಳವಾರ ಉದ್ಘಾಟನೆಯಾಗಲಿರುವ ಶರಣ ಸಂಸ್ಕಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಯದೇವ ಜಗದ್ಗುರುಗಳ ಕುರಿತು ಹೊರತರುತ್ತಿರುವ ‘ಜಯದೇವ ದಿಗ್ವಿಜಯ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ

Read More

ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿ – ಇದು ನಮ್ಮೂರ್ ನವರಾತ್ರಿ..!! * ಶೃಂಗೇರಿ ಶಾರದಾ ಶರನ್ನವರಾತ್ರಿ ಉತ್ಸವ ಮೊದಲನೇ ದಿನದ ಬೀದಿ ಉತ್ಸವದ ರಂಗು * ಅಡ್ಡಗದ್ದೆ ಗ್ರಾಮ ಪಂಚಾಯ್ತಿ ನೇತೃತ್ವ ಅದ್ದೂರಿ ಬೀದಿ ಉತ್ಸವ NAMMUR EXPRESS NEWS ಶೃಂಗೇರಿ: ಶ್ರೀಶಾರದಾ ಶರನ್ನವರಾತ್ರಿಯ ಮೊದಲನೇ ದಿನದ ಬೀದಿ ಉತ್ಸವದಲ್ಲಿ ತಾಯಿ ಶಾರದೆ ಹಂಸವಾಹಿನಿ ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು. ಮೊದಲನೇ ದಿನದ ಬೀದಿ ಉತ್ಸವ ನೂತನ ರಥದ ಉದ್ಘಾಟನೆಯನ್ನು ಉಭಯ ಜಗದ್ಗುರುಗಳಿಂದ ನೆರವೇರಿತು.ಮೊದಲ ದಿನದ ಜವಾಬ್ದಾರಿಯನ್ನು ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯ್ತಿ ವಹಿಸಿತ್ತು. ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸಂಘ,ಸಂಸ್ಥೆಗಳ ಕಾರ್ಯಕರ್ತರು,ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಾಲಾ ಮಕ್ಕಳು,ಸಂಘ ಸಂಸ್ಥೆಗಳ ಸದಸ್ಯರು ಅತ್ಯಾಕರ್ಷಕ ಸ್ಥಬ್ಧಚಿತ್ರಗಳನ್ನು ಪ್ರದರ್ಶಿಸಿದರು,ಉತ್ಸವದಲ್ಲಿ ಭಜನೆ, ಹುಲಿವೇಷ ಕುಣಿತ,ನಾಸಿಕ್ ಬ್ಯಾಂಡ್,ಮಲೆನಾಡು ಹಾಗೂ ರಾಜ್ಯ,ದೇಶದ ಕಲೆ,ಸಂಸ್ಕೃತಿಯ ಕುರಿತಾದ ಸ್ಥಬ್ಥ ಚಿತ್ರಗಳು ಉತ್ಸವದ ಮೆರಗು ಹೆಚ್ಚಿಸಿದವು. ಮಾಜಿ ಶಾಸಕ,ಮಾಜಿ ಸಚಿವ ಡಿ.ಎನ್ ಜೀವರಾಜ್ ಭಾಗಿ..!! ಹುಟ್ಟುಹಬ್ಬದ ದಿನದಂದು ಕ್ಷೇತ್ರದ ಮಾಜಿ ಶಾಸಕ,ಮಾಜಿ ಸಚಿವ ಡಿ.ಎನ್ ಜೀವರಾಜ್ ಸಂಜೆಯ ಬೀದಿ…

Read More

ಗ್ರಾಮ ಪಂಚಾಯತ್ ಆಡಳಿತ ಸ್ತಬ್ದ! – ಅಧಿಕಾರಿಗಳು, ನೌಕರರು, ಸದಸ್ಯರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ – ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಧರಣಿ – ಜನರ ಕೆಲಸಕ್ಕೆ ಅಡ್ಡಿ: ಸರ್ಕಾರ ಮಧ್ಯ ಪ್ರವೇಶಕ್ಕೆ ಪಟ್ಟು NAMMUR EXPRESS NEWS ಬೆಂಗಳೂರು : ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮತ್ತು ಪಂಚಾಯಿತಿ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆಗಳ ಸಂಗ್ರಹಣೆಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಸ್ತಬ್ಧವಾಗಲಿವೆ. ಪಂಚಾಯತ್ ಅಧಿಕಾರಿಗಳು (ಪಿಡಿಒ), ಕಾರ್ಯದರ್ಶಿಗಳು, ಕರ ವಸೂಲಿಗಾರರು, ಗುಮಾಸ್ತರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳು, ನೀರಗಂಟಿಗಳು, ಜವಾನರು, ಪದವಿ ಪಡೆದ ಕಾರ್ಮಿಕರು, ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ನ ರಾಜ್‌ಜೆ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ನ ಸದಸ್ಯರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು…

Read More

ಶಿವಮೊಗ್ಗ ಜಿಲ್ಲೆಯಲ್ಲಿ ವೈಭವದ ದಸರಾ ಶುರು! * ಮಲೆನಾಡಿನಲ್ಲಿ ದಸರಾ ಆಚರಣೆ ಸಿದ್ಧತೆ * ಎಲ್ಲಾ ತಾಲೂಕಲ್ಲಿ ದಸರಾ ಸಡಗರ NAMMUR EXPRESS NEWS ಶಿವಮೊಗ್ಗ ನಗರದಲ್ಲಿ ವೈಭವದ ದಸರಾ ಆಚರಣೆ ಮಾಡಲಾಗುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆವರಣ ನಾಡದೇವಿ ಚಾಮುಂಡೇಶ್ವರಿಯ ಅಂಬಾರಿಯಲ್ಲಿ ಅ. 3ರಂದು ಬೆಳಗ್ಗೆ 9 ಗಂಟೆಯಿಂದ ಪೂಜೆ, ಮೆರವಣಿಗೆ ಭರ್ಜರಿಯಿಂದ ನಡೆಯಿತು. ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಬೆಳಗ್ಗೆ 9 ಗಂಟೆಗೆ ವಿದ್ವಾನ್‌ ಅರುಣ್‌ ಕುಮಾರ್‌ ಮತ್ತು ಸಂಗಡಿಗರು, ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಿತು. ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಅವರಿಂದ ಚಾಲನೆ ಕಾರ್ಯಕ್ರಮ ನೆರವೇರಿತು. ಕುವೆಂಪು ರಂಗಮಂದಿರ ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ದಸರಾದಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ. ಕವಿಗೋಷ್ಠಿ, ಪುಟಾಣಿ ಮಕ್ಕಳಿಂದ ನೃತ್ಯ ವೈಭವ. ದಾಕ್ಷಾಯಿಣಿ ರಾಜ್‌ ಕುಮಾರ್‌ ಮತ್ತು ಸಂಗಡಿಗರು,…

Read More