ಎಲ್ಲಾ ಶಾಲೆಗಳಲ್ಲೂ ಸಿಹಿ ನೀಡಿ ಮಕ್ಕಳಿಗೆ ಸ್ವಾಗತಮೊದಲ ದಿನ ಆಟ ಆಡಿ ಪಾಠ: ಕರೋನಾ ಎಚ್ಚರಿಕೆ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆರರಿಂದ ಎಂಟನೇ ತರಗತಿಗೆ ಶಾಲೆ ಶುರುವಾಗಿದ್ದು, ಶಾಲೆಗಳಲ್ಲಿ ಸಂಭ್ರಮ ಕಂಡು ಬಂತು. ತೀರ್ಥಹಳ್ಳಿಯ ಎಲ್ಲಾ 80 ಶಾಲೆಗಳಲ್ಲಿ ಮೊದಲ ದಿನದಿಂದ ಮಕ್ಕಳು ಉತ್ಸಾಹದಿಂದ ಭಾಗಿಯಾದರು. ಅಧಿಕಾರಿಗಳು ಬೆಳಿಗ್ಗೆಯೇ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸ್ವಾಗತ ಕೋರಿದರು. ಶಿಕ್ಷಕರು ಮಕ್ಕಳಿಗೆ ಸ್ವಾಗತಿಸಿದರು. ಕೆಲವೆಡೆ ಮಕ್ಕಳಿಗೆ ಬೊಕ್ಕೆ, ಹೂವು, ಸಿಹಿ ಕೊಟ್ಟು ಹಬ್ಬದಂತೆ ಆಚರಣೆ ಮಾಡಲಾಯಿತು. ಎಲ್ಲಾ ಶಾಲೆಯಲ್ಲೂ ಕರೋನಾ ನಿಯಮ ಪಾಲನೆ ಮಾಡಲಾಯಿತು.ಶಾಲೆಗಳನ್ನು ಸ್ವಚ್ಛ ಮಾಡಿ ಕೆಲವು ಶಾಲೆಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿ ಮಕ್ಕಳನ್ನು ಸ್ವಾಗತಿಸಲಾಯಿತು ಮಧ್ಯಾಹ್ನದವರೆಗೆ ಮಾತ್ರ ಶಾಲೆಗಳು ಇದ್ದು, ಮಕ್ಕಳು ಸಂಭ್ರಮದಿಂದ ತರಗತಿಗಳಲ್ಲಿ ಪಾಲ್ಗೊಂಡರು.80 ಪ್ರಾಥಮಿಕ ಶಾಲೆ, 41 ಪ್ರೌಢ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹಾಜರಾದರು. ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇತ್ತು. 20ಕ್ಕೂ ಹೆಚ್ಚು ಅಧಿಕಾರಿಗಳು ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲಿಯೂ…
Author: Nammur Express Admin
ಅಡಿಕೆಗೆ ಸೂಕ್ತ ಬೆಲೆ ಕೊಡಿಸಲು ದಶಕದ ಹೋರಾಟರಾಜ್ಯ, ಕೇಂದ್ರ ಸರಕಾರಗಳಿಗೆ ಹಲವು ನಿಯೋಗ ಭೇಟಿ NAMMUR EXPRESSಶಿವಮೊಗ್ಗ: ಮಲೆನಾಡಲ್ಲಿ ಕೆಂಪಡಿಕೆ ದರ 60,000 ರೂ ದಾಟಿದೆ. ಕಳೆದ ಕೆಲವು ವರ್ಷದಲ್ಲೇ ಅತೀ ಹೆಚ್ಚು ದರ ದಾಖಲಾಗಿದೆ. ಈ ದರ ಬರಲು ಹಲವು ಹೋರಾಟಗಳು ಫಲ ನೀಡಿವೆ. ರೈತ ಸಂಘಟನೆಗಳು, ಎಲ್ಲಾ ಪಕ್ಷಗಳು ಹೋರಾಟ ನಡೆಸಿವೆ.ಅದರಂತೆ ಗೃಹಸಚಿವ, ತೀರ್ಥಹಳ್ಳಿ ಶಾಸಕ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ಕೂಡ ಹಲವು ಭೇಟಿ ಹಲವು ನಿಯೋಗ ಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಜೊತೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಂಶೋಧನೆ ಕೂಡ ಮಾಡಿಸಿದ್ದರು. ಇದೀಗ ಅಡಿಕೆಗೆ ಉತ್ತಮ ಮಾರುಕಟ್ಟೆ ಹಾಗೂ ಸ್ಥಿರ ಬೆಲೆ ಸಿಕ್ಕಿದೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ಅಡಿಕೆ ನಿಷೇಧದ ವಿರುದ್ಧ ಹೋರಾಡುತ್ತಿರುವವರಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಜತೆ ಅಡಿಕೆ ಟಾಸ್ಕ್ ಫೋರ್ಸ್ ಪಾಲು…
ಮುನಿಸು ಬಿಟ್ಟು ಒಟ್ಟಾಗಿ ಪಕ್ಷ ಬಲಪಡಿಸ್ತಾರಾ ನಾಯಕರು?ಕಿಮ್ಮನೆ, ಮಂಜುನಾಥ ಗೌಡ ಒಂದೇ ಸಭೆಯಲ್ಲಿ!ಪಕ್ಷ ಕಟ್ಟಲು ಡಿಕೆಶಿ ವಾರ್ನಿಂಗ್.. ಮುಂದೇನು..? NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿ ರಾಜಕಾರಣ ದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಈಗ ಒಗ್ಗಟ್ಟಿನ ಮಂತ್ರ ಶುರುವಾಗಿದೆ.ಶನಿವಾರ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹಕಾರಿ ನಾಯಕ ಡಾ.ಆರ್ ಎಂ.ಮಂಜುನಾಥ ಗೌಡ ಒಂದೇ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ವೇಳೆ ಪಕ್ಷ ಸಂಘಟನೆಯನ್ನು ಮಾಡುವ ಬಗ್ಗೆ ಡಿಕೆಶಿವಕುಮಾರ್ ಇಬ್ಬರಿಗೂ ಕೂಡಾ ಸಲಹೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.ಏನಿದು ವಿವಾದ?: ಕಿಮ್ಮನೆ ರತ್ನಾಕರ್ ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಹತ್ತಾರು ವರ್ಷಗಳಿಂದ ಪಕ್ಷ ಕಟ್ಟುವ ಜತೆಗೆ ತಮ್ಮದೇ ಆದ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನೊಂದೆಡೆ ಇದೀಗ ಕೆಲವೇ ತಿಂಗಳಲ್ಲಿ…
3 ದಿನದ ಬದಲು 5 ದಿನದವರೆಗೆ ಆಚರಣೆನಿಯಮಗಳೇನು..?, ಏನ್ ಮಾಡಬಾರದು..? NAMMUR EXPRESSಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊದಲು 3 ದಿನ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದ್ದು, ಕೆಲವೇ ಗಂಟೆಗಳಲ್ಲಿ ಪರಿಸ್ಕೃತ ಆದೇಶ ಮಾಡಿ 5 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ.ಮೆರವಣಿಗೆ, ಆರ್ಕೆಸ್ಟ್ರಾ, ಡಿಜೆ ಮಾಡುವ ಹಾಗಿಲ್ಲ. ಹಾಗಾದ್ರೆ ಮಾರ್ಗಸೂಚಿ ಏನಿದೆ ನೀವೇ ನೋಡಿ..! ಗಣೇಶ ಮೂರ್ತಿ 4 ಅಡಿಗಿಂತ ಹೆಚ್ಚು ಇರಬಾರದು.ಗಣೇಶ ಮೂರ್ತಿ 5 ದಿನದೊಳಗೆ ವಿಸರ್ಜನೆನಗರಗಳಲ್ಲಿ ವಾರ್ಡ್ ಒಂದು ಮಾತ್ರ ಗಣೇಶ ಮೂರ್ತಿಗ್ರಾಮಕ್ಕೊಂದು ಸ್ಥಳೀಯ ಆಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವಕಾಶ ನೀಡಲಾಗುವುದು.ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಡೆಗಳಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ಇಲ್ಲ.ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕ್ಯಾಂಪ್ ನಡೆಸಲಾಗುವುದು.50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲಗಣೇಶೋತ್ಸವ ಸಮಯದಲ್ಲಿ ಮನರಂಜನೆ,…
6-8 ತರಗತಿ ಸೆ.6ರಿಂದ ಓಪನ್: ಮಕ್ಕಳಲ್ಲಿ ಖುಷಿಕರೋನಾ ನಿಯಮ ಪಾಲನೆ ಕಡ್ಡಾಯವಾರದಲ್ಲಿ ಎರಡು ದಿನ ರಜೆ: ಏನು ನಿಯಮ? NAMMUR EXPRESSಬೆಂಗಳೂರು: ರಾಜ್ಯದಲ್ಲಿ 8ರಿಂದ 12, ಡಿಗ್ರಿ ಶಾಲಾ, ಕಾಲೇಜು ಶುರುವಾಗಿದೆ. ಈ ನಡುವೆ ಸೋಮವಾರದಿಂದ 6ರಿಂದ 8ನೇ ತರಗತಿ ಶಾಲೆ ಆರಂಭವಾಗುತ್ತಿದ್ದು, ಶಾಲಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಕರೋನಾ ನಿಯಮ ಕಟ್ಟು ನಿಟ್ಟಿನಲ್ಲಿ ಪಾಲನೆ ಮಾಡಲು ಶಿಕ್ಷಕರು, ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.ಸಿಎಂ ನೇತೃತ್ವದಲ್ಲಿ ಶಾಲೆ ಆರಂಭಿಸುವ ಕುರಿತು ಸಭೆ ನಡೆಸಿ ಸಭೆಯಲ್ಲಿ ಶಾಲೆ ಆರಂಭಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ. ಸೆ.6ರಿಂದ ರಾಜಾದ್ಯಂತ ಶಾಲೆಯ ಘಂಟೆ ಬಾರಿಸಲಿದ್ದು, 6-8ನೆ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ 9-12 ನೆ ತರಗತಿಗಳನ್ನ ಪ್ರಾರಂಭ ಮಾಡಿದ್ದ ಸರ್ಕಾರ ಇಗ ಬರೋಬ್ಬರಿ 18 ತಿಂಗಳುಗಳ ಬಳಿಕ ಮಾಧ್ಯಮಿಕ…
ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್3 ದಿನ ಗಣೇಶ ಇಡಬಹುದು, ಷರತ್ತುಗಳು ಅನ್ವಯ!ಮೆರವಣಿಗೆ, ಕಾರ್ಯಕ್ರಮಕ್ಕೆ ಇಲ್ಲ ಅನುಮತಿಕರೋನಾ ಹೆಚ್ಚಿರುವ ಜಿಲ್ಲೆಯಲ್ಲಿ ಅವಕಾಶ ಇಲ್ಲ NAMMUR EXPRESSಬೆಂಗಳೂರು: ಅಂತೂ ಇಂತೂ ಗಣೇಶನ ಹಬ್ಬಕ್ಕೆ ಅನುಮತಿ ಸಿಕ್ಕಿದೆ. ಆದರೆ ಅಬ್ಬರದ ಗಣೇಶ ಹಬ್ಬ ಆಚರಣೆ ಮಾಡುವ ಹಾಗಿಲ್ಲ. ಇನ್ನು ಆರ್ಕೆಸ್ಟ್ರಾ, ಹಾಸ್ಯ, ಕಾರ್ಯಕ್ರಮ ಮಾಡುವಂತಿಲ್ಲ!.ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಅದರಲ್ಲೂ 3 ದಿನಗಳಿಗೆ ಆಚರಣೆ ಸೀಮಿತಗೊಳಿಸಲಾಗಿದೆ.ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಡೆದ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ.ಏಕೆ ಈ ಆಚರಣೆ?: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ.ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ 3 ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದ್ದು, ಮನೋರಂಜನೆ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ, ಪ್ರತಿಷ್ಠಾಪನೆ ಮಾಡಬಹುದು. ಆದರೆ ಮೆರವಣಿಗೆ…
ರಂಗ ಶಿಕ್ಷಕ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿಯಶೋಧ, ಫೌಜಿಯಾ, ಸುರೇಶ್ ಗೆ ಜಿಲ್ಲಾ ಪ್ರಶಸ್ತಿಎಲ್ಲಾ ಶಿಕ್ಷಕರ ಸೇವೆ ಅಪಾರ: ಎಲ್ಲರಿಗೂ ನಮನ NAMMUR EXPRESSತೀರ್ಥಹಳ್ಳಿ: ಆಟದ ಜೊತೆಗೆ ಪಾಠವನ್ನು ಕಲಿಸಿ ಜೀವನದ ಮೌಲ್ಯ ಕಲಿಸಿ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಯಾವುದೇ ಸ್ವಾರ್ಥವಿಲ್ಲದೆ ದುಡಿಯುವ ಸಮಾಜದ ನಿರ್ಮಾಪಕ ಸಮನ್ವಯತೆಯ ಸಾಧಕರಾದ ಎಲ್ಲಾ ಶಿಕ್ಷಕರಿಗೆ ಶುಭಾಶಯಗಳು. ಈ ನಡುವೆ ತೀರ್ಥಹಳ್ಳಿ ತಾಲೂಕಿಗೆ ಈ ಬಾರಿ 4 ಪ್ರಶಸ್ತಿಗಳು ಸಂದಿವೆ.ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಖ್ಯಾತ ರಂಗ ಶಿಕ್ಷಕ, ಕೋಣಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಶ್ರೀಕಾಂತ್ ಪಟಗಾರ ಅವರಿಗೆ ಸಂದಿದೆ.ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತೀರ್ಥಹಳ್ಳಿಯ ಶಿಕ್ಷಕರು ಆಯ್ಕೆಯಾಗಿದ್ದಾರೆ .ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು ಫಾಜಿಯಾ ಸರಾವತ್ಸಹಶಿಕ್ಷಕಿಸ.ಕಿ.ಪ್ರಾಥಮಿಕ ಶಾಲೆ, ಕಲ್ಲುಗುಡ್ಡಯಶೋದಾಸಹ ಶಿಕ್ಷಕಿಸ.ಪ್ರಾ.ಹಿರಿಯ ಶಾಲೆ, ವಾಟಿಗಾರುಎನ್.ಡಿ ಸುರೇಶ್ಮುಖ್ಯ ಶಿಕ್ಷಕರುವಿಶ್ವತೀರ್ಥ ಪ್ರೌಢಶಾಲೆ,ಕಮ್ಮರಡಿ.ತೀರ್ಥಹಳ್ಳಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಶಿಕ್ಷಕ ಶಿಕ್ಷಕಿಯರು ಕೂಡ ಅತ್ಯುತ್ತಮವಾಗಿ…
ಗುರುಗಳ ಸೇವೆಗೆ ನಮ್ಮ ಸಲಾಂ! ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಕಾರಣಕರ್ತರು. “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಅಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ರಾಧಾಕೃಷ್ಣನ್ ಅವರ ಜನ್ಮದಿನವಾದ ಈ ದಿನವನ್ನು ನಾವು ಅವರ ಆಸೆಯನ್ವಯ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ. ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ನಾವೆಲ್ಲರೂ ನೀಡೋ ಒಂದು ಸಣ್ಣ ಗೌರವವಾಗಿದೆ.ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸಹಾ ಒಂದು ಕಾರಣವಿದೆ. ಒಮ್ಮೆ ರಾಧಾಕೃಷ್ಣನ್ ಅವರ ಪ್ರೀತಿಯ ವಿದ್ಯಾರ್ಥಿಗಳು ಬಳಿ ಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುವುದಾಗಯೂ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಹೊಂದಿದ್ದ ಡಾ. ರಾಧಾಕೃಷ್ಣನ್ ರವರು ತಮ್ಮ ಹುಟ್ಟಿದ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ’ವೆಂದೇಕೆ ಆಚರಿಸಬಾರದು? ಇದರಿಂದ ನನಗೆ…
ದಾವಣಗೆರೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಪುತ್ರಿ ಮದುವೆ NAMMUR EXPRESSದಾವಣಗೆರೆ/ಹುಬ್ಬಳ್ಳಿ: ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಚಲನ ಮಾಡಿದೆ. ಒಂದು ಕಡೆ ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿ ಉದ್ಘಾಟನೆ ಮಾಡಿದ್ದಾರೆ. ಅವರಿಗೆ ರಾಜ್ಯ ಸಿಎಂ ಬೊಮ್ಮಾಯಿ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದ್ದಾರೆ. ಈ ನಡುವೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿ ವಿವಾಹ ಕೂಡ ಗಮನ ಸೆಳೆದಿದೆ.ದಾವಣಗೆರೆಯಲ್ಲಿ ಮಾತನಾಡಿದ ಅಮಿತ್ ಶಾ, ಯಾರಾದರೂ ಹೊಸಬರು ಮುಖ್ಯಮಂತ್ರಿಯಾಗಲಿ ಆಗಲಿ ಎಂದು ಯಡಿಯೂರಪ್ಪ ನಿರ್ಧರಿಸಿದ್ದರು. ಹಾಗಾಗಿ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದರು. ಅದರಂತೆಯೇ ಬಸವರಾಜ ಬೊಮ್ಮಾಯಿ ಅವರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿ ಸ್ಪಷ್ಟ ಬಹುಮತಗಳಿಸಿ ರಾಜ್ಯದಲ್ಲಿ…
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದ್ದ ಘಟನೆಶಿವಮೊಗ್ಗದಲ್ಲಿ ಬಾಲಕಿ ಆತ್ಮಹತ್ಯೆ: ಕಾರಣ ನಿಗೂಢಗ್ಯಾಂಗ್ ರೇಪ್ ಆರೋಪಿಗಳ ಸ್ಥಳ ಮಹಜರು NAMMUR EXPRESSಚಿಕ್ಕಮಗಳೂರು: ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ದಲಿತ ಸಮುದಾಯದ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣದಲ್ಲಿ ಪಿಎಸ್ಐ ಅರ್ಜುನ್ಗೆ ಚಿಕ್ಕಮಗಳೂರಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಜತೆಗೆ ಈ ಪ್ರಕರಣ ಪೊಲೀಸರ ಕರ್ತವ್ಯದ ಹೊಣೆಯನ್ನು ಎತ್ತಿ ಹೇಳಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡುವಿನಲ್ಲಿ ದಲಿತ ಸಮುದಾಯದ ಯುವಕನಿಗೆ ಮೂತ್ರ ಕುಡಿಸಿದ ಆರೋಪಕ್ಕೆ ಸಂಬಂಧಿಸಿ ಪಿಎಸ್ಐ ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಪಿಎಸ್ಐ ಅರ್ಜುನ್ ಅವರನ್ನು ವಶಪಡಿಸಿಕೊಂಡಿದ್ದರು.ಮಹಿಳೆಗೆ ಕರೆ ಮಾಡಿದ ವಿಚಾರವೊಂದಕ್ಕೆ ಸಂಬಂಧಿಸಿ ಪಿಎಸ್ಐ ಅರ್ಜುನ್ ನನ್ನ ಪೊಲೀಸ್ ಠಾಣೆಗೆ ದೈಹಿಕ ಹಲ್ಲೆ ನಡೆಸಿದ್ದರು. ಕುಡಿಯಲು ನೀರು ಕೇಳಿದಾಗ ವ್ಯಕ್ತಿಯೊಬ್ಬನಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ಮತ್ತು ನೆಲಕ್ಕೆ ಬಿದ್ದಿದ್ದ ಮೂತ್ರವನ್ನು ನೆಕ್ಕಿಸಿದ್ದರು ಎಂದು ದಲಿತ…