ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿದ ರಾಜ್ಯಸರ್ಕಾರಏನಿದು ಆದೇಶ… ಏನಿದು ನಿಯಮ…? NAMMUR EXPRESS NEWSಬೆಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022 – 23ನೇ ಸಾಲಿನ ಕಾನ್‌ಸ್ಟೇಬಲ್ ನೇಮಕಾತಿಗೆ ಮಾತ್ರ ಇದು ಅನ್ವಯವಾಗಲಿದೆ.ಸಿವಿಲ್, ಸಿಎಆರ್ , ಡಿಎಆರ್, ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಲಾಗಿದೆ. 2022-23ನೇ ಸಾಲಿನ ಕಾನ್‌ಸ್ಟೇಬಲ್ ನೇಮಕಾತಿಗೆ ಮಾತ್ರ ಇದು ಅನ್ವಯವಾಗಲಿದೆ ರಾಜ್ಯ ಪೊಲೀಸ್ ಕಾನ್ ಸ್ಟೇಬಲ್ ಗರಿಷ್ಠ ನೇಮಕ ವಯೋಮಿತಿ ಈ ಹಿಂದೆ ಒಂದು ಬಾರಿ ಹೆಚ್ಚಳ ಮಾಡಲಾಗಿತ್ತು. ಇದೀಗ 2 ವರ್ಷಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಡವಳಿ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ ಸ್ಟೇಬಲ್ (ಸಿಎಆರ್ ಮತ್ತು ಡಿಎಆರ್ ) ಹುದ್ದೆಗಳಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.2022-23ನೇ ಸಾಲಿನಲ್ಲಿ ಒಂದು ಬಾರಿ…
Author: Nammur Express Admin
ತುಂಗಾ ಕಾಲುವೆಯಲ್ಲಿ ಕಾರಲ್ಲಿತ್ತು ಶವಕೊಲೆಯೋ…ಆತ್ಮಹತ್ಯೆಯೋ… ಅನುಮಾನ NAMMUR EXPRESS NEWSದಾವಣಗೆರೆ: ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಪತ್ತೆಯಾಗಿದೆ.ದಾವಣಗೆರೆಯ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಮೊದಲಿಗೆ ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು,. ಇದನ್ನು ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಕಾರು ಸಹ ತುಂಗ ಕಾಲುವೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕಾರಿನಲ್ಲಿ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಮೃತದೇಹ ಸಿಕ್ಕಿದೆ.ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ರೇಣುಕಾಚಾರ್ಯರ ಸಹೋದರನ ಮಗ ಚಂದ್ರುಗೌರಿಗದ್ದೆ ಆಶ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಚಂದ್ರು ಮತ್ತೆ ಕಂಡುಬಂದಿಲ್ಲ. ಹೀಗಾಗಿ ಈ ಸಂಬಂಧ ಹೊನ್ನಾಳಿ ಪೊಲೀಸರಿಗೆ ದೂರು ನೀಡಲಾಗಿತ್ತು. ಚಂದ್ರಶೇಖರ್ ಕಳೆದ ಭಾನುವಾರ ಗೌರಿಗದ್ದೆಗೆ ತಮ್ಮ ಕ್ರೇಟಾ ಕಾರಿನಲ್ಲಿ ಹೋಗಿದ್ದಾರೆ.ಅವಧೂತ ವಿನಯ್ ಗುರೂಜಿಯವರ ಆಶೀರ್ವಾದ ಪಡೆದು ಬಂದಿದ್ದಾರೆ. ಇಲ್ಲಿಂದ ಹೊನ್ನಾಳಿಗೆ ಹೊರಟವರು ನಾಪತ್ತೆಯಾಗಿದ್ದರು. ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ ರವರ ಪುತ್ರನಾಗಿದ್ದು, ರೇಣುಕಾಚಾರ್ಯರಿಗೆ ಅಚ್ಚುಮೆಚ್ಚಿನವನಾಗಿದ್ದ.ಆತನನ್ನು…
ಮಲೆನಾಡ ರೈತನ ಬದುಕು ದೇವರೇ ಕಾಪಾಡಲಿಎಲೆ ಚುಕ್ಕಿಗೆ ಉದುರುತ್ತಿರುವ ಅಡಿಕೆಮಳೆಯ ಅಬ್ಬರ: ಅಡಿಕೆ ಕೊಯ್ಲು ಆತಂಕ ನಮ್ಮೂರ್ ಎಕ್ಸ್ ಪ್ರೆಸ್ತೀರ್ಥಹಳ್ಳಿ: ಒಂದು ಕಡೆ ಮಳೆ.. ಇನ್ನೊಂದು ಕಡೆ ಕೊಳೆಮಲೆನಾಡ ರೈತನ ಬದುಕು ದೇವರೇ ಕಾಪಾಡಲಿ.ಹೌದು. ಕಳೆದ ಕೆಲವು ದಿನಗಳಿಂದ ಮತ್ತೆ ಮಳೆ ಶುರುವಾಗಿದೆ. ಬುಧವಾರ ತೀರ್ಥಹಳ್ಳಿ ತಾಲೂಕು ಸೇರಿ ಹಲವೆಡೆ ಮಳೆಯಾಗಿದೆ. ಒಂದು ಕಡೆ ಎಲೆ ಚುಕ್ಕಿಗೆ ಉದುರುತ್ತಿರುವ ಅಡಿಕೆಯಿಂದ ರೈತ ಕಂಗಾಲಾಗಿದ್ದಾನೆಮಳೆಯ ಅಬ್ಬರ: ಅಡಿಕೆ ಕೊಯ್ಲು ಆತಂಕ: ಮಳೆಯ ಕಾರಣ ಅಡಿಕೆ ಉದುರುತ್ತಿದೆ.. ಅಡಿಕೆ ಕೊಯ್ಲು ಮಾಡಲು ತೊಂದರೆಯಾಗಿದೆ.
NAMMUR EXPRESS NEWSನವದೆಹಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 6 ರೂ.ನಷ್ಟಿದೆ. ಶೀಘ್ರದಲ್ಲೇ ಡೀಸೆಲ್ ಮೇಲಿನ ಅಂಡರ್ -ರಿಕವರಿ 10 ರೂ. ಕಡಿಮೆಯಾಗುವ ನಿರೀಕ್ಷೆ ಇದೆ. ಮೇ 22ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ಮತ್ತು 6 ರೂ. ಕಡಿಮೆ ಮಾಡಿತ್ತು. ಅಲ್ಲಿಂದೀಚೆಗೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗೂ ಮುನ್ನ ಪೆಟ್ರೋಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಕೆ.ಆರ್.ಪುರ ಠಾಣೆಯಲ್ಲಿ ದೂರುನಂದೀಶ್ ಸಾವಿಗೆ ಕಾರಣ ಎಂಬ ಆರೋಪ NAMMUR EXPRESS NEWSಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ 7 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜ್, ಪೊಲೀಸ್ ಕಮಿಷನ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಭೈರತಿ ಬಸವರಾಜ್ ಸಂಬಂಧಿಗಳಾದ ಚಂದ್ರು ಹಾಗೂ ಗಣೇಶ್‌ರವರು ನಂದೀಶ್ ಸಾವಿಗೆ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಿದ್ದಾರೆ. ಭೈರತಿ ಬಸವರಾಜ್ ರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಘಾತಕ್ಕೆ ಕಾರಣ. ಜೊತೆಗೆ ಪೋಸ್ಟಿಂಗ್ ಗಾಗಿ ಭೈರತಿ ಬಸವರಾಜ್ ರಿಗೆ 50 ಲಕ್ಷ ರೂ. ಹಾಗೂ ಗೃಹ ಸಚಿವರಿಗೆ 20 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಕ್ಕೆ ಪೂಜೆ ಇಲ್ಲ, ಧರ್ಮಸ್ಥಳದಲ್ಲಿ ಏನು..?ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಏನೇನಿದೆ? NAMMUR EXPRESS NEWSಬೆಂಗಳೂರು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ವಿವಿಧ ಸೇವೆ ಅಲಭ್ಯವಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕೆಲ ದೇವಸ್ಥಾನಗಳು ಇಡೀ ದಿನ ಬಂದ್ ಆಗಲಿವೆ.ದೀಪಾವಳಿ ರಜೆ ಹಿನ್ನೆಲೆ ಧಾರ್ಮಿಕ ಪ್ರವಾಸಕ್ಕೆ, ಹಬ್ಬದ ವಿಶೇಷ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೆಚ್ಚಿನ ಮಂದಿ ತೆರಳುವ ಸಾಧ್ಯತೆಗಳಿರುವುದರಿಂದ ಗ್ರಹಣದಿಂದಾಗಿ ಸೇವೆಗಳ ವ್ಯತ್ಯಾಯದ ಬಗ್ಗೆ ದೇವಸ್ಥಾನಗಳ ಆಡಳಿತ ಮಂಡಳಿಗಳು ವೆಬ್ ಸೈಟ್ ಪ್ರಕಟಣೆ ಮೂಲಕ ಮಾಹಿತಿ ನೀಡಿವೆ.ಧರ್ಮಸ್ಥಳ ದರ್ಶನ ಬಂದ್ : ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 2:30 ರಿಂದ ರಾತ್ರಿ 7.30 ವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನ ಸಂರ್ಪಣೆ ಛತ್ರದಲ್ಲಿ ಮಧ್ಯಾಹ್ನ 2:30 ರವರೆಗೆ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಪೂರ್ಣ ಬಂದ್ ಇರಲಿದೆ . ಯಾವುದೇ…
ರಾಜ್ಯದಲ್ಲಿ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ..! ಮೈಸೂರಲ್ಲಿ ಜಿಟಿಡಿ ನೇತೃತ್ವದಲ್ಲಿ ಚುನಾವಣೆ2023ಕ್ಕೆ ಮಿಷನ್ 123 ಪ್ಲಾನ್ ಮಾಡಿದ ದೇವೇಗೌಡನಿಖಿಲ್ ಕುಮಾರ್ ಸ್ವಾಮಿ, ಹರೀಶ್ ಗೌಡ ಅವರಿಗೂ ಟಿಕೆಟ್! NAMMUR EXPRESS NEWSಮೈಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ತನ್ನ ಮೊದಲ ಪಟ್ಟಿ ಘೋಷಣೆ ಮಾಡಿದೆ.ಬಿಜೆಪಿ, ಕಾಂಗ್ರೆಸ್ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ನಡುವೆ ಜೆಡಿಎಸ್ ನಾಯಕರು ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮತ್ತು ಜಿ. ಟಿ. ದೇವೇಗೌಡರು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.2023ಕ್ಕೆ ಮಿಷನ್ 123: 2023ಕ್ಕೆ…
ಜಾಗತಿಕ ಆರ್ಥಿಕ ಹಿನ್ನೆಡೆ ಎಫೆಕ್ಟ್ಶುರುವಾಗಿದೆಯಾ ಉದ್ಯೋಗ ಕಸಿತ ಪರ್ವ? NAMMUR EXPRESS NEWSಬೆಂಗಳೂರು : ಜಾಗತಿಕ ಆರ್ಥಿಕ ಹಿನ್ನೆಡೆಯಿಂದ ಅನೇಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಖ್ಯಾತ ಟೆಕ್ ಕಂಪನಿ ಮೈಕ್ರೋಸಾಫ್ಟ್ ಒಂದು ಸಾವಿರ ಮಂದಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಯಕ್ಸಿಯೋಸ್ ತಾಣ ವರದಿ ಮಾಡಿದೆ.ಎಕ್ಸ್ ಬಾಕ್ಸ್, ಎಡ್ಜ್ ಸೇರಿದಂತೆ ಅನೇಕ ತಂಡಗಳಿಂದ, ಜಗತ್ತಿನ ವಿವಿದೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡ 1 ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ಹಿಂದಿನ ವರದಿಗಳ ಪ್ರಕಾರ, 2,21,000 ಉದ್ಯೋಗಿಗಳು ಮೈಕ್ರೋಸಾಫ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎನ್ನಲಾಗಿತ್ತು. ಅಮೇರಿಕಾದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ. ಇದೀಗ ಮೈಕ್ರೋಸಾಫ್ಟ್ ಸಹ ಉಳಿದ ಕಂಪನಿಗಳ ಸಾಲಿಗೆ ಸೇರಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮೆಟಾ ಪ್ಲಾಟ್ ಫಾರ್ಮ್ ಇಂಕ್, ಟ್ವಿಟರ್ ಇಂಕ್, ಸ್ನ್ಯಾಪ್ ಇಂಕ್…
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶದೇಸೀಯ ಗೋವು ತಳಿಗಳನ್ನು ಸಂರಕ್ಷಣೆಗೆ ಚಿತ್ತ NAMMUR EXPRESS NEWSಬೆಂಗಳೂರು: ದೀಪಾವಳಿಯ ಬಲಿ ಪಾಡ್ಯಮಿ ಹಬ್ಬದ ದಿನದಂದು ದೇವಸ್ಥಾನಗಳಲ್ಲಿ ಹೊಸ ಸಂಪ್ರದಾಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.ಮುಜರಾಯಿ, ಹಜ್ ಮತ್ತು ವಕ್ಸ್ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಹಿಂದಿನ ಕಾಲದಿಂದಲೂ ಹಿಂದೂ ಧರ್ಮದವರು ಗೋಮಾತೆಯನ್ನು ಕಾಲಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ದೀಪಾವಳಿಯ ಬಲಿಪಾಡ್ಯಮಿಯಂದು ಗೋವುಗಳಿಗೆ ವಿಶೇಷ ಅಲಂಕಾರದ ಮೂಲಕ ಅಕ್ಕಿ, ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ ಪೂಜಿಸಲಾಗುತ್ತದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು ಬಲಿಪಾಡ್ಯಮಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಪಟ್ಟಣ ಮತ್ತು ಮಹಾನಗರಗಳಲ್ಲಿ ಈ ಪದ್ಧತಿ ಮರೆತು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸನಾತನ ಧರ್ಮದ ಗೋಮಾತೆಯನ್ನು ದೇವತೆ ಎಂದು ತಿಳಿದು ಪೂಜಿಸುವ ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಕಳೆದ ವರ್ಷದಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ…
NAMMUR EXPRESS NEWSಮುಂಬಯಿ: ಜಮೀನಿಗಾಗಿ ಅಣ್ಣ ತಮ್ಮಂದಿರೇ ಜಗಳವಾಡಿ ಕೊಳ್ಳುವ ಈ ಕಾಲದಲ್ಲಿ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಮಂಗಗಳ ಹೆಸರಿಗೇ 32 ಎಕ್ರೆ ಜಮೀನು ಬಿಟ್ಟುಕೊಡಲಾಗಿದೆ! ಒಸ್ಮಾನಾಬಾದ್ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ ಈ ರೀತಿ ಮಂಗಗಳ ಹೆಸರಿಗೆ ಜಮೀನಿದೆ. ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷವಾದ ಮರ್ಯಾದೆ ಇದೆಯಂತೆ. ಪೂರ್ವಜರ ದಿಂದಲೂ ಮಂಗಗಳು ಮನೆ ಬಾಗಿಲಿಗೆ ಬಂದರೆ ಅವುಗಳಿಗೆ ಊಟ ಕೊಡುವ ಪದ್ಧತಿಯಿದೆ. ಹಾಗೆಯೇ ಊರಲ್ಲಿ ಯಾರದ್ದೇ ಮದುವೆಯಾದರೂ ಅಲ್ಲಿಮೊದಲನೇ ಉಡುಗೊರೆ ಯನ್ನು ಮಂಗಕ್ಕೆ ಕೊಡಲಾಗುತ್ತದೆಯಂತೆ.ಈ ಊರಿನಲ್ಲಿರುವ 32 ಎಕ್ರೆ ಜಮೀನು ಊರಿನ ಮಂಗಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಅದನ್ನು ಯಾವ ಕಾಲದಲ್ಲಿ ಯಾರು ನೋಂದಣಿ ಮಾಡಿಸಿದರು ಎನ್ನುವ ಬಗ್ಗೆ ನಮಗೂ ಮಾಹಿತಿಯಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯತ್ ಅಧ್ಯಕ್ಷರು. ಊರಿನಲ್ಲಿ ಒಟ್ಟು ಸರಿ ಸುಮಾರು 100 ಮಂಗಗಳು ಇವೆ. ಸದ್ಯ ಮಂಗಗಳ ಹೆಸರಿನಲ್ಲಿರುವ ಜಾಗವನ್ನು ಸರಕಾರ ಪ್ಲಾಂಟೇಶನ್ ಮಾಡಿದೆ.