ಅನಾಥ ನಾಯಿ ಮರಿಗಳಿಗೆ ವರಾಹವೇ ತಾಯಿತನ್ನದಲ್ಲದ ಮರಿಗಳಿಗೂ ಹಾಲುಣಿಸಿ ತಾಯಿ ಪ್ರೀತಿ ತೋರುವ ನಾಯಿ ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷಮಾನವೀಯತೆ ಮನುಷ್ಯನಲ್ಲಿ ಕಡಿಮೆಯೇ.. ಪ್ರಾಣಿಗಳಲ್ಲಿ ಇಂತಹ ಕರುಣಾಮಯಿ ದೃಶ್ಯಗಳನ್ನು ಕಾಣಬಹುದು.ಮನುಷ್ಯ ಇಡೀ ಪರಿಸರ ನನ್ನದೇ ಎಂದುಕೊಂಡು ಸಾಗುತ್ತಿದ್ದಾನೆ. ಆದರೆ ಎಲ್ಲಾ ಪ್ರಾಣಿ ಪಕ್ಷಿ ಕೀಟ, ಗಿಡ ಮರಗಳಿಗೂ ನಮ್ಮಷ್ಟೇ ಬದುಕುವ ಹಕ್ಕು ಇದೆ. ನೀತಿ ಪಾಠ: ಪ್ರಾಣಿಗಳಿಗಿರುವ ಕನಿಷ್ಟ ದಯೆ ಎಲ್ಲಾ ಶಕ್ತಿ ಇರುವ ಮಾನವನಿಗೆ ಇಲ್ಲವಾಗುತ್ತಿದೆ..ಇನ್ನಾದರೂ ಬದಲಾಗೋಣ..!
Author: Nammur Express Admin
ಕುವೆಂಪು ಅವರ ಪುಣ್ಯ ಸ್ಮರಣೆ: ಕವಿಗೆ ನಮನಕುಪ್ಪಳಿಯಲ್ಲಿ ಸಮಾಧಿಗೆ ಗೌರವ ಸಲ್ಲಿಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ಯುಗದ ಕವಿ ಜಗದ ಕವಿ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಪುಣ್ಯ ಸ್ಮರಣೆಯನ್ನು ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ.ವಿಶ್ವ ಮಾನವ ಸಂದೇಶ ಸಾರಿರುವ ಕುವೆಂಪು ಅವರ ಸಾಹಿತ್ಯ ಕನ್ನಡದ ಮೇರು ಸಾಹಿತ್ಯ. ಡಿಸೆಂಬರ್ 29, 1904ರಲ್ಲಿ ಹಿರೇಕೊಡಿಗೆಯಲ್ಲಿ ಜನಿಸಿದ್ದ ಕುವೆಂಪು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ಹೆಸರು ಮಾಡಿದವರು. ಕುವೆಂಪು ಅಂದರೆ ಶಕ್ತಿ, ಕುವೆಂಪು ಅಂದರೆ ಯುಕ್ತಿ. ನವೆಂಬರ್ 11, 1994ಮೈಸೂರಲ್ಲಿ ಅವರು ನಿಧನರಾದರು. ಅವರ ಸಾವಿನ ಬಳಿಕವೂ ಅವರು ಬಿತ್ತಿದ ಚಿಂತನೆ, ಸಾಹಿತ್ಯ ಇಡೀ ದೇಶದಲ್ಲಿ ಅವರ ಹೆಸರನ್ನು ಜೀವಂತವಾಗಿಟ್ಟಿದೆ.ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಅವರ ಸೇವೆ ಅಪಾರ. ಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ, ಸಾಹಿತ್ಯ ಚಳುವಳಿ, ನವೋದಯ ಸಾಹಿತ್ಯದ ಮುಂಚೂಣಿ ಕವಿ.ಜ್ಞಾನಪೀಠ…
19ರಿಂದ 23ರವರೆಗೆ ದೀಪೋತ್ಸವ: ಸರ್ವಧರ್ಮ ಸಭೆ NAMMUR EXPRESS NEWSಬೆಳ್ತಂಗಡಿ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನ.19ರಿಂದ 23ರವರೆಗೆ ನಡೆಯಲಿವೆನ.22ರಂದು ಸರ್ವಧರ್ಮ ಮತ್ತು 23ರಂದು ಸಾಹಿತ್ಯ ಸಮ್ಮೇಳನಗಳ 90ನೇ ಅಧಿವೇಶನ ನೆರವೇರಲಿದೆ. ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬೇಕೆಂದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಸ್ವಾಗತ. ಸಮಿತಿ ಅಧ್ಯಕ್ಷ, ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗಡೆ ಆಮಂತ್ರಿಸಿದ್ದಾರೆ. ನ.22ರಂದು ಅಮೃತ ವರ್ಷಿಣಿ ಸಭಾಭವನದಲ್ಲಿ ಸಂಜೆ 5ರಿಂದ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ವಹಿಸಲಿದ್ದಾರೆ. ಇನ್ನು ನ.23ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ನ.19ರಂದು ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.
ಪೊಲೀಸ್ ತನಿಖೆ ನಡೆದು ಸತ್ಯ ಹೊರ ಬರಲಿ: ಸುಮ್ಮನೆ ತಪ್ಪು ಸಂದೇಶ ನೀಡಬೇಡಿಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಗೆ ಭಕ್ತರ ಮನವಿ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ಮಗ ಚಂದ್ರು ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿಯ ಸಾವಿಗೆ ಯಾರೇ ಕಾರಣವಾಗಿದ್ದರೂ ಅವರು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಗಾಗಬೇಕೆಂಬುದು ನಮ್ಮ ಆಶಯ. ಹಾಗೆಯೇ ಚಂದ್ರು ಸಾವಿನ ರಹಸ್ಯ ಆದಷ್ಟು ಬೇಗ ಬಹಿರಂಗವಾಗಲಿ ಎನ್ನುವುದನ್ನು ನಾವೂ ಆಗ್ರಹಿಸುತ್ತೇವೆ.ಹೀಗಿರುವಾಗ ಚಂದ್ರು ಸಾವಿನ ವಿಷಯದಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹೆಸರು ಅನೌಪಚಾರಿಕವಾಗಿ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದರೂ ಚಂದ್ರು ದಿನಂಪ್ರತಿ ನೂರಾರು ಭಕ್ತರು ಮತ್ತು ಅನುಯಾಯಿಗಳು ಭೇಟಿ ನೀಡುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಗೌರಿಗದ್ದೆ ಆಶ್ರಮಕ್ಕೆ ಭೇಟಿ ಕೊಟ್ಟಿದ್ದ ಎಂಬ ಒಂದೇ ವಿಚಾರದಿಂದ ಚಂದ್ರು ಸಾವಿನಲ್ಲಿ ವಿನಯ್ ಗುರೂಜಿ ಅವರ ಹೆಸರನ್ನು…
ತೀವ್ರ ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶಬುಧವಾರ ಬೆಳಿಗ್ಗೆವರೆಗೂ ಅಂತಿಮ ದರ್ಶನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ಲೋಹಿತಾಶ್ವ ದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಮಧ್ಯಾಹ್ನ 2.45ಕ್ಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಪುತ್ರ, ಕಲಾವಿದ ಶರತ್ ಲೋಹಿತಾಶ್ವ ಸೇರಿದಂತೆ ಕುಟುಂಬ, ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ500ಕ್ಕೂ ಹೆಚ್ಚು ಸಿನಿಮಾ ನಟನೆ!: ತುಮಕೂರಿನ ತೊಂಡಗೆರೆಯಲ್ಲಿ ಅಗಸ್ಟ್ 5 1942ರಂದು ಜನಿಸಿದ ಲೋಹಿತಾಶ್ವ ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕ, ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರನಾಗ್ ನಟನೆಯ ಮಾಲ್ಗುಡಿ ಡೇಸ್, ಗೃಹಭಂಗ, ನಾಟ್ಯರಾಣಿ ಶಾಂತಲಾ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ…
4000 ಮಂದಿಯನ್ನು ಕೆಲಸದಿಂದ ತೆಗೆದ ಮಸ್ಕ್ NAMMUR EXPRESS NEWSಪ್ರಾನ್ಸಿಸ್ಕೊ: ನೌಕರರ ವಿರೋಧದ ನಡುವೆ ತನ್ನ ಶೇ.50 ರಷ್ಟು ಸಿಬ್ಬಂದಿಯನ್ನು ಅರ್ಥಾತ್ ಸುಮಾರು 4 ಸಾವಿರ ಸಿಬ್ಬಂದಿಗಳನ್ನು ಚುಟುಕು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಶುಕ್ರವಾರ ಕೆಲಸದಿಂದ ವಜಾ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಟ್ವಿಟರ್ ನೂತನ ಮಾಲೀಕ ಎಲಾನ್ ಮಾಸ್ಕ್ ಕಂಪನಿ ದಿನಕ್ಕೆ 40 ಲಕ್ಷ ಡಾಲರ್ ನಷ್ಟು ನಷ್ಟ ಅನುಭವಿಸುತ್ತಿದೆ. ಹಾಗಾಗಿ ವಜಾ ಮಾಡದೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ. ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವ ಉದ್ದೇಶದಿಂದ 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವ ತಮ್ಮ ಯೋಜನೆ ಬಗ್ಗೆ ಕೇವಲ ಒಂದು ವಾರದ ಹಿಂದೆ ಮಾಸ್ಕ್ ಘೋಷಿಸಿದ್ದರು. ಈ ಬಗ್ಗೆ ವಜಗೊಂಡ ಉದ್ಯೋಗಿಗಳು ಅಸಮಾಧಾನ ಹೊರಹಾಕಿದ್ದು, ಇದು ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮಾರ್ಗ, ಮಾಸ್ಕ್ ಎಲ್ಲಾ ಕಡೆಯಿಂದಲೂ ಲಾಭಗಳಿಸುವ ಯೋಚನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ .ಈ ನಡುವೆ ಟ್ವಿಟರ್ ನ ಹಿಂದಿನ ಮುಖ್ಯಸ್ಥ ಜಾಕ್ ಡೋರ್ಸಿ ಅವರು…
ವಿದ್ಯಾರ್ಥಿಗಳ ಜತೆ ದೀಪಾವಳಿ, ತುಳಸಿ ಹಬ್ಬದ ಆಚರಣೆದೀಪದ ಬೆಳಕಿನಲ್ಲಿ ಮಿಂದೆದ್ದ ಕ್ರಿಯೇಟಿವ್ ಕಾಲೇಜು NAMMUR EXPRESS NEWSಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಬಹು ದೊಡ್ಡ ಜವಾಬ್ದಾರಿಗೂ ಸೈ ಎಂದು ಸಂಸ್ಥೆ ತೋರಿಸಿತು.ಕಾಲೇಜಿನಲ್ಲಿ ಮಕ್ಕಳ ಜತೆಗೆ ಎಲ್ಲಾ ಬೋಧಕರು, ಸಿಬ್ಬಂದಿ, ಮನೆಯಲ್ಲಿ ಹಬ್ಬ ಆಚರಿಸಿದಂತೆ ಹಬ್ಬವನ್ನು ಒಟ್ಟಾಗಿ ಆಚರಿಸಿದರು.ಹಬ್ಬಗಳ ಮಹತ್ವ ತಿಳಿಸಿದ ಪ್ರಾಂಶುಪಾಲರು:ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ತಿಳಿಸಿದರು.ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್ ಎಸ್ ಎಲ್ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲೂ ಹಬ್ಬವು ಸಾಮರಸ್ಯವನ್ನು ತರಲಿ ಎಂದು ಹಾರೈಸಿದರು.ಸಂಸ್ಥೆಯ ಸಂಸ್ಥಾಪಕರುಗಳಾದ ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ…
ಸರ್ಕಾರದಿಂದ ಬಿಡುಗಡೆ: ಆರಗ ಅವರ ಪ್ರಯತ್ನ NAMMUR EXPRESS NEWSಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಕೆಗೆ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಔಷಧ ಸಿಂಪಡಣಿಗೆಂದು ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನ ಘೋಷಿಸಿದೆ.ಅಡಕೆ ಕಾರ್ಯಪಡೆ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ತೀರ್ಥಹಳ್ಳಿಯ ರೈತ ಪ್ರತಿನಿಧಿಗಳ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಅನುದಾನ ಘೋಷಿಸಿದರು. ಅಲ್ಲದೆ, ಈ ಮೊದಲೇ ಘೋಷಿಸಿದ್ದ 8 ಕೋಟಿ ರೂ. ಅನುದಾನದಲ್ಲಿ 4 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಅಭಿಮಾನಿಗಳಿಗಾಗಿ 4 ದಿನ ಭರ್ಜರಿ ಕೊಡುಗೆಟಿಕೆಟ್ ದರದಲ್ಲಿ ಭಾರೀ ಕಡಿಮೆ: ಸಂತಸದ ಸುದ್ದಿನ.7ರಿಂದ 4 ದಿನ ಟಿಕೆಟ್ ದರ ಕಡಿತಕ್ಕೆ ನಿರ್ಧಾರ NAMMUR EXPRESS NEWSಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್,ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಗಂಧದಗುಡಿ’ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ನಾಡಿನ ಪ್ರಕೃತಿ ಸೌಂದರ್ಯವನ್ನು ಪ್ರಾಣಿ ಸಂಕುಲವನ್ನು, ಅಪರೂಪದ ಸಸ್ಯ ಸಂಪತ್ತನ್ನು ವಿಶ್ವಕ್ಕೆ ತೋರಿಸುವ ಕೆಲಸವನ್ನು ಪುನೀತ್ ಮಾಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಡಾಕ್ಯುಮೆಂಟರಿಯಲ್ಲಿ ರಾಜ್ಯದ ಅಪರೂಪದ ಪ್ರಾಣಿ ಸಂಕುಲ, ಜಲಚರ, ಬೆಟ್ಟ ಗುಡ್ಡ ನದಿ, ಸಮುದ್ರಗಳ ಸೌಂದರ್ಯವನ್ನು ಅಪ್ಪು ತೋರಿಸಿದ್ದಾರೆ. ಅಪ್ಪು ಅಭಿಮಾನಿಗಳು, ಸಿನಿ ಪ್ರಿಯರು, ಪರಿಸರ ಪ್ರಿಯರು ಈ ಸಿನಿಮಾ ನೋಡಿ ಶಹಬ್ಬಾಶ್ ಎಂದಿದ್ದಾರೆ. ಇದೀಗ ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಸಂತಸದ ಸುದ್ದಿಯೊಂದು ಕೊಟ್ಟಿದೆ. ನವೆಂಬರ್ 7ರಿಂದ ನಾಲ್ಕು ದಿನಗಳ ಕಾಲ ಗಂಧದಗುಡಿ ಸಿನಿಮಾ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕೂಮಾರ್…
ಮೈಸೂರಿನಲ್ಲಿ ವಿದ್ಯುತ್ ದುರಂತ! ತಂತಿ ತಗುಲಿ ಅಪ್ಪ ಮಗ, ಕೂಲಿ ಕಾರ್ಮಿಕ ದುರ್ಮರಣ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ಮೈಸೂರು: ಮೈಸೂರಿನ ತಿ. ನರಸೀಪುರ ತಾಲೂಕಲ್ಲಿ ವಿದ್ಯುತ್ ತಗುಲಿ ಮೂವರು ಸಾವನಪ್ಪಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಅವಘಡ ಸಂಭವಿಸಿದೆ.ತಿ.ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದ ಬಳಿ ಘಟನೆ ನಡೆದಿದ್ದು, ಅಪ್ಪ ಮಗ, ಕೂಲಿ ಕಾರ್ಮಿಕ ದುರ್ಮರಣ ಹೊಂದಿದ್ದಾರೆ. 60 ವರ್ಷದ ರಾಚೇಗೌಡ, 35 ವರ್ಷದ ಹರೀಶ್, 40 ವರ್ಷದ ಕುಮಾರಸ್ವಾಮಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಭತ್ತದ ಗದ್ದೆಗೆ ಔಷಧಿ ಸಿಂಪಡಿಸಲು ಹೋಗಿದ್ದ ವೇಳೆ ಜಮೀನನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಸ್ಥಳಕ್ಕೆ ಟಿ.ನರಸೀಪುರ ಗ್ರಾಮಾಂತರ ಪೊಲೀಸರ ಭೇಟಿ ಕೊಟ್ಟಿದ್ದಾರೆ. ಯುವತಿ ಕಾರ್ ಶೆಡ್ಡಲ್ಲಿ ಆತ್ಮಹತ್ಯೆ! ಶಿವಮೊಗ್ಗ: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಅಶ್ವತ್ಥ್ ನಗರದಲ್ಲಿ ನಡೆದಿದೆ.ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಈಕೆ 5 ತಿಂಗಳ ಹಿಂದೆ ಆಕಾಶ್ ಎಂಬ ಯುವಕನ ಜೊತೆ ವಿವಾಹವಾಗಿದ್ದಳು…