Author: Nammur Express Admin

ಕರುನಾಡ ಕಣ್ಮಣಿ ನೆನಪು ಮಾತ್ರಪುನೀತ್ ರಾಜಕುಮಾರ್ ಇನ್ನಿಲ್ಲಮತ್ತೆ ಹುಟ್ಟಿ ಬಾ ಪುನೀತ್..! NAMMUR EXPRESS NEWSಬೆಂಗಳೂರು: ಸ್ಯಾಂಡಲ್‌ವುಡ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.49 ಸಿನಿಮಾ ನಟಿಸಿದ್ದು 28 ಸಿನಿಮಾದಲ್ಲಿ ನಟರಾಗಿ ಇಡೀ ರಾಜ್ಯದ ಕಣ್ಣೀರಿಗೆ ಕಾರಣರಾಗಿದ್ದಾರೆ.ಪುನೀತ್ ಅವರು ತಮ್ಮ ಮನೆಯಲ್ಲಿ ಜಿಮ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 11:30-11-45ರೊಳಗೆ ವಿಧಿ ವಶರಾಗಿದ್ದಾರೆ.ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಬಹಳಷ್ಟು ಜನ ಅಭಿಮಾನಿಗಳು ನಟ ದಾಖಲಾಗಿದ್ದ ಆಸ್ಪತ್ರೆ ಬಳಿ ಸೇರಿದ್ದರು. ನಟನಿಗೆ ಗುರುವಾರ ರಾತ್ರಿಯೇ ಸುಸ್ತು ಇತ್ತು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ನಟನನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ನಂತರ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ನಟ ಪತ್ನಿ ಗೀತಾ ಅಶ್ವಿನಿ ರೇವಂತ್ ಹಾಗೂ ಇಬ್ಬರು ಪುತ್ರಿಯರಾದ ದೃತಿ, ವಂದಿತಾ ಮತ್ತು ಕುಟುಂಬ, ಸ್ನೇಹಿತರು ಸೇರಿ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ.1999 ರಲ್ಲಿ…

Read More

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನ NAMMUR EXPRESSಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (80 ವರ್ಷ) ಸೆಪ್ಟೆಂಬರ್ 13ರಂದು ಮಂಗಳೂರು ಯೆನೆಪೋಯ ಆಸ್ಪತ್ರೆಯಲ್ಲಿ ನಿಧನರಾದರು. ಜುಲೈ 18ರ ಬೆಳಿಗ್ಗೆ ಆಸ್ಕರ್ ಫರ್ನಾಂಡೀಸ್ ಯೋಗಾಭ್ಯಾಸ ಮಾಡುತ್ತಿದ್ದಾಗ, ಅವರು ಜಾರಿ ಕೆಳಗೆ ಬಿದ್ದಿದ್ದು, ಅದೇ ದಿನ ಸಂಜೆ ಆಸ್ಕರ್ ಆಸ್ಪತ್ರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಹೋಗಿದ್ದರು. ಆಸ್ಕರ್ ಅವರ ತಲೆಗೆ ಗಾಯವಾಗಿದೆ ಎಂದು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 26ರಂದು, ಆಸ್ಕರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಸ್ಥಿತಿ ಚಿಂತಾಜನಕವಾಗಿದ್ದು,ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್. ರಾಜ್ಯದ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು…

Read More

ಮನೆಯಿಂದ ಹೊರ ಬರಲು ಬಿಡುತ್ತಿಲ್ಲ ಮಳೆಸೆ.15ರವರೆಗೆ ಭಾರೀ ಮಳೆ: ಎಚ್ಚರ ಎಚ್ಚರಅಡಿಕೆ, ಕಾಫಿ, ಕಾಳು ಮೆಣಸು ನಷ್ಟದ ಭೀತಿ..! NAMMUR EXPRESSಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ತಾಲೂಕಲ್ಲಿ ಭಾರಿ ಮಳೆಯಾಗಿದೆ.ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಸದ್ಯ ಸುರಿಯುತ್ತಿರುವ ಮಳೆ ರೈತರ ಮುಖದಲ್ಲಿ ಆತಂಕದ ಛಾಯೆಗೆ ಕಾರಣವಾಗಿದ್ದು, ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಾರರು ಬೆಳೆ ನಷ್ಟದ ಭೀತಿಗೊಳಗಾಗಿದ್ದಾರೆ. ಹೀಗೆ ಮಳೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ, ಹೊಸನಗರ, ಸಾಗರ, ಭದ್ರಾವತಿ, ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ವರ್ಷಧಾರೆಯಾಗಿದೆ. ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೈಕ್ಲೋನ್ ಪರಿಣಾಮ ಉತ್ತಮ ಮಳೆಯಾಗುತ್ತಿದ್ದು, ಕಳೆದ ಬುಧವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು…

Read More

ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಲು ಕಾಂಗ್ರೆಸ್ ಸಜ್ಜುಎತ್ತಿನ ಗಾಡಿಯಲ್ಲಿ ಬರ್ತಾರೆ ಸಿದ್ದರಾಮಯ್ಯ, ಡಿಕೆಶಿ NAMMUR EXPRESS POLITICAL NEWSಬೆಂಗಳೂರು: ಸೋಮವಾರರಿಂದ ಹತ್ತು ದಿನಗಳ ಕಾಲ ಮಹತ್ವದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ಬೆಲೆ ಏರಿಕೆ, ಕರೋನಾ ನಡುವೆ ಈ ಅಧಿವೇಶನ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ.ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ. ಕೊರೊನಾ ವೈರಸ್, ಲಾಕ್‌ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯೂ ಆಗಿದೆ. ಜೊತೆಗೆ ಯಾವ್ಯಾವ ವಿಚಾರಗಳ ಬಗ್ಗೆ ಸಮದಸ್ಯರು ಪ್ರಸ್ತಾಪ ಮಾಡಬೇಕು ಎಂಬುದನ್ನು ಈಗಾಗಲೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ…

Read More

ಕೋಣಂದೂರಿನಲ್ಲಿ ಅಂತಿಮ ದರ್ಶನ: ಗಣ್ಯರ ಸಂತಾಪಮನೆಗೆ ತೆರಳಿ ಅಂತಿಮ ದರ್ಶನ ಪಡೆದ ಗೃಹ ಸಚಿವ NAMMUR EXPRESSತೀರ್ಥಹಳ್ಳಿ: ಮಲೆನಾಡಿನ ಖ್ಯಾತ ಶಿಕ್ಷಣ ತಜ್ಞ, ಹೃದಯಾಘಾತದಿಂದ ಮೃತಪಟ್ಟ ನ್ಯಾಷನಲ್ ಎಜುಕೇಷನ್ ಸೊಸೈಟಿ ಪ್ರಮುಖರು, ರಾಷ್ಟ್ರೀಯ ವಸತಿ ಶಾಲೆ ಪ್ರಿನ್ಸಿಪಾಲ್ ಪ್ರೊ. ಗಣೇಶ ಮೂರ್ತಿ ಅವರು ನೆನಪಿನ ಪುಟಕ್ಕೆ ಜಾರಿದ್ದಾರೆ.ಶನಿವಾರ ಸಂಜೆ ಹೃದಯಾಘಾತದಿಂದ ಆಯನೂರು ಬಳಿ ಮೃತಪಟ್ಟ ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಿಗ್ಗೆ ಕೋಣಂದೂರು ಶಾಲೆ ಅವರಣಕ್ಕೆ ತರಲಾಗಿದ್ದು, ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಇಡೀ ಕೋಣಂದೂರು ಮೌನಕ್ಕೆ ಜಾರಿತ್ತು.ಗಣೇಶ ಮೂರ್ತಿ ಅವರ ಒಡನಾಡಿಗಳು, ಕೋಣಂದೂರಿನ ಗ್ರಾಮಸ್ಥರು, ಶಾಲಾ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಕಂಬನಿ ಮಿಡಿದರು.ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಅಮೃತದ ಔಕ ಗ್ರಾಮದ ಸ್ವಗೃಹಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.ದೆಹಲಿಯಿಂದ ಮಗಳು ಬಂದ ಬಳಿಕ ಸಂಜೆ ತವರಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಮೃತರು ಪತ್ನಿ, ಓರ್ವ ಪುತ್ರ,…

Read More

ದಾರಿ ಮಧ್ಯ ಹೃದಯಾಘಾತದಿಂದ ವಿಧಿವಶಕೋಣಂದೂರಿನಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆಮಲೆನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ NAMMUR EXPRESSತೀರ್ಥಹಳ್ಳಿ: ನ್ಯಾಷನಲ್ ಎಜುಕೇಷನ್ ಸೊಸೈಟಿ ಕಟ್ಟಿ ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಗಣೇಶ ಮೂರ್ತಿ ಅವರು ಹೃದಯಾಘಾತದಿಂದ ಶನಿವಾರ ಸಂಜೆ ಮೃತರಾಗಿದ್ದಾರೆ. ಸುಮಾರು 74 ವರ್ಷ ವಯಸ್ಸಿನ ಗಣೇಶ್ ಮೂರ್ತಿ ಅವರು ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಾಪಾಸ್ ಕೋಣಂದೂರು ಬರುವ ವೇಳೆ ಆನಂದಪುರ ಸಮೀಪ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೊಸನಗರ ತಾಲೂಕು ಗರ್ತಿಕೆರೆ ಬಳಿಯ ಅಮೃತ ಮೂಲದ ಗಣೇಶಮೂರ್ತಿ ಅವರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ನ್ಯಾಶಿನಲ್ ರೆಸಿಡೆನ್ಸಿಯಲ್ ಸ್ಕೂಲ್ ಪ್ರಿನ್ಸಿಪಾಲ್ ಅಗಿ ಸೇವೆ ಸಲ್ಲಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಎಲ್ಲಾ ಶಿಕ್ಷಣ, ಸಾಹಿತ್ಯ, ಕಲೆ, ಸಮಾಜ ಪರ ಕೆಲಸಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ನ್ಯಾಶಿನಲ್ ಎಜುಕೇಷನ್…

Read More

ಬೆಂಗಳೂರು, ಬಾಂಬೆ, ಚೆನ್ನೈ ಸೇರಿ 5 ಕಡೆ ಪ್ರಯಾಣ?ಮಲೆನಾಡಿನ ಅಭಿವೃದ್ಧಿಗೆ ಹೊಸ ಭರವಸೆ NAMMUR EXPRESSಶಿವಮೊಗ್ಗ: ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಏರ್ಪೋರ್ಟ್ ಇದೀಗ ಒಂದು ಹಂತಕ್ಕೆ ಮುಗಿದಿದೆ. ಈ ನಡುವೆ ಶಿವಮೊಗ್ಗದಿಂದ ಐದು ಮಾರ್ಗದಲ್ಲಿ ವಿಮಾನ ಹಾರಾಟ, ಪ್ರಸ್ತಾವನೆಯಲ್ಲಿ ಕೇಂದ್ರದ ಮುಂದಿಡಲಾಗಿದೆ.ಮಲೆನಾಡು, ಕರಾವಳಿ, ಬೆಂಗಳೂರು, ಮಧ್ಯ ಕರ್ನಾಟಕ ಸಂಪರ್ಕ ಸುಲಭವಾಗುವ ಈ ಏರ್ಪೋರ್ಟ್ ಸವಾರಿ ಭಾರೀ ಕುತೂಹಲ ಮೂಡಿಸಿದೆ.ಇತ್ತ ಶಿವಮೊಗ್ಗ ಏರ್ ಪೋರ್ಟ್ನಿಂದ ಐದು ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸುವ ಕುರಿತು ಸಿದ್ಧತೆ ನಡೆಯುತ್ತಿದೆ. ಸೆ.13ರೊಳಗೆ ಅಂತಿಮ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಅಂದ ಹಾಗೆ ಈ ಏರ್ಪೋರ್ಟ್ ಕಾಮಗಾರಿಯನ್ನು ರಾಜ್ಯದ ಪ್ರತಿಷ್ಠಿತ ಕನ್ಸ್ಟ್ರಕ್ಷನ್ ಕಂಪನಿಗಳಲ್ಲಿ ಒಂದಾದ ತೀರ್ಥಹಳ್ಳಿ ಮೂಲದ ನ್ಯಾಷನಲ್ ಕನ್ಸ್ಟ್ರಕ್ಷನ್ಸ್ ಮಾಡುತ್ತಿದೆ.ಎಲ್ಲೆಲ್ಲಿಗೆ ವಿಮಾನ ಹಾರಾಟ?ಬೆಂಗಳೂರು, ಚೆನ್ನೈಮುಂಬೈ ಸೇರಿ ಐದು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಧರಿಸಲಾಗಿದೆ. ಉಡಾನ್ ಯೋಜನೆ ಅಡಿ ಈ ಮಾರ್ಗಗಳನ್ನು ಸೂಚಿಸಲಾಗಿದೆ.ಪ್ರವಾಸೋದ್ಯಮಕ್ಕೆ ಹೈ…

Read More

ನಿಮ್ಮ ಊರಿನ ಸಂಭ್ರಮದ ಗಣಪತಿ ಎಲ್ಲರೂ ನೋಡ್ಬೇಕಾ..? ಸರಳ ಗಣಪತಿಯನ್ನು ನಾವು ತೋರಿಸ್ತೇವೆ..!ನಿಮ್ಮ ಊರ ಗಣಪತಿ ಫೋಟೋ, 2 ನಿಮಿಷದ ವಿಡಿಯೋ ಕಳುಹಿಸಿ…! NAMMUR EXPRESSರಾಜ್ಯದಲ್ಲಿ ಕರೋನಾ ಕಾರಣ ಸರಳವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಕಡೆ ಅಬ್ಬರದ ಆಚರಣೆ ಇಲ್ಲ. ಬಹುತೇಕ ಕಡೆ ಒಂದೇ ದಿನಕ್ಕೆ ಗಣೇಶ ಹಬ್ಬ ಸೀಮಿತಗೊಂಡಿದೆ. ಹೀಗಾಗಿ ನಿಮ್ಮ ಊರಿನ ಗಣೇಶನ ನಾವು ಎಲ್ಲರಿಗೂ ತೋರಿಸುತ್ತೇವೆ.ರಾಜ್ಯದ ಮುಂಚೂಣಿ ಡಿಜಿಟಲ್ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ಪ್ರೆಸ್ ನಿಮ್ಮೂರಿನ ಗಣೇಶನನ್ನು ಪ್ರಕಟ ಮಾಡಲಿದೆ. ನೀವು ಮಾಡಬೇಕಾದ್ದು ಇಷ್ಟು..?ನಿಮ್ಮ ಊರಿನ ಗಣೇಶ ಪ್ರತಿಷ್ಠಾಪನೆ, ಎಲ್ಲಾ ಸಂಘದ ಸದಸ್ಯರ ಜತೆ, ವಿಸರ್ಜನೆಯ ಫೋಟೋಗಳನ್ನು ಮೊಬೈಲ್ ಅಲ್ಲಿ ತೆಗೆದು(ಉತ್ತಮ ಕ್ವಾಲಿಟಿ ಇರಬೇಕು). ನಮ್ಮ ವಾಟ್ಯಾಪ್ ಸಂಖ್ಯೆ:9481949101ಗೆ ಗಣಪತಿ ಇಟ್ಟ ಊರು, ಸಂಘ ಸಂಸ್ಥೆಯ ಹೆಸರು, ಗ್ರಾಮ, ತಾಲೂಕು, ಜಿಲ್ಲೆಯ ವಿವರದೊಂದಿಗೆ 5 ಮಂದಿ ಸದಸ್ಯರ ಮೊಬೈಲ್ ಸಂಖ್ಯೆಯೊಂದಿಗೆ ಮಾಹಿತಿ ಕಳುಹಿಸಿ. ನಾವು ನಿಮ್ಮೂರ ಗಣಪತಿಯನ್ನು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಪ್ರಕಟ ಮಾಡುತ್ತೇವೆ.…

Read More

ರಾಜ್ಯದ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಜನತೆಗೆ ಹಬ್ಬದ ಶುಭಾಶಯ ಕೋರಿದ ನಾಯಕ NAMMUR EXPRESSನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಸಹಕಾರದಿಂದ ಶಾಸಕನಾಗಿ ರಾಜ್ಯದ ಗೃಹ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಈ ಬಾರಿ ಸಿಕ್ಕಿದೆ. ಎಂದಿಗೂ ನಿಮ್ಮ ಹಾರೈಕೆ ಹೀಗೇ ಇರಲಿ ಈ ಕರ್ನಾಟಕ ರಾಜ್ಯದ ದ ಸೇವೆಯನ್ನು ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತೀರ್ಥಹಳ್ಳಿ ಶಾಸಕ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಜನತೆಗೆ ಶುಭಾಶಯ ಕೊರಿದ್ದಾರೆ. ಇದೇ ವೇಳೆ ನಾಡಿನ ಸಮಸ್ತ ಜನತೆಗೆ ಅವರು ಹಬ್ಬದ ಶುಭ ಕೊರಿದ್ದಾರೆ.

Read More

ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.ಈ ಮೂಲಕ ಚುನಾಯಿತ ಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಪಕ್ಷಾತೀತವಾಗಿ ಈ ಒಕ್ಕೂಟ ರಚನೆಯಾಗಿದ್ದು ಸದಸ್ಯರ ಸಂಘಟನೆಗೆ ಬಲ ತುಂಬಲಿದೆ.ಪದಾಧಿಕಾರಿಗಳು:*ಹೆಬ್ಬುಲಗಿ ಉಮೇಶ್,ಬೆಜ್ಜವಳ್ಳಿ(ಅಧ್ಯಕ್ಷರು)*ಸರೋಜ ಗಡಿಕಲ್ಲು, ದೇವಂಗಿ, ಉಪಾಧ್ಯಕ್ಷರು.*ರತ್ನಾಕರ್, ದೇಮಲಾಪುರ, ಉಪಾಧ್ಯಕ್ಷರು.*ಮಂಜುನಾಥ್, ಹೊನ್ನೇತಾಳು, ಉಪಾಧ್ಯಕ್ಷರು.*ಸುಪ್ರಿತಾ, ಕನ್ನಂಗಿ, ಉಪಾಧ್ಯಕ್ಷರು.*ಸಂದೀಪ್, ಕುಡುಮಲ್ಲಿಗೆ, ಪ್ರದಾನ ಕಾರ್ಯದರ್ಶಿ. ಭಾರತಿ, ಹಾರೋಗೋಳಿಗೆ, ಸಹ ಕಾರ್ಯದರ್ಶಿ,*ರಾಘವೇಂದ್ರ, ಹಣಗೆರೆ, ಸಹ ಕಾರ್ಯದರ್ಶಿ.*ಅಗಸವಾಡಿ ಶಾಮಪ್ಪ, ಸಹ ಕಾರ್ಯದರ್ಶಿ.*ಕೌಲಾನಿ ಭಾರತೀಶ್, ಹೆಗ್ಗೋಡು, ಸಹ ಕಾರ್ಯದರ್ಶಿ.*ಜಗದೀಶ್, ಆಗುಂಬೆ, ಖಜಾಂಚಿ.*ಭುಜಂಗ, ತೂದೂರು, ಜಿಲ್ಲಾ ಪ್ರತಿನಿಧಿ.ಬಂಡೆ ವೆಂಕಟೇಶ್, ಮೇಲಿನಕುರುವಳ್ಳಿ, ಜಿಲ್ಲಾ ಪ್ರತಿನಿಧಿ.*ರೇವತಿ, ಆರಗ, ಜಿಲ್ಲಾ ಪ್ರತಿನಿಧಿ.ಜಿಲ್ಲಾ ಪಂಚಾಯತ್ ಹಂತದ ಸಂಘಟನನಾ ಕಾರ್ಯದರ್ಶಿಗಳು 1) ಸುಧಾ ದೇವರಾಜ್, ನಾಲೂರು2)ಚಂದ್ರಪ್ಪ ಗೌಡ, ನೆರಟೂರು3)ಶ್ರೀದೀಪ್, ಬಸವಾನಿ,4)ಲಕ್ಷ್ಮಿ ದೇವಿ, ತ್ರಿಯಂಬಕಪುರ,5)ನವೀನ್, ಹಾದಿಗಲ್ಲು.6)ಪಣಿರಾಜ್, ಶೇಡ್ಗರು.7)ಜ್ಯೋತಿ, ಮಂಡಗದ್ದೆ.8)ಮುಬೀನ, ನೊಣಬೂರು ತಾಲೂಕು ಪಂಚಾಯತ್ ಹಂತದ ಸಂಘಟನಾ ಕಾರ್ಯದರ್ಶಿ1)ನಾರಾಯಣ ಮೂರ್ತಿ, ಹೊಸಹಳ್ಳಿ.2)ಗಿರೀಶ್, ತೀರ್ಥ…

Read More