ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ!! * ದಸರಾ ಮಹೋತ್ಸವದ ಕಾರ್ಯಕ್ರಮ, ಹಲವು ನಾಯಕರು ಭಾಗಿ! * ಮೈಸೂರು ದಸರಾ ಕಾರ್ಯಕ್ರಮದ ಸಂಪೂರ್ಣ ವಿವರ! NAMMUR EXPRESS NEWS ಮೈಸೂರು : ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ಸಾಹಿತಿ ಹಂಪ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ. ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಝ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಹೆಚ್.ಕೆ.ಪಾಟೀಲ್, ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ, ಭೈರತಿ ಸುರೇಶ್ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ. * ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟನೆ! ದಸರಾ ನಿಮಿತ್ತ ಅ. 3ರಂದು…
Author: Nammur Express Admin
ತೀರ್ಥಹಳ್ಳಿಯಲ್ಲಿ ಗಾಂಧಿ ಜಯಂತಿ ಸಂಭ್ರಮ! – ಶ್ರಮದಾನ, ಸ್ವಚ್ಛತೆ ಮೂಲಕ ಮಾದರಿಯಾಗಿ ಆಚರಣೆ – ತೀರ್ಥಹಳ್ಳಿ ಆಗುಂಬೆ ಬಸ್ ನಿಲ್ದಾಣ ಸ್ವಚ್ಛ ಮಾಡಿದ ಸುನ್ನಿ ಸಂಘಟನೆ – ಶಾಲಾ, ಕಾಲೇಜುಗಳಲ್ಲಿ ಆಚರಣೆ: ಗಾಂಧಿಗೆ ನಮನ – ತೂದೂರಲ್ಲಿ ಮಧುರಾಜ್ ಹೆಗ್ಡೆ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ – ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದಿಂದ ಶ್ರಮದಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎಲ್ಲೆಡೆ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಶ್ರಮದಾನ, ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಯಿತು. ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನಲ್ಲಿ ಗಾಂಧಿಗೆ ನಮನ ಸಲ್ಲಿಸಲಾಯಿತು. ಸುನ್ನಿ ಸಂಘಟನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮಹಾತ್ಮ ಗಾಂಧೀಜಿ ದಿನದಂದು ಸುನ್ನಿ ಸಂಘಟನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆಗುಂಬೆ ಬಸ್ ನಿಲ್ದಾಣ ಸುತ್ತಮುತ್ತ ಸ್ವಚ್ಛತೆ ನಡೆಯಿತು. SSF SVS ಸಂಘಟನೆಯ ಕೂಡ ಸ್ವಚ್ಛತಾ ಅಭಿಯಾನವನ್ನು ಮಾಡಬೇಕು ಎಂದು ನಿರ್ಧಾರವನ್ನ ಮಾಡಲಾಗಿತ್ತು.ತೀರ್ಥಹಳ್ಳಿಯ ಹೃದಯ ಭಾಗವಾದ ಆಗುಂಬೆ ಬಸ್ ಸ್ಟಾಂಡ್ ಸ್ವಚ್ಛಗೊಳಿಸಲಾಯಿತು.…
ಮಳೆ ಆಯ್ತು, ಈ ವರ್ಷ ಭಾರೀ ಚಳಿ! – ಇನ್ನು ಎರಡು ತಿಂಗಳು ಮಳೆ ಕಡಿಮೆ ಆಗಲ್ಲ – ಬಿಸಿಲು… ಮಳೆ… ಚಳಿ.. ವಿಚಿತ್ರ ವಾತಾವರಣ NAMMUR EXPRESS NEWS ನವ ದೆಹಲಿ: ಮುಂಗಾರು ಮಳೆಯ ನಂತರ ತೀವ್ರ ಚಳಿಗಾಲದ ಮುನ್ಸೂಚನೆ, ದೀರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ. ಅಕ್ಟೋಬರ್-ಡಿಸೆಂಬರ್ ನಲ್ಲಿ ಸಾಮಾನ್ಯ ಸರಾಸರಿಗಿಂತ ಹೆಚ್ಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮುಂಗಾರು ಮಳೆಯ ನಂತರ ತೀವ್ರವಾದ ಚಳಿ ವಾತಾವರಣ ಇರುವ ಸಾಧ್ಯತೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಳಿಗಾಲದಲ್ಲಿ ದೀರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ. ನವೆಂಬರ್- ಡಿಸೆಂಬರ್ ಅವಧಿಯಲ್ಲಿ ಹಿಂದೆಂದಿಗಿಂತಲೂ ಕನಿಷ್ಠ ತಾಪಮಾನ ಉಂಟಾಗಲಿದ್ದು, ಇದಕ್ಕೆ ಲಾ ನಿನಾ ಎಫೆಕ್ಟ್ ಕಾರಣವಾಗಲಿದೆ ಎಂದು ವಿಶ್ಲೇಷಿಸಿದೆ. ಮಾನ್ಸೂನ್ ನಂತರದ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ದಕ್ಷಿಣ ಪೆನಿನ್ಸುಲರ್ ಭಾರತ, ಮಧ್ಯ ಭಾರತ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಸಾಮಾನ್ಯ…
ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭ! – ಅ.3ರಿಂದ ಅ.20ರವರೆಗೆ ರಜೆ: ಮಕ್ಕಳಿಗೆ ರಜೆ ಗಮ್ಮತ್ – ಕ್ರಿಸ್ಮಸ್ ರಜೆ ಯಾವಾಗ? ರಜೆ ಹೇಗಿರುತ್ತೆ…? NAMMUR EXPRESS NEWS ಬೆಂಗಳೂರು: ಅ.3ರಿಂದ ರಾಜ್ಯದ ಎಲ್ಲಾ ಶಾಲಾಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು,ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಮಕ್ಕಳು ರಜೆ ಖುಷಿಯಲ್ಲಿದ್ದಾರೆ. ಸರ್ಕಾರಿ ಆದೇಶ ತಿಳಿಸಿರುವಂತೆ ಅಕ್ಟೋಬರ್ 3 ರಿಂದ ಅಕ್ಟೋಬರ್ 20ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು, ಒಟ್ಟು 17 ದಿನ ವಿದ್ಯಾರ್ಥಿಗಳಿಗೆ ರಜೆ ಘೋಷಣೆಯಾಗಿದೆ. ದಸರಾ ಹಬ್ಬದಲ್ಲೆ ಮಕ್ಕಳಿಗೆ ಖುಷಿ ಸಿಗಲಿದೆ. ಅಕ್ಟೋಬರ್ 21ರಿಂದ 2ನೇ ಅವಧಿ ಪ್ರಾರಂಭ ಆಗಲಿದೆ. 2025ರ ಏಪ್ರಿಲ್ 10 ತನಕ ಶಾಲೆಗಳು ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತಂತೆ ಆದೇಶ ಹೊರಡಿಸಿದೆ. ಕ್ರಿಸ್ ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರು ಅವರಿಗೆ ಸಲ್ಲಿಸಿದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು ಪರಿಶೀಲಿಸಿ…
ನವರಾತ್ರಿ ಶುರು: ರಾಶಿ ಭವಿಷ್ಯ ಹೇಗಿದೆ? – ಇಂದಿನಿಂದ ನವರಾತ್ರಿ ಆರಂಭ ಯಾವ ರಾಶಿಯವರಿಗೆ ಶುಭ ? – ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ, ಉದ್ಯಮಿಗಳು ಕೆಲಸದಲ್ಲಿ ನಿರತರಾಗಿರಬಹುದು. ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಕುಟುಂಬದ ಸದಸ್ಯರಿಂದ ನೀವು ಹಣವನ್ನು ಪಡೆಯಬಹುದು. ವಾಹನ ಸೌಕರ್ಯ ಹೆಚ್ಚಾಗಬಹುದು. ಆರ್ಥಿಕವಾಗಿ ಉತ್ತಮವಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಉತ್ತಮ ದಿನವಾಗಲಿದೆ. ** ವೃಷಭ ರಾಶಿ : ಇಂದು ತಾಳ್ಮೆಯಿಂದ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ಕೆಲಸವನ್ನು ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಮಾಡುವುದರಿಂದ, ನಿಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ…
ಅಮೃತ ಗ್ರಾಪಂಗೆ ಸಚಿನ್ ಗೌಡ ಸಾರಥಿ! – ನೂತನ ಅಧ್ಯಕ್ಷ ಸಚಿನ್ ಗೌಡ ಆಯ್ಕೆ: ರಾಜಕೀಯ ಮ್ಯಾಜಿಕ್ – 11 ಜನ ಸದಸ್ಯ ಬಲ ಚುನಾವಣೆಯಲ್ಲಿ ಸಚಿನ್ ಗೌಡಗೆ 7 ಮತ – ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಶುಭಾಶಯ NAMMUR EXPRESS NEWS ಹೊಸನಗರ: ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಿಗೆ ರಾಜಕೀಯದಲ್ಲಿ ಉತ್ತಮ ಹೆಸರು ಮಾಡಿರುವ ಸಚಿನ್ ಅವರಿಗೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಶುಭಾಶಯ ಸಲ್ಲಿಸಿದ್ದಾರೆ. ಸಚಿನ್ ಗೌಡ ರಾಜಕೀಯ ಮ್ಯಾಜಿಕ್ ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗಂಧ್ರಳ್ಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅ.1ರಂದು ನಡೆದ ಚುನಾವಣೆಯಲ್ಲಿ ಸಚಿನ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ಜನ ಸದಸ್ಯ ಬಲದ ಗ್ರಾಪಂ ಚುನಾವಣೆಯಲ್ಲಿ ಸಚಿನ್ ಗೌಡ 7 ಮತ ಪಡೆದರೆ ಪ್ರತಿಸ್ಪರ್ಧಿ ದೇವರಾಜ್ 4 ಮತ ಪಡೆದಿದ್ದಾರೆ. ಬಿಜೆಪಿ ಬೆಂಬಲಿತ…
ಕಾರ್ಕಳಕ್ಕೆ ಹೆಮ್ಮೆ ತಂದ ಯುವ ಸಾಧಕರು! * ಅಂತಾರಾಷ್ಟ್ರೀಯ ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್: ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು * ಹಿರ್ಗಾನ ಪ್ರಥಮ್ ಎಸ್ ಶೆಟ್ಟಿ ಸಾಧನೆ NAMMUR EXPRESS NEWS ಕಾರ್ಕಳ : ಗೋವಾದಲ್ಲಿ ಸೆ.27-28ರಂದು ನಡೆದ ಅಂತಾರಾಷ್ಟ್ರೀಯ ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ‘ಸತ್ಯಪ್ರಸಾದ್ ರಾವ್’ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಪರಪ್ಪು ರಾಜೇಶ್ ರಾವ್ ಹಾಗೂ ಸುನೀತಾ ದಂಪತಿ ಪುತ್ರ. ಹಾಗೂ ಪ್ರೀತಮ್ ದೇವಾಡಿಗ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೀತಮ್ ಅವರು ಗುಂಡ್ಯಡ್ಕ ನಿವಾಸಿ ಪ್ರೇಮನಾಥ್ ದೇವಾಡಿಗ ಹಾಗೂ ಪುಷ್ಪ ದೇವಾಡಿಗ ದಂಪತಿ ಪುತ್ರ. ಸುರೇಶ್ ದೇವಾಡಿಗ ಅವರಿಂದ ತರಬೇತಿಯನ್ನು ಪಡೆದಿದ್ದು,ಕಾರ್ಕಳದ ಹೆಮ್ಮೆಗೆ ಪಾತ್ರರಾಗಿದ್ದಾರೆ. ಹಿರ್ಗಾನ ಪ್ರಥಮ್ ಎಸ್ ಶೆಟ್ಟಿ ಸಾಧನೆ ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ , ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಸಂತ ಮರಿಯ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆಯಿಂದ ಪ್ರಥಮ್ ಎಸ್ ಶೆಟ್ಟಿ ಭಾಗವಹಿಸಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆ. ಹಿರ್ಗಾನ…
ಕಾಫಿ ನಾಡಲ್ಲಿ ಗಾಂಧಿ, ಶಾಸ್ತ್ರೀಗೆ ನಮನ! * ಬಿಜೆಪಿಯಿಂದ ಸೇವಾಪಾಕ್ಷಿಕ ಕಾರ್ಯಕ್ರಮ * ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗಾಂಧೀಜಯಂತಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಯವರ ಜನ್ಮದಿನವನ್ನು ಆಚರಿಸಲಾಯಿತು. ಬಿಜೆಪಿ ಜಿಲ್ಲೆಯ ಎಲ್ಲಾ ತಾಲೂಕಿನ ಹಲವು ಕಡೆಗಳಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಶ್ರಮಾದಾನ ಮಾಡುವ ಮೂಲಕ ಗಾಂಧೀಜಯಂತಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಯವರ ಜನ್ಮದಿನವನ್ನು ಆಚರಿಸಿತು. ಕಾಂಗ್ರೇಸ್‌ನಿಂದ ಗಾಂಧಿ ಟೋಪಿ ಧರಿಸಿ ಮೆರವಣಿಗೆ! ಕಾಂಗ್ರೇಸ್‌ನಿಂದ ಶೃಂಗೇರಿಯ ಮುಖ್ಯರಸ್ಥೆಯಲ್ಲಿ ಗಾಂಧೀ ಟೋಪಿ ಧರಿಸಿ ಮೆರವಣಿಗೆ ನಡೆಸಿ ನಂತರ ವೇದಿಕೆ ಕಾರ್ಯಕ್ರಮದೊಂದಿಗೆ ಗಾಂಧೀಜಯಂತಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಜನ್ಮದಿನವನ್ನು ಆಚರಿಸಲಾಯಿತು
ತೀರ್ಥಹಳ್ಳಿ ತಾಲೂಕಲ್ಲಿ ದಸರಾ ಸಂಭ್ರಮ! – ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ – ಚಿಲುಮೆ ಜಡ್ಡು ಶಿವನಾಗ ಕ್ಷೇತ್ರದಲ್ಲಿ ಭರ್ಜರಿ ನವರಾತ್ರಿ ಉತ್ಸವ – ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ರಂಗು ಮನೆ ಮಾಡಿದೆ. ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ರಾಮೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಅ. 3ರಿಂದ ಪ್ರತಿ ದಿನ ಸಪ್ತಶತೀ ಪಾರಾಯಣ ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ರುದ್ರಾಭೀಷೇಕ, ಮಹಾಮಂಗಳಾರತಿ ಮೊದಲಾದ ಉಪಚಾರಗಳಿಂದ ಶ್ರೀ ಸಾನ್ನಿಧ್ಯದಲ್ಲಿ ದೇವತಾ ಕಾರ್ಯ ನಡೆಯಲಿದೆ. 12.10.2024 ನೇ ಶನಿವಾರ ಬೆಳಿಗ್ಗೆ ವಿಜಯದಶಮಿಯಂದು ದುರ್ಗಾಹೋಮ ಸಂಪನ್ನಗೊಳ್ಳಲಿದೆ. ಭಗವದ್ಭಕ್ತರು ಈ ವಿಶೇಷ ದೇವ್ಯತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ. ಸಪ್ತಶತೀ ಪಾರಾಯಣ,…
ಭಂಡಾರಿ ಸಮಾಜ ಸಹಯೋಗದಲ್ಲಿ ಉಚಿತ ಶ್ರವಣ ತಪಾಸಣೆ – ವಿಘ್ನಹರ್ತ ಸಂಸ್ಥೆಯ ಸಹಯೋಗದಲ್ಲಿ ಮಾದರಿ ಕಾರ್ಯಕ್ರಮ – ಕೋಣಂದೂರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಲಸಿಕಾ ಕಾರ್ಯಕ್ರಮ NAMMUR EXPRESS NEWS ಕೋಣಂದೂರು: ಅಗ್ರಹಾರ ಹೋಬಳಿ ಸವಿತಾ ಸಮಾಜದ ಸಮುದಾಯ ಭವನದಲ್ಲಿ ತೀರ್ಥಹಳ್ಳಿ ತಾಲ್ಲೂಕು ಭಂಡಾರಿ ಸಮಾಜ ಸಂಘ , ವಿಘ್ನಹರ್ತ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಉಚಿತ ಶ್ರವಣ ತಪಾಸಣಾ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಶಿಬಿರ ನಡೆಯಿತು. ಅ.15ರಂದು ಕೋಣಂದೂರಿನಲ್ಲಿ ನಡೆಯುವ ಬೆಂಗಳೂರು ಭಂಡಾರಿ ಸಮಾಜ ಸಂಘ ಕೌಟುಂಬಿಕ ಸ್ನೇಹ ಕೂಟದ ಅಂಗವಾಗಿ ತೀರ್ಥಹಳ್ಳಿ ತಾಲ್ಲೂಕು ಭಂಡಾರಿ ಸಂಘ ಏರ್ಪಡಿಸಿದ್ದ ಉಚಿತ ಶ್ರವಣ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಶಿಬಿರ ನಡೆಯಿತು. ಸುಮಾರು 85 ಜನ ಶ್ರವಣ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ತಾಲ್ಲೂಕು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗಿರೀಶ್ ಭಂಡಾರಿ, ಸರಳ ಮಂಜುನಾಥ ಭಂಡಾರಿ, ಹೊಸಕೊಪ್ಪ ಶಿವು, ವಿಘ್ನಹರ್ತ ಸಂಸ್ಥೆಯ ಮುಖ್ಯಸ್ಥ…