Author: Nammur Express Admin

ಭೋಜನ ಪ್ರಸಾದ ವ್ಯವಸ್ಥೆ ಇಲ್ಲ NAMMUR EXPRESS NEWSಸುಬ್ರಹ್ಮಣ್ಯ: ಅಕ್ಟೋಬರ್ 25ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೂರ್ಯಗ್ರಹಣ ಇರುವುದರಿಂದ ಆ ದಿನದಂದು ಯಾವುದೇ ಸೇವೆಗಳು, ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ.ಅಕ್ಟೋಬರ್ 26ರಂದು ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆ 9ರಿಂದ ಭಕ್ತರಿಗೆ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.ಇನ್ನು ಗ್ರಹಣದ ಹಿನ್ನೆಲೆಯಲ್ಲಿ ಅ.26ರಂದು ದೇವರ ನಿತ್ಯ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಭಕ್ತರಿಗೆ ಬೆಳಗ್ಗೆ 9 ಗಂಟೆಯಿಂದ ದೇವರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ.

Read More

ಕರುನಾಡಲ್ಲಿ ಮಂಕು ಕವಿದ ವಾತಾವರಣಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ರಶ್ NAMMUR EXPRESS NEWSಬೆಂಗಳೂರು: ಹವಾಮಾನದಲ್ಲಿ ಬದಲಾವಣೆಗಳು ಉಂಟಾಗಿದ್ದು, ಮುಂದಿನ ಎರಡು ಮೂರು ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸುಳಿಗಾಳಿ ಚಂಡಮಾರುತವಾಗಲು ಸಾಕಷ್ಟು ಬದಲಾವಣೆಗಳು ಆಗಬೇಕಿದೆ. ಸುಳಿಗಾಳಿಯು ಹೆಚ್ಚಿನ ವೇಗ ಪಡೆದುಕೊಂಡು ಬಲಗೊಳ್ಳಬೇಕು, ನಂತರ ಅದು ವಾಯುಭಾರ ಕುಸಿತವಾಗಿ ರೂಪಗೊಳ್ಳುತ್ತದೆ. ಆ ವಾಯುಭಾರ ಕುಸಿತದಿಂದ ಗಾಳಿಯ ಒತ್ತಡ ಒಂದೆಡೆ ಅತ್ಯಧಿಕ ಪ್ರಮಾಣದಲ್ಲಿ ಉಲ್ಬಣಗೊಳ್ಳಬೇಕು. ಇಷ್ಟು ಹಂತಗಳನ್ನು ದಾಟಿ ಮೇಲೆ ಈ ಗಾಳಿ ಚಂಡಮಾರುತವಾಗಿ ಬದಲಾಗುತ್ತದೆ. ಇಷ್ಟು ಹಂತ ದಾಟಲು ಸುಮಾರು ಎರಡರಿಂದ ಮೂರು ದಿನ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.ಚಂಡ ಮಾರುತ ಕಾರಣ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಶಿವಮೊಗ್ಗಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.ಇನ್ನು ಮಳೆ, ಗಾಳಿ ಕಾರಣ ಅನಾರೋಗ್ಯ ಹೆಚ್ಚುತ್ತಿದೆ. ಆಸ್ಪತ್ರೆಗಳ ಮುಂದೆ ಜನ ಹೆಚ್ಚು ಕಾಣುತ್ತಿದ್ದಾರೆ.

Read More

ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ಬೆಂಗಳೂರಲ್ಲಿ ಈ ವರ್ಷ ಮಳೆ ಹೊಸ ದಾಖಲೆತೀರ್ಥಹಳ್ಳಿಯಲ್ಲಿ ಮಹಿಳೆಗೆ ಸಿಡಿಲು ಬಡಿದು ಗಾಯ NAMMUR EXPRESS NEWSಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ಅ.22ರವರೆಗೆ ಹಳದಿ ಅಲರ್ಟ್​ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಬೆಂಗಳೂರಿನಲ್ಲೂ ಇನ್ನೆರಡು ದಿನ ಭಾರೀ ಮಳೆ ಸುರಿಯಲಿದೆ.ಅ.20ರಿಂದ 22ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ ಪ್ರಮಾಣದ ಮಳೆಯಾಗಿದ್ದು, ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.ಬೆಂಗಳೂರಿನಲ್ಲಿ ಈ ವರ್ಷ 1706 ಮಿಮೀ ಮಳೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. 2017ರಲ್ಲಿ ಬೆಂಗಳೂರಿನಲ್ಲಿ 1696 ಮಿಮೀ ಮಳೆಯಾಗಿತ್ತು. ಆ ದಾಖಲೆಯನ್ನು ಈ ವರ್ಷದ ಮಳೆ ಮುರಿದಿದೆ. ಇಂದಿನಿಂದ 4 ದಿನಗಳ…

Read More

ಶಿಕ್ಷಕರಿಂದ ಲಂಚ ಪಡೆಯುವಾಗ ದಾಳಿಬೇರೆ ಶಾಲೆಗೆ ನಿಯೋಜನೆ ಮಾಡಲು ಲಂಚ NAMMUR EXPRESS NEWSಕಡೂರು: ಶಾಲೆಯೊಂದಕ್ಕೆ ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ ಲಂಚ ಪಡೆಯುವಾಗ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್ ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮಂಗಳವಾರ ಮಧ್ಯಾಹ್ನ ಸಹ ಶಿಕ್ಷಕ ಎನ್.ಎಸ್ ರಾಜಪ್ಪ ಅವರಿಂದ 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕ್ಷೇತ್ರ ಶಿಕ್ಷಣಾಕಾರಿ ಕೆ.ಎನ್ ಜಯಣ್ಣ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರುಗಳಾದ ಸಚ್ಚಿನ್ ಮತ್ತು ಬಿ. ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ಕಡೂರು ತಾಲ್ಲೂಕಿನ ಜಿ.ತಿಮ್ಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದ ರಾಜಪ್ಪ ಅವರನ್ನು ಗರ್ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ದು, ಮಂಗಳವಾರ ಈ ಸಂಬಂಧ ಶಿಕ್ಷಕ ರಾಜಪ್ಪ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿ. ತಿಮ್ಮಾಪುರ ಗೇಟ್‌ನಲ್ಲಿ 15 ಸಾವಿರ ಲಂಚ ನೀಡುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನು ಲೋಕಾಯುಕ್ತ ಈಗ ಎಲ್ಲಾ ಕಡೆ…

Read More

NAMMUR EXPRESS NEWSಬೆಂಗಳೂರು: ವಿಶ್ವದ ಅತ್ಯಂತ ಮೌಲ್ಯಯುತವಾದ ಸ್ಟಾರ್ಟ್‌ಅಪ್ ಕಂಪನಿ ಬೈಜೂಸ್ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.ಮುಂದಿನ 6 ತಿಂಗಳಲ್ಲಿ 2500 ನೌಕರರನ್ನು ವಜಾ ಮಾಡಲಿದೆ ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾಗೋಕುಲ್‌ನಾಥ್ ಹೇಳಿದ್ದಾರೆ. ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬೈಜೂಸ್ ಶೇ.5ರಷ್ಟು ನೌಕರರು ಎಂದರೆ 2500 ಜನರನ್ನು ವಜಾ ಮಾಡಲು ನಿರ್ಧರಿಸಿದೆ.ಕಂಪನಿಯನ್ನು ಲಾಭದಾಯಕ ಮಾಡಿಕೊಳ್ಳಲು 10 ಸಾವಿರ ಶಿಕ್ಷಕಕರನ್ನು ನೇಮಿಸಲಾಗುವುದು. ಈ ಪ್ರಕ್ರಿಯೆ ಮುಂದಿನ 6 ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೂನ್‌ನಲ್ಲಿಯೂ ನೂರಾರು ಉದ್ಯೋಗಿಗಳನ್ನು ಬೈಜೂಸ್ ವಜಾಗೊಳಿಸಿತ್ತು.ಕೋವಿಡ್ ಬಳಿಕ ಭಾರೀ ನಷ್ಟವನ್ನು ಬೈಜೂಸ್ ಅನುಭವಿಸುತ್ತಿದೆ. 2020ರ ಹಣಕಾಸು ವರ್ಷದಲ್ಲಿ 262 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2021ರ ಆರ್ಥಿಕ ವರ್ಷದಲ್ಲಿ 4,588 ಕೋಟಿ ನಷ್ಟ ಅನುಭವಿಸಿದೆ.ಒಟ್ಟು 22 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಬೈಜೂಸ್ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟಪ್ ಕಂಪನಿ ಎಂದು ಹೆಸರು ಪಡೆದಿದೆ.

Read More

ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ NAMMUR EXPRESS NEWSಶಿವಮೊಗ್ಗ: ಸದ್ಯಕ್ಕೆ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ವಯೋಮಿತಿ ಹೆಚ್ಚಳ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸ್ ಮತ್ತು ಮಿಲಿಟರಿ ಬೇರೆ ಇಲಾಖೆ ಥರ ಅಲ್ಲ. ದೈಹಿಕವಾಗಿ ಪ್ರಬಲವಾಗಿರಬೇಕು. ಸಣ್ಣ ವಯಸ್ಸಿನಲ್ಲಿ ನೇಮಕ ಮಾಡಿಕೊಂಡರೆ ಅವರಿಂದ ತುಂಬಾ ಉಪಯೋಗ ಇದೆ. ಈ ದೃಷ್ಟಿಯಿಂದ ಎರಡು ವರ್ಷ ಹೆಚ್ಚು ಮಾಡಬೇಕು ಎಂಬ ಚರ್ಚೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ವಯೋಮಿತಿ ಹೆಚ್ಚಳದ ಬಗ್ಗೆ ಹೇಳಲ್ಲ ಎಂದರು.ಪಿಎಸ್‌ಐ ಪ್ರಕರಣ ಕೋರ್ಟ್‌ನಲ್ಲಿದೆ. ಇದೇ ನೋಟಿಫಿಕೇಶನ್ ಒಳಗೆ ಆದರೆ, ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ. ಹಾಗಾಗದೇ ರದ್ದಾಗಿ, ಹೊಸದಾಗಿ ಪರೀಕ್ಷೆ ಆಗಬೇಕೆಂದರೆ ಆಗ ವಯೋಮಿತಿ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು.ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ: ಬೇರೆ ಬೇರೆ ದೃಷ್ಟಿಯಿಂದ ಭೂತಾನ್ ನಮ್ಮ ದೇಶಕ್ಕೆ ಅಗತ್ಯವಿದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳಾಗಿವೆ.…

Read More

ಅ.21ರ ವರೆಗೆ ಆನ್ ಲೈನ್ ನಲ್ಲಿ ದಾಖಲಿಸಲು ಅವಕಾಶ NAMMUR EXPRESS NEWSಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅ.21ರ ವರೆಗೆ ಆನ್‌ಲೈನ್‌ನಲ್ಲಿ ಹೆಸರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದ್ದು, 2023ರ ಮಾರ್ಚ್/ಏಪ್ರಿಲ್‌ನಲ್ಲಿ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ ನಡೆಯಲಿದೆ.ಅಭ್ಯರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಪಡೆಯಬೇಕು.ರಾಜ್ಯದ ಎಲ್ಲ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮಶಾಲೆಯಲ್ಲಿ ಮಾರ್ಚ್-2023ರ ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್ ಮೂಲಕ ಅ.21ರೊಳಗೆ ಅಪ್‌ಲೋಡ್ ಮಾಡಬಹುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್. ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.

Read More

ಅದು ಮಾನವೀಯ ನೆಲೆಯಲ್ಲಿ ನೀಡುವ ವಿನಾಯ್ತಿ NAMMUR EXPRESS NEWSನವದೆಹಲಿ: ‘ಅನುಕಂಪದ ಆಧಾರದಲ್ಲಿ ನೀಡುವ ಸರ್ಕಾರಿ ನೌಕರಿಯು ಹಕ್ಕಲ್ಲ’ ಎಂಬ ಮಹತ್ವದ ತೀರ್ವನ್ನು ಸುಪ್ರೀಂಕೋರ್ಟ್‌ ನೀಡಿದೆ. ‘ಅನುಕಂಪದ ನೌಕರಿ ಒಂದು ರೀತಿಯ ವಿನಾಯ್ತಿಯೇ ವಿನಃ ಅದು ಹಕ್ಕು ಅಲ್ಲ, ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ, ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅದನ್ನು ನೀಡಲಾಗುತ್ತದೆ’ ಎಂದು ಅದು ಅಭಿಪ್ರಾಯಪಟ್ಟಿದೆ.ಕೇರಳ ಹೈಕೋರ್ಟ್‌, ಈ ಹಿಂದೆ ಮಹಿಳೆ ಯೊಬ್ಬರನ್ನು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ, ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.ಗೆ ಸೂಚಿಸಿತ್ತು.

Read More

ಅಂದೇ ಅಭ್ಯರ್ಥಿಗಳ ಘೋಷಣೆ: ಮಾಜಿ ಸಿಎಂ ಕುಮಾರಸ್ವಾಮಿಮೊದಲ ಹಂತದಲ್ಲಿ 120 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಬೆಂಗಳೂರಿನ ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1ರಂದು ಪಂಚರತ್ನ ರಥಯಾತ್ರೆ ಆರಂಭವಾಗಲಿದ್ದು, ಈ ವೇಳೆಯೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಗೊಂದಲವಿರುವ ಕ್ಷೇತ್ರಗಳ ಮುಖಂಡರನ್ನು ಕರೆದು ಸಭೆ ಮಾಡಿದ್ದಾರೆ. ಹೆಚ್.ಡಿ.ಕೋಟೆ, ಮಧುಗಿರಿ, ಶಿರಾ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಮಾಡಲಾಗಿದೆ. ಆಕಾಂಕ್ಷಿಗಳ ಪರ ಲಾಬಿಗೆ ನೂರಾರು ಬೆಂಬಲಿಗರು ಬಂದಿದ್ದಾರೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.ರಾಹುಲ್, ಸೋನಿಯಾ ಬಂದ್ರೂ ಪ್ರಯೋಜನ ಇಲ್ಲ!: ಮೈಸೂರು ಭಾಗದಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ರ್‍ಯಾಲಿ ಮಾಡಿದ್ದಾರೆ. ಅವರ ಕುಟುಂಬದ ಎಲ್ಲ ಸದಸ್ಯರು ಬಂದರೂ ಹಿನ್ನಡೆ ಆಗಲ್ಲ. ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಪಾದಯಾತ್ರೆಯಿಂದ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಭಾರತ್…

Read More

ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಣಾಹಣಿ NAMMUR EXPRESS NEWSಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.ಖರ್ಗೆ ಅವರು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮ ಪತ್ರ ಕಳುಹಿಸಿದ್ದಾರೆ.ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ‘ಒಬ್ಬ ನಾಯಕನಿಗೆ ಒಂದು ಹುದ್ದೆ’ ಎಂಬ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಖರ್ಗೆ ಅವರು ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಸ್ಪರ್ಧಿಸಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಣಾಹಣಿ:ನವದೆಹಲಿ: ಕರ್ನಾಟಕದ ‘ಸೋಲಿಲ್ಲದ ಸರದಾರ’ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದರೆ, ಎಸ್ ನಿಜಲಿಂಗಪ್ಪ (1968-69) ನಂತರ…

Read More