ಕಳಸ ತಾಲೂಕಿನಲ್ಲಿ ಹೆಚ್ಚಿದ ಗೋವುಗಳ ಕಳ್ಳತನ! * ಸತ್ತ ಬಿಡಾಡಿ ದನಗಳನ್ನು ರಸ್ತೆ ಬದಿಯಲ್ಲಿ ಎಸೆದ ನೀಚರು * ಕಳಸದ ಸಂಸೆ ಭಾಗದಲ್ಲಿ ಅತಿ ಹೆಚ್ಚು ಗೋವು ಸಾಗಾಟ * ಭಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ * ಗೋ ಕಳ್ಳ ಸಾಗಾಟ ವಾಹನ ಪೋಲೀಸರ ವಶಕ್ಕೆ NAMMUR EXPRESS NEWS ಕಳಸ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನ ಕೆರೆ ಗ್ರಾಮ ಕಚ್ಚುಗಾನೆ ಬಳಿ ಸತ್ತ ಗೋವುಗಳನ್ನು ರಾತ್ರೋ ರಾತ್ರಿ ತಂದು ರಸ್ತೆ ಬದಿಯಲ್ಲಿ ಎಸೆದ ಘಟನೆ ನಡೆದಿದೆ. ಗೋವುಗಳ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.ಘಟನೆ ಹಿಂದಿನ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಬಜರಂಗದಳ ಕಳಸ ವತಿಯಿಂದ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು ಹಾಗೂ ಮೃತ ಗೋವುಗಳ ಅಂತ್ಯಸಂಸ್ಕಾರ ಮಾಡಲಾಯಿತು. ಸಂಸೆ ಭಾಗದಲ್ಲಿ ಎಗ್ಗಿಲ್ಲದೇ ನಡೆಯತ್ತಿದೆ ಗೋಕಳ್ಳ ಸಾಗಾಟ!? ಕಳಸ ತಾಲೂಕಿನ ಸಂಸೆ ಭಾಗದಿಂದ ಹೆಚ್ಚಾಗಿ ಗೋಕಳ್ಳ ಸಾಗಾಟ ನಡೆಯುತ್ತಿದ್ದು ಈ ಕೃತ್ಯಕ್ಕೆ ಕಡಿವಾಣ ಹಾಕಬೇಕಿದೆ. ಎಳನೀರು ಮಾರ್ಗವಾಗಿ ದಿಡುಪೆಯಿಂದ…
Author: Nammur Express Admin
ಈ ದಿನದ ರಾಶಿ ಭವಿಷ್ಯ ಹೇಗಿದೆ? – ನವರಾತ್ರಿ ಎರಡನೇ ದಿನ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯ ಜನರು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ನಿಮ್ಮ ಮನಸ್ಸು ಆರ್ಥಿಕವಾಗಿ ತೊಂದರೆಗೊಳಗಾಗುತ್ತದೆ. ಆದರೆ, ತಾಳ್ಮೆಯಿಂದಿರಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಅನಗತ್ಯ ಕೋಪವನ್ನು ತಪ್ಪಿಸಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಗೌರವ ಸಿಗಲಿದೆ. ತಂದೆಯ ಆರೋಗ್ಯದ ಮೇಲೆ ನಿಗಾ ಇರಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇಂದು ಶುಭವಾಗಲಿದೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಕುಟುಂಬದ ಬೆಂಬಲ ಸಿಗುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ವ್ಯಾಪಾರ ವಿಸ್ತರಿಸಬಹುದು. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದ ಹಿರಿಯರಿಂದ ಹಣ ಪಡೆಯಬಹುದು. ಮಕ್ಕಳ ಕಡೆಯಿಂದ…
ಕರಾವಳಿಯಲ್ಲಿ ಕಳೆಗಟ್ಟಿದ ದಸರಾ ರಂಗು! – ಉಡುಪಿ-ಉಚ್ಚಿಲ ದಸರಾ ಮಹೋತ್ಸವಕ್ಕೆ ಚಾಲನೆ – ಆಕರ್ಷಕವಾಗಿ ಅಲಂಕಾರಗೊಂಡ ನವದುರ್ಗೆಯರು! – ಉಡುಪಿ, ಕುದ್ರೋಳಿ, ಉಚ್ಚಿಲ ಸೇರಿ ಹಲವೆಡೆ ದಸರಾ NAMMUR EXPRESS NEWS ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ-ಉಚ್ಚಿಲ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು. ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರು ಪ್ರತಿಷ್ಠಾಪನಾ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ…
ಕರುನಾಡ ಪ್ರತಿ ಜಿಲ್ಲೆಯಲ್ಲಿ ದಸರಾ ಸಂಭ್ರಮ ಬಲು ಜೋರು!! * ಮಡಿಕೇರಿ ವಿಶಿಷ್ಟ ದಸರಾಚರಣೆ: ಶೃಂಗೇರಿಯಲ್ಲಿ ನವರಾತ್ರಿ ಉತ್ಸವ * ಮಂಗಳೂರಿನ ಕುದ್ರೋಳಿ, ಉಡುಪಿ ನವದುರ್ಗೆಯರ ವೈಭವ * ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ: ದಾಂಡೇಲಿಯಲ್ಲಿ ರಾಮಲೀಲಾ ಉತ್ಸವದ ವೈಭವ NAMMUR EXPRESS NEWS ಮೈಸೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಮಡಿಕೇರಿಯಲ್ಲಿಯೂ ವಿಭಿನ್ನವಾದ ನವರಾತ್ರಿ ಸಂಭ್ರಮವಿರುತ್ತದೆ. ಈ ಹಿಂದೆ ಹಾಲೇರಿ ವಂಶಸ್ಥರ ಆಳ್ವಿಕೆಯ ಸಂದರ್ಭದಲ್ಲಿ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಉಂಟಾಗಿತ್ತು. ಹೀಗಾಗಿ ರಾಜರು ಶಕ್ತಿ ದೇವತೆ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದ್ದು, ಆ ಬಳಿಕ ಈ ಸಾವು ನೋವುಗಳು ದೂರವಾದವು. ಅಂದಿನಿಂದ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಿಸುತ್ತಿದ್ದರು. ಅಂದಿನ ಆ ದಸರಾವು ಮಡಿಕೇರಿಯಲ್ಲಿ ದಸರಾ ನಡೆಯಲು ಕಾರಣವಾಯಿತು. ಈ ದಸರಾದ ವೇಳೆಯ ಕಾರ್ನೀವಲ್ ಆಚರಣೆಯನ್ನು ಮರಿಯಮ್ಮ ಹಬ್ಬ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಶಿಷ್ಟ ರೀತಿಯ ಜನಪದ ನೃತ್ಯಗಳು…
ಕರಾವಳಿಯಲ್ಲಿ ಪರಿಷತ್ ಫೈಟ್! – ಅ.21ರಂದು ವಿಧಾನ ಪರಿಷತ್ ಸ್ಥಳಿಯಾಡಳಿತ ಉಪ ಚುನಾವಣೆ – 3 ಅಭ್ಯರ್ಥಿಗಳ ನಾಮಪತ್ರ ಸೇರಿ ಒಟ್ಟು 4 ಮಂದಿ ನಾಮಪತ್ರ NAMMUR EXPRESS NEWS ಉಡುಪಿ: ವಿಧಾನ ಪರಿಷತ್ ಸ್ಥಳಿಯಾಡಳಿತ ಕ್ಷೇತ್ರದ ಉಪ ಚುನಾವಣೆ ಅ.21ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಅ. 3ರಂದು ಬಿಜೆಪಿ, ಕಾಂಗ್ರೆಸ್ ಮತ್ತು ಎಸ್ಡಿಪಿಐ ಪಕ್ಷದ ಅಭ್ಯರ್ಥಿಗಳು ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಮೇಲೆ ಅವರ ಸ್ಥಾನ ತೆರವಾಗಿತ್ತು. ಇದೀಗ ಬಿಜೆಪಿಯಿಂದ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್ ನಿಂದ ರಾಜು ಪೂಜಾರಿ ಮತ್ತು ಎಸ್ಡಿಪಿಐ ನಿಂದ ಅನ್ವರ್ ಸಾದತ್ ಬಜತ್ತೂರು ನಾಮಪತ್ರ ಸಲ್ಲಿಸಿದರು. ಅ. 3ರಂದು ಮೂರು ಅಭ್ಯರ್ಥಿಗಳ ನಾಮಪತ್ರ ಸೇರಿ ಒಟ್ಟು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ. ಮಂಗಳೂರು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲನ್ ಮುಹಿಲನ್ ನಾಮಪತ್ರ ಸಲ್ಲಿಸಲಾಗಿದೆ. ಅಭ್ಯರ್ಥಿಗಳು ಯಾರು ಏನಂದರು?…
ಮಲೆನಾಡ ಸಮಸ್ಯೆ ವಿರುದ್ಧ ಹೋರಾಟ! – ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ – ಒತ್ತುವರಿ ತೆರವು,ಕಸ್ತೂರಿ ರಂಗನ್ ವರದಿ ಜಾರಿ,ಬಿಪಿಎಲ್ ಕಾರ್ಡ್ ಅನರ್ಹ ವಿರೋಧಿಸಿ ಮನವಿ – ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಆಗ್ರಹ NAMMUR EXPRESS NEWS ಚಿಕ್ಕಮಗಳೂರು/ಖಾಂಡ್ಯ: ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿಯಲ್ಲಿ ಕ್ಷೇತ್ರದಲ್ಲಿ ಆಗುತ್ತಿರುವ ಬಿಪಿಎಲ್ ಕಾರ್ಡ್ ಅನರ್ಹ,ಒತ್ತುವರಿ ತೆರವು,ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಖಾಂಡ್ಯ ಹೋಬಳಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರರಿಗೆ ಪಕ್ಷಾತೀತವಾಗಿ ಮನವಿ ಸಲ್ಲಿಸಲಾಯಿತು. ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿದೆ,ರೈತರ ಒತ್ತುವರಿ ಭೂಮಿಯನ್ನು ತೆರವು ಮಾಡಲಾಗುತ್ತಿದೆ ಇದರಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ,ಫಾರಂ ನಂ53,57,94(ಸಿ) ಸಂಬಂಧಿಸಿದ ಯಾವುದೇ ದಾಖಲೆಗಳು ಅರ್ಹರ ಕೈಸೇರಿಲ್ಲ,ಕಸ್ತೂರಿ ರಂಗನ್ ವರದಿ ಜಾರಿಗೆ ಆಕ್ಷೇಪಣೆ ಸಲ್ಲಿಸಿ ಪಕ್ಷಾತೀತವಾಗಿ ಖಾಂಡ್ಯ ಹೋಬಳಿ ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ಸುಜಾತರವರಿಗೆ ಮನವಿ ಸಲ್ಲಿಸಲಾಯಿತು. ಅಂಬೇಡ್ಕರ್ ಪತ್ಥಳಿ ನಿರ್ಮಾಣಕ್ಕೆ ಮನವಿ.. ಇದೇ ಸಂದರ್ಭದಲ್ಲಿ ದಲಿತ…
ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆಯಿಂದ ಅಡಿಕೆ ಯಂತ್ರಕ್ಕೆ ಸಹಾಯಧನ, ಯಂತ್ರದ ಮಾರಾಟ ಬೆಲೆಯಲ್ಲಿ ನೇರ ಕಡಿತ – ರೈತರಿಗೆ ಶ್ರಮ, ತೂಕ ಉಳಿಸುವ ಹೊಸ ಯಂತ್ರ – ಎಲ್ಲಾ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ NAMMUR EXPRESS NEWS ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ರೈತಾಪಿ ವರ್ಗಕ್ಕೆ ನೆಮ್ಮದಿಯಿಂದ ಕೃಷಿ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವವರ ಪರಿಸ್ಥಿತಿಯಂತೂ ಶೋಚನೀಯ. ವಿಶೇಷವಾಗಿ ಕಳೆದ ವರ್ಷದಿಂದ ಈಚೆಗೆ ಅಡಿಕೆ ಬೆಳೆಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಾರಂಭದಲ್ಲಿ ಅಡಿಕೆ ಕ್ಷೇತ್ರದಲ್ಲಿ ಬೆಳೆಗಾರರು ಅನುಭವಿಸುತ್ತಿದ್ದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಮನಗಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ದೃಷ್ಟಿಯಲ್ಲಿ, ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಮಾರುಕಟ್ಟೆಗೆ ಮೊಟ್ಟ ಮೊದಲು ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಕಂಡುಹಿಡಿದು-ಮಾರುಕಟ್ಟೆಗೆ ಪರಿಚಯಿಸಿದ ಸಂಸ್ಥೆ ನಮ್ಮ ವಿ ಟೆಕ್ ಇಂಜಿನಿಯರ್ಸ್. ಸಂಸ್ಥೆ, ಅಡಿಕೆ ಬೆಳೆಗಾರರಿಗೆ ಹೊಸ ಆಶಾಕಿರಣವಾಗಿ ಬೆಳೆಯಿತು. ಮೊದಲಿನಿಂದಲೂ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಾ ಬಂದಿರುವ, ಹಾಗು ಅನೇಕ ಸಮಸ್ಯೆಗಳ…
ಎಚ್.ಡಿ.ಕೆ ವಿರುದ್ಧ ಏಕವಚನ: ಜೆಡಿಎಸ್ ಹೋರಾಟ! – ತೀರ್ಥಹಳ್ಳಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ, ತಹಶೀಲ್ದಾರರಿಗೆ ಮನವಿ ಪತ್ರ – ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ತಹಶೀಲ್ದಾರ್ ಮುಖೇನ ಮನವಿ ಪತ್ರ NAMMUR EXPRESS NEWS ತೀರ್ಥಹಳ್ಳಿ: ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಅಧಿಕಾರಿ ವಿರುದ್ಧ ಜೆಡಿಎಸ್ ಹೋರಾಟ ಮಾಡಿದೆ. ತೀರ್ಥಹಳ್ಳಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಜೆಡಿಎಸ್ ಪಕ್ಷದ ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು. ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಅವರ ವಿರುದ್ಧ ಏಕವಚನದಿಂದ ಕೆಟ್ಟ ಪದಗಳನ್ನು ಬಳಸಿ ಪತ್ರ ಬರೆದು ಅಹಂಕಾರ, ದರ್ಪ ತೋರಿರುವ ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ್ ನಡೆ ಖಂಡನೀಯ. ಭೂ ವ್ಯವಹಾರವೊಂದರಲ್ಲಿ 20 ಕೋಟಿಗೆ ಬೇಡಿಕೆ…
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದಸರಾ ಸಂಭ್ರಮ! * ಶೃಂಗೇರಿ, ಹೊರನಾಡು, ಹರಿಹರಪುರ ಸೇರಿ ಜಿಲ್ಲೆಯ ಹಲವೆಡೆ ಅದ್ದೂರಿ ದಸರಾ * ಪ್ರತಿ ತಾಲೂಕಲ್ಲಿ ದಸರಾ,ನವರಾತ್ರಿ ಉತ್ಸವ * ಲಕ್ಷ ಲಕ್ಷ ಪ್ರವಾಸಿಗರ ಆಗಮನ: ದೇವಾಲಯದಲ್ಲಿ ಅಲಂಕಾರ NAMMUR EXPRESS NEWS ಚಿಕ್ಕಮಗಳೂರು: ಅಕ್ಟೋಬರ್ 3ರಿಂದ ಆರಂಭಗೊಳ್ಳಲಿರುವ ದಸರಾ ಉತ್ಸವಕ್ಕೆ ಕಾಫೀನಾಡು ಸಜ್ಜಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ನವರಾತ್ರಿ ಆಚರಣೆ ನಡೆಸಲಾಗುತ್ತಿದೆ. ಶೃಂಗೇರಿ,ಹೊರನಾಡು, ಬಾಳೆಹೊನ್ನೂರು,ಹರಿಹರಪುರ, ಶಕಟಪುರ,ಎನ್.ಆರ್,ಪುರ,ಚಿಕ್ಕಮಗಳೂರು,ಕಳಸ,ತರೀಕೆರೆ,ಕಡೂರಿನಲ್ಲಿ ವಿಜೃಂಭಣೆಯ ದಸರಾಕ್ಕೆ ಚಾಲನೆ ದೊರೆತಿದೆ. ಹತ್ತೂ ದಿನಗಳು ವಿಶೇಷ ಪೂಜೆ,ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ನಡೆಯಲಿದೆ ನವರಾತ್ರಿ ಉತ್ಸವ? * ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ವೈಭವದ ಶಾರದಾ ಶರನ್ನವರಾತ್ರಿ ಉತ್ಸವ ನಡೆಯಲಿದೆ. * ಹರಿಹರಪುರದಲ್ಲಿ ವಿಜೃಂಭಣೆಯ ದಸರಾ ಉತ್ಸವಕ್ಕೆ ಚಾಲನೆ ದೊರೆತಿದೆ. * ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅದ್ದೂರಿ ನವರಾತ್ರಿ ಆಚರಣೆಗೆ ಚಾಲನೆ ದೊರೆತಿದೆ. * ಶಕಟಪುರ ಮಠದಲ್ಲಿ ನವರಾತ್ರಿ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದೆ.…
ಮಳಲೂರು ಗ್ರಾಮದ ಮೇಕೇರಿಯಲ್ಲಿ ದಸರಾ ಮಹೋತ್ಸವ! – ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ – ಮೇಕೇರಿ-ಮಳಲೂರು ಗ್ರಾಮದಲ್ಲಿ ಹಬ್ಬದ ವಾತಾವರಣ – ಯಾವತ್ತು ಏನೇನು ಕಾರ್ಯಕ್ರಮ? ಇಲ್ಲಿದೆ ಮಾಹಿತಿ NAMMUR EXPRESS NEWS ತೀರ್ಥಹಳ್ಳಿ: ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮೇಕೇರಿ, ಮಳಲೂರು ಕ್ಷೇತ್ರ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಅ.03ರಂದು ಆಶ್ವಯುಜ ಶುದ್ಧ ದಶಮಿ ನಡೆಯುತ್ತಿದೆ. ಅ.12ರಂದು ಶನಿವಾರದ ಪರ್ಯಂತ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ 66 ಶರನ್ನವರಾತ್ರಿ ಮಹೋತ್ಸವ” ದ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ 8-00 ರಿಂದ ಶ್ರೀ ದುರ್ಗಾಸಪ್ತಶತೀ ಪಾರಾಯಣ, ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆಯನ್ನು ಶ್ರೀ ದೇವರ ಅನುಗ್ರಹದಿಂದ ನಡೆಸಲು ನಿಶ್ಚಯಿಸಲಾಗಿದೆ. ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಮೇಕೇರಿ-ಮಳಲೂರಲ್ಲಿ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮಗಳು ವೇ॥ ಬ್ರಂ॥ ಶ್ರೀ ಗಣೇಶ್ ಮೂರ್ತಿ ನಾವಡ, ಪುರೋಹಿತರು, ಶ್ರೀ ಗುರುನರಸಿಂಹ ಧಾರ್ಮಿಕ ಮಂದಿರ, ಕುಂಚೂರು ರಸ್ತೆ, ಹುಲ್ಲುಮಕ್ಕಿ, ಕೊಪ್ಪ…